ಜಿನೆವಾದಲ್ಲಿ ಟಾಟಾ ಸಫಾರಿ, ಆರಿಯಾ, ವಿಸ್ಟಾ ಮಿಂಚಿಂಗ್!
85ನೇ ಜಿನೆವಾ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಭಾರತೀಯ ಮೂಲದ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಾನ್ಸೆಪ್ಟ್ ಮಾಡೆಲ್‌ಗಳು ಹೆಚ್ಚಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗದಿದ್ದರೂ ತನ್ನದೇ ಆದ ಶೈಲಿಯೊಂದಿಗೆ ಪ್ರಭಾವಿ ಎನಿಸಿಕೊಂಡಿತ್ತು.
ಟಾಟಾದಿಂದ ಪ್ರದರ್ಶನಗೊಂಡ ಮೂರು ಮಾಡೆಲ್‌ಗಳಾದ, ವಿಸ್ಟಾ, ಆರಿಯಾ ಹಾಗೂ ಸ್ಟ್ರೋಮ್ ಆವೃತ್ತಿಗಳು ಕಾರು ವಿಶ್ಲೇಷಕರಲ್ಲಿ ಕುತೂಹಲ ಸೃಷ್ಟಿ ಮಾಡಿತ್ತು. ಮುಂದಿನ ದಿನಗಳಲ್ಲಿ ಈ ಎಲ್ಲ ಆವೃತ್ತಿಗಳ ಉತ್ಪಾದಕ ವರ್ಷನ್ ಆರಂಭವಾಗಲಿರುವುದು ದೇಶದ ಗ್ರಾಹಕರು ಖುಷಿಪಡುವಂತಾಗಿದೆ.
ಸ್ವಿಜರ್ಲೆಂಡ್‌ನಲ್ಲಿ ಸಾಗುತ್ತಿರುವ ಜಿನೆವಾ ಮೋಟಾರ್ ಶೋದಲ್ಲಿ ವರ್ಷಂಪ್ರತಿ ಟಾಟಾ ನೂತನ ಕಾನ್ಸೆಪ್ಟ್‌ಗಳೊಂದಿಗೆ ಆಗಮಿಸುತ್ತಿದೆ. ಯಾವುದೇ ನೂತನ ಕಾನ್ಸೆಪ್ಟ್ ಪ್ರದರ್ಶನವಾಗದಿದ್ದರೂ ಮೌಂಟೆನ್ ರೆಸ್ಕ್ಯೂ ಟಾಟಾ ಸ್ಟ್ರೋಮ್ ಹಾಗೂ ಆರಿಯಾ ಎಂಪಿವಿ ಪ್ರಭಾವಿ ಎನಿಸಿಕೊಂಡಿತ್ತು.
ಹಾಗಿದ್ದರೆ ಬನ್ನಿ ಜಿನೆವಾದಲ್ಲಿ ಪ್ರದರ್ಶನಗೊಂಡ ಟಾಟಾ ಕಾನ್ಸೆಪ್ಟ್ ಮಾಡೆಲ್‌ಗಳ ಬಗ್ಗೆ ತಿಳಿಯೋಣ...
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಹಿಮದಿಂದ ಆವೃತ್ತವಾದ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಟಾಟಾ ಸಫಾರಿ ಸ್ಟ್ರೋಮ್ ಮೌಂಟೆನ್ ರೆಸ್ಕ್ಯೂ ಕಾನ್ಸೆಪ್ಟ್ ತಯಾರಿಸಲಾಗಿದೆ. ಈ ಎಸ್‌ಯುವಿ ದೈತ್ಯ ಮಂಜುಗಡ್ಡೆ ಪ್ರದೇಶದಲ್ಲೂ ಸುಗಮ ಚಾಲನೆಗೆ ನೆರವಾಗಲಿದೆ.

ಈ ಸ್ಪೆಷಲ್ ಅಡಿಷನ್ ಸಫಾರಿ ಸ್ಟ್ರೋಮ್‌ನಲ್ಲಿ ಫ್ರಂಟ್ ಬಂಪರ್, ರೂಫ್ ಟಾಪ್ ಕಾರ್ಗೊ ಬಾಕ್ಸ್, ದೈತ್ಯಕಾರದ ಫ್ಲ್ಯಾಶ್ ಲೈಟ್ ಹಾಗೂ ನೈಜ ಆಫ್ ರೋಡ್ ಸಾಮರ್ಥ್ಯ ಹೊಂದಿದೆ.

ಅದೇ ರೀತಿ ಟಾಟಾ ಆರಿಯಾ ಕ್ರಾಸೋವರ್ ಫೇಸ್‌ಲಿಫ್ಟ್ ವರ್ಷನ್ ಕೂಡಾ ಜಿನೆವಾ ಮೋಟಾರ್ ಶೋದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಹೊಸ ಆರಿಯಾ ಹಲವಾರು ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಆಗಮನವಾಗಿದ್ದು, ಶಕ್ತಿಶಾಲಿ ಎಂಜಿನ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದೇ ಮೊದಲ ಬಾರಿಗೆ ಟಾಟಾ ಮಾಡೆಲ್‌ಗಳಲ್ಲಿ ಲಗತ್ತಿಸಲಾಗುತ್ತಿದೆ.

ಇದು ಕೂಡಾ ಶಕ್ತಿಶಾಲಿ ಎಂಜಿನ್ ಜತೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಹೊಂದಿರಲಿದೆ. ಮೂಲಗಳ ಪ್ರಕಾರ ವರ್ಷದ ದ್ವಿತಿಯಾರ್ಧದಲ್ಲಿ ಟಾಟಾ ಆರಿಯಾ ದೇಶದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ.

ಹೆಚ್ಚುವರಿ ಕಾಸ್ಮೆಟಿಕ್ ಬದಲಾವಣೆ, ಎಕ್ಸ್‌ಟೀರಿಯರ್‌ನಲ್ಲಿ ಡ್ಯುಯಲ್ ಟೋನ್ ಪೈಂಟ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, 19 ಇಂಚು ಅಲಾಯ್ ವೀಲ್ ಹಾಗೂ ಲೆಥರ್ ಸೀಟ್ ಟಾಟಾ ಆರಿಯಾದ ವಿಶೇಷತೆಯಾಗಿರಲಿದೆ.

ಇನ್ನು 2.2 ಲೀಟರ್ ಡಿಕೊರ್ ಪವರ್ (DiCOR) ಎಂಜಿನ್ ಹೊಂದಿರಲಿದ್ದು 150 (400 ಎನ್‌ಎಂ) ಬಿಎಚ್‌ಪಿ ಉತ್ಪಾದಿಸಲಿದೆ. ಇದು ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಹಾಗೂ ಮಹೀಂದ್ರ ಎಕ್ಸ್‌ಯುವಿ 500 ವಿರುದ್ಧ ಕಠಿಣ ಪೈಪೋಟಿ ನೀಡಲು ಸಾಧ್ಯವಾಗಲಿದೆ.

ಟಾಟಾ ಇಂಡಿಕಾ ವಿಸ್ಟಾ ಕಾನ್ಸೆಪ್ಟ್ ಎಸ್ ಆವೃತ್ತಿ 2010 ದೆಹಲಿ ಆಟೋ ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ಇದೀಗ ಮೂರು ವರ್ಷಗಳ ಬಳಿಕ ಜಿನೆವಾ ಅಂತರಾಷ್ಟ್ರೀಯ ಶೋದಲ್ಲಿ ಪ್ರದರ್ಶನವಾಗಿದೆ.

ಟಾಟಾ ಇಂಡಿಕಾ ವಿಸ್ಟಾ ಕಾನ್ಸೆಪ್ಟ್ ಎಸ್

ಟಾಟಾ ಇಂಡಿಕಾ ವಿಸ್ಟಾ ಕಾನ್ಸೆಪ್ಟ್ ಎಸ್
ಸೈಡ್ ವ್ಯೂ

ಟಾಟಾ ಇಂಡಿಕಾ ವಿಸ್ಟಾ ಕಾನ್ಸೆಪ್ಟ್ ಎಸ್
ಫ್ರಂಟ್ ವ್ಯೂ

ಟಾಟಾ ಇಂಡಿಕಾ ವಿಸ್ಟಾ ಕಾನ್ಸೆಪ್ಟ್ ಎಸ್
ರಿಯರ್ ವ್ಯೂ


Click it and Unblock the Notifications








