ವಿಶ್ವದ ಬೃಹತ್ ವಾಹನ ಪ್ರದರ್ಶನ ದೆಹಲಿಯಲ್ಲಿ ಆರಂಭ
ಬೆನ್ನ ಹುರಿಯಲ್ಲಿ ನಡುಕ ಹುಟ್ಟಿಸುವ ಚಳಿ, ಬೀಸುವ ಮೆಲು ಮಾರುತದ ಮುಂಜಾನೆಯಲ್ಲಿ ನಾವು ದೆಹಲಿ ವಾಹನ ಪ್ರದರ್ಶನ ನಡೆಯುವ ಪ್ರಗತಿ ಮೈದಾನ ತಲುಪಿಯಾಗಿದೆ.

ಸಾವಿರಾರು ಕಂಪನಿಗಳು ತಮ್ಮ ಕಾರುಗಳು, ಬೈಕುಗಳು, ಟ್ರಕುಗಳು, ಬಸ್ಸುಗಳು, ಆಫ್ ರೋಡ್ ವಾಹನಗಳೊಂದಿಗೆ ಪ್ರಗತಿಯಂಗಣ ತಲುಪಿವೆ. ಈಗಾಗಲೇ ಹೀರೋ ಮೊಟೊಕಾರ್ಪ್ ಎರಡು ಬೈಕ್ ಮತ್ತು ಒಂದು ಸ್ಕೂಟರ್ ಅನಾವರಣ ಮಾಡಿದ್ದು, ಪ್ರಗತಿ ಮೈದಾನದಲ್ಲಿ ಪ್ರದರ್ಶಿಸಲು ರೆಡಿಯಾಗಿದೆ.
ನ್ಯಾನೊ ಕಾರಿಗೆ ಪೈಪೋಟಿ ನೀಡುವ ಬಜಾಜ್ ಸಣ್ಣಕಾರು ಕೂಡ ಬಿಡುಗಡೆಯಾಗಿದೆ. ಇಲ್ಲಿ ಇಷ್ಟೇ ಅಲ್ಲ. ಪ್ರಗತಿ ಮೈದಾನದ ಅಂಗಣದೊಳಕ್ಕೆ ನೂರಾರು ಕಾರುಗಳು ಪ್ರವೇಶಿಸುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
2012ರ ಮೊದಲ ತಿಂಗಳಿನಲ್ಲಿ ನಡೆಯುವ ಈ ವಾಹನ ಪ್ರದರ್ಶನದಲ್ಲಿ ಸುಮಾರು 23 ದೇಶಗಳಿಂದ 1,500 ಪ್ರದರ್ಶಕರು ಭಾಗವಹಿಸಲಿದ್ದಾರೆ. ಪ್ರಗತಿ ಮೈದಾನ ತುಂಬಿ ತುಳುಕಲಿದೆ. ಪ್ರತಿದಿನಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇಲ್ಲಿ ಐವತ್ತು ಹೊಸ ವಾಹನಗಳು ಅನಾವರಣಗೊಳ್ಳಲಿದೆ.
ಜನವರಿ 7ರಿಂದ ದೆಹಲಿ ವಾಹನ ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಡ್ರೈವ್ ಸ್ಪಾರ್ಕ್ ತಂಡ ಈಗಾಗಲೇ ಪ್ರವೇಶ ಗಿಟ್ಟಿಸಿಯಾಗಿದೆ. ಈಗಿನಿಂದಲೇ ದೆಹಲಿ ವಾಹನ ಪ್ರದರ್ಶನದ ನೇರ ಪ್ರಸಾರವನ್ನು ನೀಡಲಿದೆ.
ಇದು ದೆಹಲಿ ಪ್ರಗತಿ ಮೈದಾನದಿಂದ ನೇರ ಪ್ರಸಾರ. ಕನ್ನಡ ಡ್ರೈವ್ ಸ್ಪಾರ್ಕಿನಲ್ಲಿ ಮಾತ್ರ.


Click it and Unblock the Notifications








