ಕನ್ನಡ ಡ್ರೈವ್ ಸ್ಪಾರ್ಕ್: ವಾಹನ ಜಾತ್ರೆ ನೇರಪ್ರಸಾರ

ದೆಹಲಿ ಸುದ್ದಿಯಲ್ಲಿದೆ. ಜಗತ್ತಿನ ವಾಹನ ಪ್ರೇಮಿಗಳ ಕಣ್ಣು ಪ್ರಗತಿ ಮೈದಾನದತ್ತ ನೆಟ್ಟಿದೆ. ವಿಶ್ವದ ನಾನಾ ಕಡೆಯಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ದೆಹಲಿಯತ್ತ ಹರಿದುಬರುತ್ತಿದ್ದಾರೆ. ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ದೇಶದ ಬೃಹತ್ ವಾಹನ ಪ್ರದರ್ಶನ ಜನವರಿ ಐದರಿಂದ ಆರಂಭವಾಗಲಿದೆ.

Delhi Auto Expo 2012 live coverage in Drivespark

ಹೊಸ ಕಾರುಗಳು, ಸೂಪರ್ ಕಾರುಗಳು, ಸ್ಪೋರ್ಟ್ಸ್ ಕಾರುಗಳು, ಸಣ್ಣಕಾರುಗಳು, ಹೈಬ್ರಿಡ್ ಕಾರುಗಳು, ಸಣ್ಣಕಾರುಗಳು ಇಲ್ಲಿರಲಿವೆ. ಬೈಕುಗಳು, ಸೂಪರ್ ಬೈಕುಗಳನ್ನು ಇಲ್ಲಿ ನೋಡಬಹುದು. ಬೆರಗುಗೊಳಿಸುವ ಭವಿಷ್ಯದ ಕಾರು ಬೈಕುಗಳನ್ನು ಇಲ್ಲಿ ನೋಡಬಹುದು.

ಇದು ಅಸಾಮಾನ್ಯ ವಾಹನ ಪ್ರದರ್ಶನ. ಹತ್ತಿಪ್ಪತ್ತು ಡೀಲರುಗಳು ಆಯೋಜಿಸುವ ಬೆಂಗಳೂರು ಆಟೋ ಶೋಗಿಂತ ಭಿನ್ನ. ಜಗತ್ತಿನಲ್ಲಿ ನಡೆಯುವ ಕೆಲವೇ ಕೆಲವು ವಾಹನ ಪ್ರದರ್ಶನಗಳಲ್ಲಿ ದೆಹಲಿ ವಾಹನ ಪ್ರದರ್ಶನಕ್ಕೆ ಪ್ರಮುಖ ಸ್ಥಾನವಿದೆ.

ಇದು ಜಾಗತಿಕ ವಾಹನ ತಯಾರಿಕ ಒಕ್ಕೂಟ(OICA)ದಿಂದ ಮಾನ್ಯತೆ ಪಡೆದಿರುವ ವಾಹನ ಪ್ರದರ್ಶನವಾಗಿದೆ. ದೇಶದ ಬೇರೆ ಯಾವ ವಾಹನ ಪ್ರದರ್ಶನವು OICAಯಿಂದ ಮಾನ್ಯತೆ ಪಡೆದಿಲ್ಲ. ಹೀಗೆ ಈ ವಾಹನ ಪ್ರದರ್ಶನ ವಿಶ್ವದ ಕಾರು ಕಂಪನಿಗಳಿಗೆ ತಮ್ಮ ಉತ್ಪನ್ನವನ್ನು ಪ್ರಚಾರಗೊಳಿಸಲು ಉತ್ತಮ ಅವಕಾಶವಾಗಿದೆ.

ಈ ವಾಹನ ಪ್ರದರ್ಶನದಲ್ಲಿ ಸುಮಾರು 23 ದೇಶಗಳಿಂದ 1,500 ಪ್ರದರ್ಶಕರು ಭಾಗವಹಿಸಲಿದ್ದಾರೆ. ಪ್ರಗತಿ ಮೈದಾನ ತುಂಬಿ ತುಳುಕಲಿದೆ. ಹೀಗಾಗಿ ದಿನಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ಇಲ್ಲಿ ಐವತ್ತು ಹೊಸ ವಾಹನಗಳು ಅನಾವರಣಗೊಳ್ಳಲಿದೆ.

ಜನವರಿ 5-6 ಮಾಧ್ಯಮ ಪ್ರವೇಶಕ್ಕೆ ಮಾತ್ರ. ಜನವರಿ 7ರಿಂದ ವಾಹನ ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಡ್ರೈವ್ ಸ್ಪಾರ್ಕ್ ತಂಡವು ದೆಹಲಿ ವಾಹನ ಪ್ರದರ್ಶನದ ನೇರ ಪ್ರಸಾರವನ್ನು ನೀಡಲಿದೆ. ಈಗಾಗಲೇ ನಮ್ಮ ವರದಿಗಾರರು ದೆಹಲಿ ತಲುಪಿಯಾಗಿದೆ.

ನಿಮ್ಮ ವಾಹನ ಸವಾರಿ ಆಸಕ್ತಿಗೆ ಇನ್ನಷ್ಟು ಅಶ್ವಶಕ್ತಿ ತುಂಬಲು ಕನ್ನಡ ಡ್ರೈವ್ ಸ್ಪಾರ್ಕ್ ಸಿದ್ಧವಾಗಿದೆ. ಹೊಸ ಕಾರು ಅನಾವರಣದ ಸುದ್ದಿಗಳು, ಬೆರಗುಗೊಳಿಸುವ ವಾಹನದ ಚಿತ್ರಗಳನ್ನು ನೀವು ಇಲ್ಲಿ ನೋಡಲಿದ್ದೀರಿ. ಇದು ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ

More from DriveSpark

Article Published On: Wednesday, January 4, 2012, 13:03 [IST]
English summary
Delhi Auto Expo 2012 live coverage in Drivespark. Delhi aoto show will now present 1500 participants from 24 nations. Largest Automotive show in India. Only show in India accredited by OICA. Special focus on Green Technologies & Environment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+