ಚಾಲನ ವಿಮರ್ಶೆ - ಹೀರೋ ಡೆಸ್ಟಿನಿ 125 ಕಡಿಮೆ ಬೆಲೆಯಲ್ಲಿ ದೊರೆಯುವ ಪ್ರೀಮಿಯಮ್ ಸ್ಕೂಟರ್
ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ತನ್ನ ಕಮ್ಯುಟರ್ ಬೈಕ್‍ಗಳಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಇದೀಗ ಸಂಸ್ಥೆಯು ಡೆಸ್ಟಿನಿ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಮೂಲಕ 125ಸಿಸಿ ಸ್ಕೂಟರ್ ಸೆಗ್ಮೆಂಟ್‍ನಲ್ಲಿ ಕಾಲಿಟ್ಟಿದೆ. ಹೊಸ ಹೀರೋ ಡೆಸ್ಟಿನಿ 125 ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.54,650 ಸಾವಿರದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೀರೋ ಡೆಸ್ಟಿನಿ 125 ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ ಆಟೊ ಎಕ್ಸ್ ಪೋ ಮೇಳದಲ್ಲಿ ಡ್ಯುಯೆಟ್ 125 ಎಂಬ ಹೆಸರಿನಲ್ಲಿ ಬಹಿರಂಗಗೊಂಡಿತ್ತು. ಈ ಸ್ಕೂಟರ್‍ನ ಒಟ್ಟಾರೆ ವಿನ್ಯಾಸವು ಪ್ರಸ್ತುತ ಮಾರಾಟವಾಗುತ್ತಿರುವ ಡ್ಯುಯೆಟ್ ಸ್ಕೂಟರ್ ಅನ್ನೆ ಹೋಲುತಿದ್ದು, ಹೀರೋ ಡೆಸ್ಟಿನಿ 125 ಸ್ಪೋರ್ಟ್ಸ್ ಹೊಸ ಶೈಲಿಯನ್ನು ಪಡೆದು ಪ್ರೀಮಿಯಂ ಸ್ಕೂಟರ್‍ನ ಲುಕ್ ಅನ್ನು ಹೊಂದಿದೆ.

ನೋಡಲು ಆಕರ್ಷಕ ವಿನ್ಯಾಸವನ್ನು ಪಡೆದಿರುವ ಹೀರೋ ಡೆಸ್ಟಿನಿ 125 ಸ್ಕೂಟರ್ ರಸ್ತೆ ಪ್ರಯಾಣದಲ್ಲಿ ಯಾವ ರೀತಿಯ ಅನುಭವವನ್ನು ನೀಡಲಿದೆ ಎಂದು ಇಂದಿನ ಲೇಖನದಲ್ಲಿ ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಡಿಸೈನ್ ಮತ್ತು ಶೈಲಿ
ಹೀರೋ ಡೆಸ್ಟಿನಿ 125 ಸ್ಕೂಟರ್ ಅನ್ನು ಮೊದಲು ನೋಡಿದ ಹಾಗೆಯೆ ನಿಮ್ಮನ್ನು ಆಕರ್ಶಿಸುವುದು ಅದರ ಮುಂಭಾಗದ ವಿನ್ಯಾಸ. ಏಕೆಂದರೆ ಮುಂಭಾಗದಲ್ಲಿ ನೀಡಲಾದ ವಿ-ಆಕಾರವನ್ನು ಪಡೆದಿರುವ ಕ್ರೋಮ್ ಅನ್ನು ನೀಡಲಾಗಿದ್ದು, ಟರ್ನ್ ಇಡಿಕೇಟರ್‍ಗಳನ್ನು ಅಚ್ಚುಕಟ್ಟಾಗಿ ವಿನ್ಯಾಸ ಮಾಡಲಾಗಿದೆ.

ಮುಂಭಾಗದ ಕೌಲ್‍ಗೆ ಡ್ಯುಯಲ್ ಟೋನ್ ಬಣ್ಣವನ್ನು ನೀಡಲಾಗಿದ್ದು, ಹೆಡ್‍ಲ್ಯಾಂಪ್‍ನ ಮೇಲೆ ಹೀರೋ ಬ್ರ್ಯಾಂಡಿಂಗ್ ಅನ್ನು ಒದಗಿಸಲಾಗಿದೆ. ಮುಂಭಾಗದ ವಿನ್ಯಾಸಕ್ಕೆ ಕೊನೆಯದಾಗಿ ನೀಡಲದ ರಿಯರ್ ವ್ಯೂ ಮಿರರ್‍ಗಳು ಸ್ಕೂಟರ್‍ನ ಒಟ್ಟಾರೆ ವಿನ್ಯಾಸವನ್ನು ಹೆಚ್ಚಿಸಿದೆ.

ಡೆಸ್ಟಿನಿ 125 ಸ್ಕ್ಕೂಟರ್‍ನ ಸೈಡ್‍ನಲ್ಲಿ ಕ್ರೋಮ್ ಗೆರೆಗಳು ಮತ್ತು ಡೆಸ್ಟಿನಿ 125 ಬ್ರ್ಯಾಂಡಿಂಗ್ ಅನ್ನು ಅಳವಡಿಸಲಾಗಿದ್ದು, ಸೈಡ್ ಪ್ಯಾನಲ್‍ಗಳು ಟೈಲ್ ಲೈಟ್‍ನ ಜೊತೆಗೆ ಕೂಡುವಂತೆ ವಿನ್ಯಾಸ ಮಾಡಲಾಗಿದೆ. ಸ್ಕೂಟರ್‍ನ ಎಕ್ಸಾಸ್ಟ್ ಮಫ್ಲರ್ ಸಹ ಕ್ರೋಮ್ ಕವರ್‍ನೊಂದಿಗೆ ಸಜ್ಜುಗೊಂಡಿದೆ.

ಸ್ಕೂಟರ್‍ನ ಹಿಂಭಾದಲ್ಲಿ ನೀಡಲಾದ ಟೈಲ್ ಲೈಟ್ ವಿನ್ಯಾಸವನ್ನು ಆಕರ್ಷಕವಾಗಿದ್ದು, ಹಿಂಬದಿಯಲ್ಲಿ ಎಕ್ಟರ್ನಲ್ ಫ್ಯುಯಲ್ ಕ್ಯಾಪ್, ದೊಡ್ಡದಾದ ಸಿಲ್ವರ್ ಪಿಲಿಯಾನ್ ಗ್ರ್ಯಾಬ್ ರೈಲ್ ಮತ್ತು ಟೈಲ್ ಲೈಟ್‍ನ ಮೇಲೆ ಕಪ್ಪು ಬಣ್ಣವನ್ನು ನೀಡಲಾಗಿದೆ. ಇದಲ್ಲದೆ ಈ ಸ್ಕೂಟರ್ ಡ್ಯುಯಲ್ ಟೋನ್ ಸೀಟ್ ಅನ್ನು ಪಡೆದಿದ್ದು, ಇದೂ ಸಹ ನೋಡುಗರನ್ನು ತನ್ನತ್ತ ಸೇಳೆಯುತ್ತದೆ.

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್, ನೋಬಲ್ ರೆಡ್ (ವಿಎಕ್ಸ್ ವೇರಿಯಂಟ್‍ನಲ್ಲಿ ಮಾತ್ರ) ಚೆಸ್ಟ್ನಟ್ ಬ್ರಾಂಜ್, ಪರ್ಲ್ ಸಿಲ್ವರ್ ವೈಟ್ ಮತ್ತು ಪ್ಯಾಂಥರ್ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಸೂಚನೆ: ಫ್ರಂಟ್ ಕ್ರೋಮ್ ಇಂಸರ್ಟ್, ಸೈಡ್ ಕ್ರೋಮ್ ಗ್ರಾನಿಶ್, ಅಲಾಯ್ ವ್ಹೀಲ್ಸ್, ದೇಹ ಬಣ್ಣದ ಮಿರರ್‍ಗಳು ಮತ್ತು ಡ್ಯುಯಲ್ ಟೋನ್ ಸೀಟ್ ಇವುಗಳು ಕೇವಲ ಡೆಸ್ಟಿನಿ 125 ಸ್ಕೂಟರ್‍ನ ವಿಎಕ್ಸ್ ವೇರಿಯಂಟ್‍ನಲ್ಲಿ ಮಾತ್ರ ಲಭ್ಯ.

ಎಂಜಿನ್ ಸಾಮರ್ಥ್ಯ
ಹೀರೋ ಡೆಸ್ಟಿನಿ 125 ಸ್ಕೂಟರ್ 124.6ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 8.70ಬಿಹೆಚ್‍ಪಿ ಮತ್ತು 10.2ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪದೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದು ಪ್ರಸ್ಥುತ ಇರುವ 110 ಸ್ಕೂಟರ್‍ಗಿಂತಾ ಶೇಕಡ 7ರಷ್ಟು ಬಿಹೆಚ್‍ಪಿ ಮತ್ತು ಶೇಕಡ 17ರಷ್ಟು ಅಧಿಕ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ಪ್ರಮುಖ ಲಕ್ಷಣಗಳು
ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‍ನಲ್ಲಿ ಪ್ಯುಯಲ್ ಲೆವೆಲ್, ಸರ್ವೀಸ್ ಇಂಡಿಕೇಟರ್, ಟ್ರಿಪ್ ಮೀಟರ್, ಓಡೊಮೀಟರ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಎಂಬ ಆಯ್ಕೆಗಳ ಬಗ್ಗೆ ಮಾಹಿತಿ ನೀಡಬಲ್ಲ ಡಿಜಿಟಲ್ ಅನಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒದಗಿಸಲಾಗಿದೆ.

ಸ್ಕೂಟರ್‍ನಲ್ಲಿ ಉತ್ತಮ ಗುಣಮಟ್ಟದಿಂದ ಕೂಡಿರುವ ಹೈ/ಲೋ ಬಿಮ್ ಸ್ವಿಚ್, ಇಂಡಿಕೇಟರ್ ಟಾಗಲ್ ಮತ್ತು ಹಾರ್ನ್ ಬಟನ್ ಅನ್ನು ಸ್ಕೂಟರ್‍ನ ಎಡಭಾಗದಲ್ಲಿ ನೀಡಲಾಗಿದೆ. ಬಲಭಾಗದಲ್ಲಿ ಐ3ಎಸ್ ಸ್ವಿಚ್ ಅನ್ನು ಎಂಜಿನ್ ಕಿಲ್ ಸ್ವಿಚ್ ಮತ್ತು ಎಂಜಿನ್ ಸ್ಟಾರ್ಟ್ ಬಟನ್ ಅನ್ನು ಒದಗಿಸಲಾಗಿದೆ.

ಇವುಗಳಲ್ಲದೇ ಹೀರೋ ಡೆಸ್ಟಿನಿ 125 ಸ್ಕೂಟರ್‍ನಲ್ಲಿ ಎಕ್ಸ್ಟರ್ನಲ್ ಫ್ಯುಯಲ್ ಕ್ಯಾಪ್ ಮತ್ತು ಡಿಕ್ಕಿಯನ್ನು ತೆರೆಯಬಲ್ಲ ಮಲ್ಟಿ-ಫಂಕ್ಷನ್ ಕೀ ಸ್ಲಾಟ್ ಅನ್ನು ನೀಡಲಾಗಿದ್ದು, ಜೊತೆಗೆ ಎರಡು ಲಗೇಜ್ ಹುಕ್ಸ್, ವಿಶಾಲವಾದ ಫುಟ್‍ಬೋರ್ಡ್ ಮತ್ತು ಅಂಡರ್ ಸೀಟ್ ಸ್ಟೋರೇಜ್‍ಗಾಗಿ ಜಾಗವನ್ನು ನೀಡಲಾಗಿದೆ.

ಹೀರೋ ಡಿಸ್ಟಿನಿ ಸ್ಕೂಟರ್‍ನಲ್ಲಿ ಮತ್ತೊಂದು ಪ್ರಮುಖವಾದ ಅಂಶವೆಂದರೆ ಇದರಲ್ಲಿ ನೀದಲಾಗಿರುವ ಐ3ಎಸ್ (ಐಡಲ್-ಸ್ಟಾರ್ಟ್-ಸ್ಟಾಪ್) ಬಟನ್. ಹೀರೋ ಡೆಸ್ಟಿನಿ ಐ3ಎಸ್ ಟೆಕ್ನಾಲಜಿಯನ್ನು ಪಡೆದಿರುವ ಏಕೈಕ ಸ್ಕೂಟರ್ ಆಗಿದ್ದು, ಇದು ಇಂಧನವನ್ನು ನೀಗಿಸಲು ವಾಹನವು ಚಾಲನೆಯಲ್ಲಿ ಇಲ್ಲದಿರುವಾಗ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.

ಇದು ಮೊದಲ ಬಾರಿಗೆ, ಐ3ಎಸ್ ಟೆಕ್ನಾಲಜಿಯು 30 ಸೆಕೆಂಡುಗಳಲ್ಲಿ ತೆಗೆದುಕೊಳ್ಳುತ್ತದೆ ಮತ್ತು ನಂತರದಲ್ಲಿ ಐ3ಎಸ್ ಸಿಸ್ಟಮ್ನಲ್ಲಿ ಎಂಜಿನ್ ಅನ್ನು ಐದು ಸೆಕೆಂಡುಗಳಲ್ಲಿ ನಿಷ್ಕ್ರಿಯಗೊಳಿಸುತ್ತದೆ. ಕೆಲವೊಮ್ಮೆ ಇದು ಕಿರಿಕಿರಿಯನ್ನು ಉಂಟು ಮಾಡುತ್ತದೆಯಾದರೂ ಟಾಗಲ್ ಬಟನ್‍ನಿಂದ ಇದನ್ನು ಸಾಂಪೂರ್ಣವಾಗಿ ಆಫ್ ಮಾಡಬಹುದು.

ಹೀರೋ ಡೆಸ್ಟಿನಿ 125 ಸ್ಕೂಟರ್‍ನ ಟಾಪ್ ವೇರಿಯಂಟ್ ಆದ ವಿಎಕ್ಸ್ ಯುಎಸ್‍ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್, ಬೂಟ್ ಲೈಟ್ ಮತ್ತು ಅಲಾಯ್ ಚಕ್ರಗಳಂತಹ ಅಧಿಕವಾದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಚಾಲನೆ ಮತ್ತು ನಿಯಂತ್ರಣ
ಹೀರೋ ಡೆಸ್ಟಿನಿ 125 ಸ್ಕೂಟರ್ ಅತ್ಯುತ್ತಮವಾದ ನಿಯಂತ್ರಣ ಮತ್ತು ಎಂಜಿನ್ ಸಾಮರ್ಥ್ಯದಿಂದ ರಸ್ತೆಗಳಲ್ಲಿ ಉತ್ತಮವಾದ ಅನುಭವವನ್ನು ನೀಡುತ್ತದೆ. ಇಂಜಿನ್ ಸರಳವಾಗಿದೆ ಮತ್ತು ಯೋಗ್ಯವಾದ ವೇಗವರ್ಧನೆಯೊಂದಿಗೆ ರೇಖಾತ್ಮಕ ಶೈಲಿಯಲ್ಲಿ ಶಕ್ತಿಯನ್ನು ನೀಡಲಾಗುತ್ತದೆ.

ಹೀರೋ ಡೆಸ್ಟಿನಿ 125 ಸ್ಕೂಟರ್‍ನಲ್ಲಿನ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‍ಗಳು ಮೃದುವಾಗಿ ಮತ್ತು ಕಠಿಣ ಬ್ರೇಕಿಂಗ್ ಅನ್ನು ಮತ್ತು ರಸ್ತೆ ಬದಿಗಳಲ್ಲಿ ಚಲಿಸಲು ಉತ್ತಮಾಗಿದೆ ಎಂದೇ ಹೇಳಬಹುದಾಗಿದ್ದು, ಸೌಕರ್ಯವಂತವಾದ ಸೀಟ್‍ಗಳು ಮತ್ತು ವಿಶಾಲವಾದ ಫುಟ್‍ಭೋರ್ಡ್‍ಘಳು ಆರಾಮದಾಯವಾದ ಚಾಲನ ಅನುಭವವನ್ನು ನೀಡುವುದರಲ್ಲಿ ಬೇರೆ ಮಾತಿಲ್ಲ.

ಹೀರೋ ಡೆಸ್ಟಿನಿ 125 ಸ್ಕೂಟರ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ರಮ್ ಬ್ರೇಕ್‍ನೊಂದಿಗೆ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ ಅನ್ನು ಎರಡು ಚಕ್ರಗಳಿಗೆ ನೀಡಲಾಗಿದ್ದು, ಇದು ಕಠಿಣವಾದ ಬ್ರೇಕಿಂಗ್ ಸಮಯದಲ್ಲಿ ಬಹು ಸಹಾಯಕವಾಗಿದೆ.

ಕೊನೆ ಮಾತು
ಹೀರೋ ಡೆಸ್ಟಿನಿ 125 ಒಂದು ಅತ್ಯುತ್ತಮ ಪ್ರೀಮಿಯಮ್ ಲುಕ್ ಹೊಂದಿರುವ ಸ್ಕೂಟರ್ ಆಗಿದ್ದು, 125ಸಿಸಿ ಸೆಗ್ಮೆಂಟ್‍ನಲ್ಲಿ ಈ ಸ್ಕೂಟರ್ ಹೆಚ್ಚು ಜನಪ್ರಯತೆಯನ್ನು ಪಡೆಯುವುದರಲ್ಲಿ ಯಾವುದೇ ಸಂಶವಿಲ್ಲ. ಇದನ್ನು ಮಹಿಳೆಯರು ಮತ್ತು ಪುರುಷರು ಚಲಾಯಿಸಬಹುದಾಗಿದೆ.

ಚಾಲನೆಯ ವೇಳೆ ಉತ್ತಮವಾದ ಅನುಭವವನ್ನು ನೀಡುತ್ತದೆ. ಆದ್ದರಿಂದ ಕದಿಮೆ ಬೆಲೆಯಲ್ಲಿ ಪ್ರೀಮಿಯಂ ಸ್ಕೂಟರ್ ಅನ್ನು ಖರೀದಿಸುವ ಯೋಜನೆ ಇದ್ದರೆ ನೀವು ಹೀರೋ ಡೆಸ್ಟಿನಿ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








