ಮೊದಲ ನೋಟ; ಬಲಿಷ್ಠ ಬಜಾಜ್ ವಿ15 ಖರೀದಿಗೆ ಯೋಗ್ಯವೇ?
ಐತಿಹಾಸಿಕ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ ನಿರ್ಮಿಸಿರುವ ಬಜಾಜ್ ವಿ15 ಅಷ್ಟೇ ಬಲಿಷ್ಠವಾಗಿದೆಯೇ? ಖರೀದಿಗೆ ಯೋಗ್ಯವೇ? ಇತರ ಬೈಕ್ ಗಳಿಗಿಂತ ಇದೇಗೆ ಭಿನ್ನ ಎಂಬ ಹತ್ತು ಹಲವಾರು ಪ್ರಶ್ನೆಗಳು ಬೈಕ್ ಉತ್ಸಾಹಿಗಳಲ್ಲಿ ಮೂಡಬಹುದು.
Also Read: ಅಚ್ಚರಿ! ಬಜಾಜ್ ವಿ15, 150 ಸಿಸಿ ಬೈಕ್‌ನ ಬೆಲೆ ಎಷ್ಟು ಗೊತ್ತಾ? ಮುಂದಕ್ಕೆ ಓದಿ
ಇವೆಲ್ಲದಕ್ಕೂ ಉತ್ತರವಾಗಿ ಬಜಾಜ್ ವಿ15 ಬೈಕ್ ಮೊದಲ ನೋಟದ ವಿಮರ್ಶೆಯನ್ನು ನಾವಿಲ್ಲಿ ಓದುಗರ ಜೊತೆಗೆ ಹಂಚಿಕೊಳ್ಳಲಿದ್ದೇವೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ 1971ರ ಇಂಡೋ-ಪಾಕ್ ಯುದ್ಧ ಸೇರಿದಂತೆ ಮೂರು ದಶಕಗಳಷ್ಟು ಕಾಲ ಭಾರತೀಯ ನೌಕಾ ಸೇನೆಯಲ್ಲಿ ತನ್ನ ಸೇವೆ ಸಲ್ಲಿಸಿರುವ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಲೋಹದಿಂದ ನಿರ್ಮಿತ ಬೈಕ್ ಇದಾಗಿದೆ.

ಬಹುಮುಖಧಾರಿ ಆಧುನಿಕ ಕ್ಲಾಸಿಕ್ ಶೈಲಿಯನ್ನು ಮೈಗೂಡಿಸಿ ಬಂದಿರುವ ಬಜಾಜ್ ವಿ15, ದಿಟ್ಟವಾದ ಸ್ಪೋರ್ಟಿ ಗ್ರಾಫಿಕ್ಸ್ ಪಡೆದಿದೆ.

ಮುಂದುಗಡೆ ಕ್ಲಾಸಿಕ್ ಎಲ್‌ಇಡಿ ಟೈಲ್ ಲ್ಯಾಂಪ್, ಪ್ರೀಮಿಯಂ ಸೀಟು, ಪ್ರೀಮಿಯಂ ಇನ್ಸ್ಟ್ರುಮೆಂಟ್ ಕ್ಲ್ಸ್ಟರ್ ಮತ್ತು 10 ಸ್ಪೋಕ್ ಅಲ್ಯೂಮಿನಿಯಂನಿಂದ ಸುತ್ತುವರಿದ ವೀಲ್ ಡಿಸೈನ್ ಇದು ಪಡೆದಿದೆ.

ಪ್ರಭಾವಶಾಲಿ ಮುಂಭಾಗ, ಎತ್ತರದ ಸಾನಿಧ್ಯ, ಎದ್ದು ಕಾಣಿಸುವ ಇಂಧನ ಟ್ಯಾಂಕ್, ಕಾರ್ಯ ಕ್ಷಮತೆಯ ಹ್ಯಾಂಡಲ್ ಬಾರ್, ಆಕ್ರಮಣಕಾಗಿ ಫ್ರಂಟ್ ಫಾರ್ಕ್ ಮತ್ತು ಬಿರುಸುತನದ ಡಬಲ್ ದೇಹ ರಚನೆ ಇದರಲ್ಲಿದೆ.

ಬಜಾಜ್ ವಿ15 ಒಂದು ಸಿಂಗಲ್ ಸೀಟಿನ ಬೈಕಾದರೂ ಅಗತ್ಯ ಬಂದ್ದಲ್ಲಿ ಹಿಂಬದಿಯಲ್ಲಿ ಜೋಡಣೆ ಮಾಡಿರುವ ಮುಸುಕನ್ನು (cowl) ತೆಗೆಯಬಹುದಾಗಿದೆ.

150 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಸ್ ಒಎಚ್ ಸಿ 2 ವಾಲ್ವ್, ಏರ್ ಕೂಲ್ಡ್ ಡಿಟಿಐಎಸ್-ಐ ಎಂಜಿನಿಂ ದನಿಯಂತ್ರಿಸ್ಪಡುವ ನೂತನ ಬಜಾಜ್ ವಿ15, 13 ಎನ್ ಎಂ ತಿರುಗಬಲದಲ್ಲಿ 12 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಬಜಾಜ್ ವಿ15 ಸಸ್ಪನ್ಷನ್ ಬಗ್ಗೆ ಮಾತಾನಾಡುವುದಾದ್ದಲ್ಲಿ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್ ಲೋಡಡ್ ಹೈಡಾಲಿಕ್ ಟೈಪ್ ಸಸ್ಪನ್ಷನ್ ಪಡೆಯಲಿದೆ.

ಅಂತೆಯೇ ಮುಂಭಾಗದಲ್ಲಿ 240 ಡಿಸ್ಕ್ ಹಾಗೂ ಹಿಂಭಾಗದಲ್ಲಿ 130 ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಕೊಡಲಾಗಿದೆ.

13 ಲೀಟರ್ ಇಂಧನ ಸಾಮರ್ಥ್ಯದ ಬಜಾಜ್ ವಿ15, 1.7 ಲೀಟರ್ ರಿಸರ್ವ್ ಪಡೆದಿದೆ.

ಆಯಾಮ (ಎಂಎಂ)
ಉದ್ದ: 2044
ಅಗಲ: 780
ಎತ್ತರ: 1070
ಗ್ರೌಂಡ್ ಕ್ಲಿಯರನ್ಸ್: 165
ಚಕ್ರಾಂತರ: 1315
ಭಾರ: 135.5 ಕೆ.ಜಿ
ಸೀಟು ಎತ್ತರ: 780

ಸೋಲರಿಯದ ಐಎನ್‌ಎಸ್ ವಿಕ್ರಾಂತ್ ಹಡಗಿನ ಲೋಹದಿಂದ (Made with the invincible metal of INS Vikrant) ನಿರ್ಮಿತ ನೂತನ ಬಜಾಜ್ 'ವಿ' ಬೈಕ್, ತನ್ನ ಹೆಸರಿನಲ್ಲೇ ಶೌರ್ಯವನ್ನು (Valor) ಪ್ರತಿಬಿಂಬಿಸುತ್ತದೆ.

ಎಬೋನಿ ಬ್ಲ್ಯಾಕ್ ಮತ್ತು ಪಿಯರ್ಲ್ ವೈಟ್ ಬಣ್ಣಗಳೊಂದಿಗೆ ಲಭ್ಯವಿರುವ ಬಜಾಜ್ ವಿ15, 55/60 W ಹೆಡ್ ಲ್ಯಾಂಪ್ ಹಾಗೂ ಅಬ್ಬರಿಸುವ ಎಕ್ಸಾಸ್ಟ್ ಕೊಳವೆಗಳನ್ನು ಗಿಟ್ಟಿಸಿಕೊಂಡಿದೆ.

ಇನ್ನು ಇಂಧನ ಕ್ಷಮತೆಯನ್ನು ಗಮನಿಸಿದಾಗಲೂ 60ರಿಂದ 70 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಜಾಜ್ ವಿ15 ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 62,075 ರು.ಗಳಾಗಿದೆ. ಆದರೆ ಕೆಫೆ ರೇಸರ್ ಕವರ್, ಗ್ರಾಬ್ ರೈಲ್, ಕ್ರಾಶ್ ಗಾರ್ಡ್ ಮುಂತಾದ ಆಕ್ಸಸರಿಗಳು ಸೇರಿ ಮತ್ತಷ್ಟು 1000 ರು.ಗಳಷ್ಟು ದುಬಾರಿಯೆನಿಸಲಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ 150 ಸಿಸಿ ವಿಭಾಗದಲ್ಲಿರುವ ಸುಜುಕಿ ಜಿಕ್ಸರ್, ಹೋಂಡಾ ಯೂನಿಕಾರ್ನ್ ಸಿಬಿಝಡ್ 160 ಸಿಸಿ ಮತ್ತು ಹೀರೊ ಸಿಬಿಝಡ್ ಎಕ್ಸ್ ಟ್ರೀಮ್ ಬೈಕ್ ಗಳಿಗೆ ಬಜಾಜ್ ನೂತನ ಬೈಕ್ ಪ್ರತಿಸ್ಪರ್ಧಿಯಾಗಲಿದೆ.

ಅಂತಿಮ ತೀರ್ಪು
ಮಾರುಕಟ್ಟೆಯಲ್ಲಿರುವ ಬೈಕ್ ಗಳನ್ನು ಹೋಲಿಸಿದಾ ನೂತನ ಬಜಾಜ್ ವಿ15 ಸಂಪೂರ್ಣ ವಿಭಿನ್ನ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದರ ಹೆಡ್ ಲೈಟ್ ಸ್ವಲ್ಪ ಮಂಕಾಗಿ ಕಾಣಿಸಿಕೊಂಡರೂ ಒಟ್ಟಾರೆ ವಿನ್ಯಾಸ ಹೆಚ್ಚಿನ ರಸ್ತೆ ಸಾನಿಧ್ಯವನ್ನು ಕಾಪಾಡಿಕೊಂಡಿದೆ. ಇನ್ನು ಬೆಲೆಯೂ ಪರಿಣಾಮಕಾರಿ ಎನಿಸಿಕೊಂಡಿದ್ದು ಬಜಾಜ್ ಅಧಿಪತ್ಯವನ್ನು ಮುಂದುವರಿಸುವ ಭರವಸೆಯನ್ನು ನೀಡಿದೆ.

ಐತಿಹಾಸಿಕ 'ವಿಕ್ರಾಂತ್' ಹಡಗಿನ ಲೋಹದಿಂದ ನೂತನ ಬಜಾಜ್ ಬೈಕ್ ತಯಾರಿ
ಬಜಾಜ್ 'ವಿ'; ಬೈಕ್ ಪ್ರೇಮಿಗಳು ಅರಿತುಕೊಳ್ಳಬೇಕಾದ 10 ಅಂಶಗಳು!


Click it and Unblock the Notifications








