ಪ್ರೇಮಿಗಳ ದಿನದಂದು ನನಸಾದ ವಿಲ್ಸನ್ ಕನಸು

ಬೆಂಗಳೂರಿನ ಟಿಸಿಎಸ್ ಉದ್ಯೋಗಿ ಪ್ರಶಾಂತ್ ವಿಲ್ಸನ್ ಡಿ'ಸೋಜನ ಮನಸ್ಥಿತಿಯೂ ಭಿನ್ನವಾಗಿರಲಿಲ್ಲ. ಹೃದಯ ಬುಡ್ ಬುಡು ಎಂದು ಬಡಿದುಕೊಳ್ಳುತ್ತಿತ್ತು. ಹಲವಾರು ತಿಂಗಳ ಕನಸು ನನಸಾಗುವ ಈ ದಿನಕ್ಕಾಗಿ ಆತನೂ ಕಾಯುತ್ತಿದ್ದ. ಡೌಟೇ ಇಲ್ಲ, ಇದು ಲವ್ ಕೇಸ್ ಅಂದುಕೊಂಡರೆ ಯು ಆರ್ ರಾಂಗ್!
ಪ್ರಶಾಂತನ ನಿದ್ದೆಗೆಡಿಸುತ್ತಿದ್ದದ್ದು ಬುಡುಬುಡು ಸದ್ದು. ಹಲವು ತಿಂಗಳ ಹಿಂದೆ ಬುಕ್ಕಿಂಗ್ ಮಾಡಿದ ಸಿಲ್ವರ್ ಬಣ್ಣದ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ ಬುಲೆಟ್ ಇವರ ಕೈಸೇರಿದ್ದು ಫೆಬ್ರವರಿ ಹದಿನಾಲ್ಕರಂದು. ಎಲ್ಲರೂ ಪ್ರೀತಿಪ್ರೇಮವೆಂದು ಕನವರಿಸುತ್ತಿದ್ದರೆ ಪ್ರಶಾಂತ್ ಬುಲೆಟ್ ಕನಸಲಿದ್ದ.
ರಾಯಲ್ ಎನ್ ಫೀಲ್ಡೆಂದರೆ ಹಾಗೆ. ಅದರ ಗತ್ತು, ಗಾಂಭಿರ್ಯ, ಠೀವಿ ಎಲ್ಲರಿಗೂ ಬೆರಗು. ಹಲವಾರು ದಶಕಗಳಿಂದ ದೇಶದ ಜನರನ್ನು ಮೋಡಿ ಮಾಡಿದ ರಾಯಲ್ ಎನ್ ಫೀಲ್ಡ್ ಕಂಪನಿಯ ಇತ್ತೀಚಿನ ಬುಲೆಟ್ ಥಂಡರ್ ಬರ್ಡ್ ಫ್ಯಾಮಿಲಿಗೆ ಪ್ರಶಾಂತನೂ ಜಾಯಿನ್ ಆಗಿದ್ದಾರೆ.
ಪ್ರಶಾಂತ್ ವಿಲ್ಸನ್ ಡಿಸೋಜರಿಗೆ ಕಂಫರ್ಟ್ ಆಗಿರೋ ದ್ವಿಚಕ್ರವಾಹನ ಖರೀದಿಸಬೇಕೆಂಬ ಬಯಕೆಯಿತ್ತು. ಅದರಲ್ಲೂ ಬೃಹತ್ ಆಕೃತ್ತಿಯ ಗತ್ತಿನ ಬುಲೆಟ್ ಇವರನ್ನು ಹೆಚ್ಚು ಗಮನಸೆಳೆದಿತ್ತು. ಇಂದಿರನಗರದ ಟೆಕ್ ನಿಕ್ ಮೋಟರ್ಸ್ ನಲ್ಲಿ 1.3 ಲಕ್ಷ ರು. ನೀಡಿ ಥಂಡರ್ ಬರ್ಡ್ ಬುಲೆಟ್ ಖರೀದಿಸಿದ್ದಾರೆ.
ಸುಮಾರು ಎರಡು ತಿಂಗಳು ಗಂಭೀರವಾಗಿ ಯೋಚನೆ ಮಾಡಿ ಈ ಬುಲೆಟನ್ನು ಆಯ್ಕೆ ಮಾಡಿದ್ರು. ಆದ್ರೆ ಈ ಬುಲೆಟ್ ನ ದೀರ್ಘಕಾಲದ ವೇಟಿಂಗ್ ಪಿರೆಯಿಡ್ ಕೊಂಚ ಇವರನ್ನು ತಬ್ಬಿಬ್ಬುಗೊಳಿಸಿತು. ಆದರೆ ಕಾಯುವುದರಲ್ಲೂ ಸುಖವುಂಟು ಎಂದು ನಂಬಿ ಇಷ್ಟಪಟ್ಟ ಬುಲೆಟ್ ತನ್ನದಾಗಿಸಿಕೊಂಡಿದ್ದಾರೆ.
ವಿಶೇಷವೆಂದರೆ ಇದು ಇವರ ಮೊದಲ ಬೈಕ್. ಇವರ ಥಂಡರ್ ಬರ್ಡ್ ಬುಲೆಟ್ ಕನಸಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಸಾಥ್ ನೀಡಿತ್ತು. 55 ಸಾವಿರ ರುಪಾಯಿ ಡೌನ್ ಪೇಮೆಂಟ್ ಮಾಡಿದ್ರು.ದೇಶದ ಜನರು ವಾಹನ ಖರೀದಿಯಲಿ ದರ, ಮೈಲೇಜ್ ಇತ್ಯಾದಿ ಹಲವು ಅಂಶಗಳನ್ನು ಪರಿಗಣಿಸುತ್ತಾರೆ. ಪ್ರಶಾಂತನಿಗೆ ಈ ಬೈಕಿನ ಆರಾಮದಾಯಕತೆ ಅಥವಾ ಕಂಫರ್ಟ್ ಇಷ್ಟವಾಗಿದೆ.
(ನಿಮ್ಮ ಹೊಸ/ಹಳೆಯ ಕಾರು ಬೈಕು ಸ್ಕೂಟರ್ ಕುರಿತು ನಮಗೆ ಬರೆಯಿರಿ. ಇಮೇಲ್ ವಿಳಾಸ: [email protected] )


Click it and Unblock the Notifications








