ರೆನೊ ಕ್ವಿಡ್; ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ

By Nagaraja

ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಕ್ವಿಡ್ ಖರೀದಿಗೆ ಯೋಗ್ಯವೇ? ನಿರ್ವಹಣೆ ಹೇಗೆ ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು.

Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!

ನಮ್ಮ ಡ್ರೈವ್ ಸ್ಪಾರ್ಕ್ ತಂಡದ ತಜ್ಞರು ನಡೆಸಿರುವ ರೆನೊ ಕ್ವಿಡ್ ಸಂಪೂರ್ಣ ಚಾಲನಾ ವಿಮರ್ಶೆಯ ಬಳಿಕ ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರಕಿದೆ ಎಂದು ನಾವು ಭಾವಿಸುತ್ತಿದ್ದೇವೆ. ಹಾಗಿದ್ದರೂ ನಿಮ್ಮ ಮನದಲ್ಲಿ ಗೊಂದಲ ಮನೆ ಮಾಡಿದ್ದರೆ ಇಂದಿನ ಈ ಲೇಖನದಲ್ಲಿ ನಿಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಲಾಗುವುದು.

ರೆನೊ ಕ್ವಿಡ್ ವಿನ್ಯಾಸ ಪ್ರಭಾವಿ ಎನಿಸಿದೆಯೇ ?

ರೆನೊ ಕ್ವಿಡ್ ವಿನ್ಯಾಸ ಪ್ರಭಾವಿ ಎನಿಸಿದೆಯೇ ?

ನಿಸ್ಸಂಶವಾಗಿಯೂ ರೆನೊ ಕ್ವಿಡ್ ವಿನ್ಯಾಸವು ಕಾರಿನ ಪ್ಲಸ್ ಪಾಯಿಂಟ್ ಎನ್ನಲೇ ಬೇಕು. ಜನಪ್ರಿಯ ಡಸ್ಟರ್ ಎಸ್‌ಯುವಿ ಶೈಲಿಯಿಂದ ಸ್ಪೂರ್ತಿ ಪಡೆದ ವಿನ್ಯಾಸವು ರೆನೊ ಕ್ವಿಡ್ ಮುಂದಿನ ದಿನಗಳಲ್ಲಿ ದೊಡ್ಡ ಯಶಸ್ಸಿನತ್ತ ಮುನ್ನಡೆಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಯಾವ ತಳಹದಿಯಲ್ಲಿ ನಿರ್ಮಾಣ?

ಯಾವ ತಳಹದಿಯಲ್ಲಿ ನಿರ್ಮಾಣ?

ನಿಸ್ಸಾನ್ ಹಾಗೂ ರೆನೊ ಸಂಸ್ಥೆಯು ಜಂಟಿಯಾದ ಸಿಎಂಎಂಫ್ (ಕಾಮನ್ ಮೊಡ್ಯುಲ್ ಫ್ಯಾಮಿಲಿ) ತಳಹದಿಯಲ್ಲಿ ಇದು ಅಭಿವೃದ್ಧಿಗೊಂಡಿದೆ. ಮುಂಬರುವ ರೆನೊ-ನಿಸ್ಸಾನ್ ಬಜೆಟ್ ಕಾರುಗಳಿಗೆ ವೇದಿಕೆಯಾಗಲಿದೆ.

ಒಳಮೈ - ವಿಶಿಷ್ಟತೆ ಏನು?

ಒಳಮೈ - ವಿಶಿಷ್ಟತೆ ಏನು?

ಎಂಟ್ರಿ ಲೆವೆಲ್ ಕಾರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಏಳು ಇಂಚುಗಳ ಟಚ್ ಸ್ಕ್ರೀನ್ ಮೀಡಿಯಾನೇವ್ ಸಿಸ್ಟಂ ಸೌಲಭ್ಯ ನೀಡುತ್ತಿರುವುದು ಈ ಪುಟ್ಟ ಕಾರನ್ನು ಹೆಚ್ಚು ಶ್ರೀಮಂತವಾಗಿಸಲಿದೆ.

ಒಳಮೈ - ಒಂದು ಪುಟ್ಟ ರೌಂಡಪ್

ಒಳಮೈ - ಒಂದು ಪುಟ್ಟ ರೌಂಡಪ್

  • ಮೊನೊ ಟೋನ್ ಡ್ಯಾಶ್ ಬೋರ್ಡ್,
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
  • ಸ್ಪೋರ್ಟಿ ಸ್ಟೀರಿಂಗ್ ವೀಲ್ ಜೊತೆ ಪಿಯಾನೊ ಬ್ಲ್ಯಾಕ್ ಆಸೆಂಟ್,
  • ಸ್ಟೀರಿಂಗ್ ವೀಲ್ ಲೆಥರ್ ಹೋದಿಕೆ,
  • ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಫಾಸಿಯಾ,
  • ಸೆಂಟ್ರಲ್ ಏರ್ ವೆಂಟ್ಸ್
  • ಹೊರಮೈ

    ಹೊರಮೈ

    • ದಿಟ್ಟವಾದ ಫ್ರಂಟ್ ಗ್ರಿಲ್,
    • ಸಿ ಆಕಾರದ ಹೆಡ್ ಲ್ಯಾಂಪ್,
    • ಬ್ಲ್ಯಾಕ್ ಬಂಪರ್,
    • ದೇಹ ಬಣ್ಣದ ಬಂಪರ್,
    • ವೀಲ್ ಆರ್ಚ್ ಕ್ಲಾಡಿಂಗ್,
    • ಫ್ರಂಟ್ ಫಾಗ್ ಲ್ಯಾಂಪ್,
    • ಪ್ರಯಾಣಿಕ ಬದಿಯಲ್ಲಿ ಓಆರ್‌ವಿಎಂ,
    • ಡೋರ್ ನಲ್ಲಿ ಬ್ಲ್ಯಾಕ್ ಡಿಕಾಲ್ಸ್,
    • ಸ್ಟೀಲ್ ವೀಲ್ಸ್,
    • ಇಂಟೇಗ್ರೇಟಡ್ ರೂಫ್ ಸ್ಪಾಯ್ಲರ್.
    • ಆರಾಮ ಮತ್ತು ಅನುಕೂಲತೆ

      ಆರಾಮ ಮತ್ತು ಅನುಕೂಲತೆ

      • ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್,
      • ಫ್ರಂಟ್ ಪವರ್ ವಿಂಡೋ,
      • ಹೀಟರ್, ಎಸಿ
      • ಆನ್ ಬೋರ್ಡ್ ಟ್ರಿಪ್ ಕಂಪ್ಯೂಟರ್,
      • ಬಾಟಲಿ ಹೋಲ್ಡರ್,
      • ಓಪನ್ ಸ್ಟೋರೆಜ್,
      • ಗ್ಲೋವ್ ಬಾಕ್ಸ್,
      • ರಿಯರ್ ಪಾರ್ಸೆಲ್ ಟ್ರೇ,
      • ಗೇರ್ ಶಿಫ್ಟ್ ಇಂಡಿಕೇಟರ್
      • ಮಲ್ಟಿಮೀಡಿಯಾ

        ಮಲ್ಟಿಮೀಡಿಯಾ

        • ಸಿಂಗಲ್ ಡಿನ್ ಸ್ಟೀರಿಯೋ ಜೊತೆ ರೇಡಿಯೋ ಎಎಂ/ಎಫ್‌ಎಂ, ಎಂಪಿ3,
        • ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್, ಹ್ಯಾಂಡ್ಸ್ ಫ್ರಿ ಟೆಲಿಫೋನ್,
        • ಮೀಡಿಯಾ ನೇವ್,
        • ರೂಫ್ ಮೈಕ್,
        • ಯುಎಸ್‌ಬಿ ಪೋರ್ಟ್,
        • ಆಕ್ಸ್ ಇನ್ ಪೋರ್ಟ್,
        • ಫ್ರಂಟ್ ಸ್ಪೀಕರ್,
        • ಆ್ಯಂಟಿನಾ,
        • 12 ವಾಟ್ ಪವರ್ ಸಾಕೆಟ್
        • ಸುರಕ್ಷತೆ

          ಸುರಕ್ಷತೆ

          • ರಿಮೋಟ್ ಕೀಲೆಸ್ ಎಂಟ್ರಿ ಜೊತೆ ಸೆಂಟ್ರಲ್ ಲಾಕಿಂಗ್,
          • ಫ್ರಂಟ್ ಫಾಗ್ ಲ್ಯಾಂಪ್,
          • ಇಂಜಿನ್ ಇಂಮೊಬಿಲೈಜರ್,
          • ಚಾಲಕ ಏರ್ ಬ್ಯಾಗ್ (ಐಚ್ಛಿಕ),
          • ಹೆಚ್ಚುವರಿ ಚಕ್ರ,
          • ಆಯಾಮ, ಆಸನ ಸಾಮರ್ಥ್ಯ

            ಆಯಾಮ, ಆಸನ ಸಾಮರ್ಥ್ಯ

            • ಉದ್ದ - 3679
            • ಅಗಲ- 1579
            • ಎತ್ತರ - 1478
            • ಚಕ್ರಾಂತರ - 2422
            • ಗ್ರೌಂಡ್ ಕ್ಲಿಯರನ್ಸ್ - 180
            • ಇಂಧನ ಟ್ಯಾಂಕ್ ಸಾಮರ್ಥ್ಯ - 28
            • ಆಸನ ಸಾಮರ್ಥ್ಯ - 5
            • ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್

              ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್

              • ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl
              • ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್: 1800 ಎಂಎಂ
              • ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ: 300 ಲೀಟರ್
              • ಎಂಜಿನ್, ಗೇರ್ ಬಾಕ್ಸ್

                ಎಂಜಿನ್, ಗೇರ್ ಬಾಕ್ಸ್

                • ಎಂಜಿನ್ ತಾಂತ್ರಿಕತೆ 799 ಸಿಸಿ,
                • 3 ಸಿಲಿಂಡರ್
                • 54 ಅಶ್ವಶಕ್ತಿ
                • 72 ಎನ್‌ಎಂ ತಿಗುರುಬಲ
                • ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
                • ಹಿನ್ನೆಡೆಗಳು - ಪ್ಲಾಸ್ಟಿಕ್

                  ಹಿನ್ನೆಡೆಗಳು - ಪ್ಲಾಸ್ಟಿಕ್

                  ಸ್ಪರ್ಧಾತ್ಮಕ ಬೆಲೆ ಕಾಪಾಡುವ ನಿಟ್ಟಿನಲ್ಲಿ ರೆನೊ ಕ್ವಿಡ್ ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮಾಡಲಾಗಿದೆ. ಉದಾಹರಣೆಗೆ ವಿಂಗ್ ಮಿರರ್‌ನಲ್ಲಿ ಪ್ಲಾಸ್ಟಿಕ್ ಫಿನಿಶಿಂಗ್ ಕೊಡಲಾಗಿದೆ. ಇಲ್ಲಿ ಬೆಲೆ ಕಡಿತದ ಜೊತೆಗೆ ಕಾರಿನ ಒಟ್ಟಾರೆ ಭಾರ ಕುಗ್ಗಿಸುವುದರತ್ತವೂ ರೆನೊ ಗಮನ ಹರಿಸಿರುವುದು ಮಹತ್ವದೆನಿಸುತ್ತದೆ. ಇನ್ನು ಚಕ್ರಗಳಲ್ಲಿ ನಾಲ್ಕರ ಬದಲು ಮೂರು ಬೋಲ್ಟ್ ನಟ್ಟು, ಹಗುರ ಭಾರದ ಡೋರ್ ಕಾಣಬಹುದಾಗಿದೆ.

                  ಟ್ಯಾಕೋಮೀಟರ್ ಕೊರತೆ (ಆರ್‌ಪಿಎಂ ಗೇಜ್)

                  ಟ್ಯಾಕೋಮೀಟರ್ ಕೊರತೆ (ಆರ್‌ಪಿಎಂ ಗೇಜ್)

                  ಹಾಗಿದ್ದರೂ ನೂತನ ರೆನೊ ಕ್ವಿಡ್ ಕಾರಿನಲ್ಲಿ ಟ್ಯಾಕೋಮೀಟರ್ (ಆರ್‌ಪಿಎಂ ಗೇಜ್) ಕೊರತೆ ಕಾಡಲಿದೆ.

                  ಶಬ್ದ, ವೈಬ್ರೇಷನ್

                  ಶಬ್ದ, ವೈಬ್ರೇಷನ್

                  ಕಡಿಮೆ ಗೇರ್ ನಲ್ಲಿ ಹೆಚ್ಚಿನ ಶಬ್ದವನ್ನುಂಟು ಮಾಡುವುದು ಕೆಲವೊಂದು ಬಾರಿ ಚಾಲಕರಲ್ಲಿ ನಿರಾಸೆ ತರಿಸಲಿದೆ.

                  ಸ್ಟೀರಿಂಗ್ ವೀಲ್ ಹೊಂದಾಣಿಕೆ

                  ಸ್ಟೀರಿಂಗ್ ವೀಲ್ ಹೊಂದಾಣಿಕೆ

                  ಕನಿಷ್ಠ ಪಕ್ಷ ಟಾಪ್ ಎಂಡ್ ವೆರಿಯಂಟ್ ನಲ್ಲಾದರೂ ಸ್ಟೀರಿಂಗ್ ವೀಲ್ ಹೊಂದಾಣಿಕೆ ನೀಡಿದ್ದರೆ ರೆನೊ ಕ್ವಿಡ್ ವಾಹನ ಪ್ರೇಮಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿತ್ತು.

                  ಬೆಲೆ ಹೋಲಿಕೆ

                  ಬೆಲೆ ಹೋಲಿಕೆ

                  ನೂತನ ಕ್ವಿಡ್ ಜನಪ್ರಿಯ ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಗಳಿಗಿಂತ ಹೇಗೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿದೆ ಎಂಬುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

                  ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ? ಮುಂದಕ್ಕೆ ಓದಿ

                  ಕಾರು ಹೋಲಿಕೆ; ನಂ.1 ಸ್ಥಾನಕ್ಕೆ ರೇಸ್

                  ಕಾರು ಹೋಲಿಕೆ; ನಂ.1 ಸ್ಥಾನಕ್ಕೆ ರೇಸ್

                  ಆಲ್ಟೊ vs ಕ್ವಿಡ್ ವಿಜೇತರು ಯಾರು ?

                  ಕಾರು ಹೋಲಿಕೆ

                  ಕಾರು ಹೋಲಿಕೆ

                  ಕ್ವಿಡ್ ಬಿರುಗಾಳಿಗೆ ಸಿಲುಕಿತೇ ಇಯಾನ್ ? ಮುಂದಕ್ಕೆ ಓದಲು ಕ್ಲಿಕ್ಕಿಸಿ

Most Read Articles

Kannada
English summary
How Good Is the Renault Kwid? A Quick Overview Of The Pros & Cons
Story first published: Tuesday, October 20, 2015, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X