ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಬಿಎಂಡಬ್ಲ್ಯು ಕಂಪನಿಯು ಕೆಲವು ವರ್ಷಗಳ ಹಿಂದೆ ತನ್ನ ಎಕ್ಸ್ 4 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಯು ಮುಂಭಾಗದಲ್ಲಿ ಕ್ರೋಮ್ ಕಿಡ್ನಿ ಗ್ರಿಲ್, ಹಿಂಭಾಗದಲ್ಲಿ ಅಗಲವಾದ ಮಸ್ಕ್ಯುಲರ್ ಹಾಂಚ್‌ಗಳನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ನಾವು ಕೆಲ ದಿನಗಳ ಕಾಲ ಫೇಸ್‌ಲಿಫ್ಟ್ ಎಕ್ಸ್ 4 ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಎಸ್‌ಯುವಿಯನ್ನು ಸಿಟಿಯೊಳಗೆ ಹಾಗೂ ಹೆದ್ದಾರಿಯಲ್ಲಿ ಚಾಲನೆ ಮಾಡಲಾಯಿತು. ಈ ಎಸ್‌ಯುವಿಯ ರೋಡ್ ಟೆಸ್ಟ್ ರಿವ್ಯೂವನ್ನು ಈ ವೀಡಿಯೊದಲ್ಲಿ ನೋಡೋಣ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಎಕ್ಸ್'ಟಿರಿಯರ್ ಹಾಗೂ ಡಿಸೈನ್

ಈ ಎಸ್‌ಯುವಿಯನ್ನು ದೂರದಿಂದ ನೋಡಿದಾಗ ಎಕ್ಸ್ 6 ಎಸ್‌ಯುವಿಯಂತೆ ಕಾಣುತ್ತದೆ. ಹೊಸ ಎಕ್ಸ್ 4 ಎಕ್ಸ್ ಡ್ರೈವ್ 30 ಡಿ ಎಸ್‌ಯುವಿಯು ಪ್ರಕಾಶಮಾನವಾದ ಎಲ್ಇಡಿ ಅಡಾಪ್ಟಿವ್ ಹೆಡ್'ಲೈಟ್, ಎಲ್ಇಡಿ ಡಿಆರ್‌ಎಲ್ ಹಾಗೂ ಫಾಗ್ ಲ್ಯಾಂಪ್'ಗಳನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಸ್‌ಯುವಿಯು ಗ್ರಿಲ್'ನಲ್ಲಿ ದೊಡ್ಡ ಗಾತ್ರದ ಆಕ್ಟಿವ್ ವೆಂಟ್ ಹೊಂದಿದೆ. ಎಂಜಿನ್ ಬೇಗೆ ಹೆಚ್ಚಿನ ಗಾಳಿಯ ಅಗತ್ಯವಿದ್ದಾಗ ಈ ವೆಂಟ್ ತೆರೆದುಕೊಂಡು ನಂತರ ಮುಚ್ಚಿಕೊಳ್ಳುತ್ತದೆ. ಈ ಎಸ್‌ಯುವಿಯು ಅಗ್ರೇಸಿವ್ ಬಂಪರ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಫೆಂಡರ್‌ನಲ್ಲಿ ಸಣ್ಣ ಗಾತ್ರದ ಎಂ ಬ್ಯಾಡ್ಜ್ ನೀಡಲಾಗಿದೆ. ಇದರ ಜೊತೆಗೆ ಎಂ ಸೆಗ್'ಮೆಂಟಿನ ಸಿಂಗಲ್-ಟೋನ್ ಬಣ್ಣದ19 ಇಂಚಿನ ಮಲ್ಟಿಸ್ಪೋಕ್ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಸ್‌ಯುವಿಯ ಸುತ್ತಲೂ ಇರುವ ಸಿಲ್ವರ್ ಕ್ಲಾಡಿಂಗ್ ದೂರದಿಂದ ಮಸ್ಕ್ಯುಲರ್ ಆಗಿ ಕಾಣುತ್ತದೆ. ಈ ಎಸ್‌ಯುವಿಯ ಸೈಡ್ ಪ್ರೊಫೈಲ್'ನಲ್ಲಿ ಕ್ರೋಮ್ ಬದಲಿಗೆ ಬ್ರಷ್ಡ್ ಅಲ್ಯೂಮಿನಿಯಂ ಬಣ್ಣವನ್ನು ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಸ್‌ಯುವಿಯು ಪನೋರಾಮಿಕ್ ಸನ್‌ರೂಫ್, ರೂಫ್ ಮೇಲೆ ಶಾರ್ಕ್-ಫಿನ್ ಆಂಟೆನಾವನ್ನು ಹೊಂದಿದೆ. ಎಕ್ಸ್ 4 ಎಸ್‌ಯುವಿಯ ಹಿಂಭಾಗದಲ್ಲಿ ಸ್ಲೀಕ್ ಆದ ಎಲ್‌ಇಡಿ ಟೇಲ್‌ಲೈಟ್‌ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಸ್‌ಯುವಿಯಲ್ಲಿ ಬೂಟ್ ತೆರೆಯಲು ಯಾವುದೇ ಬಟನ್ ನೀಡಿಲ್ಲ. ಬದಲಿಗೆ ಬಿಎಂಡಬ್ಲ್ಯು ಲೋಗೊವನ್ನು ಹಿಂದಿನಿಂದ ಒತ್ತಿದರೆ ಬೂಟ್ ತೆರೆದು ಕೊಳ್ಳುತ್ತದೆ.ಈ ಎಸ್‌ಯುವಿಯು 525-ಲೀಟರ್'ನಷ್ಟು ಗಾತ್ರದ ಬೃಹತ್ ಸ್ಪೇಸ್ ಹೊಂದಿದೆ. ಎರಡನೇ ಸಾಲನ್ನು 60:40 ಆಗಿ ಫೋಲ್ಡ್ ಮಾಡಿದರೆ ಇನ್ನಷ್ಟು ಸ್ಪೇಸ್ ಪಡೆಯಬಹುದು.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಇಂಟಿರಿಯರ್ ಹಾಗೂ ಫೀಚರ್'ಗಳು

ಬಿಎಂಡಬ್ಲ್ಯು ಎಕ್ಸ್ 4 ನ ಕ್ಯಾಬಿನ್ ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ. ಡೋರ್ ಪ್ಯಾನೆಲ್ ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿ ಸಾಕಷ್ಟು ಸಾಫ್ಟ್ ಟಚ್ ಮೇಟಿರಿಯಲ್ ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಇದರ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಇನ್ಫೋಟೇನ್'ಮೆಂಟ್ ಸಿಸ್ಟಂ ನೀಡಲಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈಗ ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, 12.3-ಇಂಚಿನ ಸ್ಕ್ರೀನ್ ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಕಾರಿನ ಮೋಡ್‌ಗಳನ್ನು ಬದಲಿಸುವಾಗ ಸ್ಕ್ರೀನ್ ಮೇಲಿನ ಡಿಸ್ ಪ್ಲೇಗಳು ಬದಲಾಗುತ್ತವೆ. ಚಾಲಕನ ಅಗತ್ಯಗಳಿಗೆ ಅನುಗುಣವಾಗಿ ಕ್ಲಸ್ಟರ್ ಅನ್ನು ಸಹ ಕಾನ್ಫಿಗರ್ ಮಾಡಬಹುದು. ಎಕ್ಸ್ 4 ಎಸ್‌ಯುವಿಯು ಹೆಡ್-ಅಪ್ ಡಿಸ್ ಪ್ಲೇಯನ್ನು ಹೊಂದಿಲ್ಲ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಎಂ ಬ್ಯಾಡ್ಜ್ ಹೊಂದಿದ್ದು, ಹೆಚ್ಚಿನ ಗ್ರಿಪ್ ನೀಡುತ್ತದೆ. ಈ ಎಸ್‌ಯುವಿಯಲ್ಲಿ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ನೀಡಲಾಗಿಲ್ಲ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಇನ್ನು ಸೀಟುಗಳ ಬಗ್ಗೆ ಹೇಳುವುದಾದರೆ, ಲೆದರ್'ನಿಂದ ವ್ರಾಪ್ ಮಾಡಲಾದ ಮುಂಭಾಗದ ಸೀಟುಗಳನ್ನು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದು. ಡ್ರೈವರ್ ಪಕ್ಕದಲ್ಲಿ ಮಾತ್ರ ಸೀಟ್ ಮೆಮೊರಿ ಫಂಕ್ಷನ್ ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಸೈಡ್ ಬೋಲ್ಸ್ಟರ್‌ಗಳಿಗೆ ಅಡ್ಜಸ್ಟಬಲ್ ಬಟನ್ ನೀಡಲಾಗಿದೆ. ಹಿಂಭಾಗದ ಸೀಟುಗಳಲ್ಲಿ ಥೈ ಸಪೋರ್ಟ್ ನೀಡಲಾಗಿದೆ. ಈ ಎಸ್‌ಯುವಿ ಎರಡು ಕಪ್ ಹೋಲ್ಡರ್ ಹೊಂದಿರುವ ಸೆಂಟರ್ ಆರ್ಮ್ ರೆಸ್ಟ್, ಕ್ಲೈಮೇಟ್ ಕಂಟ್ರೋಲ್ ಹಾಗೂ ಎರಡು ಟೈಪ್-ಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಹಿಂಭಾಗದಲ್ಲಿ ಮೂವರು ಪ್ರಯಾಣಿಕರು ಕುಳಿತುಕೊಳ್ಳಬಹುದಾದರೂ ಮಧ್ಯದಲ್ಲಿ ಕುಳಿತ ವ್ಯಕ್ತಿಗೆ ಟ್ರಾನ್ಸ್ ಮಿಷನ್ ಟನಲ್ ಅಡ್ಡಿಯಾಗುತ್ತದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಎಂಜಿನ್ ಹಾಗೂ ಹ್ಯಾಂಡ್ಲಿಂಗ್

ನಾವು 3-ಲೀಟರ್, ಆರು ಸಿಲಿಂಡರ್, ಡೀಸೆಲ್ ಎಂಜಿನ್ ಹೊಂದಿರುವ ಎಕ್ಸ್‌ಡ್ರೈವ್ 30 ಡಿ ಎಸ್‌ಯುವಿಯನ್ನು ಚಾಲನೆ ಮಾಡಿದೆವು. ಈ ಎಂಜಿನ್ 261 ಬಿಹೆಚ್‌ಪಿ ಪವರ್ ಹಾಗೂ 2,000 - 2,500 ಆರ್‌ಪಿಎಂ ನಡುವೆ ಗರಿಷ್ಠ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಂಜಿನ್'ನೊಂದಿಗೆಜೋಡಿಸಲಾಗಿರುವ 8-ಸ್ಪೀಡ್ ಗೇರ್‌ಬಾಕ್ಸ್‌ ಎಲ್ಲಾ ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ. ಈ ಎಸ್‌ಯುವಿಯು ಕೇವಲ 6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಇಕೋ ಪ್ರೊ, ಕಂಫರ್ಟ್, ಸ್ಪೋರ್ಟ್ ಮತ್ತು ಅಡಾಪ್ಟಿವ್ ಎಂಬ ನಾಲ್ಕು ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಇಕೋ ಪ್ರೊ ಮೋಡ್‌ನಲ್ಲಿ ಸ್ಟೀಯರಿಂಗ್ ಹಗುರವಾಗಿದ್ದು, ಥ್ರೊಟಲ್ ರೆಸ್ಪಾನ್ಸ್ ನಿಧಾನವಾಗಿರುತ್ತದೆ. ಆದರೆ ಇಂಧನವನ್ನು ಉಳಿಸುತ್ತದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಕಂಫರ್ಟ್ ಮೋಡ್‌ನಲ್ಲಿ ಸ್ಟೀಯರಿಂಗ್ ಹಾಗೂ ಥ್ರೊಟಲ್ ರೆಸ್ಪಾನ್ಸ್ ಸ್ವಲ್ಪ ಹೆಚ್ಚಾಗುತ್ತದೆ. ಸಿಟಿಯೊಳಗೆ ಈ ಮೋಡ್'ನಲ್ಲಿ ಚಾಲನೆ ಮಾಡುವಂತೆ ನಾವು ಸಲಹೆ ನೀಡುತ್ತೇವೆ. ಸ್ಪೋರ್ಟ್ ಮೋಡ್‌ನಲ್ಲಿ, ಥ್ರೊಟಲ್ ರೆಸ್ಪಾನ್ಸ್ ತೀಕ್ಷ್ಣವಾಗಿದ್ದು ಸ್ಟೀಯರಿಂಗ್ ಗಟ್ಟಿಯಾಗಿರುತ್ತದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಮೋಡ್‌ನಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಪಡೆಯಬಹುದು. ಬಿಎಂಡಬ್ಲ್ಯು ಎಕ್ಸ್ 4 ಎಸ್‌ಯುವಿಯಲ್ಲಿನ ಆರಾಮದಾಯಕ ಸವಾರಿಗಾಗಿ ಸಾಫ್ಟ್ ಸಸ್ಪೆಂಷನ್ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಸಸ್ಪೆಂಷನ್'ನಿಂದಾಗಿ ಹಂಪ್ ಹಾಗೂ ಗುಂಡಿಗಳಲ್ಲಿ ಸರಾಗವಾಗಿ ಸಾಗಬಹುದು. ಈ ಎಸ್‌ಯುವಿಯಲ್ಲಿರುವ ಎನ್‌ವಿಹೆಚ್ ಹಾಗೂ ಇನ್ಸುಲೇಷನ್ ಲೆವೆಲ್ ಅತ್ಯುತ್ತಮ ಗುಣಮಟ್ಟದಲ್ಲಿರುವ ಕಾರಣ ವಿಂಡೋಗಳನ್ನು ಮುಚ್ಚಿದಾಗ ಹೊರಗಿನ ಶಬ್ದವು ಒಳಗೆ ಕೇಳಿಸುವುದಿಲ್ಲ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಕಾರು ಆಲ್-ವೀಲ್-ಡ್ರೈವ್ ಸೆಟಪ್ ಹೊಂದಿರುವುದರಿಂದ ಈ ಎಸ್‌ಯುವಿಯು ಎಲ್ಲಾ ಮೂಲೆಗಳಿಗೂ ಸರಾಗವಾಗಿ ಸಾಗುತ್ತದೆ. ಸುರಕ್ಷತೆಗಾಗಿ ಈ ಎಸ್‌ಯುವಿಯಲ್ಲಿ ಆರು ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್, ಕ್ರ್ಯಾಶ್ ಸೆನ್ಸಾರ್‌ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಇನ್ನು ಮೈಲೇಜ್ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯು ಸಿಟಿಯೊಳಗೆ ಪ್ರತಿ ಲೀಟರ್ ಡೀಸೆಲ್'ಗೆ 7ರಿಂದ 10ಕಿ.ಮೀ ಮೈಲೇಜ್ ನೀಡಿದರೆ, ಹೈವೇಗಳಲ್ಲಿ11ರಿಂದ 14 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ಎಸ್‌ಯುವಿ ಬಗ್ಗೆ ನಮ್ಮ ಅಭಿಪ್ರಾಯವನ್ನು ಹೇಳುವುದಾದರೆ ಈ ಎಸ್‌ಯುವಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.68.88 ಲಕ್ಷಗಳಾಗಿದೆ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಸ್‌ಯುವಿಯು ಸೊಗಸಾದ ಸ್ಟೈಲಿಂಗ್ ಹಾಗೂ ಐಷಾರಾಮಿ ಫೀಚರ್'ಗಳ ಮಿಶ್ರಣವಾಗಿದೆ. ಚಾಲನೆ ಮಾಡಲು ಉತ್ತಮವಾಗಿರುವ ಬಿಎಂಡಬ್ಲ್ಯು ಎಕ್ಸ್ 4 ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ.

ಬಿಎಂಡಬ್ಲ್ಯು ಎಕ್ಸ್ 4 ಎಕ್ಸ್‌ಡ್ರೈವ್ 30 ಡಿ ರಿವ್ಯೂ

ಈ ಎಸ್‌ಯುವಿಯಲ್ಲಿ ನಾವು ಹೆಡ್ಸ್-ಅಪ್-ಡಿಸ್ಪ್ಲೇ, ಸ್ವಲ್ಪ ಹೆಚ್ಚು ಆರಾಮದಾಯಕವಾದ ಫ್ರಂಟ್ ಸೀಟ್ ಹಾಗೂ ವಿಭಿನ್ನ ಬಣ್ಣದ ಅಪ್ ಹೊಲೆಸ್ಟರಿಯನ್ನು ಬಯಸಿದ್ದೆವು.

Most Read Articles

Kannada
English summary
BMW X4 X Drive 30 d review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X