ಶಂಕರ್ ರಾವ್: ನಾನೇಕೆ ಡೀಸೆಲ್ ಐ20 ಖರೀದಿಸಿದೆ?

Posted By: * ಪ್ರವೀಣ ಚಂದ್ರ
<ul id="pagination-digg"><li class="next"><a href="/car-reviews/hyundai-i20-full-review-bangalore-price-aid0134.html">Next »</a></li></ul>
Hyundai i20 User Review
ಚಿಕ್ಕದಿರುವಾಗ ಖರೀದಿಸಿದ ಹೊಸ ಆಟಿಕೆ, ಪರೀಕ್ಷೆಯಲ್ಲಿ ಪಾಸಾದ ಲೆಕ್ಕದಲ್ಲಿ ಪಡೆದ ಹೊಸ ಸೈಕಲ್, ಹೊಸ ಬಟ್ಟೆ, ಹೊಸ ಮೊಬೈಲ್, ಹೊಸ ಕಂಪ್ಯೂಟರ್, ಖರೀದಿಸಿದ ಹೊಸ ಬೈಕ್, ಕಾರು.. ಹೀಗೆ ಹೊಸತು ನೀಡುವ ಸಂಭ್ರಮ, ಸಡಗರ, ಸಂತೋಷ ಅನುಭವವೇದ್ಯ.

"ಕಾರು ಖರೀದಿಸಿ ಸೀದಾ ಅಣ್ಣನ ಆಶೀರ್ವಾದ ಪಡೆಯಲು ಬಂದೆ" ಎಂದ ಐವತ್ತಾರರ ಹರೆಯದ ಶಂಕರ್ ರಾವ್ ಮುಖದಲ್ಲೂ ಚಿಕ್ಕಮಗುವಿನ ಸಂಭ್ರಮ ಎದ್ದು ಕಾಣುತ್ತಿತ್ತು. ಹೊರಗಡೆ ಹೊಸ ಡೀಸೆಲ್ ಐ20 ಅಸ್ಟಾ ಕಾರು ಎಲ್ಲಾ ಸಂಭ್ರಮಕ್ಕೆ ನಾನೇ ಕಾರಣ ಎಂಬ ಹೆಮ್ಮೆಯಿಂದ ನಿಂತಿತ್ತು.

ಅವರು ಶಂಕರ್ ರಾವ್. ವೃತ್ತಿಯಲ್ಲಿ ಬಿಲ್ಡರ್. ಆದರೆ ಅವರ ಆಸಕ್ತಿ ಕ್ಷೇತ್ರ ಹಲವು. ಸದ್ಯ ಹಳೆ ಕಾರಿಗೆ ಗುಡ್ ಬೈ ಹೇಳಿ ಹೊಸ ಖರೀದಿಸಿದಂತೆ ಕೆಲಸ ಬದಲಾಯಿಸಿ ಸಿನಿಮಾ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಗೊಂಬೆಯಾಟವಯ್ಯ ಅನಿಮೆಷನ್ ಚಿತ್ರದ ಮೂಲಕ ಇವರು ಎಲ್ಲರಿಗೂ ಚಿರಪರಿಚಿತ.

ದಿನದಲ್ಲಿ ಹೆಚ್ಚಿನ ಸಮಯ ಪ್ರಯಾಣದಲ್ಲಿಯೇ ಕಳೆಯುತ್ತಾರೆ. ಹೀಗಾಗಿ ಡೀಸೆಲ್ ಕಾರು ಖರೀದಿಸಿದ್ದಾರೆ. ಮೊದಲ ನೋಟಕ್ಕೆ ಇಷ್ಟವಾದ ಕಾರು ಐ20. ಅದರ ಪವರ್, ಸ್ಟೈಲ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆರಾಮದಾಯಕತೆ ಅವರಿಗೆ ಹೆಚ್ಚು ಇಷ್ಟವಾಯಿತಂತೆ.

ಖರೀದಿಸಿದ್ದು ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿಯಿರುವ ಟ್ರಿಡೆಂಟ್ ಶೋರೂಂನಿಂದ. ಎಸ್ ಬಿಎಂ ಬ್ಯಾಂಕ್ ನಿಂದ ಕಾರಿನ ಮೌಲ್ಯದ ಶೇಕಡ 85ರಷ್ಟು ವಾಹನ ಸಾಲ ಪಡೆದಿದ್ದಾರೆ. ಶೇಕಡ 15 ಡೌನ್ ಪೇಮೆಂಟ್ ಮಾಡಿದ್ದಾರೆ.

ನನ್ನ ಹೆಂಡತಿ ನಾನು ಯಾವ ಕಾರು ಖರೀದಿಸಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದು ಬೇಕಾದರೂ ಖರೀದಿಸಿ ಎಂದು ಹೇಳುವ ದೊಡ್ಡಗುಣ. ಆದರೆ ಮಗನಿಗೆ ವೆರ್ನಾ ಇಷ್ಟ. ಯಾಕಪ್ಪ ನಿಂಗೆ ಐ20 ಅನ್ನುತ್ತಾನೆ. ಆದರೆ ನನಗೆ ಅನುಕೂಲವಾಗಿ ಕಂಡದ್ದು ಹ್ಯುಂಡೈ ಐ20.

ನಾನು ಕಾರು ಖರೀದಿಸುವಾಗ ದರದ ಕುರಿತು ಯೋಚಿಸುವುದಿಲ್ಲ. ಕಾರು ಎಷ್ಟು ಅನುಕೂಲಕರವಾಗಿದೆ ಎನ್ನುವುದು ನನಗೆ ಮುಖ್ಯ. ಇದಕ್ಕೆ ಮೊದಲು ಮಾರುತಿ, ಸ್ಯಾಂಟ್ರೊ ಕಾರು ಬಳಸುತ್ತಿದ್ದೆ. ಅವೆರಡು ಕಾರುಗಳಿಗೆ ಹೋಲಿಸಿದರೆ ಈ ಕಾರು ತುಂಬಾ ಇಷ್ಟವಾಯಿತು. ಇದು ವಂಡರ್ ಫುಲ್ ಕಾರು. ಅವರು ಹೇಳುತ್ತ ಸಾಗಿದರು.

ಎರಡು ವರ್ಷಕ್ಕೊಮ್ಮೆ ಕಾರು ಬದಲಾಯಿಸುವುದೇಕೆ? "ನಾನು ಕಾರಿನಲ್ಲಿ ಅತ್ಯಧಿಕ ಪ್ರಯಾಣ ಮಾಡುತ್ತೇನೆ. ಅಂದ್ರೆ ಎರಡು ವರ್ಷಕ್ಕೆ ಕಡಿಮೆ ಎಂದರೂ 60 ಸಾವಿರ ಕಿ.ಮೀ. ತಲುಪಿರುತ್ತದೆ. ನಂತರ ಅದನ್ನು ಬಳಸುವುದು ಇಷ್ಟವಾಗುವುದಿಲ್ಲ. ಬೇರೆ ಯಾವುದೇ ಶೋಕಿಗಾಗಿ ನಾನು ಕಾರು ಬದಲಾಯಿಸುವುದಿಲ್ಲ"

ಆದರೆ ಸ್ಯಾಂಟ್ರೊ ಕಾರು ನಾನು ನಾಲ್ಕು ವರ್ಷ ಬಳಸಿದೆ. ಅದನ್ನು 2.5 ಲಕ್ಷ ರು.ಗೆ ಮಾರಾಟ ಮಾಡಿದ್ದೆ. ಖರೀದಿಸಿದ್ದು ಸುಮಾರು 4 ಲಕ್ಷ ರುಪಾಯಿಗೆ. ನಾಲ್ಕು ವರ್ಷ ಬಳಸಿದರಿಂದ ನನಗೆ ದೊಡ್ಡ ನಷ್ಟವಿಲ್ಲ.

ಮರುದಿನ ಅವರಿಗೆ ಕರೆ ಮಾಡಿ ಸಾರ್ ಹೇಗಿದೆ ಕಾರು ಎಂದು ಪ್ರಶ್ನಿಸಿದಾಗ ಅವರ ಸಂಭ್ರಮ ಹೆಚ್ಚಾಗಿತ್ತು. ಅದರಲ್ಲಿರುವ ಸೀಟ್ ಅಡ್ಜೆಸ್ಟ್ ಮೆಂಟ್, ಏರ್ ಕಂಡಿಷನ್, ಟಿಲ್ಟ್ ಸ್ಟೇರಿಂಗ್ ತುಂಬಾ ಇಷ್ಟವಾಯಿತೆಂದರು. ಅವರಿಗೆ ಅಷ್ಟೊಂದು ಇಷ್ಟವಾದ ಹ್ಯುಂಡೈ ಐ20 ಕಾರಿನ ದರ, ಮೈಲೇಜ್, ಆವೃತ್ತಿ ವಿಮರ್ಶೆಗಾಗಿ ತಪ್ಪದೇ ಮುಂದಿನ ಪುಟ ನೋಡಿ.

<ul id="pagination-digg"><li class="next"><a href="/car-reviews/hyundai-i20-full-review-bangalore-price-aid0134.html">Next »</a></li></ul>
English summary
Shankar Rao Buy new i20 diesel car from Trident Hyundai Showroom Bangalore. How is Car? Why he chose hyundai i20 diesel. What happend his old car? Read Hyundai i20 user review.
Story first published: Friday, December 2, 2011, 15:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark