ಆಟೋಮ್ಯಾಟಿಕ್ ಕಾರುಗಳ ಯುದ್ಧ: ಮಹೀಂದ್ರ ಎಕ್ಸ್‌ಯವಿ500 vs ಹ್ಯುಂಡೈ ಕ್ರೆಟಾ

Written By:

ಹೊಸ ಮಹೀಂದ್ರ ಎಕ್ಸ್‌ಯುವಿ500 ಆಗಮನದೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಮತ್ತಷ್ಟು ಹೆಚ್ಚಿದೆ. ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹ್ಯುಂಡೈ ಕ್ರೆಟಾ ಯಶಸ್ಸಿಗೆ ಹೇಗೆ ಅಡ್ಡಗಾಲು ಹಾಕಲು ಸಾಧ್ಯ ಎಂಬುದಕ್ಕೆ ಉತ್ತರವಾಗಿ ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್ ವೆರಿಯಂಟ್ ಪ್ರವೇಶವಾಗಿದೆ.

Also Read: ಮಹೀಂದ್ರ ಟಿಯುವಿ300 Vs ಫೋರ್ಡ್ ಇಕೊಸ್ಪೋರ್ಟ್ ಮುಂದಕ್ಕೆ ಓದಿ

ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ಉತ್ತರ ಲಭ್ಯವಾಗಲಿದೆ. ಸದ್ಯ ಈ ಲೇಖನದಲ್ಲಿ ಮಹೀಂದ್ರ ಎಕ್ಸ್‌ಯುವಿ500 ಹಾಗೂ ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್ ಕಾರುಗಳ ನಡುವಣ ಯುದ್ಧದಲ್ಲಿ ಯಾರಿಗೆ ಹೆಚ್ಚು ಲಾಭ ದೊರಕುವುದು ಎಂಬುದರ ಬಗ್ಗೆ ಮೆಲುಕು ಹಾಕುವ ಪ್ರಯತ್ನ ಮಾಡಲಾಗುವುದು.

To Follow DriveSpark On Facebook, Click The Like Button
ಬೆಲೆ ಮಾಹಿತಿ (ಅಂದಾಜು ಆನ್ ರೋಡ್ ಬೆಲೆ ದೆಹಲಿ)

ಬೆಲೆ ಮಾಹಿತಿ (ಅಂದಾಜು ಆನ್ ರೋಡ್ ಬೆಲೆ ದೆಹಲಿ)

ಮಹೀಂದ್ರ ಎಕ್ಸ್‌ಯುವಿ500

ಡಬ್ಲ್ಯು8 ಆಟೋಮ್ಯಾಟಿಕ್: 18.26 ಲಕ್ಷ ರು.

ಡಬ್ಲ್ಯು10 ಆಟೋಮ್ಯಾಟಿಕ್: 19.22 ಲಕ್ಷ ರು.

ಡಬ್ಲ್ಯು8 ಆಟೋಮ್ಯಾಟಿಕ್ ಆಲ್ ವೀಲ್ ಡ್ರೈವ್: 20.38 ಲಕ್ಷ ರು.

ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್

1.6 ಎಸ್‌ಎಕ್ಸ್ ಪ್ಲಸ್: 16.12 ಲಕ್ಷ ರು.

ಮಹೀಂದ್ರ ಎಕ್ಸ್‌ಯವಿ500 vs ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್

ಕ್ರೆಟಾಗೆ ಹೋಲಿಸಿದಾಗ ಮಹೀಂದ್ರ ಎಕ್ಸ್‌ಯುವಿ 500, ಡಬ್ಲ್ಯು8, ಡಬ್ಲ್ಯು10 ಹಾಗೂ ಡಬ್ಲ್ಯು10 ಆಲ್ ವೀಲ್ ಡ್ರೈವ್ ಗಳೆಂಬ ಮೂರು ಆಟೋಮ್ಯಾಟಿಕ್ ವೆರಿಯಂಟ್ ಗಳಲ್ಲಿ ಲಭ್ಯವಿರುತ್ತದೆ. ಇನ್ನೊಂದೆಡೆ ಕ್ರೆಟಾದಲ್ಲಿ ಏಕ ಮಾತ್ರ ಆಟೋಮ್ಯಾಟಿಕ್ ವೆರಿಯಂಟ್ ಕೊಡಲಾಗಿದೆ.

ವಿನ್ಯಾಸ - ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್

ವಿನ್ಯಾಸ - ಮಹೀಂದ್ರ ಎಕ್ಸ್‌ಯುವಿ500 ಆಟೋಮ್ಯಾಟಿಕ್

ಹಳೆದ ಮಾದರಿಗೆ ಹೋಲಿಸಿದಾಗ ನೂತನ ಆಟೋಮ್ಯಾಟಿಕ್ ವೆರಿಯಂಟ್ ನಲ್ಲೂ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ. ಚಿರತೆಯಿಂದ ಸ್ಪೂರ್ತಿ ಪಡೆದ ಈ ಕಾರು ದೃಢವಾದ ಫ್ರಂಟ್ ಗ್ರಿಲ್, ಡೇಟೈಮ್ ರನ್ನಿಂಗ್ ಲೈಟ್ಸ್, ಫಾಗ್ ಲ್ಯಾಂಪ್ ಹೆಚ್ಚು ಆಕರ್ಷಕವಾಗಿಸಲಿದೆ.

ವಿನ್ಯಾಸ - ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್

ವಿನ್ಯಾಸ - ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್

ಇನ್ನೊಂದೆಡೆ ಸಂಸ್ಥೆಯ ಫ್ಲೂಯಿಡಿಕ್ ವಿನ್ಯಾಸದಿಂದ ಪ್ರೇರಣೆ ಪಡೆದ ಹ್ಯುಂಡೈ ಕ್ರೆಟಾ ಹೆಚ್ಚು ಪರಿಣಾಮಕಾರಿ ಹಾಗೂ ತಾಜಾತನದ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ವೈಶಿಷ್ಟ್ಯಗಳು - ಮಹೀಂದ್ರ ಎಕ್ಸ್‌ಯುವಿ500

ವೈಶಿಷ್ಟ್ಯಗಳು - ಮಹೀಂದ್ರ ಎಕ್ಸ್‌ಯುವಿ500

ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಡೈಟೈಮ್ ರನ್ನಿಂಗ್ ಲೈಟ್ಸ್, ಎಲೆಕ್ಟ್ರಿಕ್ ಸನ್ ರೂಫ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಚಾಲಕ ಸೀಟು, ಏಳು ಇಂಚುಗಳ ಟಚ್ ಸ್ಕ್ರೀನ್ ಇನ್ಮೋಟೈನ್ಮೆಂಟ್ ಸಿಸ್ಟಂ ಜೊತೆ ಜಿಪಿಎಸ್, ಆಟೋಮ್ಯಾಟಿಕ್ ತಾಪಮಾನ ಕಂಟ್ರೋಲ್, ಬ್ರೇಕ್ ಎನರ್ಜಿ ರಿಜನರೇಷನ್, ರಿವರ್ಸ್ ಪಾರ್ಕಿಂಗ್ ಕಂಟ್ರೋಲ್ ಮುಂತಾದ ಸೌಲಭ್ಯಗಳು ಕಂಡುಬರಲಿದೆ.

ವೈಶಿಷ್ಟ್ಯಗಳು - ಹ್ಯುಂಡೈ ಕ್ರೆಟಾ

ವೈಶಿಷ್ಟ್ಯಗಳು - ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾದಲ್ಲೂ ವೈಶಿಷ್ಟ್ಯಗಳಿಗೇನು ಕೊರತೆ ಕಂಡುಬಂದಿಲ್ಲ. ಇದರಲ್ಲಿ ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್), ಐದು ಇಂಚುಗಳ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಸ್ಮಾರ್ಟ್ ಕೀ, ಪುಶ್ ಬಟನ್ ಸ್ಟ್ಯಾರ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, 17 ಇಂಚುಗಳ ಡೈಮಂಡ್ ಕಂಟ್ ಅಲಾಯ್ ವೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಎಲ್ ಇಡಿ ಸ್ಥಾನ ನಿರ್ಣಯ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳು ಇರಲಿದೆ.

ಎಂಜಿನ್ ತಾಂತ್ರಿಕತೆ - ಮಹೀಂದ್ರ ಎಕ್ಸ್‌ಯುವಿ500

ಎಂಜಿನ್ ತಾಂತ್ರಿಕತೆ - ಮಹೀಂದ್ರ ಎಕ್ಸ್‌ಯುವಿ500

ಮಹೀಂದ್ರ ಎಕ್ಸ್‌ಯುವಿ500 ಹಾಗೂ ಹ್ಯುಂಡೈ ಕ್ರೆಟಾ ಆಟೋಮ್ಯಾಟಿಕ್ ಮಾದರಿಗಳು ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

2.2 ಲೀಟರ್ ಫೋರ್ ಸಿಲಿಂಡರ್,

ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್,

140 ಅಶ್ವಶಕ್ತಿ,

330 ಎನ್‌ಎಂ ತಿರುಗುಬಲ,

ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ಮೈಲೇಜ್: 13.84 ಕೀ.ಮೀ.

ಎಂಜಿನ್ ತಾಂತ್ರಿಕತೆ - ಹ್ಯುಂಡೈ ಕ್ರೆಟಾ

ಎಂಜಿನ್ ತಾಂತ್ರಿಕತೆ - ಹ್ಯುಂಡೈ ಕ್ರೆಟಾ

1.6 ಲೀಟರ್ ಫೋರ್ ಸಿಲಿಂಡರ್,

ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್,

126 ಅಶ್ವಶಕ್ತಿ,

265 ಎನ್‌ಎಂ ತಿರುಗುಬಲ,

ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ಮೈಲೇಜ್: 17 ಕೀ.ಮೀ.

ಸುರಕ್ಷತೆ - ಮಹೀಂದ್ರ ಎಕ್ಸ್‌ಯುವಿ500

ಸುರಕ್ಷತೆ - ಮಹೀಂದ್ರ ಎಕ್ಸ್‌ಯುವಿ500

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,

ಸೈಡ್ ಕರ್ಟೈನ್ ಏರ್ ಬ್ಯಾಗ್ ಸೇರಿದಂತೆ 6 ಏರ್ ಬ್ಯಾಗ್,

ಸ್ಟಾಟಿಕ್ ಬೆಂಡಿಂಗ್ ಲ್ಯಾಂಪ್,

ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಅಸಿಸ್ಟ್,

ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್

ಸುರಕ್ಷತೆ - ಹ್ಯುಂಡೈ ಕ್ರೆಟಾ

ಸುರಕ್ಷತೆ - ಹ್ಯುಂಡೈ ಕ್ರೆಟಾ

ಕರ್ಟೈನ್ ಏರ್ ಬ್ಯಾಗ್,

ಎಬಿಎಸ್,

ಇಎಸ್‌ಸಿ,

ಹಿಲ್ ಸ್ಟ್ಯಾರ್ಟ್ ಅಸಿಸ್ಟ್,

ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್

ಅಂತಿಮ ತೀರ್ಪು

ಅಂತಿಮ ತೀರ್ಪು

ಮಹೀಂದ್ರ ಎಕ್ಸ್‌ಯುವಿ500 ಕಾರಿಗೆ ಹೋಲಿಸಿದಾಗ ಹ್ಯುಂಡೈ ಕ್ರೆಟಾ ಕಡಿಮೆ ಬಜೆಟ್ ‌ನಲ್ಲಿ ಐದು ಸೀಟುಗಳ ಅತ್ಯುತ್ತಮ ಆಯ್ಕೆಯನ್ನು ಒದಗಿಸುತ್ತದೆ. ಆದರೆ ಆಲ್ ವೀಲ್ ಡ್ರೈವ್ ಆಯ್ಕೆಯ ಕೊರತೆ ಕಾಡಲಿದೆ. ಇನ್ನೊಂದೆಡೆ ಮಹೀಂದ್ರ ಎಕ್ಸ್‌ಯುವಿ500 ಹೆಚ್ಚು ಸ್ಥಳಾವಕಾಶಯುಕ್ತವಾಗಿದ್ದು ಏಳು ಮಂದಿಗೆ ಆರಾಮದಾಯಕವಾಗಿ ಸಂಚರಿಸಬಹುದಾಗಿದೆ. ಹಾಗಾಗಿ ಇದು ವಾಹನ ಖರೀದಿಸುವ ಗ್ರಾಹಕರು ಹಾಗೂ ಆತನ ಬಜೆಟ್ ಮೇಲೆ ಅವಲಂಬಿತವಾಗಿರುತ್ತದೆ. ನಿಸ್ಸಂಶವಾಗಿಯೂ ಇಲ್ಲಿ ಯಾವ ಕಾರು ಆಯ್ಕೆ ಮಾಡಿದರೂ ಗೆಲುವು ನಿಮ್ಮದ್ದೇ ಆಗಿರಲಿದೆ.

English summary
Mahindra XUV 500 vs Hyundai Creta Automatic: The Auto Brutes Battle It Out
Story first published: Friday, November 27, 2015, 9:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark