ಪುಟ್ಟಕಾರು ವಿಮರ್ಶೆ: ಮಾರುತಿ ಸುಜುಕಿ ಆಲ್ಟೊ

Posted By:
ದೇಶದ ಜನರ ಅಚ್ಚುಮೆಚ್ಚಿನ ಕಾರುಗಳಲ್ಲಿ ಆಲ್ಟೊಗೆ ಅಗ್ರಸ್ಥಾನ ನೀಡಬಹುದು. ಇದು ದೇಶದ ಅತ್ಯಧಿಕ ಮಾರಾಟದ ಕಾರೂ ಹೌದು. ಮೊದಲಾ ಸಲ ಕಾರು ಖರೀದಿಸುವರಿಗೆ ಇದು ಸೂಕ್ತ. ಬೈಕಿನಿಂದ ಕಾರಿಗೆ ಭಡ್ತಿ ಹೊಂದುವರು ಹೆಚ್ಚಾಗಿ ಆಲ್ಟೊ ಖರೀದಿಸುತ್ತಾರೆ. ಅಸಲಿಗೆ ಆಲ್ಟೊ ಕಾರಲ್ಲಿ ಅಂತಹ ವಿಶೇಷತೆ ಏನಿದೆ? ಬನ್ನಿ ಈ ಪುಟ್ಟ ವಿಮರ್ಶೆಯಲ್ಲಿ ಆಲ್ಟೊ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಇದು ದೇಶದ ನಂಬಿಕಸ್ತ ಕಂಪನಿಯೊಂದರ ಕಾರು. ಇದೇ ದರಕ್ಕೆ ಇದಕ್ಕಿಂತಲೂ ಆಕರ್ಷಕ ಕಾರು ಸಿಗಬಹುದು. ಆದರೆ ಮಾರುತಿಗೆ ಹೋಲಿಸಿದರೆ ಇತರ ಕೆಲವು ಕಾರು ಕಂಪನಿಗಳ ಸರ್ವಿಸ್ ಚೆನ್ನಾಗಿಲ್ಲವೆಂಬುದು ಹೆಚ್ಚಿನವರ ದೂರು. ದರ, ಮೈಲೇಜ್, ಕಾರ್ಯಕ್ಷಮತೆಯಲ್ಲಿ ಆಲ್ಟೊ "ಪರವಾಗಿಲ್ವೆ" ಎನಿಸುತ್ತದೆ.

ಹೊಸ ಕೆ10 ಎಂಜಿನ್ ಆವೃತ್ತಿ ಬಂದ್ರೂ ಹಳೆಯ ಆಲ್ಟೊ ಖದರ್ ಕಳೆದುಕೊಂಡಿಲ್ಲ. ಆಲ್ಟೊ ಕಾರು 796ಸಿಸಿಯ, 3 ಸಿಲಿಂಡರಿನ ಎಂಜಿನ್ ಹೊಂದಿದೆ. ಇದು 6,200 ಆವರ್ತನಕ್ಕೆ ಗರಿಷ್ಠ 47 ಅಶ್ವಶಕ್ತಿ ಮತ್ತು 3 ಸಾವಿರ ಆವರ್ತನಕ್ಕೆ 62 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕೇವಲ 17.7 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗಪಡೆಯಬಹುದು. ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಾಗಬಹುದು.

ಆಲ್ಟೊ ಕಾರು ಎಲ್ಎಕ್ಸ್, ಎಲ್ಎಕ್ಸ್ಐ ಮತ್ತು ಸ್ಟಾಂಡರ್ಡ್ ಎಂಬ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಈ ಆವೃತ್ತಿಗಳು ಸಿಎನ್‌ಜಿ ಆಯ್ಕೆಯಲ್ಲೂ ದೊರಕುತ್ತದೆ. ಅಂದರೆ ಗ್ರೀನ್ ಸ್ಟಾಂಡರ್ಡ್, ಗ್ರೀನ್ ಎಲ್ಎಕ್ಸ್ ಮತ್ತು ಗ್ರೀನ್ ಎಲ್ಎಕ್ಸ್ಐ ಸಂಕುಚಿತ ನೈಸರ್ಗಿಕ ಅನಿಲ(ಸಿಎನ್‌ಜಿ) ಆಯ್ಕೆಗಳಲ್ಲಿ ದೊರಕುತ್ತವೆ.

ಆಲ್ಟೊ ಸ್ಟಾಂಡರ್ಡ್ ಆವೃತ್ತಿಯು ಪ್ರತಿಲೀಟರಿಗೆ 19.73 ಕಿ.ಮೀ. ಮೈಲೇಜ್ ನೀಡುತ್ತದೆ. (ಆದರೆ ಹೊಸ ಹ್ಯುಂಡೈ ಇಯಾನ್ ಪ್ರತಿಲೀಟರಿಗೆ 23 ಕಿ.ಮೀ. ಮೈಲೇಜ್ ನೀಡುತ್ತದೆ). ಸಿಎನ್‌ಜಿ ಆವೃತ್ತಿಯಲ್ಲಿ ಸಿಟಿ ರಸ್ತೆಯಲ್ಲಿ ಪ್ರತಿ ಕೆ.ಜಿ ಗ್ಯಾಸ್‌ಗೆ 15.6 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಪ್ರತಿ ಕೆ.ಜಿ.ಗೆ 20.2 ಕಿ.ಮೀ. ಮೈಲೇಜ್ ನೀಡುತ್ತದೆ.

ಕಡಿಮೆ ದರದ ಕಾರಾದರೂ ಸ್ಥಳಾವಕಾಶದಲ್ಲಿ ಕಡಿಮೆಯಿಲ್ಲ. ಹಾಗಂತ ಇಂಟಿರಿಯರ್ ಅತ್ಯಾಕರ್ಷಕವಾಗಿಯೇನೂ ಇಲ್ಲ. ಸರಳವಾಗಿ ಸುಂದರವಾಗಿದ್ದು, ದೇಶದ ಹೆಚ್ಚಿನ ಗ್ರಾಹಕರು "ತೃಪ್ತಿದಾಯಕ" ಎನ್ನುತ್ತಾರೆ. ಡ್ಯೂಯಲ್ ಟೋನ್ ಸರಳ ಡ್ಯಾಷ್ ಬೋರ್ಡ್, ಎಸಿ, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿಗಳೆಲ್ಲವನ್ನು ನೀಟಾಗಿ ಜೋಡಿಸಲಾಗಿದೆ. ಇದರಲ್ಲಿರುವ ಪವರ್ ಸ್ಟಿಯರಿಂಗ್ ಹೆಚ್ಚಿನವರಿಗೆ ಇಷ್ಟವಾಗಬಹುದು.

ಹೊರವಿನ್ಯಾಸದಲ್ಲೂ ಇದು ಸರಳ ಸುಂದರಿ. ಆಕರ್ಷಕ ಬಂಪರ್ ಮತ್ತು ಮುಂಭಾಗದ ಗ್ರಿಲುಗಳು ಈ ಕಾರಿನ ಅಂದ ಹೆಚ್ಚಿಸಿವೆ. ಹೊಸ ಆವೃತ್ತಿಗಳು ಹಲವು ಸುರಕ್ಷತೆಯ ಫೀಚರುಗಳೊಂದಿಗೆ ಬಂದಿವೆ. ಒಟ್ಟಾರೆ ಹೇಳಬೇಕೆಂದರೆ ಮಾರುತಿ ಸುಜುಕಿ ಆಲ್ಟೊ ಎಂಟ್ರಿ ಲೆವೆಲ್ ಕಾರುಗಳಲ್ಲಿ ಅತ್ಯುತ್ತಮ. ಮೊದಲ ಕಾರು ಖರೀದಿದಾರಿಗಂತೂ ಆಲ್ಟೊ ಬೆಸ್ಟ್.

ಬೆಂಗಳೂರು ಎಕ್ಸ್‌ಶೋರೂಂ ದರ
 ಆವೃತ್ತಿ  ಮೆಟಾಲಿಕ್  ನಾನ್ ಮೆಟಾಲಿಕ್
 ಆಲ್ಟೋ ಗ್ರೀನ್ ಎಲ್ಎಕ್ಸ್  3,34,191.48  3,30,940.84
 ಗ್ರೀನ್ ಎಲ್ಎಕ್ಸ್ಐ  3,52,956.02  3,49,688.94
 ಗ್ರೀನ್ ಸ್ಟಾಂಡರ್ಡ್  3,01,188.07  2,97,907.89
 ಆಲ್ಟೊ ಎಲ್ಎಕ್ಸ್  2,85,680.92  2,82,413.27
 ಆಲ್ಟೊ ಎಲ್ಎಕ್ಸ್ಐ  3,04,441.11

 3,01,173.47

 ಆಲ್ಟೊ ಸ್ಟಾಂಡರ್ಡ್ 2,52,669.12
English summary
Maruti Suzuki Alto review. Alto Mileage, Price, Interior, Exterior, Variants, Alto CNG, Alto K10, Alto Bangalore Ex-showroom Price. Read Alto Complete Review in Kannada Drivespark.
Story first published: Monday, May 21, 2012, 12:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark