ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಈ ವರ್ಷದ ಆರಂಭದಲ್ಲಿ ಬಿಎಂಡಬ್ಲ್ಯು ಕಂಪನಿಯು ಪೆಟ್ರೋಲ್ ಚಾಲಿತ ಎಂಟ್ರಿ ಲೆವೆಲ್ 2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಹೊಸ ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ ಸ್ಪೋರ್ಟ್ ಮತ್ತು ಎಂ ಸ್ಪೋರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಇದರಲ್ಲಿ ಎಂಟ್ರಿ-ಲೆವೆಲ್ 2 ಸೀರಿಸ್ ಎಂ ಸ್ಪೋರ್ಟ್ ರೂಪಾಂತರವು ಸಾಕಷ್ಟು ಸ್ಪೋರ್ಟಿ ಲುಕ್ ಅನ್ನು ಹೂಂದಿದೆ. ಈ ಹೊಸ ಹೊಸ ಬಿಎಂಡಬ್ಲ್ಯು 220ಐ ಕಾರನ್ನು ತಮಿಳುನಾಡಿನ ಚೆನ್ನೈನಲ್ಲಿರುವ ಕಂಪನಿಯ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗಿದೆ. ಈ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 3 ಸೀರಿಸ್ ಮಾದರಿಗಳಿಗಿಂತ ಕೆಳಗಿನ ಸ್ಥಾನದಲ್ಲಿ ಇರಿಸಲಾಗುತ್ತದೆ. ಹೊಸ ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ 220ಐ ಸ್ಪೋರ್ಟ್ ಕಾರನ್ನು ಒಂದೆರಡು ನಾವು ಒಂದೆರಡು ದಿನಗಳ ಕಾಲ ಡ್ರೈವ್ ಮಾಡಿ, ಅದರ ಅನುಭವ ಮತ್ತು ಈ ಐಷಾರಾಮಿ ಕಾರಿನ ಫೀಚರ್ ಗಳು, ಮ್ಯಾಕನಿಕಲ್ ಅಂಶ ಮತ್ತು ಕಾರಿನ ಫರ್ಫಾಮೆನ್ಸ್ ಬಗ್ಗೆ ಹೆಚ್ಚಿನ ಮಾಹಿತಿ ರಿವ್ಯೂ ಮೂಲಕ ಇಲ್ಲಿ ನಿಮಗೆ ತಿಳಿಸುತ್ತೇವೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ವಿನ್ಯಾಸ

ಹೊಸ ಬಿಎಂಡಬ್ಲ್ಯು 2 ಸೀರೀಸ್ ಗ್ರ್ಯಾನ್ ಕೂಪೆ 220ಐ ಸ್ಪೋರ್ಟ್ ಕಾರು ಬ್ಲ್ಯಾಕ್ ಸಫೈರ್ ಬಣ್ಣದಿಂದ ಕೂಡಿದೆ. ಈ ಕಾರಿನ ಮುಂಭಾಗದಲ್ಲಿ ಬಿಎಂಡಬ್ಲ್ಯು ಸಿಗ್ನೇಚರ್ ಎಲ್ಇಡಿ ಹೆಡ್‌ಲೈಟ್‌ಗಳಿವೆ ಮತ್ತು ಇದರ ಎಲ್‌ಇಡಿ ಡಿಆರ್‌ಎಲ್‌ಗಳು ಆಕರ್ಷಕವಾಗಿದೆ. ಇದರ ಹೆಡ್ ಲೈಟ್ ತುಂಬಾ ಪ್ರಕಾಶಮಾನವಾಗಿದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಎಲ್ಇಡಿ ಯುನಿಟ್ ಗಳಾದ ಫಾಗ್ ಲ್ಯಾಂಪ್ ಗಳನ್ನು ಬಂಪರ್ ಮೇಲೆ ಇರಿಸಲಾಗಿದೆ. ಇದು ಎಂ ಸ್ಪೋರ್ಟ್ ರೂಪಾಂತರವಾಗಿರುವುದರಿಂದ, ಮುಂಭಾಗದ ಬಂಪರ್ ತುಂಬಾ ಸ್ಪೋರ್ಟಿ ಆಗಿ ಕಾಣುತ್ತದೆ ಮತ್ತು ಇದರಲ್ಲಿ ಏರ್ ವೆಂಟ್ ಅನ್ನು ಹೊಂದಿದೆ. ಇದು ಕಾರಿಗೆ ಅಗ್ರೇಸಿವ್ ಲುಕ್ ಅನ್ನು ನೀಡುತ್ತದೆ. ಈ ಕಾರಿನ ಮುಂಭಾಗದಲ್ಲಿ ಕಿಡ್ನಿ ಗ್ರಿಲ್ ನೊಂದಿಗೆ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಪಡೆದುಕೊಂದಿದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಈ ಕಾರಿನ ಸೈಡ್ ಫ್ರೊಪೈಲ್ ಬಗ್ಗೆ ಹೇಳುವುದಾದರೆ, ಇದರಲ್ಲಿ 17 ಇಂಚಿನ ಎಂ ಸ್ಪೋರ್ಟ್ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಇದು ನಿಜವಾಗಿಯೂ ಕಾರಿನ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಇದರ ಬ್ರೇಕ್ ಕ್ಯಾಲಿಪರ್‌ಗಳು ರೇಸಿಂಗ್ ಬ್ಲೂನಂತಹ ಆಕರ್ಷಕ ಬಣ್ಣದಲ್ಲಿದೆ. ಅದು ಕಾರುಗಳ ಸ್ಪೋರ್ಟ್‌ನೆಸ್ ಅನ್ನು ಮತ್ತಷ್ಟು ಹೆಚಿಸಿದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಈ ಕಾರಿನ ಮುಂಭಾಗದ ಫೆಂಡರ್‌ನಲ್ಲಿಎಂ ಬ್ಯಾಡ್ಜ್ ಅನ್ನು ನೀಡಲಾಗಿದೆ. 2 ಸೀರೀಸ್ ಅಗ್ರೇಸಿವ್ ಡಿಲೈನ್‌ಗೆ ಬದಲಾಗಿ, ಹೆಡ್‌ಲೈಟ್ ಮತ್ತು ಟೈಲ್‌ಲೈಟ್ ನಡುವೆ ವಿಭಜಿಸಲಾದ ಸೂಕ್ಷ್ಮ ಲೈನ್ ಗಳು ಮತ್ತು ಕ್ರೀಸ್‌ಗಳನ್ನು ಒಳಗೊಂಡಿದೆ. ಈ ಕಾರಿನ ಬಣ್ಣದ ಒಆರ್ವಿಎಂ ಗಳನ್ನು ಹೊಂದಿದ್ದು, ಇದರ ವಿಂಡೋ ಸುತ್ತಲೂ ಬ್ಲ್ಯಾಕ್ ಔಟ್ ಫಿನಿಶಿಂಗ್ ಅನ್ನು ನೀಡಲಾಗಿದೆ. ಅಲ್ಟ್ರಾ-ಕೂಲ್ ಆಗಿ ಕಾಣುವ ಫ್ರೇಮ್‌ಲೆಸ್ ಡೋರುಗಳನ್ನು ಸಹ ಕಾರು ಪಡೆಯುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಕಾರಿನ ಹಿಂಭಾಗದಲ್ಲಿ ಒಂದೆರಡು ವಿಷಯಗಳು ನಿಮ್ಮ ಗಮನವನ್ನು ಸೆಳೆಯುತ್ತವೆ. ಮೊದಲನೆಯದು ನಯವಾದ ಟೈಲ್‌ಲೈಟ್‌ಗಳು ಮತ್ತು ದೊಡ್ಡ ಡ್ಯುಯಲ್-ಟಿಪ್ ಎಕ್ಸಾಸ್ಟ್ ಗಳಾಗಿವೆ. ಎಕ್ಸಾಸ್ಟ್ ಟಿಪ್ಸ್ ಕ್ರೋಮ್‌ ಫಿನಿಶಿಂಗ್ ಅನ್ನು ಹೊಂದಿದೆ ಮತ್ತು ಹಿಂಭಾಗದ ಡಿಫ್ಯೂಸರ್‌ನಲ್ಲಿ ಡಾರ್ಕ್ ಶೇಡ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಕ್ರೋಮ್‌ ಫಿನಿಶಿಂಗ್ ಹೊಂದಿರುವ 220ಐ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್ ಕಾರಿನ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದ್ದು, ಕಾರಿನಾದ್ಯಂತ ಪಾರ್ಕಿಂಗ್ ಸೆನ್ಸರ್‌ಗಳಿದ್ದು ಬಿಗಿಯಾದ ಸ್ಥಳಗಳಲ್ಲಿ ವಾಹನ ಪಾರ್ಕ್ ಮಾಡಲು ಸುಲಭವಾಗುತ್ತದೆ. ಹೊರಭಾಗದಲ್ಲಿ ಸ್ಲೋಪಿಂಗ್ ರೂಫ್ ಲೈನ್ ಮತ್ತು ಸೂಕ್ಷ್ಮ ಬಾಡಿ ಕ್ರೀಸ್‌ಗಳೊಂದಿಗೆ ಅದ್ಭುತವಾಗಿದೆ, ಯಾವುದೇ ಕಡೆಯಿಂದ ನೋಡಿದರು ಈ ಸೆಡಾನ್ ಸೆಡಾನ್ ಸ್ಪೋರ್ಟಿ ಆಗಿ ಕಾಣುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಇಂಟಿರಿಯರ್ ಮತ್ತು ಫೀಚರ್ಸ್

ಈ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್ ಕಾರಿನ ಒಳಭಾಗ ಪ್ರವೇಶಿಸುವಾಗಲೇ ಇದರಲ್ಲಿ ಯೋಗ್ಯ ಪ್ರಮಾಣದ ಕ್ಯಾಬಿನ್ ಸ್ಪೇಸ್ ಅನ್ನು ಹೊಂದಿದೆ ಎಂದು ತಿಳಿಯುತ್ತದೆ. ಈ ಕಾರಿನಲ್ಲಿ ದೊಡ್ಡ ಪನೋರಮಿಕ್ ಸನ್‌ರೂಫ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ಹಲವಾರು ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿವೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಡ್ಯಾಶ್‌ಬೋರ್ಡ್‌ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಉತ್ತಮ ರೆಸ್ಪಾನ್ಸ್ ಹೊಂದಿರುವ ಟಚ್‌ಸ್ಕ್ರೀನ್ ಸಿಸ್ಟಂ ಆಗಿದೆ. ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫಿಚರ್ಸ್ ಅನ್ನು ಹೊಂದಿದೆ. ಇದರೊಂದಿಗೆ 10.25-ಇಂಚಿನ ಸಂಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಇದರ ಡಿಸ್ ಪ್ಲೇಯಲ್ಲಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ಚಾಲಕನ ಅಗತ್ಯಗಳಿಗೆ ಅನುಗುಣವಾಗಿ ಕಾನ್ಫಿಗರ್ ಮಾಡಬಹುದು. ಕಾರಿನ ಡ್ರೈವ್ ಮೋಡ್ ಅನ್ನು ಬದಲಾಯಿಸಿದಾಗ ಇದರಲ್ಲಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಡಿಸ್ ಪ್ಲೇಯ ಬ್ಯಾಕ್ ರೌಂಡ್ ಬಣ್ಣವು ಬದಲಾಗುತ್ತದೆ. ಇದು ಇಕೋ ಪ್ರೊ ಮೋಡ್‌ನಲ್ಲಿ ಕೂಲ್ ಬ್ಲೂ, ಕಂಫರ್ಟ್ ಮೋಡ್‌ನಲ್ಲಿ ಆರೆಂಜ್ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ರೆಡ್ ಆಗಿ ಬದಲಾಗುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಗೇರ್ ಲಿವರ್‌ನ ಮುಂದೆ ಇರಿಸಲಾಗಿರುವ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪ್ಯಾನಲ್ ಅನ್ನು ಸಹ ಪಡೆಯುತ್ತದೆ. ಈ ಕಾರಿನಲ್ಲಿ ಆಕರ್ಷಕ ಅಂಬೈಟ್ ಲೈಟಿಂಗ್ ಸಿಸ್ಟಂ ಅನ್ನು ನೀಡಲಾಗಿದೆ. ಸುಮಾರು ಏಳು ಮಾದರಿಯ ಅಂಬೈಟ್ ಲೈಟಿಂಗ್ ಆಯ್ಕೆಗಳನ್ನು ಹೊಂದಿವೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಈ ಕಾರಿನಲ್ಲಿ ಡ್ಯುಯಲ್-ಜೋನ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಇದರ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್ ಗಳಲ್ಲಿ ಸಾಕಷ್ಟು ಸಾಫ್ಟ್ ಟಚ್ ಅಂಶಗಳನ್ನು ಹೊಂದಿವೆ. ಪ್ರತಿಯೊಂದು ಡೋರ್ ನಲ್ಲಿಯು ಬಾಟಲ್ ಹೋಲ್ಡರ್ ಇದೆ ಮತ್ತು ಬಹಳಷ್ಟು ವಸ್ತುಗಳನ್ನು ಇರಿಸಲು ಕ್ಯೂಬಿಹೋಲ್‌ಗಳಿವೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಸ್ಟಿಯರಿಂಗ್ ವ್ಹೀಲ್ ಅನ್ನು ಲೆದರ್ ಅಂಶದಿಂದ ಕೂಡಿದ್ದು, ಇದು ಉತ್ತಮ ಗ್ರಿಪ್ ಅನ್ನು ನೀಡುತ್ತದೆ. ಸ್ಟೀಯರಿಂಗ್ ಮೌಂಟಡ್ ಕಂಟ್ರೋಲ್ ಗಳನ್ನು ಚೆನ್ನಾಗಿ ಇರಿಸಲಾಗಿದೆ. ಇದರಿಂದ ಇನ್ಫೋಟೈನ್‌ಮೆಂಟ್ ಅನ್ನು ನಿರ್ವಹಿಸುವಾಗಲೂ ಚಾಲಕನ ಗಮನವನ್ನು ರಸ್ತೆಯ ಮೇಲೆ ಇಡಲು ಸಹಾಯ ಮಾಡುತ್ತದೆ. ಈ ಕಾರಿನ ಸ್ಟಿಯರಿಂಗ್ ವ್ಹೀಲ್ ಎಂ ಬ್ಯಾಡ್ಜ್ ಅನ್ನು ಪಡೆಯುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಮುಂಭಾಗದ ಎರಡು ಸೀಟುಗಳನ್ನು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಲ್ಲವು, ಇದರಲ್ಲು ಡ್ರೈವಿಂಗ್ ಸೀಟಿನಲ್ಲಿ ಮಾತ್ರ ಎರಡು ಸೆಟ್ಟಿಂಗ್‌ಗಳೊಂದಿಗೆ ಸೀಟ್ ಮೆಮೊರಿ ಫಂಕ್ಷನ್ ಅನ್ನು ಪಡೆಯುತ್ತದೆ. ಮುಂಭಗದ ಸೀಟುಗಳು ಆರಾಮದಾಯಕವಾಗಿದ್ದು ಯೋಗ್ಯವಾದ ಮೆತ್ತನೆಯನ್ನು ಹೊಂದಿವೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಕಾರಿನ ಹಿಂಭಾಗದ ವಿಭಾಗವು ಸ್ವಲ್ಪಮಟ್ಟಿಗೆ ಇಕ್ಕಟ್ಟಾಗಿದೆ ಮತ್ತು ಎತ್ತರದ ಜನರು ಲೆಗ್ ರೂಂ ಮತ್ತು ಹೆಡ್ ರೂಂ ಸ್ವಲ್ಪ ಸಮಸ್ಯೆಯಾಗಬಹುದು. ಹಿಂಭಾಗದ ಸೀಟ್ ಎರಡು ಜನರಿಗೆ ಸೂಕ್ತವಾಗಿರುತ್ತದೆ,

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಹಿಂಭಾಗದಲ್ಲಿರುವ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಲು ಎರಡು ಟೈಪ್-ಸಿ ಚಾರ್ಜಿಂಗ್ ಸಾಕೆಟ್‌ಗಳನ್ನು ಸಹ ಪಡೆಯುತ್ತಾರೆ. ಇದರೊಂದಿಗ್ ಎಸಿ ವೆಂಟ್ ಗಳನ್ನು ಹೊಂದಿವೆ. ಬಿಎಂಡಬ್ಲ್ಯು 220ಐ 460 ಲೀಟರ್ ಬೂಟ್ ಸ್ಪೇಸ್ ಪಡೆಯುತ್ತದೆ. ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದ್ದಲ್ಲಿ, ಹಿಂದಿನ ಸಾಲನ್ನು ಸಂಪೂರ್ಣವಾಗಿ ಕೆಳಗೆ ಅಥವಾ 60:40 ಸಂರಚನೆಯಲ್ಲಿ ಮಡಚಬಹುದು. ಇದರಿಂದ ಹೆಚ್ಚಿನ ಸ್ಪೇಸ್ ಲಭ್ಯವಿರುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಎಂಜಿನ್

ಈ ಹೊಸ ಬಿಎಂಡಬ್ಲ್ಯು 220ಐ ಕಾರಿನಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಈಗ 220ಐ ಫ್ರಂಟ್-ವೀಲ್-ಡ್ರೈವ್ ಕಾರ್ ಆಗಿರುವುದರಿಂದ ನೀವು ಥ್ರೊಟಲ್ ಪೆಡಲ್ ಅನ್ನು ಮ್ಯಾಶ್ ಮಾಡುವಾಗ ಸಾಕಷ್ಟು ಟಾರ್ಕ್ ಸ್ಟಿಯರ್ ಇರುತ್ತದೆ. ಟಾರ್ಕ್ ಸ್ಟಿಯರ್ ಮತ್ತು ಫ್ರಂಟ್-ವ್ಹೀಲ್-ಡ್ರೈವ್ ಸೆಟಪ್ ಕಾರಣದಿಂದಾಗಿ ಕಾರು ಎಡ ಅಥವಾ ಬಲಕ್ಕೆ ಎಳೆಯುವ ಪ್ರವೃತ್ತಿಯನ್ನು ಹೊಂದಿರುವುದರಿಂದ ನೀವು ಸ್ಟೀಯರಿಂಗ್ ವ್ಹೀಲ್ ಅನ್ನು ಸಾಕಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್ ಲಾಂಚ್ ಕಂಟ್ರೋಲ್ ಮೋಡ್ ಅನ್ನು ಸಹ ಹೊಂದಿದೆ. ಇದು ಕೇವಲ 7.1 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನಲ್ಲಿ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್. ಎಂಬ ಡ್ರೈವಿಂಗ್ ಮೋಡ್ ಗಳಿವೆ. ಇಕೋ ಸ್ಪೋರ್ಟ್ ಸ್ಟೀಯರಿಂಗ್ ಹಗುರವಾಗಿರುತ್ತದೆ ಮತ್ತು ಥ್ರೊಟಲ್ ರೆಸ್ಪಾನ್ಸ್ ತುಂಬಾ ಮಂದಗತಿಯಾಗುತ್ತದೆ ಆದರೆ ಅದು ಇಂಧನವನ್ನು ಉಳಿಸುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಕಂಫರ್ಟ್ ಮೋಡ್‌ನಲ್ಲಿ, ಸ್ಟೀಯರಿಂಗ್ ಮತ್ತು ಥ್ರೊಟಲ್ ರೆಸ್ಪಾನ್ಸ್ ಸ್ವಲ್ಪ ಸುಧಾರಿಸುತ್ತದೆ. ಈ ಮೋಡ್ ಸಿಟಿ ಡ್ರೈವ್ ಮಾಡುವಾಗ ಉತ್ತಮ ಆಯ್ಕೆಯಾಗಿದೆ. ಸ್ಪೋರ್ಟ್ ಮೋಡ್‌ಗೆ ಬದಲಾಯಿಸಿದಾಗ, ಥ್ರೊಟಲ್ ರೆಸ್ಪಾನ್ಸ್ ತೀಕ್ಷ್ಣವಾಗುತ್ತದೆ ಮತ್ತು ಸ್ಟೀರಿಂಗ್ ಗಟ್ಟಿಯಾಗುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್ ಕಾರಿನ ಸಸ್ಪೆಂಕ್ಷನ್ ಸೆಟಪ್ ಮೃದು ಅಥವಾ ಗಟ್ಟಿಯಾಗಿಲ್ಲ. ಬಿಎಂಡಬ್ಲ್ಯು ಕಾರಿನ ಸ್ಪೋರ್ಟಿ ಸ್ವಭಾವದ ಜೊತೆಗೆ ಆರಾಮದಾಯಕ ಸವಾರಿಯನ್ನು ನೀಡಲು ಬಯಸಿದಂತೆ ತೋರುತ್ತಿದೆ. ಆದರೆ ರಸ್ತೆಯ ಹಂಪ್ ಗಳಲ್ಲಿ ಮತ್ತು ಸಣ್ಣ ಗುಂಡಿಗಳಲ್ಲಿ ಸುಲಭವಾಗಿ ಸಾಗುತ್ತದೆ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಬಿಎಂಡಬ್ಲ್ಯು 220 ಐ ಎಂ ಸ್ಪೋರ್ಟ್ 225/45-ಆರ್ 17 ಗಾತ್ರದಲ್ಲಿ ಬ್ರಿಡ್ಜ್‌ಸ್ಟೋನ್ ತುರಾಂಜಾ ಟೈರ್‌ಗಳಲ್ಲಿ ಸವಾರಿ ಮಾಡುತ್ತದೆ. ಈ ಟೈರ್‌ಗಳ ಕಡಿಮೆ ಪ್ರೊಫೈಲ್‌ನಿಂದಾಗಿ, ರಸ್ತೆಯ ಶಬ್ದವು ಹರಿದಾಡುತ್ತದೆ. ಅಲ್ಲದೆ ಎನ್‌ವಿಹೆಚ್ ಮತ್ತು ನಿರೋಧನ ಮಟ್ಟವು ಉತ್ತಮವಾಗಿರಬಹುದು.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಇನ್ನು ಈ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್ ಕಾರು ಸ್ಪೋರ್ಟ್ 225/45-ಆರ್ 17 ಗಾತ್ರದಲ್ಲಿ ಬ್ರಿಡ್ಜ್‌ಸ್ಟೋನ್ ತುರಾಂಜಾ ಟೈರ್‌ಗಳನ್ನು ಹೊಂದಿವೆ. ಈ ಟೈರ್‌ಗಳ ಲೋ ಪ್ರೊಫೈಲ್‌ನಿಂದ ಕೂಡಿದೆ. ಈ ಕಾರು ಡ್ರೈವ್ ಮಾಡುವಾಗ ಸ್ವಲ್ಪ ಮಟ್ಟದ ಬಾಡಿ ರೋಲ್ ಅನ್ನು ಅನುಭವಿಸುವಿರಿ.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಮೈಲೇಜ್

ಇನ್ನು ಈ ಕಾರಿನ ಮೈಲೇಜ್ ಬಗ್ಗೆ ಹೇಳುವುದಾದರೆ, ಸಿಟಿಗಳಲ್ಲಿ ಪ್ರತಿ ಲೀಟರ್‌ಗೆ 7.2 ರಿಂದ 8.7 ಕಿಮೀ ಮೈಲೇಜ್ ಲಭ್ಯವಾಗುತ್ತದೆ. ಹೈವೇಗಳಲ್ಲಿ ಈ ಬಿಎಂಡಬ್ಲ್ಯು ಕಾರು 10.5 ರಿಂದ 11.7 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಈ ಕಾರನ್ನು ಫುಲ್ ಟ್ಯಾಂಕ್ ಮಾಡಿದರೆ ಸರಿಸುಮಾರು 500 ಕಿ.ಮೀ ಚಲಿಸಬಹುದು.

ರೋಡ್ ಟೆಸ್ಟ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು 220ಐ ಎಂ ಸ್ಪೋರ್ಟ್

ಡ್ರೈವ್‌ಸ್ಪಾಕ್ ಅಭಿಪ್ರಾಯ

ಬಿಎಂಡಬ್ಲ್ಯು 2 ಸೀರಿಸ್ ಜರ್ಮನ್ ಬ್ರ್ಯಾಂಡ್‌ನಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ-ಲೆವೆಲ್ ಕೊಡುಗೆಯಾಗಿದೆ. ಈ ಕಾರು ಅತ್ಯಂತ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ ಸೆಡಾನ್ ಕಾರು ಉತ್ತಮ ಕಂಫರ್ಟ್, ಸುಧಾರಿತ ಫೀಚರ್ಸ್ ಗಳು ಮತ್ತು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿವೆ. ಎಂಟ್ರಿ ಲೆವೆಲ್ ಐಷಾರಾಮಿ ಕಾರನ್ನು ಖರೀದಿಸಲು ಬಯಸುವವರಿಗೆ ಈ ಕಾರು ಉತ್ತಮ ಆಯ್ಕೆಯಾಗಿದೆ.

Most Read Articles

Kannada
English summary
All-New BMW 220i M Sport Road Test Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X