ಫಸ್ಟ್ ಡ್ರೈವ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಫ್ರೆಂಚ್ ಕಾರು ಕಂಪನಿ ರೆನಾಲ್ಟ್ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಉತ್ಪನ್ನಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಮಾರುಕಟ್ಟೆಯಲ್ಲಿ ಮತ್ತೊಂದು ಕಾರು ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಚ್ಚ ಹೊಸ ಕಿಗರ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರೀ ನೀರಿಕ್ಷೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತಾದ ಮಾಹಿತಿಗಳನ್ನು ಈ ವಿಮರ್ಶೆ ಲೇಖನದಲ್ಲಿ ಚರ್ಚಿಸಲಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಪ್ರಸ್ತುತ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ನಡುವಿನ ಸ್ಥಾನ ಪಡೆದಿರುವ ಸಬ್ ಫೋರ್ ಮೀಟರ್ ವಿನ್ಯಾಸದ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟವು ತೀವ್ರ ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ವಿಭಾಗಕ್ಕೆ ಹಲವಾರು ಕಾರು ಮಾದರಿಗಳು ಪ್ರವೇಶ ಪಡೆದಿವೆ. ಕಂಪ್ಯಾಕ್ಟ್ ಎಸ್‌ಯುವಿ ಕಾರು ವಿಭಾಗಕ್ಕೆ ಈಗಾಗಲೇ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಹಲವು ಹೊಸ ಕಾರುಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಇದೀಗ ಅಂತಿಮವಾಗಿ ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ಕಿಗರ್ ಮಾದರಿಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಎಂಟ್ರಿ ನೀಡಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ರೆನಾಲ್ಟ್ ಕಂಪನಿಯು ಹೊಸ ಕಾರು ಕಿಗರ್ ಮಾದರಿಯನ್ನು ಕಳೆದ ವಾರವಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್ ಮಾದರಿಯಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ರೂ. 9.55 ಲಕ್ಷ ಬೆಲೆ ಹೊಂದಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಕಿಗರ್ ಕಾರು ಮಾದರಿಯ ಖರೀದಿಗಾಗಿ ಈಗಾಗಲೇ ರೂ. 11 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಹೊಸ ಕಾರು ಗ್ರಾಹಕರ ಕೈ ಸೇರಲಿದೆ. ಅದಕ್ಕೂ ಮುನ್ನ ಹೊಸ ಕಾರಿನ ಕಾರ್ಯಕ್ಷಮತೆ ಕುರಿತಾದ ಪರೀಕ್ಷೆಗಾಗಿ ಮಾಧ್ಯಮ ಸಂಸ್ಥೆಗಳನ್ನು ವಿಶೇಷ ಡ್ರೈವ್‌ಗೆ ಆಹ್ವಾನಿಸಿತ್ತು.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಡ್ರೈವ್ ಕಲ್ಪಿಸಿದ್ದ ರೆನಾಲ್ಟ್ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ನೀರಿಕ್ಷೆಯೊಂದಿಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಹಾಗಾದ್ರೆ ಹೊಸ ಕಿಗರ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಇತರೆ ಕಾರು ಮಾದರಿಗಳಿಂತಲೂ ಹೇಗೆ ಭಿನ್ನವಾಗಿದೆ ಮತ್ತು ಕಿಗರ್ ಮಾದರಿಯನ್ನೇ ಆಯ್ಕೆ ಮಾಡಲು ಬಲವಾದ ಅಂಶಗಳು ಯಾವವು? ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಕಿಗರ್ ಡಿಸೈನ್

ವಿಭಿನ್ನವಾದ ಹೊರ ವಿನ್ಯಾಸ ಹೊಂದಿರುವ ಕಿಗರ್ ಕಾರು ಮಾದರಿಯಲ್ಲಿ ತ್ರಿ ಭೀಮ್ ಹೊಂದಿರುವ ಎಲ್ಇಡಿ ಹೆಡ್‌ಲೈಟ್ಸ್, ಹೆಡ್‌ಲೈಟ್ ಕ್ಲಸ್ಟರ್‌ನ ಮೇಲ್ಭಾಗದಲ್ಲಿ ಡಿಆರ್‌ಎಲ್‌ಗಳಿವೆ. ಹಾಗೆಯೇ ಡಿಆರ್‌ಎಲ್‌ಗಳ ಒಳಗೆ ಹ್ಯಾಲೊಜೆನ್ ಬಲ್ಬ್ ಹೊಂದಿರುವ ಟರ್ನ್ ಇಂಡಿಕೇಟರ್ ಹೌಸಿಂಗ್ ನೀಡಲಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಕಿಗರ್ ಕಾರಿನ ಮುಂಭಾಗದ ಬಂಪರ್ ಕೂಡಾ ಸ್ಪೋರ್ಟಿ ಲುಕ್ ಪಡೆದುಕೊಂಡಿದ್ದು, ಸ್ಪೋರ್ಟಿ ವಿನ್ಯಾಸ ಹೆಚ್ಚಿಸಲು ಲಿಪ್ ಸ್ಪಾಯ್ಲರ್, ಗ್ರಿಲ್‌ನಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಮತ್ತು ಮಧ್ಯದಲ್ಲಿಯೇ ದೊಡ್ಡ ರೆನಾಲ್ಟ್ ಲೋಗೊವನ್ನು ಸಹ ಜೋಡಣೆ ಹೊಂದಿದೆ. ಕಾರಿನ ಹುಡ್ ಆಳವಾದ ರೇಖೆಗಳನ್ನು ಮತ್ತು ಕ್ರೀಸ್‌ಗಳನ್ನು ಸಹ ಒಳಗೊಂಡಿದ್ದು, ಒಟ್ಟಾರೆಯಾಗಿ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮುಂಭಾಗದ ವಿನ್ಯಾಸವು ಅದ್ಭುತವಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಹೊಸ ಕಾರಿನ ಸೈಡ್ ಪ್ರೊಫೈಲ್ ಬಗೆಗೆ ಹೇಳುವುದಾದರೆ ಹೊಸ ಕಾರಿನಲ್ಲಿ ಮಲ್ಟಿ ಸ್ಪೋಕ್ ಡ್ಯುಯಲ್-ಟೋನ್ 16-ಇಂಚಿನ ಅಲಾಯ್ ವೀಲ್ಹ್, ಮಿಶ್ರಲೋಹ ಒಳಗೊಂಡ 195/60 / ಆರ್ 16 ಸಿಯೆಟ್ ಸೆಕ್ಯೂರ್‌ಡ್ರೈವ್ ಟೈರ್‌, ಫ್ರಂಟ್ ಫೆಂಡರ್ ಬದಿಯಲ್ಲಿ ಕ್ರೋಮ್ ಒಳಗೊಂಡ RXZ ಬ್ಯಾಡ್ಜಿಂಗ್ ನೀಡಲಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಆದರೆ ಹೊಸ ಕಾರಿನಲ್ಲಿ ಬದಿಯಲ್ಲಿ ಹೆಚ್ಚಿನ ಬಾಡಿ ಲೈನ್‌ಗಳನ್ನು ಮತ್ತು ಕ್ರೀಸ್‌ಗಳನ್ನು ನೀಡಿಲ್ಲವಾದರೂ ಸುತ್ತಲೂ ಕಪ್ಪು ಕ್ಲಾಡಿಂಗ್ ಜೋಡಿಸಲಾಗಿದ್ದು, ಕ್ಲಾಡಿಂಗ್ ಸೌಲಭ್ಯವು ಕಿಗರ್ ಕಾರನ್ನು ಸ್ವಲ್ಪ ದೊಡ್ಡದಾಗಿ ಕಾಣಲುವಂತೆ ಮಾಡಲು ಸಹಕಾರಿಯಾಗಿದೆ. ನಮಗೆ ದೊರೆತ ಟೆಸ್ಟ್ ಡ್ರೈವ್ ಕಾರು ಕ್ಯಾಸ್ಪಿಯನ್ ನೀಲಿ ಬಣ್ಣದೊಂದಿಗೆ ರೂಫ್ ಲೈನ್ ಮತ್ತು ಕಪ್ಪು ಬಣ್ಣದ ಪಿಲ್ಲರ್‌ನೊಂದಿಗೆ ರೂಫ್ ರೈಲ್ಸ್ ಮತ್ತು ಕಪ್ಪು ಬಣ್ಣದ ಶಾರ್ಕ್ ಫಿನ್ ಆಂಟೆನಾ ಜೋಡಿಸಲಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಇದರೊಂದಿಗೆ ಹೊಸ ಕಾರಿನ ಹಿಂಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ಸ್ಪೋರ್ಟಿ ಆಗಿ ಕಾಣಲು ಸಿ-ಆಕಾರದ ಟೈಲ್ ಲೈಟ್ಸ್, ಟೈಲ್‌ಲೈಟ್‌ನಲ್ಲಿ ಕಪ್ಪು ಅಂಶವು ಗಮನಸೆಳೆಯಲಿದ್ದು, ಅದನ್ನು ಹೊರತುಪಡಿಸಿ ಮಧ್ಯದಲ್ಲಿ 'KIGER' ಬ್ಯಾಡ್ಜ್, ಬೂಟ್‌ನ ಎರಡೂ ಬದಿಯಲ್ಲಿ ರೆನಾಲ್ಟ್ ಮತ್ತು ಟರ್ಬೊ ಬ್ಯಾಡ್ಜ್‌ ನೀಡಲಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಕಿಗರ್ ಕಾರು ಮಾದರಿಯ ಹಿಂಬದಿಯಲ್ಲಿ ಲೋಗೋ ಮಧ್ಯದಲ್ಲೇ ರಿಯರ್ ವ್ಯೂ ಕ್ಯಾಮೆರಾ ಅಳಡಿಸಲಾಗಿದ್ದು, ಇದು ಇಕ್ಕಟ್ಟಾದ ಪಾರ್ಕಿಂಗ್ ಪ್ರದೇಶಗಳಲ್ಲಿ ಕಾರು ನಿಲುಗಡೆಯನ್ನು ಸರಳಗೊಳಿಸುತ್ತದೆ. ಹಾಗೆಯೇ ಸ್ಪ್ಲಿಟ್ ರಿಯರ್ ಸ್ಪಾಯ್ಲರ್ ಕೂಡಾ ಹೊಸ ಕಾರಿನ ಸ್ಪೋರ್ಟಿ ಲುಕ್‌ಗೆ ಪೂರಕವಾಗಿವೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಒಳಭಾಗದ ವೈಶಿಷ್ಟ್ಯತೆಗಳು

ಕಿಗರ್ ಕಾರಿನ ಹೊರಭಾಗದ ವಿನ್ಯಾಸದಂತೆ ಒಳ ವೈಶಿಷ್ಟ್ಯತೆ ಕೂಡಾ ಗ್ರಾಹಕರ ಗಮನಸೆಳೆಯಲಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ಆಕರ್ಷಕ ಡ್ಯಾಶ್‌ಬೋರ್ಡ್, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ ಬಿಡಿಭಾಗಗಳು ನೀಡಲಾಗಿದೆ. ಜೊತೆಗೆ ಸಾಫ್ಟ್ ಟಚ್ ಡೋರ್ ಪ್ಯಾನೆಲ್‌, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಒಳಗೊಂಡಿರುವ 8-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ನೀಡಲಾಗಿದ್ದು, ಟಚ್ ಇನ್ಫೋಟೈನ್ಮೆಂಟ್ ಸಿಸ್ಟಂ ವೇಗವಾಗಿ ಸ್ಪಂದಿಸುತ್ತದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಇನ್ಫೋಟೈನ್‌ಮೆಂಟ್ ಸಿಸ್ಟಂ ಕೆಳ ಭಾಗದಲ್ಲಿ ಡಿಜಿಟಲ್ ರೀಡ್‌ ಔಟ್ ಅನ್ನು ಒಳಗೊಂಡಿರುವ ಎಸಿ ಕಂಟ್ರೋಲ್, ಸ್ಮಾರ್ಟ್ ಫೋನ್‌ಗಾಗಿ ವೈರ್‌ಲೆಸ್ ಚಾರ್ಜರ್, ಆನ್/ ಆಫ್ ಸ್ವಿಚ್, ಕಿಗರ್ ಮಧ್ಯದ ಆಸನಗಳಿಗೆಗಾಗಿ ಆರ್ಮ್‌ ರೆಸ್ಟ್‌ನೊಂದಿಗೆ ಕಪ್‌ ಹೋಲ್ಡರ್‌ ಹೊಂದಿರಲಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಇನ್ನು ಕಾರಿನ ಸ್ಟೀರಿಂಗ್ ವೀಲ್ ಉತ್ತಮ ಹಿಡಿತವನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಸಣ್ಣ ಪ್ಯಾಚ್ ಹೊಂದಿರುವ ಲೆದರ್ ಹೊದಿಕೆ ಪಡೆದುಕೊಂಡಿರುತ್ತದೆ. ತಾಂತ್ರಿಕ ಅಂಶಗಳನ್ನು ನಿಯಂತ್ರಿಸಿಲು ಮತ್ತು ಕಾರ್ಯನಿರ್ವಹಿಸಲು ಬಹಳ ಸುಲಭವಾದ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಪ್ರಮುಖವಾಗಿದ್ದು, ಎಡಭಾಗದಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಬಲಭಾಗದ ಸ್ಟೀರಿಂಗ್ ಮೌಟೆಂಡ್‌ನಲ್ಲಿ ನ್ಯಾನಿಗೆಟ್ ಸಿಸ್ಟಂ ಕಂಟ್ರೋಲ್ ಸೌಲಭ್ಯವನ್ನು ಹೊಂದಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಹೊಸ ಕಾರಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಗ್ಗೆ ಮಾತನಾಡುವುದಾದರೇ, ಕಿಗರ್ ಕಾರಿನಲ್ಲಿ 7 ಇಂಚಿನ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಜೋಡಿಸಲಾಗಿದ್ದು, ಆಕರ್ಷಕ ವಿನ್ಯಾಸದೊಂದಿಗೆ ಡ್ರೈವರ್ ಮೋಡ್‌ಗೆ ಅನುಗುಣವಾಗಿ ಕ್ಲಸ್ಟರ್ ಸಂರಚನೆಯನ್ನು ಬದಲಾಯಿಸುತ್ತದೆ. ಇಕೋ ಮೋಡ್‌ನಲ್ಲಿ ಅದು ಹಸಿರು ಬಣ್ಣಕ್ಕೆ ತಿರುಗುತ್ತದೆ ಮತ್ತು ಸಾಮಾನ್ಯ ಮೋಡ್‌ನಲ್ಲಿ ಅದು ನೀಲಿ ಬಣ್ಣಕ್ಕೆ ತಿರುಗಿದಲ್ಲಿ ಸ್ಪೋರ್ಟ್ ಮೋಡ್‌ನಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಕಿಗರ್ ಕಾರಿನಲ್ಲಿ ಡ್ರೈವರ್ ಸೈಡ್‌ನಲ್ಲಿ ಸೀಟ್‌ನಲ್ಲಿ ಮಾತ್ರವೇ ಎತ್ತರ ಹೊಂದಾಣಿಕೆ ಸೌಲಭ್ಯ ಹೊಂದಿದ್ದು, ಮುಂಭಾಗದ ಎರಡೂ ಆಸನಗಳು ಮೆತ್ತನೆಯ ಮತ್ತು ಉತ್ತಮ ಸೈಡ್ ಬೋಲ್‌ಸ್ಟರ್‌ಗಳು ಅರಾಮದಾಯಕ ಕಾರು ಪ್ರಯಾಣಕ್ಕೆ ಉತ್ತಮವಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಹೊಸ ಕಾರಿನ ಹಿಂಭಾಗದ ಆಸನಗಳು ಸಹ ಆರಾಮದಾಯಕವಾಗಿದ್ದು, ತೊಡೆಯ ಅಡಿಯಲ್ಲಿ ಬೆಂಬಲವಿಲ್ಲದಿರುವುದು ಎತ್ತರವಿರುವ ಪ್ರಯಾಣಿಕರಿಗೆ ತುಸು ಕಿರಿಕಿರಿ ಉಂಟುಮಾಡಬಲ್ಲದು. ಆದರೆ ತಲೆ ಮತ್ತು ಲೆಗ್ ರೂಂನಲ್ಲಿ ಸಾಕಷ್ಟು ಸ್ಥಳವಿದ್ದು, ಸುಲಭವಾಗಿ ಐದು ಜನ ಪ್ರಯಾಣಿಕರು ಕಿಗರ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಜೊತೆಗೆ ಹಿಂಭಾಗದ ಆಸನದಲ್ಲಿ ಫ್ಲೋರ್ ಸಮತಟ್ಟಾಗಿರುವುದರಿಂದ ಮಧ್ಯದಲ್ಲಿ ಕುಳಿತುಕೊಳ್ಳುವ ವ್ಯಕ್ತಿಗೆ ಆರಾಮವಾಗಿರಲಿದ್ದು, ಹಿಂಭಾಗದಲ್ಲಿ ಎಸಿ ವೆಂಟ್ಸ್ ಮತ್ತು 12-ವೋಲ್ಟ್ ಚಾರ್ಜಿಂಗ್ ಸಾಕೆಟ್ ನೀಡಲಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಹೊಸ ಕಿಗರ್ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಒಟ್ಟು 405-ಲೀಟರ್ ಬೂಟ್ ಸ್ಪೆಸ್ ನೀಡಿದ್ದು, ಇದು ಸಬ್ ಫೋರ್ ಮೀಟರ್ ಗಾತ್ರದ ಕಾರಿನಲ್ಲೇ ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಬೂಟ್ ಸ್ಪೆಸ್‌ನಲ್ಲಿ ನಾಲ್ಕು ಜನರಿಗೆ ಲಗೇಜ್ ಅನ್ನು ಸುಲಭವಾಗಿ ತುಂಬಬಹುದಾಗಿದ್ದು, ಹೆಚ್ಚಿನ ಸ್ಥಳ ಬೇಕಿದ್ದಲ್ಲಿ 60:40 ವಿಭಜನೆಯನ್ನು ಹೊಂದಿರುವುದರಿಂದ ನೀವು ಹಿಂದಿನ ಸೀಟನ್ನು ಕೆಳಕ್ಕೆ ಮಡಿಕೆ ಮಾಡಿ ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಳ್ಳಬಹುದು.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಎಂಜಿನ್ ಮತ್ತು ಪರ್ಫಾಮೆನ್ಸ್

ರೆನಾಲ್ಟ್ ಕಂಪನಿಯು ಕಿಗರ್ ಕಾರಿನಲ್ಲಿ ಎರಡು ಎಂಜಿನ್ ಮತ್ತು ಎರಡು ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಿದ್ದು, ಆರಂಭಿಕ ಕಾರಿನಲ್ಲಿ 1.0-ಲೀಟರ್ ನ್ಯಾಚುರಲಿ ಆಸ್ಪೆರೆಡ್ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಒಳಗೊಂಡಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಹೊಸ ಕಾರಿನಲ್ಲಿ ಎಂಜಿನ್‌ಗೆ ಅನುಗುಣವಾಗಿ ಐದು-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಸಾಮಾನ್ಯ ಪೆಟ್ರೋಲ್ ಮಾದರಿಯ ಗರಿಷ್ಠ 72-ಬಿಹೆಚ್‌ಪಿ, 96 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದರೆ ಟರ್ಬೊ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಹೊಸ ಕಾರಿನಲ್ಲಿ ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ಟರ್ಬೊ ಪೆಟ್ರೋಲ್ ಮಾದರಿಯು ತಾಂತ್ರಿಕವಾಗಿ ಮತ್ತು ಎಂಜಿನ್ ಕಾರ್ಯಾಕ್ಷಮತೆ ವಿಚಾರದಲ್ಲಿ ಹೆಚ್ಚು ಬಲಿಷ್ಠವಾಗಿದೆ. ಆದರೆ ಕಾರಿನ ಶಕ್ತಿ ಉತ್ಪಾದನೆಯಲ್ಲಿ ಕಂಪನಿಯು ಹೇಳಿಕೊಂಡಿರುವಷ್ಟು ನಿಖರವಾಗಿಲ್ಲವಾದರೂ ಆರಂಭದಲ್ಲಿ ಸ್ವಲ್ಪ ವಿಳಂಬವಾಗಿ ಮತ್ತು ತದನಂತರ ವೇಗಪಡೆದುಕೊಳ್ಳುತ್ತದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಮೇಲೆ ಹೇಳಿದಂತೆ ಹೊಸ ಕಾರು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಮೋಡ್ ಚಾಲನೆಗೆ ಅನುಗುಣವಾಗಿ ಸ್ಟೀರಿಂಗ್ ಮತ್ತು ಥ್ರೊಟಲ್ ಪ್ರತಿಕ್ರಿಯೆ ಹೊಂದಿದ್ದು, ಇಕೋ ಮೋಡ್‌ನಲ್ಲಿ ಸ್ಟೀರಿಂಗ್ ತುಸು ಹಗುರವಾಗಿರುತ್ತದೆ ಮತ್ತು ಥ್ರೊಟಲ್ ಪ್ರತಿಕ್ರಿಯೆ ತುಂಬಾ ಮಂದವಾಗಿರುತ್ತದೆ. ಹಾಗೆಯೇ ಸ್ಪೋರ್ಟ್ ಮೋಡ್‌ನಲ್ಲಿರುವಾಗ ಕಾರಿನ ಸ್ಟೀರಿಂಗ್ ತುಸು ಬಿಗಿಯಾಗಿರುತ್ತದೆ ಮತ್ತು ಥ್ರೊಟಲ್ ಪ್ರತಿಕ್ರಿಯೆ ಕೂಡ ತೀಕ್ಷ್ಣವಾಗುತ್ತದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಎರಡರ ಸಮತೋಲನವನ್ನು ಹೊಂದಿರುವ ನಾರ್ಮಲ್ ಡ್ರೈವ್ ಮೋಡ್‌ ನಗರಗಳಲ್ಲಿ ಚಾಲನೆ ಮಾಡಲು ಉತ್ತಮ ಡ್ರೈವ್ ಮೋಡ್ ಆಗಿದ್ದು, ಹೊಸ ಕಾರಿನ ಸಸ್ಪೆಷನ್ ಸೆಟಪ್ ಕೂಡಾ ಮೃದವು ಅಲ್ಲದ ಮತ್ತು ಗಟ್ಟಿಯು ಅಲ್ಲದ ಸಮತೋಲಿತ ಹಿಡಿತ ನೀಡಲಾಗಿದೆ. ಹಾಗೆಯೇ ಹೊಸ ಕಾರು 205-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಕಠಿಣ ಪ್ರದೇಶಗಳಲ್ಲೂ ಸರಾಗವಾಗಿ ಚಾಲನಾ ಗುಣಹೊಂದಿದ್ದು, ಬಾಡಿ ರೋಲ್ ಪ್ರಮಾಣವು ಕೂಡಾ ಉತ್ತಮವಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಇನ್ನು ಹೊಸ ಕಾರಿನ ಇಂಧನ ಕಾರ್ಯಕ್ಷಮತೆ ಕುರಿತಂತೆ ಟೆಸ್ಟ್ ಡ್ರೈವ್ ವೇಳೆ ನಿಖರವಾಗಿ ತಿಳಿಯಲು ಸಾಧ್ಯವಾಗಲಿಲ್ಲ ಆದರೆ ರೆನಾಲ್ಟ್ ಕಂಪನಿಯ ಮಾಹಿತಿಯೆಂತೆ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ 18 ಕಿ.ಮೀ ಮತ್ತು ಟರ್ಬೊ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 17 ಕಿ.ಮೀ ನಿಂದ 20 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ಕಿಗರ್ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಚ್ಚ ಹೊಸ ಕಿಗರ್ ಕಾರು ಮಾದರಿಯು ಅತ್ಯುತ್ತಮ ಬೆಲೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಲಗ್ಗೆಯಿಟ್ಟಿದ್ದು, ರೆನಾಲ್ಟ್ ಸಹಭಾಗಿತ್ವ ಕಂಪನಿಯಾದ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಕಾರುಗಳಿಗೂ ಉತ್ತಮ ಪೈಪೋಟಿ ನೀಡಲಿದೆ.

ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಾ ರೆನಾಲ್ಟ್ ಕಿಗರ್?

ರೆನಾಲ್ಟ್ ಕಂಪನಿಯು ಕಿಗರ್ ಹೊಸ ಕಾರು ಮಾದರಿಯಲ್ಲಿ ಉತ್ತಮ ಸ್ಥಳಾವಕಾಶ ನೀಡಿದ್ದರೂ ಸನ್‌ರೂಫ್ ಮತ್ತು ಸಾಫ್ಟ್ ಟಚ್ ಮಟಿರಿಯಲ್‌ಗಳ ಕೊರತೆಯು ಪ್ರೀಮಿಯಂ ಇಷ್ಟ ಪಡುವ ಗ್ರಾಹಕರ ಆಯ್ಕೆಯಿಂದ ಹಿನ್ನಡೆ ಅನುಭವಿಸಬಹುದಾದರೂ ಉತ್ತಮ ಬೆಲೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಿರುವುದು ನಿಜಕ್ಕೂ ಬಜೆಟ್ ಬೆಲೆಯ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದ್ದು, ಹೊಸ ಕಾರು ಶೀಘ್ರದಲ್ಲೇ ಗ್ರಾಹಕರ ಕೈ ಸೇರಲಿದೆ.

Most Read Articles

Kannada
English summary
Renault Kiger First Drive Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X