ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಟಾಟಾ ಆಲ್‌ಟ್ರೊಜ್ ಐ-ಟರ್ಬೊ?

ಹೊಸ ಕಾರುಗಳ ಮಾರಾಟದಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಆಲ್‌ಟ್ರೊಜ್ ಕಾರು ಆವೃತ್ತಿಯಲ್ಲಿ ಮೊದಲ ಬಾರಿಗೆ ಟರ್ಬೊ ಮಾದರಿಯನ್ನು ಅಭಿವೃದ್ದಿಗೊಳಿಸಿ ಬಿಡುಗಡೆಗೆ ಸಿದ್ದವಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

2020ರ ಆರಂಭದಲ್ಲಿ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದ ಟಾಟಾ ಕಂಪನಿಯು ಬಿಡುಗಡೆಯ ನಂತರ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಮಾದರಿಯಾದ ಐ-ಟರ್ಬೊ ಆವೃತ್ತಿಯನ್ನ ಅಭಿವೃದ್ದಿಗೊಳಿಸಲಾಗಿದೆ.

ಪರ್ಫಾಮೆನ್ಸ್ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಆಲ್‌ಟ್ರೊಜ್ ಐ-ಟರ್ಬೊ ಆವೃತ್ತಿ ಬಿಡುಗಡೆ ಮಾಡುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆಟೋ ಮಾರುಕಟ್ಟೆಯಲ್ಲಿ ಸದ್ಯ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ತಮ್ಮ ಪ್ರೀಮಿಯಂ ಕಾರು ಮಾದರಿಗಳಲ್ಲಿ ಟರ್ಬೊ ಆವೃತ್ತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕೂಡಾ ಇದೇ ಮೊದಲ ಬಾರಿಗೆ ಆಲ್‌ಟ್ರೊಜ್ ಕಾರಿನ ಮೂಲಕ ಶಕ್ತಿಶಾಲಿಯಾದ ಟರ್ಬೊ ಆವೃತ್ತಿಯೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆಲ್‌ಟ್ರೊಜ್ ಐ-ಟರ್ಬೊ ಆವೃತ್ತಿಯನ್ನು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡಲು ಸಜ್ಜಾಗಿರುವ ಟಾಟಾ ಕಂಪನಿಯು ಬಿಡುಗಡೆಗೂ ಮುನ್ನ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಟೆಸ್ಟ್ ಡ್ರೈವ್‌ಗಾಗಿ ಮಾಧ್ಯಮ ಸಂಸ್ಥೆಗಳನ್ನು ಆಹ್ವಾನಿಸಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಡ್ರೈವ್ ಕಲ್ಪಿಸಿದ್ದ ಕಂಪನಿಯು ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಬೆಳವಣಿಗೆ ಸಾಧಿಸುವ ನೀರಿಕ್ಷೆಯಲ್ಲಿದ್ದು, ಹೊಸ ಕಾರನ್ನು ಆ್ಯನಿವರ್ಸರಿ ಮಾದರಿಯಾಗಿ ರಸ್ತೆಗಿಳಿಸುತ್ತಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹಾಗಾದ್ರೆ ಟಾಟಾ ಮೋಟಾರ್ಸ್ ಕಂಪನಿಯು ಬಿಡುಗಡೆ ಮಾಡುತ್ತಿರುವ ಆಲ್‌‌ಟ್ರೊಜ್ ಐ-ಟರ್ಬೊ ಕಾರು ಮಾದರಿಯ ಎಂಜಿನ್ ಕಾರ್ಯಕ್ಷಮತೆ ಸ್ಟ್ಯಾಂಡರ್ಡ್ ಮಾದರಿಗಿಂತ ಹೇಗೆ ಭಿನ್ನವಾಗಿದೆ? ಪ್ರತಿಸ್ಪರ್ಧಿ ಟರ್ಬೊ ಹ್ಯಾಚ್‌ಬ್ಯಾಕ್ ಕಾರುಗಳ ಅಬ್ಬರದ ಮುಂದೆ ಆಲ್‌ಟ್ರೊಜ್ ಕಾರ್ಯಕ್ಷಮತೆಯು ಗ್ರಾಹಕರನ್ನು ಸೆಳೆಯುತ್ತಾ? ಎನ್ನುವ ಹಲವು ಪ್ರಶ್ನೆಗಳನ್ನು ಈ ವಿಮರ್ಶೆ ಲೇಖನದಲ್ಲಿ ಹಂತ-ಹಂತವಾಗಿ ಚರ್ಚಿಸಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಟರ್ಬೊ-ಪೆಟ್ರೋಲ್ ಎಂಜಿನ್‌ಗಳು ಭಾರತದಲ್ಲಿ ಜನಪ್ರಿಯವಾಗುತ್ತಿವೆ. ಸಾಮಾನ್ಯವಾಗಿ ಟರ್ಬೊ-ಪೆಟ್ರೋಲ್ ಎಂಜಿನ್‌ಗಳನ್ನು ಸ್ಟ್ಯಾಂಡರ್ಡ್ ಮಾದರಿಗಳಲ್ಲಿ

ಪರ್ಫಾಮೆನ್ಸ್ ಮಾದರಿಗಳಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮುಂದಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರಿನಲ್ಲಿ ಟರ್ಬೊ-ಪೆಟ್ರೋಲ್ ಪರಿಚಯಿಸುತ್ತಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?2020ರ ಆರಂಭದಲ್ಲಿ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದ ಟಾಟಾ ಕಂಪನಿಯು ಬಿಡುಗಡೆಯ ನಂತರ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಮಾದರಿಯಾದ ಐ-ಟರ್ಬೊ ಆವೃತ್ತಿಯನ್ನ ಅಭಿವೃದ್ದಿಗೊಳಿಸಲಾಗಿದೆ. ಪರ್ಫಾಮೆನ್ಸ್ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಆಲ್‌ಟ್ರೊಜ್ ಐ-ಟರ್ಬೊ ಆವೃತ್ತಿ ಬಿಡುಗಡೆ ಮಾಡುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಡಿಸೈನ್ ಮತ್ತು ಸ್ಟೈಲ್

ಹೊಸ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯ ಐ-ಟರ್ಬೊ ಆವೃತ್ತಿಯು ಸ್ಟಾಂಡರ್ಡ್ ಮಾದರಿಯೆಂತೆಯೇ ಸ್ಟೈಲ್ ಹಾಗೂ ವಿನ್ಯಾಸವನ್ನು ಹೊಂದಿದ್ದರೂ ಬೂಟ್‌ಸ್ಪೆಸ್ ಮೇಲಿರುವ i-Turbo ಬ್ಯಾಡ್ಜಿಂಗ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಐ-ಟರ್ಬೊ ಬ್ಯಾಡ್ಜಿಂಗ್‌ನೊಂದಿಗೆ ಹೊಸ ಆಲ್‌ಟ್ರೊಜ್ ಕಾರಿನಲ್ಲಿ ಹಾರ್ಬರ್ ಬ್ಲೂ ಬಣ್ಣಗಳ ನೀಡಿರುವುದು ಕೂಡಾ ಕಾರು ಖರೀದಿದಾರರನ್ನು ಸೆಳೆಯಲಿದ್ದು, ಬ್ಯಾಡ್ಜಿಂಗ್ ಮತ್ತು ಬಣ್ಣದ ಆಯ್ಕೆಯು ಹೊಸ ಮಾದರಿಯಲ್ಲಿರುವ ಎರಡು ಪ್ರಮುಖ ಬದಲಾವಣೆಗಳಾಗಿವೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹೊಸದಾಗಿ ಎರಡು ಪ್ರಮುಖ ಫೀಚರ್ಸ್ ಹೊರತುಪಡಿಸಿ ಟಾಟಾ ಆಲ್‌ಟ್ರೊಜ್ ಐ-ಟರ್ಬೊ ಕಾರು ಎಕ್ಸ್‌ಟಿರಿಯರ್‌ನಲ್ಲಿ ಬೇರೆ ಯಾವುದೇ ಹೆಚ್ಚುವರಿ ಬದಲಾವಣೆಗಳನ್ನು ಪರಿಚಯಿಸಲಾಗಿಲ್ಲ. ಹೊಸ ಆಲ್‌ಟ್ರೊಜ್ ಐ-ಟರ್ಬೊ ಕಾರಿನಲ್ಲಿ ಎಲ್ಇಡಿ ಡಿಆರ್‌ಎಲ್ ಹೊಂದಿರುವ ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್, 16 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ನೀಡಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹಾಗೆಯೇ 90 ಡಿಗ್ರಿಯಲ್ಲಿ ತೆರೆದುಕೊಳ್ಳುವ ಡೋರ್‌ಗಳು, ಕಪ್ಪು ಬಣ್ಣದ ರೂಫ್‌ಗಳನ್ನು ನೀಡಲಾಗಿದ್ದು, ಪ್ರಯಾಣಿಕರಿಗೆ ಸುಲಭವಾಗಿ ಕಾರಿನ ಒಳಗೆ ಹೋಗಲು ಮತ್ತು ಕಾರಿನಿಂದ ಇಳಿದುಕೊಳ್ಳಲು ಸಾಕಷ್ಟು ಸಹಕಾರಿಯಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಐ-ಟರ್ಬೊ ಇಂಟಿರಿಯರ್ ವಿನ್ಯಾಸ

ಟಾಟಾ ಆಲ್‌ಟ್ರೊಜ್ ಐ-ಟರ್ಬೊ ಕಾರಿನ ಇಂಟಿರಿಯರ್ ಬಹುತೇಕ ಈ ಮೊದಲಿನ ವಿನ್ಯಾಸವನ್ನೇ ಹೊಂದಿದ್ದು, ಹೊಸದಾಗಿ ಡ್ಯುಯಲ್-ಟೋನ್ ಬ್ಲಾಕ್ ಹಾಗೂ ಲೈಟ್ ಗ್ರೇ ಥಿಮ್ ಕ್ಯಾಬಿನ್ ನೀಡಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆರಾಮದಾಯಕ ಪ್ರಯಾಣಕ್ಕೆ ಪೂರಕವಾಗಿ ಟಾಟಾ ಕಂಪನಿಯು ಆಲ್‌ಟ್ರೊಜ್ ಐ-ಟರ್ಬೊದಲ್ಲಿ ಲೆದರ್ ಅಪ್‌ಹೊಲೆಸ್ಟರಿ ಫಿನಿಷಿಂಗ್ ಸೀಟುಗಳನ್ನು ನೀಡಿದ್ದು, ಡ್ಯಾಶ್‌ಬೋರ್ಡ್ ಸುತ್ತಲೂ ಇರುವ ಸಾಫ್ಟ್ ಟಚ್ ಮೆಟಿರಿಯಲ್ ಹಾಗೂ ಆಂಬಿಯಂಟ್ ಲೈಟಿಂಗ್ ಈ ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತವೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆಲ್‌ಟ್ರೊಜ್ ಐ-ಟರ್ಬೊ ಕಾರಿನಲ್ಲಿ ಹೊಸದಾಗಿ ಅಳವಡಿಸಲಾಗಿರುವ ಎಕ್ಸ್‌ಪ್ರೆಸ್ ಕೂಲ್ ಕ್ಯಾಬಿನ್ ಸೌಲಭ್ಯವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಶೇ. 70ನಷ್ಟು ವೇಗವಾಗಿ ಕೂಲ್ ಮಾಡುತ್ತದೆ ಎಂದು ಟಾಟಾ ಕಂಪನಿ ಹೇಳಿಕೊಂಡಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹಾಗೆಯೇ ಐ-ಟರ್ಬೊ ಕಾರು ಮಾದರಿಯಲ್ಲಿರುವ ಎರಡು ಹೆಚ್ಚುವರಿ ಟ್ವೆಟರ್‌ಗಳು ಕ್ಯಾಬಿನ್‌ನೊಳಗಿರುವ ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲಿದ್ದು, ಕಾರು ಪ್ರಯಾಣವನ್ನು ಮತ್ತಷ್ಟು ಅರಾಮದಾಯಕಗೊಳಿಸಲು ಸಹಕಾರಿಯಾಗಿವೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹೊಸ ಟಾಟಾ ಆಲ್‌ಟ್ರೊಜ್ ಐ-ಟರ್ಬೊದಲ್ಲಿರುವ ಮತ್ತೊಂದು ಪ್ರಮುಖ ತಾಂತ್ರಿಕ ಅಂಶವೆಂದರೆ ಅದು ಹೊಸದಾಗಿ ಜೋಡಣೆ ಮಾಡಲಾಗಿರುವ ವೆರೆಬಲ್ ಕೀ ಡೋರ್ ಹ್ಯಾಂಡಲ್‌ ಸೌಲಭ್ಯ. ಹ್ಯಾಂಡಲ್ ಬಳಿ ಬಂದಾಗ ಕಾರು ಅನ್ ಲಾಕ್ ಆಗಲಿದ್ದು, ಕಾರಿನ ಡೋರ್ ತೆರೆಯುವಾಗ ನಯವಾದ ಫೀಲ್ ನೀಡುತ್ತದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಈ ಮೂಲಕ ಟಾಟಾ ಮೋಟಾರ್ಸ್ ಆಲ್‌ಟ್ರೊಜ್ ಐ-ಟರ್ಬೊದಲ್ಲಿರುವ ಹೊಸ ವಾಟ್ -3-ವರ್ಡ್ಸ್ ಫೀಚರ್ ನ್ಯಾವಿಗೇಷನ್ ಜೊತೆಗೆ ತಲುಪಬೇಕಾಗಿರುವ ಸ್ಥಳವನ್ನು ಸುಲಭವಾಗಿ ತಲುಪಲು ನೆರವಾಗಲಿದ್ದು, ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾಣೆಯಾಗಿ ಐರಾ ಕಾರ್ ಕನೆಕ್ಟೆಡ್ ಫೀಚರ್ಸ್ ನೀಡಿರುವುದು.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಟಾಟಾ ಕಂಪನಿಯ ಹೊಸದಾಗಿ ಅಭಿವೃದ್ದಿಗೊಳಿಸಿರುವ ಐರಾ ಕಾರ್ ಕನೆಕ್ಟ್ ಟೆಕ್ನಾಲಜಿಯು ಹಲವಾರು ಕನೆಕ್ಟೆಡ್ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಐ-ಟರ್ಬೊ ಇಂಟಿರಿಯರ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆಲ್‌ಟ್ರೊಜ್ ಐ-ಟರ್ಬೊದಲ್ಲಿನ ಹೊಸ ಟೆಕ್ನಾಲಜಿಯನ್ನು ಕನೆಕ್ಟ್ ನೆಕ್ಸ್ಟ್ ಎಂಬ ಡೆಡಿಕೇಟೆಡ್ ಆಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದ್ದು, ಇದರ ಜೊತೆಗೆ ರಿಮೋಟ್ ಲಾಕ್/ಅನ್ ಲಾಕ್, ರಿಮೋಟ್ ಹಾರ್ನ್, ಡಿಸ್ಟೆನ್ಸ್ ಟು ಎಂಟಿ ಚೆಕ್ ಸೇರಿದಂತೆ ಹಲವಾರು ಫೀಚರ್ಸ್ಇದರಲ್ಲಿ ನೀಡಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಐರಾ ಟೆಕ್ನಾಲಜಿಯು ಕಾರಿನ ಸೆಕ್ಯೂರಿಟಿ ಸ್ಟೆಟಸ್, ಲೈವ್ ವೆಹಿಕಲ್ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಹಲವಾರು ಲೋಕೇಶನ್ ಬೆಸ್ಡ್ ಸರ್ವೀಸ್'ಗಳನ್ನು ನೀಡಲಿದ್ದು, ಆಲ್‌ಟ್ರೊಜ್ ಐ-ಟರ್ಬೊದಲ್ಲಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ವಾಯ್ಸ್ ಅಸಿಸ್ಟೆನ್ಸ್ ಹೊಂದಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಐರಾದಲ್ಲಿರುವ ವಾಯ್ಸ್ ಅಸಿಸ್ಟೆನ್ಸ್ ಸೌಲಭ್ಯವು ಇಂಗ್ಲಿಷ್, ಹಿಂದಿ ಸೇರಿದಂತೆ 70ಕ್ಕೂ ಹೆಚ್ಚು ಭಾಷೆಗಳಲ್ಲಿನ ಕಮಾಂಡ್‌ಗಳನ್ನು ಅರ್ಥಮಾಡಿಕೊಳ್ಳಲಿದ್ದು, ಕಾರು ಪ್ರಯಾಣದ ವೇಳೆ ಯಾವುದೇ ಮ್ಯಾನುವಲ್ ಬಟನ್ ಬಳಕೆ ಮಾಡದೆ ನಿಮ್ಮ ಅಗತ್ಯ ಸೇವೆಗಳನ್ನು ಧ್ವನಿ ಗ್ರಹಿಕೆಯ ಮೂಲಕವೇ ಸೇವೆ ಪಡೆದುಕೊಳ್ಳಬಹುದು.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಇನ್ನು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್‌ಗಳನ್ನು ಇಲ್ಲೂ ಮುಂದುವರಿಸಲಾಗಿದ್ದು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯರ್ ಎಸಿ ವೆಂಟ್ಸ್, ಫ್ಲ್ಯಾಟ್ ಬಾಟಮ್ ಸ್ಟ್ರಿರಿಂಗ್ ವೀಲ್ಹ್, ಸ್ಟ್ರೀರಿಂಗ್ ಮೌಟೆಂಡ್ ಕಂಟ್ರೋಲ್ ಸೌಲಭ್ಯಗಳನ್ನು ಮುಂದುವರಿಸಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹೊಸ ಆಲ್‌ಟ್ರೊಜ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಉತ್ತಮ ಆಸನ ಸೌಲಭ್ಯ ನೀಡಿರುವ ಕಂಪನಿಯು ಉತ್ತಮ ಮಾದರಿಯಲ್ಲಿ ಲೆಗ್‌ರೂಂ ಮತ್ತು ಹೆಡ್‌ರೂಂ ಸೌಲಭ್ಯ ನೀಡಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಹಾಗೆಯೇ ಹೊಸ ಕಾರಿನಲ್ಲಿ 15-ಲೀಟರ್ ಸಾಮರ್ಥ್ಯದ ಗ್ಲೋ ಬಾಕ್ಸ್, ನಾಲ್ಕು ಬಾಗಿಲಿನಲ್ಲೂ ಕಪ್ ಹೋಲ್ಡರ್, ಹಿಂಭಾಗದ ಆಸನದಲ್ಲಿ ಮಡಿಕೆ ಮಾಡಬಹುದಾದ ಸೀಟಿನ ಮಧ್ಯದ ಆರ್ಮ್ ರೆಸ್ಟ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಮಾದರಿಯಲ್ಲಿ ಮುಂದುವರಿಸಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆದರೆ 345 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿರುವ ಹೊಸ ಕಾರಿನಲ್ಲಿ ಹೆಚ್ಚುವರಿ ಬೂಟ್‌ಸ್ಪೆಸ್ ಸೌಲಭ್ಯಕ್ಕಾಗಿ ಹಿಂಭಾಗದ ಆಸನದಲ್ಲಿ ಮಡಿಕೆ ಮಾಡಬಹುದಾದ ಸೌಲಭ್ಯ ನೀಡಿಲ್ಲ. ಆದರೂ ಕೂಡಾ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಉತ್ತಮ ಸಾಮರ್ಥ್ಯ ಬೂಟ್ ಸ್ಪೆಸ್ ಸೌಲಭ್ಯವನ್ನು ಹೊಂದಿದ್ದು, ಹೆಚ್ಚುವರಿ ಸ್ಪೆಸ್ ಅವಶ್ಯವಿದ್ದಲ್ಲಿ ಸಂಪೂರ್ಣವಾಗಿ ಹಿಂಬದಿಯ ಆಸನವನ್ನು ಮಡಿಕೆ ಮಾಡಬಹುದಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಎಂಜಿನ್ ಮತ್ತು ಪರ್ಫಾಮೆನ್ಸ್

ಆಲ್‌ಟ್ರೊಜ್ ಐ-ಟರ್ಬೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್‌ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿರುವಂತಹ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನೇ ಐ-ಟರ್ಬೊದಲ್ಲಿ ಅಳವಡಿಸಲಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆದರೆ ಹೊಸ ಕಾರಿನ ಪರ್ಫಾಮೆನ್ಸ್ ಉದ್ದೇಶಕ್ಕಾಗಿ ಡಿ ಟ್ಯೂನ್ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯು 5500ಆರ್‌ಪಿಎಂನಲ್ಲಿ ಗರಿಷ್ಠ 108 ಬಿಹೆಚ್‌ಪಿ ಪವರ್ ಹಾಗೂ 5500ಆರ್‌ಪಿಎಂನಲ್ಲಿ ಗರಿಷ್ಠ 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಪರ್ಫಾಮೆನ್ಸ್ ಮಾದರಿಗೆ ಪೂರಕವಾಗಿ ಹೊಸ ಕಾರಿನಲ್ಲಿ ಸಿಟಿ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ನೀಡಲಾಗಿದ್ದು, ಸ್ಪೋರ್ಟ್ ಮೋಡ್ ತೀಕ್ಷ್ಣವಾದ ಥ್ರೊಟಲ್ ಪ್ರತಿಕ್ರಿಯೆಯನ್ನು ನೀಡುತ್ತದೆ. ಹೊಸ ಕಾರ ಸ್ಪೋರ್ಟ್ ಮೋಡ್‌ನಲ್ಲಿ ಶೇಕಡಾ 20 ರಿಂದ 30 ರಷ್ಟು ಹೆಚ್ಚಿನ ಟಾರ್ಕ್ ವಿತರಣೆಯನ್ನು ನೀಡಲಿದ್ದು, ಉತ್ತಮ ಕಾರ್ಯಕ್ಷಮತೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತದೆ.

ಟಾಟಾ ಆಲ್‌ಟ್ರೊಜ್ ಐ-ಟರ್ಬೊ ಪೆಟ್ರೋಲ್ ಡೀಸೆಲ್
ಎಂಜಿನ್ ಸಾಮರ್ಥ್ಯ 1199ಸಿಸಿ 1199ಸಿಸಿ 1497ಸಿಸಿ
ಪವರ್ 108ಬಿಎಚ್‌ಪಿ 84ಬಿಎಚ್‌ಪಿ 88ಬಿಎಚ್‌ಪಿ
ಟಾರ್ಕ್ 140ಎನ್ಎಂ 113ಎನ್ಎಂ 200ಎನ್ಎಂ
ಟ್ರಾನ್‌ಮಿಷನ್ 5-ಸ್ಪೀಡ್ ಎಂಟಿ 5-ಸ್ಪೀಡ್ ಎಂಟಿ 5-ಸ್ಪೀಡ್ ಎಂಟಿ
ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಸಸ್ಪೆಷನ್ ಮತ್ತು ಹ್ಯಾಂಡ್‌ಲಿಂಗ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಐ-ಟರ್ಬೊದಲ್ಲಿನ ಸ್ಟೀರಿಂಗ್ ಮತ್ತು ಸಸ್ಪೆಷನ್ ಸೆಟಪ್ ಸೌಲಭ್ಯದಲ್ಲಿ ಕೆಲವು ಹೊಸ ನವೀಕರಣಗಳನ್ನು ಮಾಡಿರುವುದಾಗಿ ಹೇಳಿದೆ. ಆದರೆ ಟೆಸ್ಟ್ ಡ್ರೈವ್ ವೇಳೆ ಸಸ್ಪೆಷನ್ ಸೆಟಪ್ ಬದಲಾಣೆಯ ಯಾವುದೇ ಗಮನಾರ್ಹ ವ್ಯತ್ಯಾಸಗಳು ಕಂಡುಬರಲಿಲ್ಲ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಆದರೆ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಆಲ್‌ಟ್ರೊಜ್ ಐ-ಟರ್ಬೊ ಮಾದರಿಯು ಉತ್ತಮ ಹ್ಯಾಂಡ್ಲಿಂಗ್ ಹೊಂದಿದ್ದು, ಬ್ರೇಕಿಂಗ್ ಸೌಲಭ್ಯವು ಉತ್ತಮವಾಗಿದೆ. ಉತ್ತಮ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಸೌಲಭ್ಯದಿಂದಾಗಿ ವೇಗದ ಕಾರು ಚಾಲನೆಯನ್ನು ಉತ್ತಮವಾಗಿ ನಿರ್ವಹಿಸಬಹುದಾಗಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಐ-ಟರ್ಬೊ ವೆರಿಯೆಂಟ್ ಮತ್ತು ಬೆಲೆ

ಟಾಟಾ ಹೊಸ ಆಲ್‌ಟ್ರೊಜ್ ಐ-ಟರ್ಬೊ ಮಾದರಿಯು ಟಾಪ್-ಎಂಡ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿರಲಿದ್ದು, ಎಕ್ಸ್‌ಟಿ, ಎಕ್ಸ್‌ ಜೆಡ್ ಮತ್ತು ಎಕ್ಸ್‌ ಜೆಡ್ ಪ್ಲಸ್ ರೂಪಾಂತರಗಳು ಹೊಂದಿರುತ್ತದೆ. ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಹಾರ್ಬರ್ ಬ್ಲೂ ಪೇಂಟ್ ಸ್ಕೀಮ್ ಸೇರಿದಂತೆ ಹೈ-ಸ್ಟ್ರೀಟ್ ಗೋಲ್ಡ್, ಡೌನ್ಟೌನ್ ರೆಡ್, ಮಿಡ್‌ಟೌನ್ ಗ್ರೇ ಮತ್ತು ಅವೆನ್ಯೂ ವೈಟ್ ಬಣ್ಣಗಳ ಆಯ್ಕೆ ಹೊಂದಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಸ್ಟ್ಯಾಂಡರ್ಡ್ ಟಾಟಾ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.44 ಲಕ್ಷ ಹೈ ಎಂಡ್ ಆವೃತ್ತಿಯು ರೂ. 9.09 ಲಕ್ಷ ಬೆಲೆ ಹೊಂದಿದ್ದು, ಇದೇ ತಿಂಗಳು 22ರಂದು ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಐ-ಟರ್ಬೊ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಸದ್ದು ಮಾಡುತ್ತಾ ಹೊಸ ಆಲ್‌ಟ್ರೊಜ್?

ಪ್ರತಿಸ್ಪರ್ಧಿ ಕಾರುಗಳಿಂತ ಐ-ಟರ್ಬೊ ಹೇಗೆ ವಿಭಿನ್ನ?

ಆಲ್‌ಟ್ರೊಜ್ ಐ-ಟರ್ಬೊ ಆವೃತ್ತಿಯು ಪ್ರಮುಖವಾಗಿ ಹ್ಯುಂಡೈ ಐ20 ಮಾದರಿಯ ಟರ್ಬೊ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯ ಪೊಲೊ ಜಿಟಿ ಟಿಎಸ್ಐ ಮಾದರಿಗೆ ಪ್ರಬಲ ಪೈಪೋಟಿ ನೀಡಲಿದ್ದು, ಸ್ಟ್ಯಾಂಡರ್ಡ್ ಮಾದರಿಯು ಸೆಗ್ಮೆಂಟ್‌ನಲ್ಲಿರುವ ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾಂಝಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ವೈಶಿಷ್ಟ್ಯತೆಗಳು

ಟಾಟಾ ಆಲ್‌ಟ್ರೊಜ್ ಐ-ಟರ್ಬೊ ಹ್ಯುಂಡೈ ಐ-20 ಟರ್ಬೊ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್ಐ
ಎಂಜಿನ್ ಸಾಮರ್ಥ್ಯ 1199ಸಿಸಿ 998ಸಿಸಿ 998ಸಿಸಿ
ಪವರ್ 108 ಬಿಎಚ್‌ಪಿ 118 ಬಿಎಚ್‌ಪಿ 108 ಬಿಎಚ್‌ಪಿ
ಟಾರ್ಕ್ 140 ಎನ್ಎಂ 172 ಎನ್ಎಂ 175 ಎನ್ಎಂ

ಟ್ರಾನ್ಸ್‌ಮಿಷನ್

5 ಎಂಟಿ 6ಐಎಂಟಿ / 7ಡಿಸಿಟಿ 6 ಎಟಿ
ಆರಂಭಿಕ ಬೆಲೆ (ಎಕ್ಸ್‌ಶೋರೂಂ ಪ್ರಕಾರ) ಇನ್ನು ಬಿಡುಗಡೆಗೊಂಡಿಲ್ಲ ರೂ. 8.80 ಲಕ್ಷ ರೂ. 9.67 ಲಕ್ಷ
ಹೊಸ ಐ-ಟರ್ಬೊ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಐ-ಟರ್ಬೊ ಕುರಿತು ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸೆಗ್ಮೆಂಟ್ ಇನ್ ಬೆಸ್ಟ್ ಫೀಚರ್ಸ್ ಹೊಂದಿರುವ ಆಲ್‌ಟ್ರೊಜ್ ಕಾರು ಮಾದರಿಯು ಐ-ಟರ್ಬೊ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಗುಣವೈಶಿಷ್ಟ್ಯತೆಗಳನ್ನು ಹೊಂದಿದ್ದು, ಐ-ಟರ್ಬೊ ಮೂಲಕ ಆಲ್‌ಟ್ರೊಜ್ ಕಾರಿಗೆ ಮತ್ತಷ್ಟು ಬಲಿಷ್ಠ ಎಂಜಿನ್ ಮತ್ತು ಸ್ಪೋರ್ಟಿ ಲುಕ್ ನೀಡಲಾಗಿದೆ. ಹೊಸ ಎಂಜಿನ್ ಮಾದರಿಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ತಂದುಕೊಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗರಿಷ್ಠ ಸುರಕ್ಷಾ ರೇಟಿಂಗ್ ಕೂಡಾ ಹೊಂದಿರುವುದು ಕಾರಿನ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಲಿದೆ.

Most Read Articles

Kannada
English summary
Tata Altroz i-Turbo Petrol Review Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X