ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

2018ರಲ್ಲಿ ಮೊದಲ ಬಾರಿಗೆ 45ಎಕ್ಸ್ ಹೆಸರಿನೊಂದಿಗೆ ಹೊಸ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಉತ್ಪಾದನಾ ಆವೃತ್ತಿಯ ಬಿಡುಗಡೆಗೆ ಸಿದ್ದಗೊಳ್ಳುತ್ತಿದ್ದು, 2020ರ ಜನವರಿ ಕೊನೆಯ ವಾರದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿರುವ ಹೊಸ ಕಾರು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಟಾಟಾ ಸಂಸ್ಥೆಯು ಹ್ಯಾರಿಯರ್ ಬಿಡುಗಡೆಯ ಯಶಸ್ವಿ ನಂತರ ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಂಡಿರುವ ಆಲ್‌ಟ್ರೊಜ್ ಕೂಡಾ ಹೊಸ ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಎಲೈಟ್ ಐ20, ಟೊಯೊಟಾ ಗ್ಲಾಂಝಾ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

2020ರ ಜನವರಿ 22ರಂದು ಹೊಸ ಆಲ್‌ಟ್ರೊಜ್ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೂ ಮುನ್ನ ಆಲ್‌ಟ್ರೊಜ್ ಕಾರ್ಯಕ್ಷಮತೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ಡ್ರೈವ್ ಕಲ್ಪಿಸಿತ್ತು. ಹಾಗಾದ್ರೆ ಹೊಸ ಕಾರು ಪ್ರತಿಸ್ಪರ್ಧಿಗಳಿಂತ ಹೇಗೆ ಭಿನ್ನವಾಗಿದೆ? ಕಾರು ಖರೀದಿಗೆ ಯೋಗ್ಯವೇ? ಹೊಸ ಕಾರಿನಲ್ಲಿ ಏನೆಲ್ಲಾ ಹೊಸ ಫೀಚರ್ಸ್‌ಗಳಿವೆ ಎನ್ನುವಂತಹ ಹತ್ತು ಹಲವು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಡಿಸೈನ್ ಮತ್ತು ಸ್ಟೈಲಿಂಗ್

ಟಾಟಾ ಸಂಸ್ಥೆಯ 'ಇಂಪ್ಯಾಕ್ಟ್ 2.0' ಯೋಜನೆಯಡಿ ಸಿದ್ದಗೊಂಡ ಎರಡನೇ ಕಾರು ಮಾದರಿಯಾಗಿರುವ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಪ್ರೀಮಿಯಂ ಸೌಲಭ್ಯಗಳೊಂದಿಗೆ ಈ ಹಿಂದಿನ ಕಾರು ಉತ್ಪನ್ನಗಳಿಂತಲೂ ಹೆಚ್ಚು ಆಕರ್ಷಣೆ ಮತ್ತು ಪ್ರೀಮಿಯಂ ಸೌಲಭ್ಯದೊಂದಿಗೆ ಅಭಿವೃದ್ದಿಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಹೊಸ ಕಾರಿನ ಮುಂಭಾಗವು ಶಾರ್ಕ್ ನೊಸ್ ಡಿಸೈನ್ ಹೊಂದಿದ್ದು, ಸ್ವೆಪ್ಟ್ ಬ್ಯಾಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಸ್ಟ್ರೀಪ್ ಕ್ರೋಮ್ ಹೊಂದಿದ್ದು, ಸ್ಲಿಕ್ ಬ್ಲ್ಯಾಕ್ಡ್ ಔಟ್ ಗ್ರಿಲ್‌ನಲ್ಲಿ ನೀಡಲಾಗಿರುವ ಟಾಟಾ ಲೋಗೋ ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ತಂದಿದೆ. ಹಾಗೆಯೇ ಹೊಸ ಕಾರಿನಲ್ಲಿ ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಫಾಗ್ ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್ ಜೋಡಿಸಲಾಗಿದ್ದು, ಕಾರಿನ ಸೈಡ್ ಪ್ರೋಫೈಲ್ ಕೂಡಾ ಕಾರು ಖರೀದಿದಾರರನ್ನು ಸೆಳೆಯದೆ ಇರಲಾರದು.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

16-ಇಂಚಿನ ಸ್ಟ್ಯಾಂಡರ್ಡ್ ಡ್ಯುಯಲ್ ಟೋನ್ ಲೇಸರ್ ಕಟ್ ಅಲಾಯ್ ವೀಲ್ಹ್, ಸಿ ಪಿಲ್ಲರ್ ಹೊಂದಿಕೊಂಡಿರುವ ಹಿಂಭಾಗದ ಡೋರ್ ಲಾಕ್, ಸ್ಮೊಕ್ಡ್ ಟೈಲ್‌ಲೈಟ್ಸ್, ಬೂಟ್ ಲೀಡ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿವೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಹೊಸ ಕಾರಿನಲ್ಲಿ ಪ್ರೀಮಿಯಂ ಲುಕ್ ಹೆಚ್ಚಿಸುವುದಕ್ಕಾಗಿ ರೂಫ್ ಮೌಂಟೆಡ್ ಸ್ಪಾಯ್ಲರ್, ರಿಯರ್ ವಿಂಡ್‌ಸ್ಕ್ರೀನ್‌ನಲ್ಲಿ ಇಂಟ್ರಾಗ್ರೆಟೆಡ್ ಬ್ರೇಕಿಂಗ್ ಲೈಟ್ಸ್ ಜೋಡಿಸಲಾಗಿದ್ದು, ಟಾಟಾ ಲೊಗೋ ಕೆಳಭಾಗದಲ್ಲಿ 'ALTROZ' ಬ್ರಾಂಡ್ ನೆಮ್ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಒಳಭಾಗದ ವಿನ್ಯಾಸ ಮತ್ತು ಸೌಲಭ್ಯಗಳು

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್‌ಟ್ರೊಜ್ ಕಾರಿನಲ್ಲಿ 90 ಡಿಗ್ರಿ ಆ್ಯಂಗಲ್‌ನಲ್ಲಿ ತೆರೆಯಬಹುದಾದ ಬಾಗಿಲುಗಳು ಪ್ರಮುಖ ಆಕರ್ಷಣೆಯಾಗಿದ್ದು, ಆರಾಮದಾಯಕ ಪ್ರಯಾಣಕ್ಕಾಗಿ ಮುಂಭಾಗದ ಪ್ರಯಾಣಿಕರಿಗೆ ಮಾತ್ರವಲ್ಲದೇ ಹಿಂಬದಿಯ ಪ್ರಯಾಣಿಕರಿಗೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಟಾಟಾ ಆಲ್‌ಟ್ರೊಜ್‍‌ನಲ್ಲಿ ಕ್ಯಾಬಿನ್ ಹೊಸ ಮಟ್ಟದ ಪ್ರೀಮಿಯಂ-ನೆಸ್ ಅನ್ನು ನೀಡುವುದಲ್ಲದೇ ಈ ಮೊದಲು ಯಾವುದೇ ಟಾಟಾ ಹ್ಯಾಚ್‌ಬ್ಯಾಕ್‌ನಲ್ಲೂ ನೀಡಲಾಗದ ಸಾಫ್ಟ್-ಟಚ್ ಡ್ಯಾಶ್‌ಬೋರ್ಡ್‌, ಸೆಂಟರ್ ಕನ್ಸೋಲ್‌‌ ಸೌಲಭ್ಯ ಈ ಕಾರಿನಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಜೊತೆಗೆ ಹೊಸ ಕಾರಿನಲ್ಲಿ ಮಡಿಕೆ ಮಾಡಬಹುದಾದ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ ಸೌಲಭ್ಯವಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಆಲ್‌ಟ್ರೊಜ್ ಕಾರಿನಲ್ಲಿವೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಆದರೆ ಹೊಸ ಕಾರಿನಲ್ಲಿ 6 ಅಡಿಗಿಂತಲೂ ಹೆಚ್ಚು ಎತ್ತರವಿರುವ ವ್ಯಕ್ತಿಗಳ ಪ್ರಯಾಣಕ್ಕೆ ತುಸು ಕಷ್ಟ ಎನ್ನಿಸಲಿದ್ದು, ಕಾರಿನ ಹೆಡ್ ರೂಂ ಮತ್ತು ಲೆಗ್ ರೂಂ ತುಸು ಕಡಿಮೆ ಎನ್ನಿಸದೇ ಇರಲಾರದು. ಆದರೂ ಕೂಡಾ ಪ್ರಯಾಣಕ್ಕೆ ಸಾಕಷ್ಟು ಅನುಕೂಲಕರವಾದ ಸೌಲಭ್ಯಗಳಿದ್ದು, ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಇದು ವಿಶೇಷ ಎನ್ನಿಸಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಬೂಟ್ ಸ್ಪೆಸ್ ಸಾಮರ್ಥ್ಯ

ಟಾಟಾ ಆಲ್‌ಟ್ರೊಜ್ ಕಾರಿನಲ್ಲಿ 345-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದ್ದು, ಪ್ರಯಾಣದ ಅವಧಿಯಲ್ಲಿ ಹೆಚ್ಚು ಲಗೇಜ್ ಇಟ್ಟುಕೊಳ್ಳುವ ಅವಶ್ಯಕತೆಯಿದ್ದಲ್ಲಿ ಹಿಂಬದಿಯ ಆಸನಗಳನ್ನು ಮಡಿಕೆ ಮಾಡುವ ಮೂಲಕ 665-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಉದ್ದಳತೆ

ಉದ್ದ (ಎಂಎಂಗಳಲ್ಲಿ) 3990
ಅಗಲ (ಎಂಎಂಗಳಲ್ಲಿ) 1755
ಎತ್ತರ (ಎಂಎಂಗಳಲ್ಲಿ) 1523
ವೀಲ್ಹ್‌ಬೆಸ್ (ಎಂಎಂಗಳಲ್ಲಿ) 2501
ಗ್ರೌಂಡ್ ಕ್ಲಿಯೆರೆನ್ಸ್ (mm) 165
ಬೂಟ್ ಸ್ಪೆಸ್ (ಲೀಟರ್‌ಗಳಲ್ಲಿ) 345
ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ವೆರಿಯೆಂಟ್ ಮತ್ತು ಸುರಕ್ಷಾ ಸೌಲಭ್ಯಗಳು

ಆಲ್‌ಟ್ರೊಜ್ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಆಪ್ಷನ್ ವೆರಿಯೆಂಟ್‌‌ಗಳನ್ನು ಹೊಂದಿದ್ದು, ಬಹುತೇಕ ವೆರಿಯೆಂಟ್‌ಗಳಲ್ಲಿ ಕ್ಲಾಸ್ ಲೀಡಿಂಗ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೊಜ್ ಕಾರಿನಲ್ಲೂ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಹೊಸ ಕಾರಿನಲ್ಲಿ ಡ್ಯಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೊಲ್, ಆಟೋ ಹೆಡ್‌ಲ್ಯಾಂಪ್, ಹೈ ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಸೊಫಿಕ್ಸ್ ಚೈಲ್ಡ್ ಮೌಂಟ್ ಸೀಟ್, ಫ್ರಂಟ್ ಫಾಗ್ ಲೈಟ್ ಜೊತೆ ಕಾರ್ನಿಂಗ್ ಫಂಕ್ಷನ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಸದ್ಯ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಮೊದಲ ಹಂತವಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಮಾತ್ರವೇ ನೀಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು 2020ರ ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಜೊತೆಗೆ ಪೆಟ್ರೋಲ್ ಟರ್ಬೋ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಈ ಮೂಲಕ ಹೈವೇ ಗಳಲ್ಲಿ ಅಷ್ಟೇ ಅಲ್ಲದೇ ಸಿಟಿ ಪ್ರಯಾಣದಲ್ಲೂ ಸಹ ಲೈಟ್-ಕ್ಲಚ್ ಆರಾಮದಾಯಕ ಚಾಲನೆಗೆ ಅವಕಾಶ ನೀಡುತ್ತದೆ. ಆದ್ರೆ ಹೆಚ್ಚು ವೇಗದ ಸವಾರಿಗೆ ಅನುಕೂಲವಾರವಾಗಿದ್ದರೂ ಕೆಲವು ಬಾರಿ ಬ್ರೇಕಿಂಗ್ ಮೇಲೆ ನಿಖರವಾದ ಹಿಡಿತ ಸಾಧಿಸುವುದರಲ್ಲಿ ತುಸು ಹಿನ್ನಡೆ ಅನುಭವಿಸುತ್ತದೆ ಎನ್ನುವುದು ಡ್ರೈವಿಂಗ್ ಸಂದರ್ಭದಲ್ಲಿ ಕಂಡು ಬಂದ ಒಂದು ನ್ಯೂನತೆಯಾಗಿದೆ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಇದರ ಹೊರತಾಗಿ ಸವಾರಿ ಮತ್ತು ನಿರ್ವಹಣಾ ವಿಭಾಗದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಹೊಸ ‘ಆಲ್ಫಾ' ಪ್ಲಾಟ್‌ಫಾರ್ಮ್ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಸಮತೋಲನವನ್ನು ನೀಡುವ ಮೂಲಕ ಖರೀದಿಗೆ ಯೋಗ್ಯವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಎಂಜಿನ್ ವಿಭಾಗದ ಹೈಲೆಟ್ಸ್

ತಾಂತ್ರಿಕ ಸೌಲಭ್ಯಗಳು ಪೆಟ್ರೋಲ್ ವರ್ಷನ್ ಡೀಸೆಲ್ ವರ್ಷನ್
ಎಂಜಿನ್ (ಸಿಸಿ) 1199, 3-ಸಿಲಿಂಡರ್ 1497,4-ಸಿಲಿಂಡರ್
ಪವರ್ (ಬಿಎಚ್‌ಪಿ) 86-ಬಿಎಚ್‌ಪಿ 90-ಬಿಎಚ್‌ಪಿ
ಟಾರ್ಕ್ (ಎನ್ಎಂ) 113-ಎನ್ಎಂ ಟಾರ್ಕ್ 200-ಎನ್ಎಂ ಟಾರ್ಕ್
ಟ್ರಾನ್‌ಮಿಷನ್ 5-ಎಂಟಿ 5-ಎಂಟಿ
ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಖರೀದಿಗೆ ಲಭ್ಯವಿರುವ ಬಣ್ಣಗಳು

ಆಲ್‌ಟ್ರೊಜ್‌ನಲ್ಲಿ ಹೈ-ಸ್ಟ್ರೀಟ್ ಗೋಲ್ಡ್, ಸ್ಕೈಲೈನ್ ಸಿಲ್ವರ್, ಡೌನ್‌ಟೌನ್ ರೆಡ್, ಮಿಡ್‌ಟೌನ್ ಗ್ರೇ ಮತ್ತು ಅವೆನ್ಯೂ ವೈಟ್ ಎನ್ನುವ ಐದು ಬಣ್ಣಗಳ ಆಯ್ಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಡ್ಯುಯಲ್ ಟೋನ್ ಕೂಡಾ ಬಿಡುಗಡೆ ಸಾಧ್ಯತೆಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಫ್ಯಾಕ್ಟ್ ಚೆಕ್

ತಾಂತ್ರಿಕ ಬಲಿಷ್ಠತೆ ಟಾಟಾ ಆಲ್‌ಟ್ರೊಜ್ ಮಾರುತಿ ಸುಜುಕಿ ಬಲೆನೊ ಹ್ಯುಂಡೈ ಎಲೈಟ್ ಐ20
ಎಂಜಿನ್ 1.2-ಪೆಟ್ರೋಲ್/1.5-ಡೀಸೆಲ್ 1.2-ಪೆಟ್ರೋಲ್/1.3-ಡೀಸೆಲ್ 1.2-ಪೆಟ್ರೋಲ್/1.4-ಡೀಸೆಲ್
ಪವರ್ (ಬಿಎಚ್‌ಪಿ) 86/90 82/74 82/89
ಟಾರ್ಕ್ (ಎನ್ಎಂ) 113/200 113/190 113/220
ಟ್ರಾನ್‌ಮಿಷನ್ 5-ಎಂಟಿ 5-ಎಂಟಿ/ಸಿವಿಟಿ 5-ಎಂಟಿ/ಸಿವಿಟಿ/6-ಎಂಟಿ
ಆರಂಭಿಕ ಬೆಲೆ ಬಿಡುಗಡೆಯ ನಂತರ ಲಭ್ಯವಾಗಲಿದೆ ರೂ. 5.58 ಲಕ್ಷ ರೂ. 5.52 ಲಕ್ಷ

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಬೆಲೆ(ಅಂದಾಜು)

ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಕಾರಿನ ಬೆಲೆಯು ರೂ.8 ಲಕ್ಷ ಬೆಲೆ ಅಂದಾಜಿಸಲಾಗಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಐ20, ಮಾರುತಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಬೆಸ್ಟ್ ಟಾಟಾ ಆಲ್‌ಟ್ರೊಜ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಅತ್ಯುತ್ತಮ ಕಾರು ಮಾದರಿಯನ್ನು ಅಭಿವೃದ್ದಿಗೊಳಿಸಲು ಪ್ರಯತ್ನಿಸಿರುವ ಟಾಟಾ ಸಂಸ್ಥೆಯು ಆಲ್‌ಟ್ರೊಜ್ ಮೂಲಕ ಕಾರು ಖರೀದಿದಾರರನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದು, ಹೊಸ ಕಾರು ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಎಲೈಟ್ ಐ20, ಟೊಯೊಟಾ ಗ್ಲಾಂಝಾ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಇದು ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Tata Altroz First Drive Review. Read in Kannada.
Story first published: Monday, December 16, 2019, 21:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X