ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಭಾರತದ ಬಹುರಾಷ್ಟ್ರೀಯ ಕಂಪನಿಯಾದ ಟಾಟಾ ಕಂಪನಿಯ ಆಟೋಮೋಟಿವ್ ವಿಭಾಗವಾದ ಟಾಟಾ ಮೋಟಾರ್ಸ್ ಶೀಘ್ರದಲ್ಲಿಯೇ ತನ್ನ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿರಲಿದೆ. ಜನವರಿ 28ರಂದು ಬಿಡುಗಡೆಯಾದ ನಂತರ ಭಾರತದ ಮೊದಲ ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಲಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಭಾರತ ಮೂಲದ ಟಾಟಾ ಮೋಟಾರ್ಸ್ ಈಗಾಗಲೇ ತನ್ನ ಸರಣಿಯಲ್ಲಿ ಎರಡು ಪೂರ್ಣ ಪ್ರಮಾಣದ ವಿದ್ಯುತ್ ಕಾರುಗಳನ್ನು ಹೊಂದಿದೆ. ಆದರೆ ಟಾಟಾ ನೆಕ್ಸಾನ್ ಇವುಗಳಿಗಿಂತ ವಿಭಿನ್ನವಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಟಾಟಾ ಕಂಪನಿಯ ಹೊಸ ಜಿಪ್‌ಟ್ರಾನ್ ಪವರ್‌ಟ್ರೇನ್ ಅನ್ನು ಮೊದಲ ಬಾರಿ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಇತ್ತೀಚಿಗೆ ಟಾಟಾ ನೆಕ್ಸಾನ್ ಇವಿಯನ್ನು ಟೆಸ್ಟ್ ಡ್ರೈವ್ ಮಾಡಲಾಗಿತ್ತು. ಈ ಡ್ರೈವ್‍‍ನಲ್ಲಿ ಈ ಎಸ್‍‍ಯುವಿಯ ಪರ್ಫಾಮೆನ್ಸ್, ಡ್ರೈವ್, ಹ್ಯಾಂಡ್ಲಿಂಗ್, ರೇಂಜ್, ಫೀಚರ್ ಮುಂತಾದವುಗಳನ್ನು ಪರೀಕ್ಷಿಸಲಾಯಿತು. ಟಾಟಾ ನೆಕ್ಸಾನ್ ಟೆಸ್ಟ್ ಡ್ರೈವ್‍‍ನ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ವಿನ್ಯಾಸ ಮತ್ತು ಶೈಲಿ

ಹೊಸ ಟಾಟಾ ನೆಕ್ಸಾನ್ ಇವಿಯ ವಿನ್ಯಾಸವು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಸ್ಟ್ಯಾಂಡರ್ಡ್ ಎಸ್‍‍ಯುವಿಯ ವಿನ್ಯಾಸದಂತಿದೆ. ಇವುಗಳಲ್ಲಿ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್‍‍ಗಳು ಸೇರಿವೆ. ಹೊಸ ನೆಕ್ಸಾನ್‌ನಲ್ಲಿ ಸೂಕ್ಷ್ಮ ರೀತಿಯ ಅಪ್‍‍ಡೇಟ್‍‍ಗಳನ್ನು ಮಾಡಲಾಗಿಲ್ಲ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಇವಿಯ ಮುಂಭಾಗವು ಪೂರ್ಣವಾದ ರಿಫ್ರೆಶ್ ಲುಕ್‌ ಅನ್ನು ಹೊಂದಿದೆ. ಇದರಿಂದಾಗಿ ಹೊಸ ಎಸ್‍ಯುವಿ ಹೆಚ್ಚು ಸ್ಪೋರ್ಟಿ ಹಾಗೂ ಪ್ರೀಮಿಯಂನಂತೆ ಕಾಣುತ್ತದೆ. ಈ ಎಸ್‌ಯುವಿ ಒಳಾಂಗಣಗಳನ್ನು ಸಹ ನವೀಕರಿಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಮುಂಭಾಗದ ಬಗ್ಗೆ ಹೇಳುವುದಾದರೆ, ಟಾಟಾ ನೆಕ್ಸಾನ್ ಇವಿಯಲ್ಲಿರುವ ಹೊಸ ಹೆಡ್‍‍ಲ್ಯಾಂಪ್‍‍ಗಳು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ನೊಂದಿಗೆ ಶಾರ್ಪ್ ಲುಕ್ ಅನ್ನು ಹೊಂದಿವೆ. ಈ ಎಲ್‍ಇ‍‍ಡಿ ಪ್ರೊಜೆಕ್ಟರ್‍‍ಗಳು ಎಲ್‍ಇಡಿಯಾಗಿಲ್ಲ, ಬದಲಿಗೆ ಹ್ಯಾಲೋಜೆನ್ ಹೆಡ್‍‍‍‍ಲ್ಯಾಂಪ್‍‍ಗಳಾಗಿದ್ದು, ಮಾರುಕಟ್ಟೆಯಲ್ಲಿರುವ ಕಾರಿಗಿಂತ ಉತ್ತಮವಾಗಿವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಎಸ್‍‍‍ಯುವಿಯಲ್ಲಿರುವ ಎಲ್‍ಇ‍‍ಡಿ ಡಿ‍ಆರ್‍ಎಲ್‍ಗಳನ್ನು ಅಪ್‍‍ಡೇಟ್ ಮಾಡಲಾಗಿದ್ದು, ಮುಖ್ಯವಾದ ಹೆಡ್‍‍‍ಲ್ಯಾಂಪ್ ಕ್ಲಸ್ಟರ್‍‍‍ನೊಂದಿಗೆ ಇಂಟಿಗ್ರೇಟ್ ಮಾಡಲಾಗಿದೆ. ಎಕ್ಸ್ ಶೇಪಿನಲ್ಲಿರುವ ಡಿ‍ಆರ್‍ಎಲ್ ಮೊದಲಿಗಿಂತ ಅಗ್ರೆಸಿವ್ ಡಿಸೈನ್ ಅನ್ನು ಹೊಂದಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಮುಂಭಾಗದಲ್ಲಿರುವ ಗ್ರಿಲ್‌ನಲ್ಲಿ ಪಿಯಾನೊ ಬ್ಲಾಕ್ ಬಣ್ಣದಲ್ಲಿರುವ ಹೆಡ್‍‍ಲ್ಯಾಂಪ್‌ಗಳಿವೆ. ಪಿಯಾನೋ ಬ್ಲ್ಯಾಕ್ ಬಣ್ಣವು ಸ್ಲ್ಯಾಟ್ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಮಧ್ಯದಲ್ಲಿ ಟಾಟಾ ಬ್ಯಾಡ್ಜ್ ಇದ್ದು, ಕೊನೆಯಲ್ಲಿ ಇವಿ ಬ್ಯಾಡ್ಜ್ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಮುಂಭಾಗದಲ್ಲಿರುವ ಫಾಗ್ ಲ್ಯಾಂಪ್ ಹೌಸಿಂಗ್‍‍ಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ಮುಂಭಾಗದ ಬಂಪರ್ ಈಗ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬ್ಲೂ ಎಂದು ಕರೆಯುವ ದೊಡ್ಡದಾದ ಏರ್ ಡ್ಯಾಮ್ ಅನ್ನು ಬಾಟಮ್ ಸೆಂಟರ್‍‍ನಲ್ಲಿ ಹೊಂದಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಬ್ಲೂ ಅಸೆಂಟ್‍‍ಗಳನ್ನು ಮುಂಭಾಗದಲ್ಲಿರುವ ಪಿಯಾನೊ ಬ್ಲಾಕ್ ಸ್ಲಾಟ್ ಕೆಳಗೆ ಹಾಗೂ ಹಿಂಭಾಗ, ಸೈಡ್‍‍ಗಳಲ್ಲಿ ಕಾಣಬಹುದು. ಮುಂಭಾಗದ ಬಾನೆಟ್ ಈಗ ಫ್ಲಾಟ್ ಆಗಿದ್ದು, ಈ ಎಸ್‍‍ಯುವಿ ದೊಡ್ಡದರಂತೆ ಭಾಸವಾಗುತ್ತದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಎಸ್‍‍ಯುವಿಯ ಸೈಡ್ ಪ್ರೊಫೈಲ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎಲೆಕ್ಟ್ರಿಕ್ ಬ್ಲೂ ಅಸೆಂಟ್‍ಗಳನ್ನು ಎಸ್‍‍ಯುವಿಯ ಮುಂಭಾಗ, ಸೈಡ್ ಹಾಗೂ ವಿಂಡೋಗಳ ಕೆಳಗೆ ಕಾಣಬಹುದು.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಎಸ್‍‍ಯುವಿಯ ಮುಂಭಾಗದ ಡೋರ್‍‍ನಲ್ಲಿ ಇವಿ ಬ್ಯಾಡ್ಜ್ ಗಳನ್ನು ನೀಡಲಾಗಿದೆ. ಟಾಟಾ ಮೋಟಾರ್ಸ್ ಈ ಎಸ್‍‍ಯುವಿಯ ಪ್ರೀಮಿಯಂ ಹೆಚ್ಚಿಸಲು ಹೊಸ ರೀತಿಯ 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಹಿಂಭಾಗದಲ್ಲಿ ಹೆಚ್ಚಿನ ಪ್ರಮಾಣದ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂಭಾಗದಲ್ಲಿ ಮಾಡಲಾಗಿರುವ ಪ್ರಮುಖ ಬದಲಾವಣೆ ಎಂದರೆ ಟೇಲ್‍‍ಲೈಟ್ ಹಾಗೂ ಎಲೆಕ್ಟ್ರಿಕ್ ಬ್ಲೂ ಅಸೆಂಟ್‍‍ಗಳನ್ನು ಅಪ್‍‍ಡೇಟ್ ಮಾಡಿರುವುದು.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಇದರ ಜೊತೆಗೆ ಬೂಟ್ ಲಿಡ್ ಮಧ್ಯಭಾಗದಲ್ಲಿ ನೆಕ್ಸಾನ್ ಬ್ಯಾಡ್ಜ್ ಅಳವಡಿಸಲಾಗಿದೆ. ಹ್ಯಾರಿಯರ್ ಹಾಗೂ ಆಲ್ಟ್ರೋಜ್ ಕಾರಿನಲ್ಲಿಯೂ ಇದೇ ರೀತಿ ಅಳವಡಿಸಲಾಗಿದೆ. ಈ ಎಸ್‍‍ಯುವಿಯ ಎರಡೂ ಬದಿಯಲ್ಲಿ ಇವಿ ಹಾಗೂ ಜಿಪ್‍‍ಟ್ರಾನ್ ಎಂಬ ಬ್ಯಾಡ್ಜ್ ಗಳನ್ನು ಸಹ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಇಂಟಿರಿಯರ್

ಟಾಟಾ ನೆಕ್ಸಾನ್ ಇವಿಯ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಈಗಾಗಲೇ ಇರುವ ಕ್ಯಾಬಿನ್ ಅನ್ನು ಅಪ್‍‍ಡೇಟ್‍‍ಗೊಳಿಸಲಾಗಿದೆ. ಇದರ ಜೊತೆಗೆ ವ್ರಾಪ್ ಲೆದರ್‍‍ನ ಸ್ಟೀಯರಿಂಗ್ ವ್ಹೀಲ್, ಆಡಿಯೊ ಹಾಗೂ ಕಾಲ್ ಫಂಕ್ಷನ್‍‍ಗಳಿಗಾಗಿ ಮೌಂಟೆಡ್ ಕಂಟ್ರೋಲ್‍‍ಗಳಿವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಸ್ಟೀಯರಿಂಗ್ ವ್ಹೀಲ್ ಹಿಂಭಾಗದಲ್ಲಿ ಡಿಜಿಟಲ್ ಡಿಸ್‍‍ಪ್ಲೇ ಹಾಗೂ ಅನಲಾಗ್ ಸ್ಪೀಡೊ ಮೀಟರ್ ಹೊಂದಿರುವ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಈ ಡಿಜಿಟಲ್ ಡಿಸ್‍‍ಪ್ಲೇ ಆಲ್ಟ್ರೋಜ್ ಹ್ಯಾಚ್‍‍ಬ್ಯಾಕ್‍‍‍ನಲ್ಲಿರುವಂತಿದ್ದರೂ, ಅನೇಕ ಮಾಹಿತಿಗಳನ್ನು ನೀಡುತ್ತದೆ. ಇವುಗಳಲ್ಲಿ ಬ್ಯಾಟರಿ ಸ್ಟೇಟಸ್, ಟಾಚೊಮೀಟರ್, ಡಿಸ್ಟನ್ಸ್ ಟು ಎಂಟಿ, ಬ್ಯಾಟರಿ ಪರ್ಸಂಟೇಜ್, ರಿಜನರೇಟಿವ್ ಬ್ರೇಕಿಂಗ್ ಯೂಸೇಜ್‍ ಸೇರಿದಂತೆ ಹಲವು ಫಂಕ್ಷನ್‍‍ಗಳು ಸೇರಿವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಎಲೆಕ್ಟ್ರಿಕ್ ಎಸ್‍ಯುವಿಯ ಸೆಂಟರ್ ಕಂಸೋಲ್ ಬಗ್ಗೆ ಹೇಳುವುದಾದರೆ, ಹೊಸ ವಾಹನವು ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿಗೆ ಹೊಂದಿಕೊಳ್ಳಬಲ್ಲ 7 ಇಂಚಿನ ಫ್ಲೋಟಿಂಗ್ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಇದರ ಜೊತೆಗೆ ಸೆಂಟರ್ ಕಂಸೋಲ್, ಟಾಟಾ ಮೋಟಾರ್ಸ್‍‍ನ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಟೆಕ್ನಾಲಜಿ ತನ್ನದೇ ಆದ 35 ಹೆಚ್ಚುವರಿ ಫೀಚರ್‍‍‍ಗಳನ್ನು ಹೊಂದಿದೆ. ಇವುಗಳನ್ನು ಸ್ಮಾರ್ಟ್‍‍ಫೋನ್‍‍ನಲ್ಲಿರುವ ಆಪ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಸೆಂಟರ್ ಕಂಸೋಲ್‍‍ನಲ್ಲಿರುವ ಇನ್ಫೋಟೆನ್‍‍ಮೆಂಟ್ ಸಿಸ್ಟಂನ ಕೆಳಗೆ ಎಸಿ ವೆಂಟ್‍‍ಗಳಿವೆ. ಇವುಗಳ ಸುತ್ತಲೂ ಎಲೆಕ್ಟ್ರಿಕ್ ಬ್ಲೂ ಅಸೆಂಟ್‍‍ಗಳನ್ನು ಅಳವಡಿಸಲಾಗಿದೆ. ಈ ಎಸ್‍‍ಯುವಿಯಲ್ಲಿರುವ ಡ್ಯಾಶ್‍‍ಬೋರ್ಡ್ ಮೇಲ್ಭಾಗದಲ್ಲಿ ಕಪ್ಪು ಬಣ್ಣವನ್ನು ಹೊಂದಿದ್ದರೆ, ಮಧ್ಯಭಾಗದಲ್ಲಿ ಪಿಯಾನೊ ಬ್ಲಾಕ್ ಹಾಗೂ ಕೆಳಭಾಗದಲ್ಲಿ ಬೀಜ್ ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಡ್ಯಾಶ್‍‍‍ಬೋರ್ಡ್ ಸಾಫ್ಟ್ ಟಚ್ ಮೆಟಿರಿಯಲ್‍‍ಗಳನ್ನು ಹೊಂದಿದ್ದು, ಕ್ಯಾಬಿನ್‍‍ಗೆ ಪ್ರೀಮಿಯಂ ಲುಕ್ ನೀಡುತ್ತದೆ. ಸೆಂಟ್ರಲ್ ಕಂಸೋಲ್‍‍ನ ಕೆಳಗೆ ರೋಟರ್ ಕ್ನಾಬ್ ಹಾಗೂ ಬಟನ್‍‍ಗಳನ್ನು ಹೊಂದಿರುವ ಕ್ಲೈಮೆಟ್ ಕಂಟ್ರೋಲ್ ಸೆಟ್ಟಿಂಗ್‍‍ಗಳಿವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಇದರ ಜೊತೆಗೆ ಟಾಟಾ ನೆಕ್ಸಾನ್ ಇವಿಯಲ್ಲಿ ಯು‍ಎಸ್‍‍ಬಿ ಪೋರ್ಟ್ ಹಾಗೂ 12 ವೋಲ್ಟ್ ಚಾರ್ಜಿಂಗ್ ಸಾಕೆಟ್‍‍ಗಳಿದ್ದು, ಸುಲಭವಾಗಿ ಕೈಗೆಟಕುತ್ತವೆ. ಸೆಂಟರ್ ಕಂಸೋಲ್‍‍ನಲ್ಲಿ ಹಲವು ಕಬ್ಬಿ ಸ್ಫೇಸ್‍‍ಗಳಿವೆ. ನೆಕ್ಸಾನ್ ಇವಿ ಆರ್, ಎನ್, ಡಿ ಹಾಗೂ ಎಸ್ ಎಂಬ ಸರ್ಕ್ಯುಲರ್ ಡಯಲ್‍‍ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನಾವು ಟೆಸ್ಟ್ ಡ್ರೈವ್ ಮಾಡಿದ ನೆಕ್ಸಾನ್ ಇವಿ ಸೀಟುಗಳಲ್ಲಿ ಫ್ಯಾಬ್ರಿಕ್ ಅಪ್‍‍ಹೋಲೆಸ್ಟರಿಗಳನ್ನು ಹೊಂದಿತ್ತು. ಟಾಟಾ ಮೋಟಾರ್ಸ್ ಟಾಪ್ ಮಾದರಿಯ ನೆಕ್ಸಾನ್ ಇವಿಯಲ್ಲಿ ಲೆದರೇಟ್ ಸೀಟುಗಳನ್ನು ನೀಡಲಿದೆ. ಈ ಸೀಟುಗಳು ಆರಾಮದಾಯಕವಾಗಿದ್ದು, ಕುಷನ್‍ ಅನುಭವವನ್ನು ನೀಡುತ್ತವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಇವಿಯ ಮುಂಭಾಗದಲ್ಲಿ ಡ್ರೈವರ್ ಹಾಗೂ ಮುಂಭಾಗದ ಪ್ರಯಾಣಿಕರಿಗಾಗಿ ಮ್ಯಾನುವಲ್ ಆಗಿ ಅಡ್ಜಸ್ಟ್ ಮಾಡಬಹುದಾದ ಸೀಟುಗಳನ್ನು ನೀಡಲಾಗಿದೆ. ಇವುಗಳನ್ನು ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಲು ಸಾಧ್ಯವಿಲ್ಲ. ಈ ಸೀಟುಗಳನ್ನು ಡ್ರೈವ್ ಮಾಡಲು ಹಾಗೂ ಕೂರಲು ಸುಲಭವಾಗಿ ಸ್ಲೈಡ್ ಮಾಡಬಹುದಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಿಲ್ಟ್ ಸ್ಟಿಯರಿಂಗ್ ಅಡ್ಜಸ್ಟಬಿಲಿಟಿ ಹೊಂದಿರುವ ಡ್ರೈವರ್ ಸೀಟ್ ಆರಾಮದಾಯಕವಾದ ಡ್ರೈವಿಂಗ್ ಡೈನಾಮಿಕ್ಸ್ ನೀಡುತ್ತದೆ. ಸ್ಟೀಯರಿಂಗ್‍‍ಗಳನ್ನು ಟಿಲ್ಟ್ ಅಡ್ಜಸ್ಟಬಿಲಿಟಿಯೊಂದಿಗೆ ಮಾತ್ರ ನೀಡಲಾಗುತ್ತದೆ. ಟಾಪ್ ಎಂಡ್ ಮಾದರಿಯಲ್ಲಿಯೂ ಸಹ ಟೆಲಿಸ್ಕೋಪಿಕ್ ನೀಡಲಾಗುವುದಿಲ್ಲ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿಯಲ್ಲಿರುವ ಹಿಂಭಾಗದ ಸೀಟುಗಳು ಪ್ಲಶ್ ಆಗಿದ್ದು, ಅತ್ಯುತ್ತಮವಾದ ಕುಷನ್‍‍ಗಳನ್ನು ಹೊಂದಿವೆ. ಹೆಡ್ ಹಾಗೂ ಕ್ನೀ ರೂಂಗಳಿಗಾಗಿ ಸಾಕಷ್ಟು ಸ್ಥಳವಕಾಶ ನೀಡಲಾಗಿದೆ. ಈ ಇವಿಯ ಮಧ್ಯದಲ್ಲಿ ಬಂಪ್‍‍ಯಿದ್ದರೂ ಸಹ ಮೂವರು ಪ್ರಯಾಣಿಕರು ಕೆಲವು ದೂರದವರೆಗೆ ಚಲಿಸಬಹುದು. ಹಿಂಭಾಗದ ಸೀಟುಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗಾಗಿ ಸೆಂಟ್ರಲ್ ಆರ್ಮ್‍‍ರೆಸ್ಟ್ ನೀಡಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿ ಸುತ್ತಲೂ ಹಲವು ಕಬ್ಬಿ ಸ್ಪೇಸ್ ಹಾಗೂ ಸ್ಟೋರೇಜ್ ಹೊಂದಿದೆ. ಈ ಕಾರಿನಲ್ಲಿ ದೊಡ್ಡ ಗ್ಲೌವ್‍‍ಬಾಕ್ಸ್, ನಾಲ್ಕು ಡೋರ್‍‍‍ಗಳಿಗಾಗಿ ಹೆಚ್ಚಿನ ಸ್ಟೋರೇಜ್ ಸ್ಫೇಸ್ ನೀಡಲಾಗಿದೆ. ನೆಕ್ಸಾನ್ ಇವಿಯ ಬೂಟ್ ಸಾಮರ್ಥ್ಯವು 350 ಲೀಟರ್‍‍ಗಳಾಗಿದೆ. ಹಿಂಬದಿಯ ಸೀಟುಗಳನ್ನು 60:40 ಅನುಪಾತದಲ್ಲಿ ಫೋಲ್ಡ್ ಮಾಡಿದರೆ ಇನ್ನು ಹೆಚ್ಚಿನ ಸ್ಪೇಸ್ ಪಡೆಯಬಹುದು.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಮಾದರಿಗಳು, ಫೀಚರ್ ಹಾಗೂ ಸುರಕ್ಷತೆ

ನೆಕ್ಸಾನ್ ಇವಿಯನ್ನು ಎಕ್ಸ್ ಎಂ, ಎಕ್ಸ್ ಝಡ್ ಪ್ಲಸ್ ಹಾಗೂ ಎಕ್ಸ್ ಝಡ್‍ ಪ್ಲಸ್ ಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲ್ಲಾ ಮಾದರಿಗಳು ಹಲವು ಫೀಚರ್, ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿಯಲ್ಲಿ ನೀಡಲಾಗುವ ಕೆಲವು ಪ್ರಮುಖ ಫೀಚರ್‍‍ಗಳೆಂದರೆ:

ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ಹೊಂದಿರುವ ಕೀಲೆಸ್ ಎಂಟ್ರಿ

ಮಲ್ಟಿಪಲ್ ಡ್ರೈವಿಂಗ್ ಮೋಡ್

ಎಲೆಕ್ಟ್ರಿಕ್ ಟೇಲ್‍‍ಗೇಟ್ ಒಪನರ್

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

7 ಇಂಚಿನ ಟಚ್‍‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ

ಕನೆಕ್ಟೆಡ್ ಕಾರ್ ಟೆಕ್ನಾಲಜಿ

16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್

ಎಲೆಕ್ಟ್ರಿಕ್ ಸನ್‍‍ರೂಫ್

ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್

ಲೆದರೇಟ್ ಸೀಟ್

ಆಟೋಮ್ಯಾಟಿಕ್ ರೇನ್ ವೈಪರ್

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಇವಿಯಲ್ಲಿರುವ ಸುರಕ್ಷತಾ ಫೀಚರ್‍‍ಗಳೆಂದರೆ:

ಡ್ಯುಯಲ್ ಏರ್‍‍ಬ್ಯಾಗ್

ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್

ಹಿಲ್ ಅಸೆಂಟ್ ಅಸಿಸ್ಟ್

ಹಿಲ್ ಡಿಸೆಂಟ್ ಅಸಿಸ್ಟ್

ರಿವರ್ಸ್ ಪಾರ್ಕಿಂಗ್ ಕ್ಯಾಮರಾ

ಸೀಟ್ ಬೆಲ್ಟ್ ರಿಮ್ಯಾಂಡರ್

ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್

ಪೆಡೆಸ್ಟ್ರಿಯನ್ ಪ್ರೊಟೆಕ್ಷನ್

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಪರ್ಫಾಮೆನ್ಸ್

ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಗಾಗಿ ಗಮನಸೆಳೆಯುವ ಎಲೆಕ್ಟ್ರಿಕ್ ಎಸ್‍‍ಯುವಿಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮವಹಿಸಿದೆ. ನೆಕ್ಸಾನ್ ಇವಿಯಲ್ಲಿ ಟಾಟಾ ಮೋಟಾರ್ಸ್‍‍ನ ಜಿಪ್‍‍ಟ್ರಾನ್ ಪವರ್‍‍ಟ್ರೇನ್ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಪವರ್‍‍ಟ್ರೇನ್‍‍ಗೆ 30.2 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ 95 ಕಿ.ವ್ಯಾನ ಎಲೆಕ್ಟ್ರಿಕ್ ಮೋಟರ್ ಜೋಡಿಸಲಾಗಿದೆ. ಈ ಮೋಟರ್ 128 ಬಿ‍ಹೆಚ್‍‍ಪಿ ಪವರ್ ಹಾಗೂ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿ 0-100 ಕಿ.ಮೀ ವೇಗವನ್ನು ಕೇವಲ 9.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 122 ಕಿ.ಮೀಗಳಿಗೆ ನಿಯಂತ್ರಿಸಲಾಗಿದೆ. ಎ‍ಆರ್‍ಎ‍ಐ ಪ್ರಮಾಣಪತ್ರದಂತೆ ನೆಕ್ಸಾನ್ ಇವಿಯಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 312 ಕಿ.ಮೀ ಚಲಿಸುತ್ತದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿಯ ಜೊತೆಗೆ ಹೋಂ ಚಾರ್ಜಿಂಗ್ ಸಿಸ್ಟಂ ನೀಡಲಾಗುವುದು. ಇದರಿಂದ 8 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಫಾಸ್ಟ್ ಚಾರ್ಜರ್‍‍ಗಳಿಂದ ಬ್ಯಾಟರಿಯನ್ನು ಒಂದು ಗಂಟೆಯಲ್ಲಿ 80%ನಷ್ಟು ಚಾರ್ಜ್ ಮಾಡಬಹುದು.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿ ಆಕ್ಸೆಲೆರೇಷನ್ ಪೆಡಲ್ ಅನ್ನು ಪ್ರೆಸ್ ಮಾಡಿದ ತಕ್ಷಣವೇ ಪವರ್ ಉತ್ಪಾದಿಸುತ್ತದೆ. ಎಲೆಕ್ಟ್ರಿಕ್ ಎಸ್‍‍ಯುವಿಯಾದ ಕಾರಣ ಟಾರ್ಕ್ ಕೂಡ ತಕ್ಷಣಕ್ಕೆ ಉತ್ಪಾದನೆಯಾಗುತ್ತದೆ. ಟಾಟಾ ನೆಕ್ಸಾನ್ ಇವಿ ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಎರಡು ಡ್ರೈವಿಂಗ್ ಮೋಡ್‍ಗಳನ್ನು ಹೊಂದಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನಾರ್ಮಲ್ ಮೋಡ್‍‍ನಲ್ಲಿ ಪವರ್ ಡೆಲಿವರಿಯು ಹೆಚ್ಚು ಉತ್ಪಾದನೆಯಾದಾಗ ಆಕ್ಸೆ ಲೆರೇಷನ್ ಮ್ಯೂಟ್ ಆಗುತ್ತದೆ. ಸ್ಪೋರ್ಟ್ ಮೋಡ್‍ನಲ್ಲಿ ಡ್ರೈವ್ ಮಾಡುವಾಗ ತಿರುವಿನಲ್ಲಿ ತ್ವರಿತವಾಗಿ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ನೆಕ್ಸಾನ್ ಇವಿ ಕಾರಿನ ಪವರ್ ಡೆಲಿವರಿಯನ್ನು ಟಾಟಾ ಮೋಟಾರ್ಸ್ ಉತ್ತಮವಾಗಿ ಅಭಿವೃದ್ದಿಪಡಿಸಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಎಸ್‍‍ಯುವಿಯ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಕಾರಿನ ಕ್ಯಾಬಿನ್ ಕೆಳಗೆ ಇರಿಸಲಾಗಿದೆ. ಟಾಟಾ ಮೋಟಾರ್ಸ್ ತನ್ನ ಸರಣಿಯಲ್ಲಿರುವ ಇತರ ಕಾರುಗಳಿಗೆ ಹೋಲಿಸಿದರೆ ಈ ಕಾರಿನಲ್ಲಿ ಸೆಂಟರ್ ಗ್ರಾವಿಟಿಯನ್ನು 40 ಎಂಎಂ ಅಷ್ಟು ಕಡಿಮೆಗೊಳಿಸಿದೆ. ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು 209ಎಂಎಂ ನಿಂದ 205ಎಂಎಂಗೆ ಇಳಿಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ಕಾರಿನ ಪ್ರತಿಸ್ಪರ್ಥಿಗಳಿಗೆ ಹೋಲಿಸಿದರೆ ಹೆಚ್ಚು ಪ್ರಭಾವಶಾಲಿಯಾಗಿದೆ. ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಸ್ಟೀಲ್ ಐಪಿ 67 ಸರ್ಟಿಫೈಡ್ ಕೇಸಿಂಗ್ ಅನ್ನು ಹೊಂದಿದೆ. ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕರಿಗಾಗಿ ಯಾವುದೇ ಅಪಾಯವಿಲ್ಲದ ಬ್ಯಾಟರಿಗಳನ್ನು ಸುರಕ್ಷಿತವಾಗಿ ಅಭಿವೃದ್ದಿಪಡಿಸಿದೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಲು ಹಲವಾರು ಕ್ರ್ಯಾಶ್ ಟೆಸ್ಟ್ ಗಳನ್ನು ಸಹ ನಡೆಸಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಹ್ರ್ಯಾಂಡ್ಲಿಂಗ್ ಅಂಶವನ್ನು ನೋಡುವುದಾದರೆ ಟಾಟಾ ನೆಕ್ಸಾನ್ ಇವಿ ನಿಖರವಾದ ಹಾಗೂ ಶಾರ್ಪ್ ಆದ ಸ್ಟೀಯರಿಂಗ್ ಅನ್ನು ಹೊಂದಿದೆ. ಸ್ಟೀಯರಿಂಗ್ ವ್ಹೀಲ್ ಉತ್ತಮ ಪ್ರತಿಕ್ರಿಯೆಯಿಂದ ಕೂಡಿದೆ. ವಿಶೇಷವಾಗಿ ಹೆದ್ಡಾರಿಯಲ್ಲಿ ಹೆಚ್ಚಿನ ವೇಗದಲ್ಲಿ ಹೋಗುವಾಗ ಅಥವಾ ನಗರದಲ್ಲಿ ಡ್ರೈವ್ ಮಾಡುವಾಗ ಉತ್ತಮ ಕಂಫರ್ಟ್ ಅನ್ನು ನೀಡುತ್ತದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟ್ರಾಫಿಕ್ ಜಾಮ್ ಆದ ಸಂದರ್ಭದಲ್ಲಿ ಕಾರ್ ಅನ್ನು ಸುಲಭವಾಗಿ ತಿರುಗಿಸಲು ಈ ಸ್ಟೀಯರಿಂಗ್ ಹೆಚ್ಚು ಸಹಕಾರಿಯಾಗಿದೆ. ಲೋ ಗ್ರಾವಿಟಿ ನೆಕ್ಸಾನ್ ಇವಿಯು ಕಾರ್ ಸ್ಟೇಬಲ್ ಆಗಿರಲು ಸಹಾಯವಾಗಿದೆ. ವೇಗವಾಗಿ ಕಾರು ಡ್ರೈವ್ ಮಾಡುವಾಗ ಮತ್ತು ತಿರುವಿನಲ್ಲಿ ಇದರ ಬಾಡಿ ರೋಲ್ ಸ್ವಲ್ಪ ಇದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಇವಿ ಹೈವೆಗಳಿಗೆ ಹೆಚ್ಚು ಸೂಕ್ತವಾಗಿದೆ. ಗಟ್ಟಿಯಾದ ಸಸ್ಪೆಂಷನ್‍‍ನಿಂದಾಗಿ ನಗರದೊಳಗೆ ಸ್ವಲ್ಪ ಜರ್ಕಿ ಎಂದು ಎನಿಸುತ್ತದೆ. ಎಲೆಕ್ಟ್ರಿಕ್ ಎಸ್‍‍ಯುವಿಯ ಬ್ರೇಕಿಂಗ್ ಅತ್ಯುತ್ತಮವಾಗಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳಿದ್ದರೆ, ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳಿವೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಅಗಿ ಅಳವಡಿಸಲಾಗಿದೆ. ಈ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಉತ್ತಮವಾಗಿ ಅಳವಡಿಸಲಾಗಿದೆ. ಟಾಟಾ ನೆಕ್ಸಾನ್ ಇವಿಯಲ್ಲಿರುವ ಎನ್‍‍ವಿ‍ಹೆಚ್ ಲೆವಲ್ ಅಕರ್ಷಕವಾಗಿದ್ದು, ಟಯರ್‍‍ಗಳಿಂದ ಯಾವುದೇ ಶಬ್ದವುಂಟಾಗುವುದಿಲ್ಲ. ಟಾಟಾ ಮೋಟಾರ್ಸ್ ಮೋಟರ್‍‍ಗಳ ಎಲೆಕ್ಟ್ರಿಕ್ ವೈನಿಂಗ್ ಅನ್ನು ಮರೆಮಾಚುವಲ್ಲಿ ಯಶಸ್ವಿಯಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಇವಿ ಬೆಲೆ, ಬಣ್ಣಗಳು ಹಾಗೂ ಲಭ್ಯತೆ

ಟಾಟಾ ನೆಕ್ಸಾನ್ ಇವಿಯನ್ನು ಟೀಲ್ ಬ್ಲೂ, ಗ್ಲೇಸಿಯರ್ ವೈಟ್ ಹಾಗೂ ಮೂನ್‌ಲಿಟ್ ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಟಾಟಾ ಮೋಟಾರ್ಸ್, ನೆಕ್ಸಾನ್ ಇವಿಯ ನಿಖರವಾದ ಬೆಲೆಯನ್ನು ಇನ್ನೂ ಘೋಷಣೆ ಮಾಡಿಲ್ಲ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಟಾಟಾ ನೆಕ್ಸಾನ್ ಇವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.15 ಲಕ್ಷದಿಂದ 17 ಲಕ್ಷಗಳಾಗುವ ಸಾಧ್ಯತೆಗಳಿವೆ. ಟಾಟಾ ನೆಕ್ಸಾನ್ ಇವಿಯನ್ನು ಬಿಡುಗಡೆಗೊಳಿಸಿದ ಬಳಿಕ ದೇಶಾದ್ಯಂತ ಮಾರಾಟ ಮಾಡಲಾಗುವುದು. ಭಾರತದ ಪ್ರಮುಖ ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಲಾಗಿದೆ. ಅವರ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ಚಾರ್ಜಿಂಗ್ ಸ್ಟೇಷನ್ ಬಗ್ಗೆ ಮಾಹಿತಿ ನೀಡಲಾಗಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಪ್ರತಿಸ್ಪರ್ಧಿ ಮತ್ತು ಫ್ಯಾಕ್ಟ್ ಚೆಕ್

ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಮಾರಾಟವಾಗುವ ಮೊದಲ ಕಾಂಪ್ಯಾಕ್ಟ್ ಎಸ್‍‍ಯುವಿಯಾಗಿದೆ. ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ ಎಸ್‍‍ಯುವಿಗೆ ಯಾವುದೇ ನೇರ ಪ್ರತಿ ಸ್ಪರ್ಧಿಗಳಿಲ್ಲ. ಆದರೆ ಎಲೆಕ್ಟ್ರಿಕ್ ಕಾರುಗಳ ಸೆಗ್‍‍ಮೆಂಟಿನಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಹಾಗೂ ಬಿಡುಗಡೆಗೆ ಸಿದ್ಧವಿರುವ ಎಂಝಡ್‍‍ಎಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ನೆಕ್ಸಾನ್ ಇವಿ ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಎಸ್‍‍ಯುವಿಯಾಗಿದೆ. ಕಂಪನಿಯು ಈಗಾಗಲೇ ಟಿಗೋರ್ ಕಾಂಪ್ಯಾಕ್ಟ್-ಸೆಡಾನ್ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನೆಕ್ಸಾನ್ ಇವಿ ಹೊಸ ಜಿಪ್‍‍ಟ್ರಾನ್ ಟೆಕ್ನಾಲಜಿಯನ್ನು ಹೊಂದಿರುವ ಮೊದಲ ವಾಹನವಾಗಿದೆ. ಹೊಸ ಎಂಜಿನ್ ಅತ್ಯಂತ ಪ್ರಭಾವಶಾಲಿಯಾಗಿದ್ದು, ಡ್ರೈವ್ ಮಾಡುವಾಗ ಸಾಕಷ್ಟು ಮನರಂಜನೆಯನ್ನು ನೀಡುತ್ತದೆ.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ನಗರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಟಾಟಾ ನೆಕ್ಸಾನ್ ಇವಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ಎಲೆಕ್ಟ್ರಿಕ್ ಎಸ್‍‍ಯುವಿ ಉತ್ತಮವಾದ ಪರ್ಫಾಮೆನ್ಸ್ ನೀಡುತ್ತದೆ. ಈ ಎಸ್‍ಯುವಿಯನ್ನು ಆಕರ್ಷಕ ಬೆಲೆಯಲ್ಲಿ ಮಾರಾಟ ಮಾಡಲಾಗುವುದು.

ಫಸ್ಟ್ ಡ್ರೈವ್‍ ರಿವ್ಯೂ: ಬಿಡುಗಡೆಗೂ ಮುನ್ನವೇ ಗಮನಸೆಳೆದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಕಾರಿನ ಪ್ಲಸ್ ಪಾಯಿಂಟ್

ಸ್ಪೋರ್ಟ್ಸ್ ಪವರ್‍‍ನಲ್ಲಿ ಉತ್ತಮ ಪವರ್

ಆರಾಮದಾಯಕವಾದ ಹಿಂದಿನ ಸೀಟ್

ರಿಜನರೇಟಿವ್ ಬ್ರೇಕ್ ಸಿಸ್ಟಂ

ನೆಗೆಟಿವ್ ಪಾಯಿಂಟ್

ನಗರದಲ್ಲಿ ಸಂಚಾರಿಸುವಾಗ ಸಸ್ಪೆಂಷನ್ ಸೆಟ್‍ಅಪ್ ಹೆಚ್ಚು ಗಟ್ಟಿಯಾಗಿರುತ್ತದೆ.

Most Read Articles

Kannada
English summary
Tata Nexon EV Review (First Drive): India’s First All-Electric Compact-SUV. Read in Kannada.
Story first published: Tuesday, January 21, 2020, 15:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X