ಟಾಟಾ ಸಫಾರಿ ಸ್ಟ್ರೋಮ್; ದಿ ರಿಯಲ್ ಎಸ್‌ಯುವಿ ರಿವ್ಯೂ

Written By:

ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ ಬೆಂಗಳೂರಿನಲ್ಲಿ ಎಸ್‌ಯುವಿ ದೈತ್ಯ 'ಟಾಟಾ ಸಫಾರಿ ಸ್ಟ್ರೋಮ್' ಕಾರನ್ನು ಬಿಡುಗಡೆಗೊಳಿಸಿತ್ತು. ವಿಶಾಲವಾದ ಸ್ಥಳಾವಕಾಶ ಹಾಗೂ ಸುಂದರ ನೋಟ ಹೊಂದಿರುವ ಟಾಟಾ ಸಫಾರಿ ಸ್ಟ್ರೋಮ್ ಎಸ್‌ಯುವಿ ಕ್ಷೇತ್ರದ ನೈಜತೆಯನ್ನು ಹೆಚ್ಚಿಸಿದೆ.

ಟಾಟಾ ಸಫಾರಿ ಸ್ಟ್ರೋಮ್ ಬಿಡುಗಡೆ ಮೂಲಕ ದೇಶಕ್ಕೆ ಮೊದಲ ಬಾರಿಗೆ ಎಸ್‌ಯುವಿ ಕಾರನ್ನು ಪರಿಚಯಿಸಿದ್ದ ಟಾಟಾ ಮೋಟಾರ್ಸ್ ನಷ್ಟವಾಗಿರುವ ಸ್ಥಾನಮಾನವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಇದರಿಂದಾಗಿಯೇ ಸುಲಭ ಚಾಲನೆ ತಕ್ಕಂತೆ ಟಾಟಾ ವಾಹನ ರೂಪಗೊಂಡಿದೆ.

ಟಾಟಾ ಮೋಟಾರ್ಸ್ ಬಗ್ಗೆ ಒಂದಿಷ್ಟು...

ವಿಶ್ವದ ಪ್ರತಿಷ್ಠಿತ ವಾಹನ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ 2011-12ನೇ ಸಾಲಿನಲ್ಲಿ ಒಟ್ಟು 1.65,654 ಕೋಟಿ ರೂ. ಆದಾಯ ಗಳಿಸಿತ್ತು. ಅಂಗ ಸಂಸ್ಥೆಗಳು, ಸಹವರ್ತಿಗಳ ಮೂಲಕ ಟಾಟಾ ಮೋಟಾರ್ಸ್ ಇಂಗ್ಲೆಂಡ್, ದಕ್ಷಿಣ ಕೊರಿಯಾ, ಥೈಲಾಂಡ್ ಮತ್ತು ಸ್ಪೇನ್‌ಗಳಲ್ಲಿ ಅಸ್ತಿತ್ವ ಹೊಂದಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿಯೊಂದಿಗೆ ಉದ್ಯಮದ ವ್ಯಾಪ್ತಿ ಹೆಚ್ಚಿಸಿದೆ. ಅಲ್ಲದೆ ಫಿಯೆಟ್ ಇಂಡಿಯಾ ಜತೆಗೂ ಸಹಭಾಗಿತ್ವ ಹೊಂದಿದೆ. 7.9 ದಶಲಕ್ಷ ಟಾಟಾ ವಾಹನಗಳು ದೇಶದ ರಸ್ತೆಯಲ್ಲಿ ಓಡಾಡುತ್ತಿವೆ. ವಾಣಿಜ್ಯ ವಾಹನಗಳಲ್ಲಿ ಸಂಸ್ಥೆ ದೇಶಿಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿದೆ. ಪ್ರಯಾಣಿಕ ವಾಹನಗಳಲ್ಲಿ ಪ್ರತಿಷ್ಠಿತ ಮೂರು ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ವಿಶ್ವದ 4ನೇ ಬೃಹತ್ ಟ್ರಕ್ ಉತ್ಪಾದಕ ಹಾಗೂ ದ್ವಿತೀಯ ಬೃಹತ್ ಬಸ್ ಉತ್ಪಾದಕ ಸಂಸ್ಥೆ ಕೂಡಾ ಹೌದು. ಟಾಟಾ ಕಾರು, ಬಸ್ಸು, ಟ್ರಕ್‌ಗಳು ಯುರೋಪ್, ಆಫ್ರಿಕಾ, ಏಷ್ಯಾ ಹಾಗೂ ಅಮೆರಿಕಗಳಲ್ಲಿ ಮಾರಾಟವಾಗುತ್ತಿವೆ.

ನಿಜಕ್ಕೂ ಟಾಟಾ ಸಫಾರಿ ಸ್ಟ್ರೋಮ್ ಮಾರುಕಟ್ಟೆಯಲ್ಲಿರುವ ಇತರ ಸ್ಪರ್ಧಾತ್ಮಕ ಎಸ್‌‍ಯುವಿಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಈ ರಿವ್ಯೂ ಮೂಲಕ ಡ್ರೈವ್ ಸ್ಪಾರ್ಕ್ ತುಲನೆ ಮಾಡಲಿದೆ. ಇದಕ್ಕಾಗಿ ಫೋಟೊ ಫೀಚರ್ ಕ್ಲಿಕ್ಕಿಸುತ್ತಾ ಸಾಗಿರಿ...

ಟಾಟಾ ಸಫಾರಿ ಸ್ಟ್ರೋಮ್ ಆರಂಭಿಕ ದರ: 9.95 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಟಾಟಾ ಸಫಾರಿ ಸ್ಟ್ರೋಮ್ ಜನಪ್ರಿಯತೆ ಬಗ್ಗೆ ಹಲವಾರು ಪ್ರಶ್ನೆಗಳಿದ್ದವು. ಆದರೆ ಇದು ದೇಶಿಯವಾಗಿ ನಿರ್ಮಿಸಲ್ಪಟ್ಟ ಮೊದಲ ಎಸ್‌ಯುವಿ ಎಂಬುದನ್ನು ನಾವು ಮರೆಯಬಾರದು. ಸುಮಾರು ಒಂದು ದಶಕದ ಪರಂಪರೆ ಹೊಂದಿರುವ ಟಾಟಾ ಸಫಾರಿ ಸ್ಟೈಲಿಂಗ್, ನಿರ್ವಹಣೆ ಹಾಗೂ ಆರಾಮದಾಯಕೆ ಹೊಂದಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

4*2 LX- 9.95 ಲಕ್ಷ ರು.

4*2 EX- 10.85 ಲಕ್ಷ ರು.

4*2 VX- 12.58 ಲಕ್ಷ ರು.

4*4 VX INR- 13.80 ಲಕ್ಷ ರು.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ರೋಡ್ ಡಿಸೈನ್ ಹಾಗೂ ಡೈಮಷನ್ ಕಾರಿನ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತದೆ. ನೀವೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಹೀಂದ್ರ ಚೀತಾ (ಎಕ್ಸ್‌ಯುವಿ500) ಜತೆ ರೋಡ್ ಉಪಸ್ಥಿತಿ ಬಗ್ಗೆ ಹೋಲಿಕೆ ಮಾಡಿದರೆ ಎಕ್ಸ್‌ಯುವಿ ಮಿಗಿಲಾಗಿ ಕಾಣಿಸುತ್ತವೆ. ಹೌದು ವಿನ್ಯಾಸವನ್ನು ಪರಿಗಣಿಸಿದ್ದಲ್ಲಿ ಎಸ್‍ಯುವಿ ವಿನ್ಯಾಸ ಹೊಂದಿರುವ ಟಾಟಾ ಸಫಾರಿ ಸ್ಟ್ರೋಮ್ ಹಿನ್ನಡೆ ಅನುಭವಿಸುತ್ತದೆ. ಆದರೆ ಸಾಂಪ್ರದಾಯಿಕ ವಿನ್ಯಾಸ ಪರಿಗಣಿಸುವುದಾದರೆ ಖಂಡಿತ ಸಫಾರಿ ನಿಮ್ಮ ಮನ ಗೆಲ್ಲಲಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ನೋಟ ಮತ್ತು ಶೈಲಿ

ಟಾಟಾ ಸಫಾರಿ ವಾಹನ ಎದುರುಗಡೆ ಗ್ರಿಲ್ ಹಾಗೂ ಹೆಡ್ ಲ್ಯಾಂಪ್‌ಗಳನ್ನು ಹೊಂದಿದೆ. ಬಾನೆಟ್ ಬೋಟ್ಸ್‌ಗಳು ಹೆಚ್ಚಿನ ಬಲವನ್ನು ದ್ವಿಗುಣಗೊಳಿಸುವ ಮೂಲಕ ಕ್ರೀಡಾ ಸ್ಪೂರ್ತಿ ಹೆಚ್ಚಿಸಲು ಸಹಾಯಕವಾಗಿದೆ. ಡಿಸೈನ್ ಸ್ಪಾಯ್ಲರ್, ಡೋರ್ ಹ್ಯಾಂಡಲ್ ಹಾಗೂ ಪೂಟ್ ಸ್ಟೆಪ್ ಅತ್ಯಂತ ಸರಳವಾಗಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಹೊಸ ಟಾಟಾ ಸಫಾರಿ 0-100 ಕೀ. ಮೀ ವೇಗವನ್ನು ಕೇವಲ 15 ಸೆಕೆಂಡುಗಳಲ್ಲಿ ತಲುಪುತ್ತದೆ. 2.2 ಲೀ ಸಾಮರ್ಥ್ಯದ ವೇರಿಯೆಬಲ್ ಟಬ್ರೈನ್ ತಂತ್ರಜ್ಞಾನ ಹೊಂದಿದ ವೆಕಾರ್ ಎಂಜಿನ್ (VariCOR Engine), 140 ಪಿಎಸ್ ಪವರ್ ಮತ್ತು 320 ಎನ್‌ಎಂ ಟರ್ಕ್ಯೂ ಚಾಲನೆಯನ್ನು ಮತ್ತಷ್ಟು ಸುಲಭವಾಗಿಸಿದೆ. ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಪ್ಲೈ ತಂತ್ರಜ್ಞಾನ ಹೊಂದಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಟಾಟಾ ಸಫಾರಿ ಆಧುನಿಕ ಇಂಟಿರಿಯರ್‌ಗಳ ಲುಕ್ ಹೆಚ್ಚು ಆಕರ್ಷಕವಿಲ್ಲದಿದ್ದರೂ ಸ್ಪರ್ಧಾತ್ಮಕ ದರದ ವಿಚಾರಕ್ಕೆ ಬಂದಾಗ ಈ ಎಸ್‌ಯುವಿ ಉತ್ತಮ ಪ್ಯಾಕೇಜ್ ಆಫರ್ ಮಾಡುತ್ತಿದೆ. ಇದರ ಎಲ್‌ಎಕ್ಸ್, ಇಎಕ್ಸ್ ಹಾಗೂ ವಿಕ್ಸ್ ಮಾದರಿಗಳು ಏಳು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ- ಅರ್ಬನ್ ಬ್ರೊಂಜ್, ಸರ್ಡಿನಿಯ ರೆಡ್, ಪರ್ಲ್ ವೈಟ್, ಪರ್ವ್ ಚಾಂಪೇಂಜ್, ಆಸ್ಟ್ರನ್ ಬ್ಲಾಕ್, ಆರ್ಕಿಟಿಕ್ ವೈಟ್ ಮತ್ತು ಆರ್ಕಿಟಿಕ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ವಿಕೆಂಡ್ ಡ್ರೈವ್ ಖಂಡಿತವಾಗಿಯೂ ಸಫಾರಿ ಸ್ಟ್ರೋಮ್ ನಿಮ್ಮನ್ನು ಖುಷಿಪಡಿಸಲಿದೆ. ಇನ್ನು ಧೀರ್ಘ ಪಯಣದ ವಿಷಯಕ್ಕೆ ಬಂದಾಗ ಸಫಾರಿ ನಿಮಗೆ ಹೆಚ್ಚಿನ ಆರಾಮದಾಯಕತೆ ನೀಡುತ್ತದೆ. ಇಲ್ಲಿ ಕೊಡಲಾಗಿರುವ ಚಿತ್ರದಿಂದ ಸಫಾರಿ ಲೆಗ್ ರೂಂ ಹಾಗೂ ಹೆಡ್ ರೂಂ ಅನ್ನು ನೀವೇ ತುಲನೆ ಮಾಡಿಕೊಳ್ಳಬಹುದು. ಅಂದರೆ ವಿಶಾಲವಾದ ಸ್ಥಳಾವಕಾಶ ಹೊಂದಿರುವ ಸಫಾರಿ ಸ್ಟ್ರೋಮ್ ಈ ವಿಷಯದಲ್ಲಿ ತನ್ನ ಪ್ರತಿಸ್ಪರ್ಧಿ ಎಕ್ಸ್‌ಯುವಿ 500 ಕಾರನ್ನು ಹಿಂದಿಕ್ಕಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಐಷಾರಾಮಿ ಮತ್ತು ಆರಾಮದಾಯಕ

ವಾಹನದ ಒಳಗೆ ಅತ್ಯಂತ ಭವ್ಯವಾಗಿದ್ದು, ಒಂದು ಕುಟುಂಬಕ್ಕೆ ಸರಿ ಹೊಂದುವಂತೆ ತಯಾರಿಸಲಾಗಿದೆ. ಇದರ ಡ್ಯುಯಲ್ ಎಸಿ ಸೌಲಭ್ಯವು ಹಿಂಬದಿಯ ಪ್ರಯಾಣಿಕರಿಗೂ ಹೆಚ್ಚು ಆರಾಮದಾಯಕ ಸಂಚಾರಕ್ಕೆ ನೆರವು ಮಾಡಲಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಸಫಾರಿ ಸ್ಟ್ರೋಮ್ ಲ್ಯಾಡರ್ ಅನ್ನು ಹೈಡ್ರೋಫಾರ್ಮ್‌ನಿಂದ ತಯಾರಿಸಲಾಗಿದ್ದು, ಹೆಚ್ಚಿನ ಸಾಮರ್ಥ್ಯ ಮತ್ತು ಉತ್ತಮ ಸಂಯೋಜನೆಯಿಂದ ಹೊಂದಿದ್ದು ವಾಹನದ ತೂಕವನ್ನು ಕಡಿಮೆಗೊಳಿಸಿದೆ. ಸಫಾರಿ ವಾಹನ 5.4 ಮೀ.ಗಳಷ್ಟು ಟರ್ನಿಂಗ್ ಸರ್ಕಲ್ ರೇಡಿಯಸ್ ಒಳಗೊಂಡಿದ್ದು ಚಾಲನೆ ಮಾಡುವಾಗ ಹಿಡಿತ ಹೊಂದಬಹುದಾಗಿದೆ. ಹೊಸ ರಾಕ್ ಫಿನಿಶಿಂಗ್ ಮತ್ತು ಫಿನಿಯನ್ ಸ್ಟೀರಿಂಗ್ ಆತ್ಮ ವಿಶ್ವಾಸದ ಚಾಲನೆಯ ವೇಗ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಟಾಟಾ ಸಫಾರಿ ಸ್ಟ್ರೋಮ್ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಲಾಗಿದ್ದು, ಎಬಿಎಸ್, ಇಬಿಡಿ ತಂತ್ರಜ್ಞಾನ ಜತೆ ಎಲ್ಲ ನಾಲ್ಕು ಚಕ್ರಗಳಿಗೂ ಹೈಡ್ರಾಲಿಕ್ ಬ್ರೇಕ್‌ಗಳನ್ನು ಆಳವಡಿಸಲಾಗಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಹಾಗೆಯೇ ಹೊಸ instrument cluster ಡ್ರೈವಿಂಗ್ ಸಂದರ್ಭದಲ್ಲಿ ಚಾಲಕನ ನೆರವಿಗೆ ಬರಲಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

IRVM (Inside Rear-View Mirror) ಸೌಲಭ್ಯ ಹೊಂದಿರುವ ಟಾಟಾ ಸಫಾರಿ ಸ್ಟ್ರೋಮ್ ರಿವರ್ಸ್ ಪಾರ್ಕಿಂಗ್ ವ್ಯವಸ್ಥೆಯನ್ನು ಸುಲಭವಾಗಿಸುತ್ತದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಟಾಟಾ ಸಫಾರಿ ವಿಎಕ್ಸ್ 4x4 ಕಾರು ನಾಲ್ಕು ವೀಲ್ ಡ್ರೈವ್ ಆಯ್ಕೆಯಿಂದ ಲಭ್ಯವಿರಲಿದೆ. 14- ಪಿಎಸ್ ಪವರ್ ಹಾಗೂ 320 ಎನ್‌ಎಂ ಟರ್ಕ್ಯೂ ಚಾಲನೆಯನ್ನು ಮತ್ತಷ್ಟು ಮೃದುವಾಗಿಸಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಟಾಟಾ ಸಫಾರಿ ಸ್ಟ್ರೋಮ್ ಹ್ಯಾಂಡ್ ಸ್ಟಿಚ್ ಲೆಥರ್ ಸ್ಟೀರಿಂಗ್ ಹೊಂದಿದೆ. ಹಾಗೆಯೇ ನಿಮ್ಮ ಡ್ರೈವಿಂಗ್ ಸ್ಥಾನಕ್ಕೆ ಅನುಗುಣವಾಗಿ ಸ್ಟೀರಿಂಗ್ ಹೊಂದಾಣಿಕೆ ಮಾಡುವ ಆಯ್ಕೆ ಲಭ್ಯವಿದೆ. ಇದು ದೀರ್ಘ ಪಯಣದ ಸಂದರ್ಭದಲ್ಲಿ ನೆರವಿಗೆ ಬರಲಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಟಾಟಾ ಸಫಾರಿ ಸ್ಟ್ರೋಮ್ ವಾಹನ 5.4 ಮೀ.ಗಳಷ್ಟು ಟರ್ನಿಂಗ್ ಸರ್ಕಲ್ ರೇಡಿಯಸ್ ಒಳಗೊಂಡಿದ್ದು, ಯಾವುದೇ ಇಕ್ಕಟ್ಟಾದ ತಿರುವಿನಲ್ಲೂ ಚಾಲನೆ ಮಾಡುವಾಗ ಹಿಡಿತ ಹೊಂದಬಹುದಾಗಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಇದರ In-Mold Graining (IMG) ತಂತ್ರಜ್ಞಾನ ಹಾಗೂ ಲೆಥರ್ ಸ್ಟೀರಿಂಗ್ ಟಾಟಾ ಸಫಾರಿಗೆ ಐಷಾರಾಮಿ ಲುಕ್ ಪ್ರದಾನ ಮಾಡುತ್ತದೆ. ಒಟ್ಟಾರೆಯಾಗಿ ಹೈ ಕ್ಲಾಸ್ ಲುಕ್ ಹೊಂದಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಗೇರ್ ನಾಬ್ ವೈಶಿಷ್ಟ್ಯವನ್ನು ಟಾಟಾ ಸಫಾರಿ ಹೊಂದಿದೆ. ಚಿತ್ರದ ಮೂಲಕ ಹೆಚ್ಚು ತಿಳಿದುಕೊಳ್ಳಬಹುದು.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ನೀವಿನ್ನು ಆಫ್ ರೋಡಿಂಗ್ ಬಗ್ಗೆ ಉತ್ಸಾಹಿತರಾಗಿದ್ದರೆ ವಿವಿಧ ಭೂಪ್ರದೇಶಗಳಲ್ಲೂ ಸ್ಟ್ರೋಮ್ ಸಫಾರಿ ಸೂಪರ್ ಆಗಿರಲಿದೆ. ಇದರ Double Wishbone Suspension ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗುತ್ತದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಉತ್ತಮ ಟರ್ನಿಂಗ್ ರೇಡಿಯಸ್, ಉತ್ತಮ ಗ್ರೌಂಡ್ ಕ್ಲಿಯರನ್ಸ್ ಹಾಗೂ ಉತ್ತಮ ರೈಡಿಂಗ್ ಗುಣಮಟ್ಟ ಹೊಂದಿರುವ ಟಾಟಾ ಸಫಾರಿ ಸ್ಟ್ರೋಮ್ 4 ವರ್ಷ ಅಥವಾ 100,000 ಕೀ. ಮೀ ವಾರಂಟಿ ಸೌಲಭ್ಯವಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಇವತ್ತಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಟಾಟಾ ಸಫಾರಿ ಸ್ಟ್ರೋಮ್ ರೂಪಿಸಲಾಗಿದೆ. ಇದು ಎಲ್ಲ ವಯೋಮಾನದವರ ಸೂಕ್ತ ಆಯ್ಕೆಯಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ದಿ ರಿಯಲ್ ಎಸ್‌‍ಯುವಿ

ದಿ ರಿಯಲ್ ಎಸ್‌‍ಯುವಿ

ಅಂತಿಮ ತೀರ್ಪು

ನೀವೊಂದು ವೇಳೆ ವಿನ್ಯಾಸಕ್ಕೆ ಹೆಚ್ಚಿನ ಗಮನ ಕೊಡುವುದಿಲ್ಲವಾದ್ದಲ್ಲಿ ಅಂದರೆ ಸಾಂಪ್ರದಾಯಿಕ ಎಸ್‌ಯುವಿ ಸ್ಟೈಲ್ ಬಯಸುವುದಾದ್ದಲ್ಲಿ ಖಂಡಿತವಾಗಿಯೂ ಟಾಟಾ ಸಫಾರಿ ಸ್ಟ್ರೋಮ್ ನಿಮಗೆ ಉತ್ತಮ ಡ್ರೈವಿಂಗ್ ಅನುಭವವನ್ನು ನೀಡಲಿದೆ. ಹಾಗೊಂದು ವೇಳೆ ಉತ್ತಮ ವಿನ್ಯಾಸ ಬಯಸುವುದಾದ್ದಲ್ಲಿ ಈ ಎಸ್‌ಯುವಿಗಿಂತಲೂ ಮಹೀಂದ್ರ ಎಕ್ಸ್‌ಯುವಿ ಸ್ವಲ್ಪ ಮುನ್ನಡೆ ಕಾಯ್ದುಕೊಂಡಿದೆ. ಹಾಗಿದ್ದರೂ ರಿಯಲ್ ಎಸ್‌ಯುವಿ ಟಾಟಾ ಸಫಾರಿ ಖಂಡಿತ ನಿಮ್ಮ ಮನ ಗೆಲ್ಲಲಿದೆ.

English summary
There have been a lot of questions about the Tata Safari Storme. Let's not forget the Tata Safari is India's first indigenous SUV, with a legacy of over a decade. On that note, we take a look at how the Tata Safari Storme holds up in terms of Styling, Performance and Comfort.
Story first published: Friday, January 18, 2013, 9:19 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more