ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

2017ರಲ್ಲಿ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ತಮ್ಮ 8ನೆಯ ತಲೆಮಾರಿನ ಕ್ಯಾಮ್ರಿ ಕಾರನ್ನು ಮಿಚಿಗನ್, ಡೆಟ್ರಾಯ್ಟ್ ನಲ್ಲಿ ನಡೆದ ನಾರ್ಥ್ ಅಮೇರಿಕನ್ ಆಟೋ ಶೋನಲ್ಲಿ ಅನಾವರಣಗೊಳಿಸಲಾಗಿದ್ದು, ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಎಕ್ಸ್ ಶೋರುಂ ಪ್ರಕಾರ ರೂ. 36.95 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಟೊಯೊಟಾ ಸಂಸ್ಥೆಯು ಈ ಬಾರಿ ಹೊಸ ಕ್ಯಾಮ್ರಿ ಕಾರಿನಲ್ಲಿ ಚಾಲಕರಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದ್ದು, ನಮ್ಮ ಡ್ರೈವ್‍ಸ್ಪಾರ್ಕ್ ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ನೀಡಿತು. ಈ ನಿಟ್ಟಿನಲ್ಲಿ ಕ್ಯಾಮ್ರಿ ಹೈಬ್ರಿಡ್ ಕಾರಿನ ಅನುಕೂಲತೆಗಳು ಮತ್ತು ಅನಾನುಕೂಲತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಡಿಸೈನ್ ಮತ್ತು ಶೈಲಿ

ಹೊಸ ಟೊಯೊಟಾ ಕ್ಯಾಮ್ರಿ ಕಾರು ತಮ್ಮ ಹಿಂದಿನ ತಲೆಮಾರಿನ ಕಾರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ. 8ನೆಯ ತಲೆಮಾರಿನ ಕ್ಯಾಮ್ರಿ ಕಾರು ಶಾರ್ಪ್ ಲುಕ್ ಮತ್ತು ಸ್ಪೋರ್ಟಿ ಲುಕ್ ಅನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಫುಲ್ ಎಲ್ಇಡಿ ಡಸ್ಕ್-ಸೆನ್ಸಿಂಗ್ ಹೆಡ್‍ಲ್ಯಾಂಪ್ಸ್ ಅನ್ನು ನೀಡಲಾಗಿದ್ದು, ಜೊತೆಗೆ ಪ್ರೊಜೆಕ್ಟರ್ ಹಾಗು ಡೇ ಟೈಮ್ ರನ್ನಿಂಗ್ ಲೈಟ್ಸ್ ಅನ್ನು ಒದಗಿಸಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಹೆಡ್‍ಲ್ಯಾಂಪ್‍ನ ಮಧ್ಯಭಾಗದಲ್ಲಿ ವಿ-ಆಕಾರದಲ್ಲಿರುವ ಕ್ರೋಮ್ ಗ್ರಿಲ್ ಅನ್ನು ಮತ್ತು ಟೊಯೊಟಾ ಸಂಸ್ಥೆಯ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ. ಮುಂಭಾಗದ ಬಂಪರ್ ಅನ್ನು ಮರುವಿನ್ಯಾಸ ಮಾಡಲಾಗಿದ್ದು, ಏರ್ ಡ್ಯಾಮ್, ಇಂಟಿಗ್ರೇಟೆಡ್ ಫಾಗ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಹಾಗು ಸ್ಕಲ್ಪ್ಟೆಡ್ ಬಾನೆಟ್ ಕಾರಿಗೆ ಸ್ಪೋರ್ಟಿ ಲುಕ್ ನೀಡುವಲ್ಲಿ ಸಹಾಯಕವಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದ್ರೆ ಎಲ್ಲಾ ಐಷಾರಾಮಿ ಸೆಡಾನ್ ಕಾರುಗಳಲ್ಲಿ ಕಾಣಬಹುದಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೈಬ್ರಿಡ್ ಎಂಬ ಬ್ಯಾಡ್ಜಿಂಗ್ ಅನ್ನು ಕಾರಿನ ಬಾಗಿಲಿಗಳು ಮತ್ತು ಡೋರ್ ಹ್ಯಾಂಡಲ್‍ಗಳ ಮೇಲೆ ನೀಡಲಾಗಿದೆ. ಆಕರ್ಷಕವಾದ ಒಆರ್‍‍ವಿಎಂ ಅನ್ನು ಸಹ ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಕ್ಯಾಮ್ರಿ ಕಾರಿನ ಹಿಂಭಾಗದಲ್ಲಿ ಹಿಂದಿನ ತಲೆಮಾರಿನ ಕಾರಿಗಿಂತಲೂ ಗುರುತರ ಬದಲಾವಣೆಯನ್ನು ಪಡೆದುಕೊಂಡಿದ್ದು, ವ್ರಾಪ್ ಅರೌಂಡ್ ಟೈಲ್‍ಲ್ಯಾಂಪ್ಸ್, ಫುಲ್ ಎಲ್ಇಡಿ ಯುನಿಟ್, ಕ್ಯಾಮ್ರಿ ಬ್ಯಾಡ್ಜಿಂಗ್ ಕೆಳಭಾಗದಲ್ಲಿ ರಿಯರ್ ಕ್ಯಾಮೆರಾವನ್ನು ನೀಡಲಾಗಿದೆ. ಇವುಗಳಲ್ಲದೇ ಟೊಯೊಟಾ ಬ್ಯಾಡ್ಜಿಂಗ್, ಹೈಬ್ರಿಡ್ ಲೊಗೊ, ಕ್ರೋಮ್ ಎಕ್ಸಾಸ್ಟ್ ಟಿಪ್ ಹಾಗು ಹೊಸ ಬಂಪರ್ ಅನ್ನು ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಕಾಕ್‍ಪಿಟ್

ಕ್ಯಾಮ್ರಿ ಹೈಬ್ರಿಡ್ ಕಾರಿನ ಒಳಭಾಗದಲ್ಲಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವವನ್ನು ನೀಡಲು ಕಪ್ಪು ಮತ್ತು ವಿಶೇಷವಾದ ಬಣ್ಣದಿಂದ ಸಜುಗೊಳಿಸಲಾಗಿದೆ. ದೊಡ್ಡ ಬದಲಾವಣೇ ಎಂದರೆ ಈ ಕಾರಿನಲ್ಲಿ ವೈ-ಆಕಾರದಲ್ಲಿರುವ ಟ್ರಿ-ಲೇಯರ್ಡ್ ಡ್ಯಾಶ್‍‍ಬೋರ್ಡ್ ಅನ್ನು ನೀಡಲಾಗಿದೆ. ಡ್ಯಾಶ್‍‍ಬೋರ್ಡ್‍ನ ಮೇಲ್ಭಾಗದಲ್ಲಿ ಸಾಫ್ಟ್ ಟಚ್ ಪ್ಲಾಸ್ಟಿಕ್ ಅನ್ನು ನೀಡಲಾಗಿದ್ದು, ಆನಿಕ್ಸ್ ಗಾರ್ನಿಷ್ ಮೆಟಾಲಿಕ್ ಸೆಪರೇಟರ್ ಅನ್ನು ಎಸಿ ವೆಟ್ಸ್ ಮತ್ತು ಡ್ಯಾಶ್‍‍ನ ಮೇಲೆ ಬಳಸಲಾಗಿದೆ. ಮತ್ತು ಅಡಿಯಲ್ಲಿ ಗ್ಲೋವ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಕ್ಯಾಮ್ರಿ ಹೈಬ್ರಿಡ್ ಕಾರಿನಲ್ಲಿ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದ್ದು, ಇದು ಕ್ರೂಸ್ ಕಂಟ್ರೋಲ್ ಸೆಟಪ್, ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಮಲ್ಟಿ ಫಂಕ್ಷನ್ ಕೀಗಳನ್ನು ನಿಯಂತ್ರಿಸಬಹುದಾದ ಬಟನ್‍ಗಳನ್ನು ಅಳವಡಿಸಲಾಗಿದೆ. ಅಷ್ಟೆ ಅಲ್ಲದೇ ಡ್ರೈವರ್ ದೈಹಿಕವಾಗಿ ಇ-ಸಿವಿಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಸಹ ಮಾಡಬಹುದಾಗಿದೆ. ಇಸ್ಟ್ರೂಮೆಂಟ್ ಬೈನಾಕಲ್ ಚಾರ್ಜ್ (ಬ್ಲೂ), ಇಕೊ (ಗ್ರೀನ್). ಪವರ್ (ವೈಟ್) ಸೆಕ್ಷನ್ಸ್ ಅನ್ನು ಮತ್ತು ಸ್ಪೀಡೋಮೀಟರ್ ಅನ್ನು ನೀಡಲಾಗಿದೆ. ಡೈಯಾಲ್ಸ್ ನಡುವಿನಲ್ಲಿ ಟ್ರಿಪ್ ಮೀಟರ್ ಮತ್ತು ಟೈರ್ ಪ್ರೆಶುರ್ ರೀಡಿಂಗ್ ಅನ್ನು ಕಾಣಬಹುದಾದ ಮಲ್ಟಿ ಫಂಕ್ಷನ್ ಡಿಸ್ಪ್ಲೇ ಅನ್ನು ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಮುಂಭಾಗದ ಸೀಟ್ ಮಧ್ಯಭಾಗದಲ್ಲಿ ಕಪ್ ಹೋಲ್ಡರ್ಸ್, ಗೇರ್ ಶಿಫ್ಟರ್ ಮತ್ತು ಗ್ರಾಹಕನ ರುಚಿಗೆ ಸರಿತೂಗದ ಹಾಗೆ ವಿನ್ಯಾಸ ಮಾಡಲಾಗಿದೆ ಎಂದು ನಮ್ಮ ಅಭಿಪ್ರಾಯ. ಮತ್ತು ಇಲ್ಲಿ ಡ್ರೈವಿಂಗ್ ಮೋಡ್ಸ್ (ಇಕಿ, ನಾರ್ಮಲ್ ಮತ್ತು ಸ್ಪೋರ್ಟ್) ಬದಲಾಯಿಸಬಹುದಾದ ಕಂಟ್ರೋಲ್ಸ್, ಇವಿ ಮೋಡ ಮತ್ತು ಬ್ರೇಕ್ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ವೈಶಿಷ್ಟ್ಯತೆಯನ್ನು ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಸ್ಟೀರಿಯೊ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಂ

ಕ್ಯಾಮ್ರಿ ಕಾರಿನಲ್ಲಿ ನೀಡಲಾದ ಇನ್ಫೋಟೈನ್ಮೆಂಟ್ ಸಿಸ್ಟಂ ಟಚ್‍ಸ್ಕ್ರೀನ್ ಡಿಸ್ಪ್ಲೇ ಮತ್ತು ಕಂಟ್ರೋಲ್ ಬಟನ್‍ಗನ್ನು ಎರಡೂ ಕಡೆ ಪಡೆದುಕೊಂಡಿದೆ. ಇದರಲ್ಲಿರುವ ಇನ್ಫೋಟೈನ್ಮೆಂಟ್ ಸಿಸ್ಟಂ ಬ್ಲೂಟೂಥ್, ಯುಎಸ್‍ಬಿ ಮತ್ತು ಆಕ್ಸ್ ಇನ್‍ಪುಟ್‍ಗಳನ್ನು ನೀಡಲಾಗಿದ್ದು, ದುರಾದೃಷ್ಟವಶಾತ್ ಕ್ಯಾಮ್ರಿ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡಲಾರದು. ಆದರೆ ಜೆಬಿಎಲ್‍ನಿಂದ ಪಡೆದ 9 ಸ್ಪೀಕರ್‍‍ಗಳನ್ನು ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಕಂಫರ್ಟ್ ಮತ್ತು ಬೂಟ್

ಟೊಯೊಟಾ ಕ್ಯಾಮ್ರಿ ಕಾರಿನ ಮುಂಭಾಗದಲ್ಲಿರುವ ಸೀಟ್‍ಗಳನ್ನು ಅಮೇರಿಕನ್ ಫ್ರೇಮ್‍ನಿಂದ ನಿರ್ಮಿಸಲಾಗಿದ್ದುಮ್ ಇದು ಅಗಲವಾದ ಆಕಾರವನ್ನು ಪಡೆದುಕೊಂಡಿದೆ. ಮತ್ತು ಚಾಲಕರಿಗೆ ಅನುಕೂಲವಾಗುವ ಹಾಗೆ 10 ಬಗೆಗಳಲ್ಲಿ ಬದಲಾಯಿಸಬಹುದಾಗಿದೆ. ಕ್ಯಾಬಿನ್ ಮೇಲಿರುವ ಟಿಲ್ಟ್ ಮತ್ತು ಸ್ಲೈಡ್ ಸನ್‍ರೂಫ್ ಅನ್ನು ರೂಫ್ ಮೌಂಟೆಡ್ ಕಂಟ್ರೋಲ್‍ನಿಂದ ನಿಯಂತ್ರಿಸಬಹುದಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಹೊಸ ಟೊಯೊಟಾ ಕ್ಯಾಮ್ರಿ ಕಾರಿ ಹಿಂದಿನ ತಲೆಮಾರಿಗಿಂತಲೂ 50ಎಂಎಂ ಹೆಚ್ಚಿನ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದ್ದು, ಹೆಚ್ಚು ಸ್ಥಳವನ್ನು ಪದೆದುಕೊಂಡಿದೆ. ಪ್ರಯಾಣಿಕರಿಗೆ ಅನಾನುಕೂಲವಾಗದಿರಲು ಎಲೆಕ್ಟ್ರಿಕ್ ಮೋಟಾರ್‍‍ನ ಬ್ಯಾಟರಿಯನ್ನು ಹಿಂಭಾಗದಲ್ಲಿನ ಸೀಟ್‍ನ ಅಡಿಯಲ್ಲಿ ಇರಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಈ ಬಾರಿ ಹೆಡ್, ಕ್ನೀ ಮತ್ತು ಲೆಗ್‍ರೋಂ ಅನ್ನು ವಿಶಾವಾಗಿ ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಇನ್ನು ಕಾರಿನ ಹಿಂಬದಿಯ ಸೀಟ್‍ಗಳಲ್ಲಿ 3 ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಅನ್ನು ನೀಡಲಾಗಿದ್ದು, ಇದನ್ನು ಸೀಟ್‍ಗಳಾ ಮಧ್ಯಭಾಗದಲ್ಲಿನ ಸೆಂಟ್ರಲ್ ಆರ್ಮ್‍ರೆಸ್ಟ್ ಮೇಲಿರುವ ಟಚ್ ಪ್ಯಾನಲ್‍ನಿಂದ ಅಡ್ಜಸ್ಟ್ ಮಾಡಬಹುದಾಗಿದ್ದು, ಜೊತೆಗೆ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹ ಕಂಟ್ರೋಲ್ ಮಾಡಬಹುದಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಎಂಜಿನ್, ಸಾಮರ್ಥ್ಯ ಮತ್ತು ಡ್ರೈವಿಂಗ್ ಕೌಶಲ್ಯತೆ

8ನೆಯ ತಲೆಮಾರಿನ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಪೆಟ್ರೋಲ್-ಎಲೆಕ್ಟ್ರಾನಿಕ್ ಹೈಬ್ರಿಡ್ ಪವರ್‍‍ಟ್ರೈನ್ ಸಹಾಯದಿಂದ ಚಲಿಸುತ್ತದೆ. ಇದು 2.5 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 175.5 ಬಿಹೆಚ್‍ಪಿ ಮತ್ತು 221ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಎಲೆಕ್ಟ್ರಿಕ್ ಮೋಟಾರ್‍ನ ಜೋಡಣೆಯೊಂದಿಗೆ 118.3 ಬಿಹೆಚ್‍ಪಿ ಮತ್ತು 202ಎನ್ಎಮ್ ಟಾರ್ಕ್ ಹಾಗು 245ವಿ ನಿಕೆಲ್-ಮೆಟಲ್ ಹೈಬ್ರಿಡ್ ಬ್ಯಾಟರಿ ಉತ್ಪಾದಿಸುತ್ತದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

4 ಸಿಲೆಂಡರ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಜೋತೊಗೂಡಿ ಹೆಚ್ಚು ಸಾಮರ್ಥ್ಯವನ್ನು ಹೊರಹಾಕುತ್ತದೆ, ಈ ನಿಟ್ಟಿನಲ್ಲಿ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಪ್ರತೀ ಲೀಟರ್‍‍ಗೆ 23.1 ಕಿಲೋಮೀಟರ್‍‍ನ ಮೈಲೇಜ್ ಅನ್ನು ನಗರ ಮತ್ತು ಹೆದ್ದಾರಿಗಳಲ್ಲಿ ನೀಡುತ್ತದೆ. ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಸೇಫ್ಟಿ ಮತ್ತು ಕೀ ಫೀಚರ್ಸ್

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚು ಒತ್ತನ್ನು ನೀಡಲಾಗಿದ್ದು, 9 ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಬ್ರೇಕ್ ಹೋಲ್ಡ್ ಫಂಕ್ಷನ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇಷ್ಟೆ ಅಲ್ಲದೇ ಇಂಪ್ಯಾಕ್ಟ್-ಸೆನ್ಸಿಂಗ್ ಫ್ಯುಯಲ್ ಕಟ್-ಆಫ್, ರಿಯರ್ ಪಾರ್ಕಿಂಗ್ ಕ್ಯಾಮೆರಾ & ಸೆನ್ಸಾರ್ಸ್ ಮತ್ತು ಐಎಸ್ಒ‍ಫಿಕ್ಸ್ ಚೈಲ್ಡ್ ಸೀಟ್ ಅನ್ನು ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಎದುರಾಳಿಗಳು

2019ರ ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಹೆಚ್ಚು ಸುರಕ್ಷಾ ಸಾಮರ್ಥ್ಯವನ್ನು ಮತ್ತು ಅಧಿಕ ಮೈಲೇಜ್ ನೀಡಲಾಗಿದ್ದು, ಮಾರುಕಟ್ಟೆಯಲ್ಲಿರುವ ಹೋಂಡಾ ಆಕರ್ಡ್ ಹೈಬ್ರಿಡ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೆಚ್ಚು ಸೇಫ್ಟಿ ಫೀಚರ್‍‍‍ಗಳನ್ನು ಪಡೆದ 2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ವಿಮರ್ಶೆ

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ವಾಹನಗಳಲ್ಲಿ ಸರಿಯಾದ ಸೇಫ್ಟಿ ಫೀಚರ್‍‍ಗಳನ್ನು ನೀಡದಿರದ ಕಾರಣ ದೇಶದಲ್ಲಿ ಆಗುತ್ತಿರುವ ಅಪಘಾತಗಳು ಸಂಭವಿಸುತಿದ್ದು, ಟೊಯೊಟಾ ಸಂಸ್ಥೆಯು ತಮ್ಮ ಈ ಕಾರಿನ ಸ್ಟ್ಯಾಂಡರ್ಡ್ ಆಗಿ ಹೆಚ್ಚು ಸೇಫ್ಟಿ ಫೀಚರ್‍‍ಗಳನ್ನು ನೀಡಲಾಗಿದೆ. ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಮತ್ತು ವೈಶಿಷ್ಟ್ಯತೆಗಳನ್ನು ಪಡೆದ ಈ ಕಾರಿನಲ್ಲಿ ಅನಾನುಕೂಲತೆಗಳಿಗಿಂತಲೂ, ಅನುಕೂಲತೆಗಳು ಹೆಚ್ಚು ಎಂದು ಹೇಳಬಹುದು. ಆದುದರಿಂದ ನೀಡಿದ ಬೆಲೆಗೆ ಮೋಸವಿಲ್ಲದ ಹಾಗೆ ಈ ಕಾರನ್ನು ಗ್ರಾಹಕರು ಇಚ್ಛೆಯಿದ್ದಲ್ಲಿ ಖರೀದಿಸಬಹುದಾಗಿದೆ.

ನಮಗೆ ಇಷ್ಟವಾದದ್ದು

  • ಹೊಸ ವಿನ್ಯಾಸ
  • ಅಪ್ಗ್ರೆಡೆಡ್ ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್
  • ಪೆಪ್ಪಿ ಯೆಟ್ ಪ್ಯುಯಲ್-ಎಫಿಶಿಯಂಟ್ ಹೈಬ್ರಿಡ್ ಸೆಟಪ್
  • ಉತ್ತಮ ಡ್ರೈವಿಂಗ್ ಡೈನಾಮಿಕ್ಸ್
  • ನಮಗೆ ಇಷ್ಟವಾಗದುದ್ದದ್ದು

    • ಆಂಡಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕೊರತೆ
    • ಹೆಚ್ಚಿನ ಸಂಖ್ಯೆಯಲ್ಲಿ ಕಾಣುವ ಬಟನ್‍ಗಳು

Most Read Articles

Kannada
English summary
Toyota Camry Hybrid Review, First Drive Review. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X