ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಒಂದು ದಶಕಕ್ಕೂ ಹೆಚ್ಚು ಕಾಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಫಾರ್ಚೂನರ್ ಎಸ್‍ಯುವಿಗೆ ಸರಿಸಾಟಿ ಫಾರ್ಚೂನರ್ ಮಾತ್ರ ಎಂಬಂತೆ ಇಂದಿಗೂ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಅಲ್ಲದೇ ಪೂರ್ಣ ಗಾತ್ರದ ಎಸ್‍ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಾದರಿ ಇದಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಟೊಯೊಟಾ ಕಂಪನಿಯು ತನ್ನ ಫಾರ್ಚೂನರ್ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಮಾದರಿ ಮತ್ತು ರೇಂಜ್-ಟಾಪಿಂಗ್ 'ಲೆಜೆಂಡರ್' ಮಾದರಿಯನ್ನು ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಲೆಜೆಂಡರ್ ಸ್ಟ್ಯಾಂಡರ್ಡ್ ಫಾರ್ಚೂನರ್‌ನ ಸ್ಪೋರ್ಟಿಯರ್ ಮಾದರಿಯಾಗಿದೆ. ಈ ಪಾರ್ಚೂನರ್ ಲೆಜೆಂಡರ್ ಎಸ್‍ಯುವಿಯನ್ನು ಒಂದೆರಡು ದಿನಗಳ ಕಾಲ ನಗರದ ಸುತ್ತಲೂ ಮತ್ತು ಹೆದ್ದಾರಿಯಲ್ಲೂ ಓಡಿಸಿದ್ದೇವೆ. ಇದರ ವಿನ್ಯಾಸ, ಪರ್ಫಾಮೆನ್ಸ್, ಎಂಜಿನ್ ಮತ್ತು ಡ್ರೈವ್ ಅನುಭವ ಬಗ್ಗೆ ಇಲ್ಲಿ ಹೇಳುತ್ತೇವೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ವಿನ್ಯಾಸ

ಫಾರ್ಚೂನರ್ ಲೆಜೆಂಡರ್ ತನ್ನತ್ತ ಎಲ್ಲರೂ ತಿರುಗಿ ನೋಡುವಂತಹ ಆಕರ್ಷಕ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇದರ ಮುಂಭಾಗ ಗ್ರಿಲ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಲೋಗೋವನ್ನು ಹೊರತುಪಡಿಸಿ ಮುಂಭಾಗದಲ್ಲಿರುವ ಸಾಮಾನ್ಯ ಕ್ರೋಮ್ ಅಂಶಗಳು ಇದರಲ್ಲಿ ನೀಡಿಲ್ಲ. ಅದರ ಎಕ್ಸ್-ಆಕಾರದ ಗ್ರಿಲ್ ಲೆಕ್ಸಸ್‌ನಿಂದ ಸ್ಫೂರ್ತಿ ಪಡೆದಿದೆ ಎಂದು ತೋರುತ್ತದೆ. ವಿನ್ಯಾಸಕಾರರು ಈ ಎಸ್‍ಯುವಿಗೆ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಲು ಬ್ಲ್ಯಾಕ್ ಔಟ್ ಅಂಶಗಳನ್ನು ಹೆಚ್ಚಾಗಿ ನೀಡಿದ್ದಾರೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಲೆಜೆಂಡರ್ ಸಹ ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಡಿಆರ್‌ಎಲ್‌ಗಳು ಮನಮೋಹಕವಾಗಿ ಕಾಣುತ್ತವೆ. ಇದನ್ನು ಟೊಯೊಟಾ ವಾಟರ್ ಫಾಲ್ ಡಿಆರ್‌ಎಲ್‌ಗಳು' ಎಂದು ಕರೆಯುತ್ತಾರೆ. ಹೆಡ್‌ಲ್ಯಾಂಪ್ ಕ್ಲಸ್ಟರ್ ಕಡಿಮೆ ಕಿರಣಕ್ಕೆ ಎರಡು ಪ್ರೊಜೆಕ್ಟರ್‌ಗಳನ್ನು ಮತ್ತು ಹೆಚ್ಚಿನ ಕಿರಣಕ್ಕೆ ಎರಡು ರಿಫ್ಲೆಕ್ಟರ್‌ಗಳನ್ನು ಒಳಗೊಂಡಿದೆ. ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇನ್ನು ಇದರ ಸೈಡ್ ಪ್ರೊಫೈಲ್‌ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇದು ಎಲ್ಲಾರ ಗಮನಸೆಳೆಯುವಂತಿದೆ. ಅಲ್ಲದೇ ಎಸ್‍ಯುವಿಯ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸುತ್ತದೆ. ಇದು ಫ್ಲೋರ್‌ಬೋರ್ಡ್‌ ಅನ್ನು ಸಹ ಪಡೆಯುತ್ತದೆ, ಅದು ವಾಹನದ ಒಳಗೆ ಪ್ರವೇಶಿಸುವುದಕ್ಕೆ ಮತ್ತು ಹೊರಗೆ ಇಳಿಯುದಕ್ಕೆ ಹೆಚ್ಚು ಸಹಕಾರಿಯಾಗಿದೆ. ಇನ್ನು ಡೋರಿನ ಹ್ಯಾಂಡಲ್‌ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್‌ನಿಂದ ಮಾಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯ ರೂಫ್ ಮ್ಯಾಟ್ ಬ್ಲ್ಯಾಕ್‌ನಿಂದ ಕೂಡಿದ್ದು, ಇದು ಒಟ್ಟಾರೆ ಬಿಳಿ ಬಣ್ಣದೊಂದಿಗೆ ಉತ್ತಮ ವ್ಯತಿರಿಕ್ತತೆಯನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯ ಸ್ಪೋರ್ಟಿ ಲುಕ್‌ಗೆ ಪೂರಕವಾಗಿ ರೂಫ್ ರೈಲ್ ಮತ್ತು ಶಾರ್ಕ್-ಫಿನ್ ಆಂಟೆನಾವನ್ನು ಸಹ ಪಡೆಯುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ನಯವಾದ-ಕಾಣುವ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಬ್ಲ್ಯಾಕ್ ಸ್ಟ್ರಿಪ್ ಸಹ ಪಡೆಯುತ್ತದೆ, ಅದು ಎರಡೂ ಟೈಲ್ ಲೈಟ್‌ಗಳನ್ನು ಅದರ ಉದ್ದಕ್ಕೂ 'ಫೋರ್ಟೂನರ್' ಬ್ರ್ಯಾಂಡಿಂಗ್‌ನೊಂದಿಗೆ ಸಂಪರ್ಕಿಸುತ್ತದೆ

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇಂಟಿರಿಯರ್

ಫಾರ್ಚೂನರ್ ಲೆಜೆಂಡರ್ ಇಂಟಿರಿಯರ್ ಅಥವಾ ಒಳಭಾಗದಲ್ಲಿ ಡ್ಯುಯಲ್-ಟೋನ್ (ಬ್ಲ್ಯಾಕ್ ಮತ್ತು ಮರೂನ್) ಅಂಶಗಳನ್ನು ಹೊಂದಿದೆ, ಇದು ಒಳಾಂಗಣವನ್ನು ಸ್ಪೋರ್ಟಿ ಆಗಿ ಕಾಣುವಂತೆ ಮಾಡುತ್ತದೆ. ಡ್ಯಾಶ್‌ಬೋರ್ಡ್ ಮತ್ತು ಡೋರಿನ ಪ್ಯಾನೆಲ್ ಗಳಲ್ಲಿ ಸಾಕಷ್ಟು ಸಾಫ್ಟ್-ಟಚ್ ಸಾಮಗ್ರಿಗಳಿವೆ. ಎಸ್‌ಯುವಿ ಸುತ್ತಲೂ ವೈಟ್ ಅಬೈಂಡ್ ಲೈಟ್ ಅನ್ನು ಪಡೆಯುತ್ತದೆ. ಇದು ಕ್ಯಾಬಿನ್‌ಗೆ ದುಬಾರಿ ಅನುಭವವನ್ನು ನೀಡುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಒಳಗೊಂಡಿರುವ 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಉತ್ತಮ ರೆಸ್ಪಾನ್ಸ್ ನಿಂದ ಕೂಡಿದೆ. ಇದರ ಕೆಳಗೆ ಟೆಪ್ರೇಚರ್ ಮತ್ತು ಪ್ಯಾನ್ ಸ್ಪೀಡ್ ವೇಗವನ್ನು ಪ್ರದರ್ಶಿಸಲು ಎಲ್ಇಡಿ ಡಿಸ್ ಪ್ಲೇಯೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ನೀಡಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇನ್ನು ಗೇರ್ ಲಿವರ್‌ನ ಮುಂದೆ ಕಪ್ ಹೋಲ್ಡರ್ಸ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಅನ್ನು ಸಹ ಹೊಂದಿದೆ .ಇದು ನಿಜವಾಗಿಯೂ ಉತ್ತಮ ಫೀಚರ್ ಆಗಿದೆ. ಇದು ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಎಂಯುಎಕ್ಸ್ ಕೇಬಲ್ ಕನೆಕ್ಟರ್ ಅನ್ನು ಸಹ ಪಡೆಯುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇದರ ಸ್ಟೀಯರಿಂಗ್ ವ್ಹೀಲ್ ಲೆದರ್ ನಿಂದ ಸುತ್ತುವರಿದಿದ್ದು, ಉತ್ತಮ ಗ್ರೀಪ್ ನಿಂದ ಕೂಡಿದೆ. ಇನ್ನು ಕಾಲ್ ರಿಸ್ವೀವ್ ಮಾಡಲು ಮತ್ತು ಕಟ್ ಮಾಡಲು ಮೌಂಟಡ್ ಕಂಟ್ರೋಲ್ ಗಳನ್ನು ನೀಡಿದೆ. ಈ ಸ್ಟೀಯರಿಂಗ್ ವ್ಹೀಲ್ ಟೆಲ್ಟ್ ಮತ್ತು ರಿಚ್ ಎಂಬ ಎರಡು ವಿಧದದಲ್ಲಿ ಅಡೆಜೆಸ್ಟ್ ಮಾಡಬಹುದಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಫಾರ್ಚೂನರ್ ಲೆಜೆಂಡರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸ್ಟ್ಯಾಂಡರ್ಡ್ ಫಾರ್ಚೂನರ್ ನಲ್ಲಿ ಕಂಡುಬರುವಂತೆಯೇ ಇರುತ್ತದೆ. ಇದು ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್‌ಗಾಗಿ ಎರಡು ಅನಲಾಗ್ ಡಯಲ್‌ಗಳನ್ನು ಒಳಗೊಂಡಿದೆ. ಇದು ಡಯಲ್‌ಗಳ ನಡುವೆ ಟಿಎಫ್‌ಟಿ ಎಂಐಡಿ ಡಿಸ್ ಪ್ಲೇಯನ್ನು ಸಹ ಪಡೆಯುತ್ತದೆ, ಅದು ವಾಹನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಓದಲು ಸಹಾಯ ಮಾಡುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಮುಂಭಾಗದ ಎರಡು ಸೀಟುಗಳು ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾಗಿದೆ. ಇನ್ನು ಈ ಫೀಚರ್ ವೆಂಟಿಲೆಟೆಡ್ ಫೀಚರ್ ಅನ್ನು ಕೂಡ ಪಡೆಯುತ್ತದೆ. ಇದರಲ್ಲಿನ ಕ್ಲೈಮೇಂಟ್ ಕಂಟ್ರೋಲ್ ಮೂರೂ ಮೂರು ಹಂತದ ಹೊಂದಾಣಿಕೆಗಳೊಂದಿಗೆ ಒದಗಿಸಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇನ್ನು ಎರಡನೇ ಸಾಲು ಆರಾಮದಾಯಕವಾಗಿದೆ ಮತ್ತು ಸಾಕಷ್ಟು ಲೆಗ್ ರೂಂ ಮತ್ತು ಹೆಡ್ ರೂಂ ಹೊಂದಿದೆ. ಹಿಂಭಾಗದ ಎಸಿ ಕಂಟ್ರೋಲ್ ಗಳು ರೂಫ್ ಮೇಲೆ ಇರುತ್ತವೆ. ಹೆಚ್ಚು ಆರಾಮವಾಗಿ ಪ್ರಯಾಣಿಸಲು ಎರಡೂ ಪ್ರಯಾಣಿಕರು ಕೂತಿರುವಾಗ ಸೆಂಟರ್ ಆರ್ಮ್‌ಸ್ಟ್ರೆಸ್ಟ್ ಅನ್ನು ಇಳಿಸಬಹುದು, ಇನ್ನು ಮೂರನೇ ಸಾಲಿನ ಸೀಟುಗಳು ಮಕ್ಕಳಿಗೆ ಹೆಚ್ಚು ಸೂಕ್ತವಾಗಿದೆ. ದೂರ ಪ್ರಯಾಣ ಮಾಡುವಾಗ ವಯಸ್ಕರು ಕುಳಿತುಕೊಂಡರೆ ಸ್ವಲ್ಪ ಅನಾನುಕೂಲವಾಗಿರುತ್ತದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಟೈಲ್‌ಗೇಟ್ ಅನ್ನು ಹಲವು ವಿಧಗಳಲ್ಲಿ ತೆರೆಯಬಹುದು ಮತ್ತು ವೈಶಿಷ್ಟ್ಯಗಳಲ್ಲಿ ಒಂದು ಹ್ಯಾಂಡ್‌ಸ್ಫ್ರೀ ಆಗಿದೆ. ನೀವು ಬೂಟ್ ಅನ್ನು ತೆರೆದ ನಂತರ, ಮೂರನೇ ಸಾಲಿನೊಂದಿಗೆ ನೀವು 300-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಹೆಚ್ಚಿನ ಬೂಟ್ ಸ್ಪೇಸ್ ಅಗತ್ಯವಿದ್ದಾಗ ಹಿಂದಿನ ಸೀಟುಗಳನ್ನು ಮಡಚಿಕೊಳ್ಳಬಹುದು.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಎಂಜಿನ್

ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯಲ್ಲಿ 2.8-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 3,000 ಮತ್ತು 3,400 ಆರ್‌ಪಿಎಂ ನಡುವೆ 201 ಬಿಹೆಚ್‌ಪಿ ಪವರ್ ಹಾಗೂ 1,600 ಮತ್ತು 2,800 ಆರ್‌ಪಿಎಂ ನಡುವೆ 500 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಈ ಲೆಜೆಂಡರ್ ಎಸ್‍ಯುವಿಯು 10 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಸ್ಟ್ಯಾಂಡರ್ಡ್ ಫಾರ್ಚೂನರ್ ನಲ್ಲಿ ಫ್ಹೋರ್ ವ್ಹೀಲ್ ಡ್ರೈವ್ ಅನ್ನು ನೀಡಲಾಗಿದೆ. ಆದರೆ ಲೆಜೆಂಡರ್ ಎಸ್‍ಯುವಿಯಲ್ಲಿ ಈ ಫೀಚರ್ ಅನ್ನು ನೀಡಿಲ್ಲ. ರೇರ್ ವ್ಹೀಲ್ ಡ್ರೈವ್ ಸೆಟಪ್‌ನಲ್ಲಿ ಮಾತ್ರ ಲಭ್ಯವಿದೆ, ಇದು ಸಾಮಾನ್ಯ ಮಾದರಿಗಿಂತ ಹಗುರವಾಗಿರುತ್ತದೆ. ಅಲ್ಲದೆ, ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯಲ್ಲಿ 6-ಸ್ಫೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇದುಹೆಚ್ಚು ತ್ವರಿತ ಗೇರ್‌ಬಾಕ್ಸ್ ಅಲ್ಲ, ಈ ಗೇರ್‌ಬಾಕ್ಸ್‌ನೊಂದಿಗೆ ಎಂಜಿನ್ ಬ್ರೇಕಿಂಗ್ ವಿಶೇಷವಾಗಿ ಪ್ರಬಲವಾಗಿಲ್ಲ. ನೀವು ಆಟೋಮ್ಯಾಟಿಕ್ ಮೋಡ್‌ಗೆ ಬದಲಾಯಿಸಲು ಮತ್ತು ಗೇರ್‌ಶಿಫ್ಟ್‌ಗಳ ಮೇಲೆ ಹಿಡಿತ ಸಾಧಿಸಲು ಬಯಸಿದರೆ ಪ್ಯಾಡಲ್ ಶಿಫ್ಟರ್‌ಗಳು ಸಹ ಲಭ್ಯವಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇದರ ಎಂಜಿನ್ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಮೂರು ಡ್ರೈವಿಂಗ್ ಮೋಡ್‌ಗಳೊಂದಿಗೆ ಬರುತ್ತದೆ. ಇದು ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರತಿಕ್ರಿಯೆಯನ್ನು ಬದಲಾಯಿಸುವುದಲ್ಲದೆ ಸ್ಟೀಯರಿಂಗ್ ರೆಸ್ಪಾನ್ಸ್ ನಲ್ಲಿಯು ಬದಲಾವಣೆಗಳಾಗುತ್ತದೆ. ಥ್ರೊಟಲ್ ರೆಸ್ಪಾನ್ಸ್ ವಿಭಿನ್ನ ವಿಧಾನಗಳಲ್ಲಿ ಸಾಕಷ್ಟು ಗಮನಾರ್ಹವಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಲೆಜೆಂಡರ್ ಎಸ್‍ಯುವಿ ಸಸ್ಪೆಂಕ್ಷನ್ ಸೆಟಪ್ ಸಾಮಾನ್ಯ ಮಾದರಿಯಲ್ಲಿರುವುದಕ್ಕಿಂತ ಸ್ವಲ್ಪ ಗಟ್ಟಿಯಾಗಿದೆ. ಈ ಎಸ್‍ಯುವಿಯಲ್ಲಿ ಬಾಡಿ ರೋಲ್ ಹೊಂದಿದ್ದರೂ, ಸ್ಟ್ಯಾಂಡರ್ಡ್ ಫಾರ್ಚೂನರ್ ಗಿಂತಲೂ ಉತ್ತಮವಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

225 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಎಸ್‌ಯುವಿ ಆಗಿರುವುದರಿಂದ ಎಂತಹ ರಸ್ತೆಯಲ್ಲಿಯು ಥೈರ್ಯವಾಗಿ ಚಲಾಯಿಸಬಹುದು. ಎನ್‌ವಿಹೆಚ್ ಮತ್ತು ಇನ್ಸ್ ಲೇಷನ್ ಮಟ್ಟಗಳು ಯೋಗ್ಯವಾಗಿವೆ ಆದರೆ 2,500 ಆರ್‌ಪಿಎಂ ದಾಟಿದ ಬಳಿಕ ಕ್ಯಾಬಿನ್‌ಗೆ ಶಬ್ದವನ್ನು ಕೇಳೂತ್ತದೆ. ಇದನ್ನು 4,050 ಆರ್‌ಪಿಎಂಗೆ ಹೊಂದಿಸಲಾಗಿದೆ

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇಂಧನ ದಕ್ಷತೆಗೆ ಸಂಬಂಧಿಸಿದಂತೆ, ಫಾರ್ಚೂನರ್ ಲೆಜೆಂಡರ್ ನಗರ ಕಾಡಿನಲ್ಲಿ ನಮಗೆ 9-10 ಕಿಮೀ / ಲೀ ನಡುವೆ ನೀಡಿತು. ಹೆದ್ದಾರಿಯಲ್ಲಿ, ನಾವು ಸುಮಾರು 13-14.5 ಕಿ.ಮೀ. ಪೂರ್ಣ ಟ್ಯಾಂಕ್‌ನಲ್ಲಿ, ಎಸ್ಯುವಿ ಸುಲಭವಾಗಿ 550 ಕಿಲೋಮೀಟರ್ ಗಡಿ ದಾಟಬಹುದು.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಇನ್ನು ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯ ಮೈಲೇಜ್ ಬಗ್ಗೆ ಹೇಳುವುದಾದರೆ, ನಗರ ಪ್ರದೇಶಗಳಲ್ಲಿ 9-10 ಕಿಮೀ ಮೈಲೇಜ್ ಲಭ್ಯವಾಗುತ್ತದೆ. ಇನ್ನು ಹೆದ್ದಾರಿಯಲ್ಲಿ ಸುಮಾರು 13-14.5 ಕಿ.ಮೀ ಮೈಲೇಜ್ ಲಭ್ಯವಾಗುತ್ತದೆ. ಈ ಎಸ್‍ಯುವಿಯಲ್ಲಿ ನೀವು ಫುಲ್ ಟ್ಯಾಂಕ್ ಮಾಡಿದರೆ 550 ಕಿ,ಮೀ ಗಿಂತ ಹೆಚ್ಚು ದೂರ ಹೋಗಬಹುದು.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಡ್ರೈವ್‌ಸ್ಪಾಕ್ ಅಭಿಪ್ರಾಯ

ಫಾರ್ಚೂನರ್ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಯಾಗಿದೆ. 2009ರಿಂದಲೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದೆ. ಹೊಸ ಲೆಜೆಂಡರ್ ಆವೃತ್ತಿಯು ದೇಶಾದ್ಯಂತದ ಎಸ್ಯುವಿಗಳ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. ಲೆಜೆಂಡರ್ ಎಸ್‍ಯುವಿಯಲ್ಲಿ ಸನ್‌ರೂಫ್, ಹೀಲ್ ಹೋಲ್ಡ್ ಮತ್ತು ಹೀಲ್ಡ್ ಡಿಸೆಂಟ್ ಫೀಚರ್ ಗಳನ್ನು ನೀಡದಿರುವುದು ಅಚ್ಚರಿಯ ವಿಷಯವಾಗಿದೆ.

ಹೊಸ ಫೀಚರ್ಸ್‌ಗಳೊಂದಿಗೆ ರಸ್ತೆಗಿಳಿದ ಪವರ್‌ಫುಲ್ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್‍ಯುವಿ ರಿವ್ಯೂ

ಈ ಪೀಚರ್ ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಪ್ರಮುಖ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಲೆಜೆಂಡರ್ ಆನ್-ರೋಡ್ ಬೆಲೆಯು ಸುಮಾರು ರೂ.46 ಲಕ್ಷಗಳಾಗಿದೆ. 2021ರ ಫಾರ್ಚೂನರ್ ಲೆಜೆಂಡರ್ ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಗ್ಲೋಸ್ಟರ್ ಮತ್ತು ಫೋರ್ಡ್ ಎಂಡೀವರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಸ್ಟ್ಯಾಂಡರ್ಡ್ ಫಾರ್ಚೂನರ್ ಗಿಂತ ಹೆಚ್ಚು ಫೀಚರ್ ಗಳನ್ನು ಬಯಸುವವರಿಗೆ ಲೆಜೆಂಡರ್ ಮಾದರಿಯನ್ನು ಆರಿಸಿಕೊಳ್ಳಬಹುದಾಗಿದೆ.

Most Read Articles

Kannada
English summary
Toyota Fortuner Legender Road Test Review. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X