ನಿಮಗೆ ಇಷ್ಟವಾದಿತೇ ಇನ್ನೋವಾ ಕ್ರೈಸ್ಟಾ; ಸಮಗ್ರ ಚಾಲನಾ ವಿಮರ್ಶೆ ಓದಿ

By Nagaraja

'ಇನ್ನೋವಾ' ಎಂಬ ಪದವು ಆಂಗ್ಲ ಭಾಷೆಯ ಇನ್ನೋವೇಷನ್ (Innovation) ಪದದಿಂದ ಹುಟ್ಟಿಕೊಂಡಿದೆ. 2005ರಲ್ಲಿ ಜನಪ್ರಿಯ ಕ್ವಾಲಿಸ್ ಬದಲಿ ಕಾರಾಗಿ ಪರಿಚಯವಾಗಿರುವ ಇನ್ನೋವಾ ಕಳೆದೊಂದು ದಶಕದಲ್ಲಿ ಜಪಾನ್ ಮೂಲದ ಟೊಯೊಟಾ ಸಂಸ್ಥೆಗೆ ತಂದುಕೊಟ್ಟ ಯಶಸ್ಸು ಅಷ್ಟಿಷ್ಟಲ್ಲ. ಕೆಲವೇ ಕೆಲವು ವರ್ಷಗಳಲ್ಲಿ ಉದ್ಯಮಿಗಳಿಂದ ಹಿಡಿದು ರಾಜಕಾರಣಿಗಳು ಸೇರಿದಂತೆ ದೊಡ್ಡ ಕುಟುಂಬದ ನೆಚ್ಚಿನ ಕಾರೆನಿಸಿಕೊಂಡಿತ್ತು.

ಜಾಗತಿಕವಾಗಿ 1.6 ಮಿಲಿಯನ್ ಗೂ ಹೆಚ್ಚು ಮಾರಾಟ ಕಂಡಿರುವ ಇನ್ನೋವಾ ಈಗ ಹೊಸ ರೂಪದಲ್ಲಿ ತಾಜಾತನದೊಂದಿಗೆ ಎಂಟ್ರಿ ಕೊಡುತ್ತಿದೆ. ಇದರೊಂದಿಗೆ ಹಳೆಯ ಇನ್ನೋವಾ ನೂತನ 'ಇನ್ನೋವಾ ಕ್ರೈಸ್ಟಾ'ಗೆ ಹಾದಿ ಬಿಟ್ಟು ಕೊಟ್ಟಿದೆ. ನೂತನ ಇನ್ನೋವಾ ಕ್ರೈಸ್ಟಾ ಮೊದಲ ಚಾಲನಾ ಡ್ರೈವಿಂಗ್ ನಡೆಸುವ ಅವಕಾಶ ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಪಡೆದಿದ್ದು, ಈ ಸಂಬಂಧ ಎಂಜಿನ್, ಮೈಲೇಜ್, ನಿರ್ವಹಣೆ ಹಾಗೂ ವೈಶಿಷ್ಟ್ಯಗಳ ಬಗ್ಗೆ ಸಮಗ್ರ ವಿಮರ್ಶೆಯನ್ನು ಓದುಗರ ಮುಂದಿಡಲಿದ್ದೇವೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಹಳೆಯ ಇನ್ನೋವಾ ವಿನ್ಯಾಸದ ಬಗ್ಗೆ ಹೆಚ್ಚು ಕೆಟ್ಟ ಮಾತುಗಳು ಕೇಳಿ ಬಂದಿಲ್ಲ. ಈಗ ನೂತನ ಇನ್ನೋವಾ ಕ್ರೈಸ್ಟಾ ಪ್ರತಿಷ್ಠೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಆಧುನಿಕತೆಗೆ ತಕ್ಕಂತೆ ಮುಂಭಾಗದಲ್ಲಿ ಷಡ್ಭುಜೀಯಾಕೃತಿಯ ಫ್ರಂಟ್ ಗ್ರಿಲ್ ಮೇಲೆ ಟೊಯೊಟಾ ಲಾಂಛನವು ಲಗತ್ತಿಸಲಾಗಿದೆ. ಇದಕ್ಕೆ ಲಂಬವಾಗಿ ಕ್ರೋಮ್ ರೇಖೆಗಳನ್ನು ಕೊಡಲಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಇಲ್ಲಿ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಜೊತೆ ಚೂಪಾದ ಹೆಡ್ ಲ್ಯಾಂಪ್ ಮಿಲನವಾಗುತ್ತದೆ. ಇನ್ನು ಕೆಳಮುಖವಾಗಿ ಫಾಂಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಮತ್ತು ಟರ್ನ್ ಇಂಡಿಕೇಟರ್ ಗಳನ್ನು ಜೋಡಣೆ ಮಾಡಲಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಎಲ್ಲ ಹೊಸತನದ ಆಟೋಮ್ಯಾಟಿಕ್ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಎದ್ದು ಕಾಣಿಸಲಿದ್ದು, ಇತರೆಲ್ಲ ಸಾಂಪ್ರದಾಯಿಕ ಎಂಪಿವಿ ಕಾರುಗಳಿಂದ ವಿಭಿನ್ನವಾಗಿಸುತ್ತದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಇನ್ನೋವಾ ಕ್ರೈಸ್ಟಾ ಹೊಸತನವನ್ನು ಕಾಪಾಡಿಕೊಂಡಿದೆ. ಹಿಂದುಗಡೆ ವಿಂಡ್ ಶೀಲ್ಡ್ ಕೆಳಗಡೆ ತಿರುಗುಬಾಣದಂತಹ ಟೈಲ್ ಲೈಟ್ ಗಳು, ರಿಯರ್ ಸ್ಪಾಯ್ಲರ್ ಮತ್ತು ಎಕ್ಸಾಸ್ಟ್ ಕೊಳವೆಗಳನ್ನು ಕಾಣಬಹುದಾಗಿದೆ.

ವಿನ್ಯಾಸ - ಬದಿ

ವಿನ್ಯಾಸ - ಬದಿ

ಅಂತೆಯೇ ಬದಿಯಲ್ಲೂ ವಿಶಿಷ್ಟ ಬಹು ಬಳಕೆಯ ವಾಹನದ ವಿನ್ಯಾಸವನ್ನು ಕಾಪಾಡಿಕೊಂಡಿದ್ದು, ಕ್ರೋಮ್ ಸ್ಪರ್ಶಿತ ಡೋರ್ ಹ್ಯಾಂಡಲ್, ಬ್ಲ್ಯಾಕ್ ಪಿಲ್ಲರ್ ಮತ್ತು 17 ಇಂಚುಗಳ ಅಲಾಯ್ ಚಕ್ರಗಳು ಇರಲಿದೆ.

ಒಳಮೈ

ಒಳಮೈ

ಕಾರಿನೊಳಗೆ ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣಕ್ಕೆ ಆದ್ಯತೆ ಕೊಡಲಾಗಿದೆ. ಮೂರು ಆಯಾಮದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಿಂದ ಆರಂಭಿಸಿ 4 ಸ್ಪೋಕ್ ಲೆಥರ್ ಹೋದಿಕೆ ಮತ್ತು ವುಡ್ ಸ್ಟೀರಿಂಗ್ ವೀಲ್, ಕೆಂಗಂದು ಕಂದು ಮರದ ಡ್ಯಾಶ್ ಬೋರ್ಡ್ ಇಲ್ಲಿ ಕಂಡುಬರಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಇನ್ನೋವಾ ಕ್ರೈಸ್ಟಾ ಆಂತರಿಕ ಒಳಮೈ ತಾಜಾತನ ಮತ್ತು ಐಷಾರಾಮಿಯಾಗಿರಲಿದ್ದು, ಹಳೆಯ ಮಾದರಿಗಿಂತಲೂ ಅತ್ಯಾಧುನಿಕ ಭವ್ಯತೆಯನ್ನು ಪಡೆಯಬಹುದಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಭಾರತದಂತಹ ಉಷ್ಣವಯಲದಲ್ಲಿ ಪ್ರಯಾಣಿಸುವ ವ್ಯಕ್ತಿಗಳಿಗೆ ಸುಲಭವಾಗಿ ನಿರ್ವಹಿಸುವ ಸಲುವಾಗಿ ಇನ್ಸ್ಟುಮೆಂಟ್ ಕ್ಲಸ್ಟರ್ ಬಳಿಯಲ್ಲೇ ಎಸಿ ನಿಯಂತ್ರಣ ಕೊಡಲಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಇನ್ನೊಂದೆಡೆ ಆಡಿಯೋ ಕಂಟ್ರೋಲ್ ಗಳನ್ನು ಸಹ ಚಾಲಕನಿಗೆ ಸುಲಭವಾಗಿ ನಿರ್ವಹಿಸಬಹುದಾಗಿದೆ. ಇದು ಅತ್ಯುತ್ತಮ ಪಯಣವನ್ನು ಖಾತ್ರಿಪಡಿಸಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಹಿಂಬದಿಯ ಸೀಟಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಪಡೆದು ಇದರತ್ತ ಇನ್ನೋವಾ ಕೆಲಸ ಮಾಡಿರುವುದು ಪ್ರಶಂಸನೀಯ. ಹಳೆಯ ಇನ್ನೋವಾ ಹೊಂದಿರುವವರಿಗೆ ಇದು ಭಾಸವಾಗಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಆರಾಮದಾಯಕ ಪ್ರಯಾಣಕ್ಕಾಗಿ ಲೆಥರ್ ಸೀಟುಗಳನ್ನು ಆಳವಡಿಸಲಾಗಿದೆ. ಇದರಲ್ಲಿ ಕುಳಿತುಕೊಂಡಾಗ ಲಗ್ಷುರಿ ಕಾರಿನಲ್ಲಿ ಪ್ರಯಾಣಿಸುವಷ್ಟು ಸುಖಕರವಾಗಿರಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಎರಡನೇ ಸೀಟಿನಲ್ಲಿ ಪ್ರಯಾಣಿಸುವ ಪ್ರಯಾಣಿಕ ಅನುಕೂಲಕ್ಕಾಗಿ ಸೀಟು ಹಿಂಬದಿಯಲ್ಲಿ ಮಡಚಬಹುದಾದ ಟೇಬಲ್ ಇರಲಿದ್ದು, ಲ್ಯಾಪ್ ಟಾಪ್ ಇಡಲು ಅಥವಾ ಭೋಜನ ಸ್ವೀಕರಿಸಲು ನೆರವಾಗಲಿದೆ. 10 ಕೆ.ಜಿ ಯಷ್ಟು ಭಾರವನ್ನು ಇದರಲ್ಲಿ ಇಡಬಹುದಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ನೂತನ ಇನ್ನೋವಾದಲ್ಲಿ ಸಂಚರಿಸುವಾಗ ಬಾಯಾರಿಕೆಯಾಗುವ ಭಯ ಬೇಡ. ಏಕೆಂದರೆ 20ರಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನಿಡುವ ಸ್ಥಳಾವಕಾಶವನ್ನು ಕೊಡಲಾಗಿದೆ. ಹಿಂಬದಿ ಡೋರ್ ನಲ್ಲೂ ಒಂದು ಲೀಟರ್ ಬಾಟಲಿಗಳನ್ನು ಇಡಬಹುದಾಗಿದೆ.

ಚಾಲನೆ

ಚಾಲನೆ

ನೂತನ ಇನ್ನೋವಾ ಕ್ರೈಸ್ಟಾ ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸಲಿದೆ. ಭಾರತದಂತಹ ರಸ್ತೆ ಪರಿಸ್ಥಿತಿಯಲ್ಲಿ ಉಬ್ಬು-ತಗ್ಗುಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ. ದೂರ ಪ್ರಯಾಣಕ್ಕೂ ಹೇಳಿ ಮಾಡಿಸಿದ ಕಾರು ಇದಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಕಡಿಮೆ ವೇಗದಲ್ಲಿ ಸ್ಟೀರಿಂಗ್ ನಿರ್ವಹಣೆ ಸ್ವಲ್ಪ ಭಾರ ಅನಿಸಿದರೂ ವೇಗ ಜಾಸ್ತಿಯಾದಂತೆ ಇಂತಹ ತೊಂದರೆ ಕಾಡದು. ಇನ್ನೊಂದೆಡೆ ಹೆಚ್ಚಿನ ವೇಗದಲ್ಲೂ ಚಾಸೀ ಸದೃಢವಾಗಿರಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಎಂಜಿನ್ ನಿರ್ವಹಣೆ ಗಮನಕ್ಕೆ ತೆಗೆದುಕೊಂಡಾಗ ಇದರಲ್ಲಿರುವ 2.4 ಲೀಟರ್ ಡೀಸೆಲ್ ಎಂಜಿನ್ 343 ಎನ್ ಎಂ ತಿರುಗುಬಲವನ್ನು ನೀಡುತ್ತಿದ್ದು, ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ. ಅಲ್ಲದೆ 1500 ಆರ್ ಪಿಎಂನಿಂದ 2500 ಆರ್ ಪಿಎಂ ಪವರ್ ಮೋಡ್ ನಲ್ಲಿ ಸಂಚರಿಸುವುದು ಹೆಚ್ಚು ಸೂಕ್ತವೆನಿಸಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಮಗದೊಂದು 2.8 ಲೀಟರ್ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮೋಜಿನ ಪಯಣವನ್ನು ನೀಡಲಿದೆ. 360 ಎನ್ ಎಂ ತಿರುಗುಬಲ ನೀಡುವ ಈ ಆಟೋಮ್ಯಾಟಿಕ್ ಗೇರ್ ಬಾಕ್ಸ್ 1200 ಆರ್ ಪಿಎಂ ನಿಂದ 3500 ಆರ್ ಪಿಎಂ ಪವರ್ ಮೋಡ್ ನಲ್ಲಿ ಅದ್ಭುತ ಚಾಲನಾ ಅನುಭವ ನೀಡಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಚಾಲಕರಿಗೆ ಇಕೊ ಮತ್ತು ಪವರ್ ಗಳೆಂಬ ಎರಡು ಚಾಲನಾ ವಿಧಗಳನ್ನು ಆಯ್ಕೆ ಮಾಡಬಹುದಾಗಿದೆ. ಇವೆರಡು 2.4 ಲೀಟರ್ ಮ್ಯಾನುವಲ್ ಮತ್ತು 2.8 ಲೀಟರ್ ಆಟೋಮ್ಯಾಟಿಕ್ ಮಾದರಿಗಳಲ್ಲೂ ಇರಲಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಹೆಚ್ಚು ಇಂಧನ ಕ್ಷಮತೆಯನ್ನು ಇಕೊ ಡ್ರೈವ್ ಮೂಲಕ ಕಾಪಾಡಿಕೊಳ್ಳಬಹುದಾಗಿದೆ. ಇನ್ನೊಂದೆಡೆ ಹೆಚ್ಚು ಶಕ್ತಿಶಾಲಿ ಪಯಣಕ್ಕಾಗಿ ಪವರ್ ಮೋಡ್ ಬಳಕೆ ಮಾಡಬಹುದಾಗಿದೆ.

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಒಟ್ಟಾರೆ ಚಾಲನಾ ಗುಣಮಟ್ಟ ಮತ್ತು ಸ್ಥಿರತೆಯು ಹಿಂದಿನ ಇನ್ನೋವಾಗಿಂತಲೂ ಸುಧಾರಣೆ ತಂದಿದೆ. ಆದರೂ ಹಿಂದಿನ ಮಾದರಿಗೆ ಹೋಲಿಸಿದಾಗ ಕಡಿದಾದ ತಿರುವುಗಳಲ್ಲಿ ಸಸ್ಪೆನ್ಷನ್ ವ್ಯವಸ್ಥೆಯು ಅಷ್ಟೊಂದು ಪರಿಣಾಮಕಾರಿಯೆನಿಸಿಕೊಂಡಿಲ್ಲ. ಅಲ್ಲದೆ ಇದರ ಭಾರ 2.5 ಟನ್ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.

ಎಂಜಿನ್ ತಾಂತ್ರಿಕತೆ (ಗ್ರೇಡ್ ಝಡ್ - ಮ್ಯಾನುವಲ್)

ಎಂಜಿನ್ ತಾಂತ್ರಿಕತೆ (ಗ್ರೇಡ್ ಝಡ್ - ಮ್ಯಾನುವಲ್)

ವಿಧ: ಬಿಎಸ್IV, ಟರ್ಬೊಚಾರ್ಜ್ಡ್ ಡೀಸೆಲ್

ಸಾಮರ್ಥ್ಯ: 2.4 ಲೀಟರ್

ಅಶ್ವಶಕ್ತಿ: 150 ಪಿಎಸ್ @ 3400 ಆರ್‌ಪಿಎಂ

ತಿರುಗುಬಲ: 343 ಎನ್‌ಎಂ @ 1400 - 2800 ಆರ್‌ಪಿಎಂ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

ಭಾರ: 2430 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 55 ಲೀಟರ್

ಚಕ್ರ: ಅಲಾಯ್

ಆಯಾಮ (ಉದ್ದ-ಅಗಲ-ಎತ್ತರ): 4735 ಎಂಎಂ-1830 ಎಂಎಂ- 1795 ಎಂಎಂ

ಎಂಜಿನ್ ತಾಂತ್ರಿಕತೆ (ಗ್ರೇಡ್ ಝಡ್ - ಆಟೋಮ್ಯಾಟಿಕ್)

ಎಂಜಿನ್ ತಾಂತ್ರಿಕತೆ (ಗ್ರೇಡ್ ಝಡ್ - ಆಟೋಮ್ಯಾಟಿಕ್)

ವಿಧ: ಬಿಎಸ್IV, ಟರ್ಬೊಚಾರ್ಜ್ಡ್ ಡೀಸೆಲ್

ಸಾಮರ್ಥ್ಯ: 2.8 ಲೀಟರ್

ಅಶ್ವಶಕ್ತಿ: 174 ಪಿಎಸ್ @ 3400 ಆರ್‌ಪಿಎಂ

ತಿರುಗುಬಲ: 343 ಎನ್‌ಎಂ @ 1200 - 3400 ಆರ್‌ಪಿಎಂ

ಗೇರ್ ಬಾಕ್ಸ್: 6 ಸ್ಪೀಡ್ ಜೊತೆ ಸಿಕ್ವೇನ್ಸಿಯಲ್ ಶಿಫ್ಟ್

ಭಾರ: 2450 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 55 ಲೀಟರ್

ಚಕ್ರ: ಅಲಾಯ್

ಆಯಾಮ (ಉದ್ದ-ಅಗಲ-ಎತ್ತರ): 4735 ಎಂಎಂ-1830 ಎಂಎಂ- 1795 ಎಂಎಂ

ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸುಲಭವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ತ್ವರಿತ ಸ್ಲೈಡ್ ವೈಶಿಷ್ಟ್ಯವನ್ನು ಮುಂಭಾಗದ ಸೀಟಿನಲ್ಲಿ ಕೊಡಲಾಗಿದೆ. ಇದರ ನೆರವಿನಿಂದ ಎರಡನೇ ಸಾಲಿನಲ್ಲಿ ಕುಳಿತುಕೊಂಡೇ ಫ್ರಂಟ್ ಸೀಟನ್ನು ಮುಂದಕ್ಕೆ ದೂಡಲು ಅಥವಾ ಹಿಂದಕ್ಕೆ ಎಳೆಯಲು ಸಾಧ್ಯವಾಗಲಿದೆ.

ಸುರಕ್ಷತೆ

ಸುರಕ್ಷತೆ

  • ಕ್ಲಚ್ ಸ್ಟ್ಯಾರ್ಟ್ ಸಿಸ್ಟಂ,
  • 7 ಎಸ್ ಆರ್ ಎಸ್ ಏರ್ ಬ್ಯಾಗ್: ಚಾಲಕ, ಮುಂಭಾಗದ ಪ್ರಯಾಣಿಕ, ಚಾಲಕ ಮೊಣಕಾಲು, ಮುಂಭಾಗ, ಕರ್ಟೈನ್ ಮತ್ತು ಶೀಲ್ಡ್ ಏರ್ ಬ್ಯಾಗ್,
  • ಎಬಿಎಸ್ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ ಮತ್ತು ಬ್ರೇಕ್ ಅಸಿಸ್ಟ್,
  • ವಾಹನ ಸ್ಥಿರತೆ ನಿಯಂತ್ರಣ ಮತ್ತು ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್,
  • 3 ಪಾಯಿಂಟ್ ಇಎಲ್ ಆರ್ ಫ್ರಂಟ್ ಸೀಟ್ ಬೆಲ್ಟ್ ಮತ್ತು ಹಿಂಬದಿಯ ಎಲ್ಲ ಪ್ರಯಾಣಿಕರಿಗೂ ಸೀಟ್ ಬೆಲ್ಟ್
  • ಮುನ್ನಡೆ

    ಮುನ್ನಡೆ

    • ದೊಡ್ಡದಾದ ಹೆಡ್ ರೆಸ್ಟ್,
    • ಅತ್ಯುತ್ತಮ ಹ್ಯಾಂಡ್ಲಿಂಗ್,
    • ಆಟೋಮ್ಯಾಟಿಕ್ ಮತ್ತು ಮೋಜಿನ ಪಯಣ,
    • ಟಾಪ್ ಎಂಡ್ ಮಾಡೆಲ್ ಗರಿಷ್ಠ ಸೌಲಭ್ಯ,
    • ಹೆಚ್ಚು ಸ್ಥಳಾವಕಾಶ,
    • ಏಳು ಎಸ್ ಆರ್ ಎಸ್ ಏರ್ ಬ್ಯಾಗ್,
    • ಗುಣಮಟ್ಟತೆ
    • ಹಿನ್ನಡೆ

      ಹಿನ್ನಡೆ

      ಎಂಟ್ರಿ ಮತ್ತು ಮಿಡ್ ವೆರಿಯಂಟ್ ಗಳಲ್ಲಿ 16 ಇಂಚುಗಳ ಚಕ್ರಗಳು,

      ಎರಡನೇ ಸಾಲಿನಲ್ಲಿರುವ ಆರ್ಮ್ ರೆಸ್ಟ್ ದಪ್ಪ ಸಾಲದು

       ಅಂತಿಮ ತೀರ್ಪು

      ಅಂತಿಮ ತೀರ್ಪು

      ಸ್ಟೈಲಿಷ್ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಟ್ಟಿರುವ ನೂತನ ಇನ್ನೋವಾ ಕ್ರೈಸ್ಟಾ ಪರಿಪೂರ್ಣ ಚಾಲನಾ ಅನುಭವವನ್ನು ನೀಡಲಿದೆ. ಇದು ದೇಶದ ಬಹು ಬಳಕೆಯ ವಾಹನ ವಿಭಾಗಕ್ಕೆ ಹೊಸ ದಿಶೆಯನ್ನು ತೋರಿಸಲಿರುವುದಂತೂ ಗ್ಯಾರಂಟಿ.

      ಸಂಪಾದಕರ ಮಾತು

      ಸಂಪಾದಕರ ಮಾತು

      ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕ ಜೊಬೊ ಕುರುವಿಲ್ಲಾ ಹೇಳುವ ಪ್ರಕಾರ, ಬದಲಾವಣೆ ಇಲ್ಲದೆ ಹೊರತು ನಾವೀನ್ಯತೆ ತರಲು ಸಾಧ್ಯವಿಲ್ಲ. ನೂತನ 2016 ಇನ್ನೋವಾ ಕ್ರೈಸ್ಟಾ ಇದಕ್ಕೊಂದು ಉದಾಹರಣೆಯಾಗಿದ್ದು, ಸಂಪೂರ್ಣ ರೂಪಾಂತರವನ್ನು ಕಾಣಬಹುದಾಗಿದೆ.

      ಟೊಯೊಟಾ ಇನ್ನೋವಾ ಕ್ರೈಸ್ಟಾ ಸಮಗ್ರ ಚಾಲನಾ ವಿಮರ್ಶೆ

      ಪ್ರಯೋಗಿಕವಾಗಿಯೂ ಹೇಳುವುದಾದ್ದಲ್ಲಿ ನೂತನ ಇನ್ನೋವಾ ಕ್ರೈಸ್ಟಾ ಬೆಲೆಗಿಂತಲೂ ಮಿಗಿಲಾಗಿ ತನ್ನ ಗುಣಮಟ್ಟತೆ, ನಿರ್ವಹಣೆ ಮತ್ತು ಎಂಜಿನ್ ದಕ್ಷತೆಯಿಂದ ಮಗದೊಂದು ದಶಕದಷ್ಟು ಕಾಲ ಮಾರುಕಟ್ಟೆಯಲ್ಲಿ ಉಳಿಗಾಲ ಹೊಂದುವಷ್ಟು ಸಮರ್ಥವೆನಿಸಿದೆ.

      ಇನ್ನೋವಾ ಎಂಜಿನ್ ಹೋಲಿಕೆ

      ಇನ್ನೋವಾ ಎಂಜಿನ್ ಹೋಲಿಕೆ

      ಹಳೆಯ ಇನ್ನೋವಾ

      ಎಂಜಿನ್: 2.5 ಲೀಟರ್

      ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್

      ಡೀಸೆಲ್ ಮ್ಯಾನುವಲ್ ಪವರ್: 102 ಪಿಎಸ್, 200 ಎನ್‌ಎಂ

      ಡೀಸೆಲ್ ಆಟೋಮ್ಯಾಟಿಕ್ ಪವರ್: ಲಭ್ಯವಿಲ್ಲ

      ಮೈಲೇಜ್: 9ರಿಂದ 10 ಕೀ.ಮೀ.

      ಆಸನ ವ್ಯವಸ್ಥೆ: 7 ಸೀಟು

      ಭಾರ: 2430 ಕೆ.ಜಿ (ಮ್ಯಾನುವಲ್)

      2016 ಇನ್ನೋವಾ ಕ್ರೈಸ್ಟಾ

      2016 ಇನ್ನೋವಾ ಕ್ರೈಸ್ಟಾ

      ಎಂಜಿನ್: 2.4 ಲೀಟರ್ ಮ್ಯಾನುವಲ್ ಮತ್ತು 2.8 ಲೀಟರ್ ಆಟೋಮ್ಯಾಟಿಕ್

      ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್

      ಡೀಸೆಲ್ ಮ್ಯಾನುವಲ್ ಪವರ್: 150 ಪಿಎಸ್, 343 ಎನ್‌ಎಂ

      ಡೀಸೆಲ್ ಆಟೋಮ್ಯಾಟಿಕ್ ಪವರ್: 174 ಅಶ್ವಶಕ್ತಿ, 360 ಎನ್ ಎಂ

      ಮೈಲೇಜ್: ಮ್ಯಾನುವಲ್ 10 ಕೀ.ಮೀ. ಆಟೋಮ್ಯಾಟಿಕ್ 11 ಕೀ.ಮೀ.

      ಆಸನ ವ್ಯವಸ್ಥೆ: 7 ಸೀಟು

      ಭಾರ: 2430 ಕೆ.ಜಿ (ಮ್ಯಾನುವಲ್), 2450 ಕೆ.ಜಿ (ಆಟೋಮ್ಯಾಟಿಕ್)

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಮಾಹಿತಿ ಮನರಂಜನಾ ವ್ಯವಸ್ಥೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸ್ಟೀರಿಂಗ್ ವೀಲ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಒಳಮೈ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಗುಣಮಟ್ಟತೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      ಸ್ಟೀರಿಂಗ್ ವೀಲ್ ಮೇಲೆ ಟೊಯೊಟಾ ಲಾಂಛನ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಎಸಿ, ಆಡಿಯೋ ನಿಯಂತ್ರಣ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸೂಕ್ಷ್ಮ ನೋಟ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸ್ವಿಚ್ ಗುಣಮಟ್ಟತೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಇಂಟಿರಿಯರ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಫ್ರಂಟ್ ಸ್ಟೋರೆಜ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಇನ್ಸ್ಟ್ರುಮೆಂಟ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಗೇರ್ ಬಾಕ್ಸ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಝೂಮ್ ಮಾಡಿದಾಗ...

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸ್ಟೀರಿಂಗ್ ನತ್ತ ಹದ್ದು ನೋಟ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ರಿಯರ್ ವ್ಯೂ ಮಿರರ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸೀಟು ಬೆಲ್ಟ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಒಳಮೈ ನೋಟ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಇನ್ಪೋಟೈನ್ಮೆಂಟ್ ಸಿಸ್ಟಂ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಗುಣಮಟ್ಟತೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಹಿಂಬದಿ ಸೀಟುಗಳು

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಲೈಟಿಂಗ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸುಲಭ ಸೀಟು ನಿರ್ವಹಣೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಲೆಥರ್ ಸೀಟು

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಗುಣಮಟ್ಟತೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸ್ವಿಚ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಆಸನ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಫಾಗ್ ಲ್ಯಾಂಪ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಇಂಧನ ತುಂಬುವಿಕೆ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಏರೋಡೈನಾಮಿಕ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ರಿಯರ್ ಸ್ಪಾಯ್ಲರ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಆಟೋಮ್ಯಾಟಿಕ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಟೈಲ್ ಲ್ಯಾಂಪ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಸೈಡ್ ಪ್ರೊಫೈಲ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಹೊರಗಿನ ರಿಯರ್ ವ್ಯೂ ಮಿರರ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಆಕರ್ಷಕ ನೋಟ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಹೊರಮೈ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ರಿಯರ್ ಪ್ರೊಫೈಲ್

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ

      ಚಿತ್ರಗಳಲ್ಲಿ...

      ಚಿತ್ರಗಳಲ್ಲಿ...

      2016 ಇನ್ನೋವಾ ಕ್ರೈಸ್ಟಾ ಯಶಸ್ಸಿನತ್ತ ಪಯಣ...

Most Read Articles

Kannada
English summary
First Drive: 2016 Toyota Innova Crysta — The INNOVA-tion Continues
Story first published: Monday, May 2, 2016, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X