ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ
Style: ಎಸ್‌ಯುವಿ
11.00 - 20.15 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಹ್ಯುಂಡೈ ಕ್ರೆಟಾ ಪ್ರಸ್ತುತ 28 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 6 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಹ್ಯುಂಡೈ ಕ್ರೆಟಾ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಕ್ರೆಟಾ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಹ್ಯುಂಡೈ ಕ್ರೆಟಾ ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
10,99,900
ಎಸ್‌ಯುವಿ | Gearbox
12,17,700
ಎಸ್‌ಯುವಿ | Gearbox
13,39,200
ಎಸ್‌ಯುವಿ | Gearbox
14,32,400
ಎಸ್‌ಯುವಿ | Gearbox
15,26,900
ಎಸ್‌ಯುವಿ | Gearbox
15,41,900
ಎಸ್‌ಯುವಿ | Gearbox
15,82,400
ಎಸ್‌ಯುವಿ | Gearbox
15,94,900
ಎಸ್‌ಯುವಿ | Gearbox
16,09,900
ಎಸ್‌ಯುವಿ | Gearbox
17,23,800
ಎಸ್‌ಯುವಿ | Gearbox
17,38,800
ಎಸ್‌ಯುವಿ | Gearbox
17,44,900
ಎಸ್‌ಯುವಿ | Gearbox
17,59,900
ಎಸ್‌ಯುವಿ | Gearbox
18,69,800
ಎಸ್‌ಯುವಿ | Gearbox
18,84,800
ಎಸ್‌ಯುವಿ | Gearbox
19,99,900
ಎಸ್‌ಯುವಿ | Gearbox
20,14,900

ಹ್ಯುಂಡೈ ಕ್ರೆಟಾ ಡೀಸೆಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
12,44,900
ಎಸ್‌ಯುವಿ | Gearbox
13,67,700
ಎಸ್‌ಯುವಿ | Gearbox
14,89,200
ಎಸ್‌ಯುವಿ | Gearbox
15,82,400
ಎಸ್‌ಯುವಿ | Gearbox
17,32,400
ಎಸ್‌ಯುವಿ | Gearbox
17,44,900
ಎಸ್‌ಯುವಿ | Gearbox
17,59,900
ಎಸ್‌ಯುವಿ | Gearbox
18,73,900
ಎಸ್‌ಯುವಿ | Gearbox
18,88,900
ಎಸ್‌ಯುವಿ | Gearbox
19,99,900
ಎಸ್‌ಯುವಿ | Gearbox
20,14,900

ಹ್ಯುಂಡೈ ಕ್ರೆಟಾ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 0
ಡೀಸೆಲ್ 0

ಹ್ಯುಂಡೈ ಕ್ರೆಟಾ ವಿಮರ್ಶೆ

ಹ್ಯುಂಡೈ ಕ್ರೆಟಾ Exterior And Interior Design

ಹ್ಯುಂಡೈ ಕ್ರೆಟಾ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಕ್ರೆಟಾದ ಫೇಸ್‌ಲಿಫ್ಟ್ ಆವೃತ್ತಿಯನ್ನು 2020ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತು. ಹೊಸ ಹ್ಯುಂಡೈ ಕ್ರೆಟಾ ಸಂಪೂರ್ಣವಾಗಿ ಹೊಸ ವಿನ್ಯಾಸ, ವಿನೂತನ ವೈಶಿಷ್ಟ್ಯತೆಗಳು ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಹೊಸ ತಲೆಮಾರಿನ ಕ್ರೆಟಾ ಮುಂಭಾಗದಲ್ಲಿ ದೊಡ್ಡ ಕ್ಯಾಸ್ಕೇಡಿಂಗ್ ಗ್ರಿಲ್‌ ಜೊತೆಗೆ ಬ್ರಾಂಡ್‌ನ ಹೊಸ ವಿನ್ಯಾಸವನ್ನು ಸೇರ್ಪಡೆಗೊಳಿಸಲಾಗಿದ್ದು, ಗ್ರಿಲ್‌ನ ಎರಡೂ ಬದಿಗಳಲ್ಲಿ ಹೊಸದಾಗಿ ಜೋಡಿಯಾದ ಎಲ್ಇಡಿ ಹೆಡ್‌ಲ್ಯಾಂಪ್ ಘಟಕಗಳನ್ನು ನೀಡಲಾಗಿದೆ. ಹೊಸ ಕ್ರೆಟಾದ ಎಲ್ಇಡಿ ಡಿಆರ್‌ಎಲ್ಎಸ್‌ಗಳು ಸಿ ಆಕಾರದ ಸ್ವರೂಪದಲ್ಲಿ ಹೆಡ್‌ಲ್ಯಾಂಪ್‌ಗಳನ್ನು ಸುತ್ತುವರೆದಿವೆ. ಮುಂಭಾಗದ ಬಂಪರ್ ಅನ್ನು ಸಹ ಮರು ವಿನ್ಯಾಸಗೊಳಿಸಲಾಗಿದ್ದು, ಸೆಂಟರ್ ಏರ್‌ಇನ್‌ಟೆಕ್‌ನೊಂದಿಗೆ ಎರಡೂ ತುದಿಯಲ್ಲೂ ಫಾಗ್ ಲ್ಯಾಂಪ್‌ಗಳಿವೆ.

ಹೊಸ ಕಾರಿನ ಸೈಡ್ ಮತ್ತು ಹಿಂಭಾಗದ ಪ್ರೊಫೈಲ್‌ ಸಹ ಆಕರ್ಷಕವಾಗಿದ್ದು, ಸೈಡ್ ಪ್ರೊಫೈಲ್ ಇದೀಗ ಸಂಪೂರ್ಣವಾಗಿ ಹೊಸ ವಿನ್ಯಾಸದೊಂದಿಗೆ ಕೂಡಿದೆ. ವಿಶೇಷವಾಗಿ ಹೊಸ ಕಾರಿನ ಸಿ-ಪಿಲ್ಲರ್‌ಗಳು ಆಕರ್ಷಕವಾಗಿದ್ದು, ಮರುವಿನ್ಯಾಸಗೊಳಿಸಲಾದ ಅಲಾಯ್ ಚಕ್ರಗಳು ಕಾರನ್ನು ಹೆಚ್ಚು ಸ್ಟೈಲಿಶ್ ಆಗಿ ಕಾಣುವಂತೆ ಮಾಡಿವೆ.

ಹಿಂಭಾಗದ ಪ್ರೊಫೈಲ್ ಸಹ ಹೊಸ ಎಸ್‌ಯುವಿಗೆ ಆಕರ್ಷಕ ನೋಟ ನೀಡಿದ್ದು, ಹೆಡ್‌ಲ್ಯಾಂಪ್ ಘಟಕಗಳಂತೆಯೇ ಸಿ-ಆಕಾರದಲ್ಲಿ ಟೈಲ್‌ಲೈಟ್‌ ಜೋಡಿಸಲಾಗಿದೆ. ಹೊಸ ಕ್ರೆಟಾದಲ್ಲಿ ರೂಫ್ ಮೌಂಟೆಡ್ ಸ್ಪಾಯ್ಲರ್ ಒಳಗೊಂಡ ಬ್ರೇಕ್ ಇಂಟ್ರಾಗ್ರೆಟೆಡ್ ಸೌಲಭ್ಯವಿದ್ದು, ಹೊಸ ಕಾರಿನ ಬೂಟ್ ಸ್ಪೆಸ್ ಮುಚ್ಚಳವನ್ನು ಹಾಗೂ ಹಿಂಭಾಗದ ಬಂಪರ್ ವಿನ್ಯಾಸವನ್ನು ಸಹ ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಲಾಗಿದೆ.

ಇನ್ನು ನವೀಕರಣಗೊಳಿಸಲಾದ ವಿನ್ಯಾಸಗಳು ಕೇವಲ ಹೊಸ ಕಾರಿನ ಹೊರಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಹ್ಯುಂಡೈ ಕಂಪನಿಯು ಕ್ರೆಟಾ ಹೊಸ ಕಾರಿನ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪರಿಚಯಿಸಿದ್ದು, ಹೊಸ ವೈಶಿಷ್ಟ್ಯತೆಗಳೊಂದಿಗೆ ಇದು ಹಳೆಯ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿ ನಿರ್ಮಾಣಗೊಂಡಿದೆ.

ಹ್ಯುಂಡೈ ಕ್ರೆಟಾ ಎಂಜಿನ್ ಮತ್ತು ಸಾಮರ್ಥ್ಯ

ಹ್ಯುಂಡೈ ಕ್ರೆಟಾ Engine And Performance

ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಇದೀಗ ಉನ್ನತೀಕರಿಸಲಾದ ಬಿಎಸ್ 6 ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದು, ಹಳೆಯ ಮಾದರಿಯಲ್ಲಿನ 1.6-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಲಾಗಿದೆ. ಹೊಸಾ ಕ್ರೆಟಾದಲ್ಲಿ ಇದೀಗ ಸಹೋದರ ಸಂಸ್ಥೆಯಾದ ಕಿಯಾ ಸೆಲ್ಟೊಸ್‌ನಿಂದ ಹೊಸ ಪವರ್‌ಟ್ರೇನ್ ಅನ್ನು ಎರವಲು ಪಡೆದುಕೊಂಡಿದೆ.

ಕ್ರೆಟಾ ಹೊಸ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಜೊತೆಗೆ ಪರ್ಫಾಮೆನ್ಸ್ ಮಾದರಿಯಾಗಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮಾದರಿಯನ್ನು ಪರಿಚಯಿಸಲಾಗಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಮಾದರಿಯು 115 ಬಿಎಚ್‌ಪಿ, 144 ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು 115 ಬಿಎಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೊದಲ ಎರಡೂ ಎಂಜಿನ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ಪಡೆಯುತ್ತವೆ. ಮೂರನೆಯ ಎಂಜಿನ್ ಆಯ್ಕೆಯಾದ 1.4-ಲೀಟರ್ ಟರ್ಬೊ-ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 140 ಬಿಎಚ್‌ಪಿ ಮತ್ತು 242 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹ್ಯುಂಡೈ ಕ್ರೆಟಾ ಇಂಧನ ದಕ್ಷತೆ

ಹ್ಯುಂಡೈ ಕ್ರೆಟಾ Fuel Efficiency

ಹೊಸ ಹ್ಯುಂಡೈ ಕ್ರೆಟಾ ಮಾದರಿಯು ಬಿಎಸ್ 6 ಎಂಜಿನ್‌ಗಳಿಂದಾಗಿ ಸುಧಾರಿತ ಮೈಲೇಜ್ ಹೊಂದಿದ್ದು, ಇಂಧನ ಪ್ರಕಾರ ಮತ್ತು ಗೇರ್‌ಬಾಕ್ಸ್ ಆಯ್ಕೆಯನ್ನು ಅವಲಂಬಿಸಿ ಹೊಸ ಎಸ್‌ಯುವಿಯು ಪ್ರತಿ ಲೀಟರ್‌ಗೆ 15 ಕಿ.ಮೀ ನಿಂದ 21 ಕಿ.ಮೀ ಇಂಧನ ದಕ್ಷತೆ ಹೊಂದಿದೆ ಎಂದು ಹ್ಯಂಡೈ ಕಂಪನಿಯು ಹೇಳಿಕೊಂಡಿದೆ. ಆದರೆ ನಿಜವಾದ ಇಂಧನ ದಕ್ಷತೆಯು ಹಲವಾರು ವಿಭಿನ್ನ ಬಾಹ್ಯ ಅಂಶಗಳ ಮೇಲೆ ನಿರ್ಧರಿತವಾಗಲಿದ್ದು, ಕ್ರೆಟಾ ಪ್ರತಿಸ್ಪರ್ಧಿಗಳಿಂತ ಉತ್ತಮ ಮೈಲೇಜ್ ಹಿಂದಿರುಗಿಸಬಲ್ಲದು. 

ಹ್ಯುಂಡೈ ಕ್ರೆಟಾ ಮುಖ್ಯ ವೈಶಿಷ್ಟ್ಯತೆಗಳು

ಹ್ಯುಂಡೈ ಕ್ರೆಟಾ Important Features

ಹೊಸ ಕ್ರೆಟಾ ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಉತ್ತಮ-ದರ್ಜೆಯ ಬಿಡಿಭಾಗಗಳನ್ನು ಜೋಡಣೆ ಮಾಡಿದ್ದು, ಹೊಸ ಕಾರಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಎಲ್ಇಡಿ ಕಾರ್ನರಿಂಗ್ ಲ್ಯಾಂಪ್‌ಗಳು, ಕೀ ಲೆಸ್ ಎಂಟ್ರಿ, ಸ್ಮಾರ್ಟ್ ಪನೋರಮಿಕ್ ಸನ್‌ರೂಫ್, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್, ಆಪಲ್ ಕಾರ್‌ಪ್ಲೇನೊಂದಿಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಮತ್ತು ಹ್ಯುಂಡೈ ಬ್ಲೂ ಲಿಂಕ್ ಕನೆಕ್ಟೆಡ್ ತಂತ್ರಜ್ಞಾನ, ಸಂಪೂರ್ಣ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್, ವೆಂಟೆಲೆಟೆಡ್ ಆಸನಗಳು ಮತ್ತು ಹೊಂದಾಣಿಕೆ ಮಾಡಬಹುದಾದ ಆಟೋ ಒಆರ್‌ವಿಎಂಗಳು ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಂಡಿವೆ.

ಹ್ಯುಂಡೈ ಕ್ರೆಟಾ ತೀರ್ಪು

ಹ್ಯುಂಡೈ ಕ್ರೆಟಾ Verdict

ಹ್ಯುಂಡೈ ಕ್ರೆಟಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ಹೊಸ ಎಸ್‌ಯುವಿಯಲ್ಲಿನ ಆಕರ್ಷಕ ವೈಶಿಷ್ಟ್ಯತೆಗಳು ಮತ್ತು ಬಲವಾದ ಕಾರ್ಯಕ್ಷಮತೆಗಾಗಿ ಬಲಿಷ್ಠ ಎಂಜಿನ್‌ ಆಯ್ಕೆಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಹ್ಯುಂಡೈ ಕ್ರೆಟಾ ಹ್ಯುಂಡೈ ಕ್ರೆಟಾ ಬಣ್ಣಗಳು


Abyss Black Pearl
Robust Emerald Pearl
Ranger Khaki
Titan Grey
Fiery Red
Atlas White

ಹ್ಯುಂಡೈ ಹ್ಯುಂಡೈ ಕ್ರೆಟಾ ಫೋಟೋಗಳು

ಹ್ಯುಂಡೈ ಕ್ರೆಟಾ Q & A

ಹೊಸ ಹ್ಯುಂಡೈ ಕ್ರೆಟಾದಲ್ಲಿ ಹೊಸ ರೂಪಾಂತರಗಳು ಯಾವುವು?

ಹ್ಯುಂಡೈ ಕ್ರೆಟಾದಲ್ಲಿ ಐದು ರೂಪಾಂತರಗಳನ್ನು ನೀಡಲಾಗಿದ್ದು, ಇ, ಇಎಕ್ಸ್, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಖರೀದಿಗೆ ಲಭ್ಯವಿವೆ.

Hide Answerkeyboard_arrow_down
ಹೊಸ ಹ್ಯುಂಡೈ ಕ್ರೆಟಾದಲ್ಲಿನ ಹೊಸ ಬಣ್ಣ ಆಯ್ಕೆಗಳು ಯಾವುವು?

ಹೊಸ ಕ್ರೆಟಾವನ್ನು ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಟೈಟಾನ್ ಗ್ರೇ, ಟೈಫೂನ್ ಸಿಲ್ವರ್, ಫ್ಯಾಂಟಮ್ ಬ್ಲ್ಯಾಕ್, ಪೋಲಾರ್ ವೈಟ್, ಗ್ಯಾಲಕ್ಸಿ ಬ್ಲೂ, ಲಾವಾ ಆರೆಂಜ್ ಮತ್ತು ರೆಡ್ ಮಲ್ಬೆರಿ ಎನ್ನುವ ಏಳು ಬಣ್ಣಗಳ ಆಯ್ಕೆ ನೀಡಿದೆ.

Hide Answerkeyboard_arrow_down
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಗಳು ಯಾವುವು?

ಹೊಸ ಹ್ಯುಂಡೈ ಕ್ರೆಟಾ ಮಾದರಿಗೆ ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

Hide Answerkeyboard_arrow_down
ಹ್ಯುಂಡೈ ಕ್ರೆಟಾದಲ್ಲಿ ಖರೀದಿಗೆ ಅತ್ಯುತ್ತಮ ರೂಪಾಂತರ ಯಾವುದು?

ಹೊಸ ಕ್ರೆಟಾದಲ್ಲಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಹೈ-ಎಂಡ್ ಮಾದರಿಯು ಅತ್ಯುತ್ತಮ ಆಯ್ಕೆಯಾಗಿದೆ.

Hide Answerkeyboard_arrow_down
ಇವುಗಳಲ್ಲಿ ಯಾವುದು ಉತ್ತಮ? ಹ್ಯುಂಡೈ ಕ್ರೆಟಾ ಅಥವಾ ಕಿಯಾ ಸೆಲ್ಟೊಸ್?

ಈ ಎರಡು ಕಾರು ಮಾದರಿಗಳು ತಮ್ಮದೆ ಆದ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿವಿಧ ಕಾರಣಗಳಿಗೆ ಎರಡು ಮಾದರಿಗಳು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿವೆ. ಆದಾಗ್ಯೂ, ಕ್ರೆಟಾ ಮಾದರಿಯು ಸೆಲ್ಟೊಸ್ ಮಾದರಿಗಿಂತಲೂ ಹೆಚ್ಚು ಗ್ರಾಹಕನ್ನು ಸೆಳೆಯುವ ನೀರಿಕ್ಷೆಯಿದೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X