ಕಿಯಾ ಸೊನೆಟ್

ಕಿಯಾ ಸೊನೆಟ್
Style: ಎಸ್‌ಯುವಿ
7.99 - 15.69 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಕಿಯಾ ಸೊನೆಟ್ ಪ್ರಸ್ತುತ 19 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 7 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಕಿಯಾ ಸೊನೆಟ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಸೊನೆಟ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಕಿಯಾ ಸೊನೆಟ್ ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
7,99,000
ಎಸ್‌ಯುವಿ | Gearbox
8,79,000
ಎಸ್‌ಯುವಿ | Gearbox
9,89,900
ಎಸ್‌ಯುವಿ | Gearbox
10,49,000
ಎಸ್‌ಯುವಿ | Gearbox
11,49,000
ಎಸ್‌ಯುವಿ | Gearbox
12,29,000
ಎಸ್‌ಯುವಿ | Gearbox
13,39,000
ಎಸ್‌ಯುವಿ | Gearbox
14,49,900
ಎಸ್‌ಯುವಿ | Gearbox
14,69,000

ಕಿಯಾ ಸೊನೆಟ್ ಡೀಸೆಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
9,79,000
ಎಸ್‌ಯುವಿ | Gearbox
10,39,000
ಎಸ್‌ಯುವಿ | Gearbox
11,39,000
ಎಸ್‌ಯುವಿ | Gearbox
11,99,000
ಎಸ್‌ಯುವಿ | Gearbox
12,59,900
ಎಸ್‌ಯುವಿ | Gearbox
12,99,000
ಎಸ್‌ಯುವಿ | Gearbox
13,69,000
ಎಸ್‌ಯುವಿ | Gearbox
14,39,000
ಎಸ್‌ಯುವಿ | Gearbox
15,49,900
ಎಸ್‌ಯುವಿ | Gearbox
15,69,000

ಕಿಯಾ ಸೊನೆಟ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 0
ಡೀಸೆಲ್ 0

ಕಿಯಾ ಸೊನೆಟ್ ವಿಮರ್ಶೆ

ಕಿಯಾ ಸೊನೆಟ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಸೊನೆಟ್ ಆವೃತ್ತಿಯು ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿ ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿದೆ.  ಸೊನೆಟ್ ಕಾರು ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯೊಂದಿಗೆ ಸೆಲ್ಟೊಸ್ ಕಾರು ಮಾದರಿಗಿಂತಲೂ ಕೆಳದರ್ಜೆಯ ಮಾದರಿಯಾಗಿ ಮಾರಾಟವಾಗುತ್ತಿದೆ. ಸೊನೆಟ್ ಕಾರು ಸ್ಪೋರ್ಟಿ ವಿನ್ಯಾಸ, ಆಕ್ರಮಣಕಾರಿ ಸ್ಟೈಲಿಷ್ ಅಂಶಗಳೊಂದಿಗೆ ಆಕರ್ಷಕವಾಗಿವೆ.

ಸೊನೆಟ್ ಕಾರಿನ ಮುಂಭಾಗದ ವಿನ್ಯಾಸವು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಬ್ಲ್ಯಾಕ್ ಮೆಷ್ ಮತ್ತು ರೆಡ್ ಇನ್ಸ್‌ರ್ಟ್ ಹೊಂದಿರುವ ಟೈಗರ್ ನೋಸ್ ಗ್ರಿಲ್ ಮತ್ತು ನೂರ್ಲ್-ಪ್ರೇರಿತ ಕ್ರೋಮ್ ಸ್ಟ್ರಿಪ್‌ನೊಂದಿಗೆ ಸುತ್ತುವರಿದಿದೆ. ಹೊಸ ಕಾರಿನಲ್ಲಿ ಸಮಗ್ರ ಎಲ್ಇಡಿ ಡಿಆರ್‌ಎಲ್ಎಸ್‌ಗಳೊಂದಿಗೆ ಬ್ರಾಂಡ್‌ನ ಕ್ರೌನ್-ಜ್ಯುವೆಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆಗೆ ಟರ್ನ್ ಇಂಡಿಕೇಟರ್ ನೀಡಲಾಗಿದೆ. ಮುಂಭಾಗದ ಬಂಪರ್‌ನ ಎರಡೂ ತುದಿಗಳಲ್ಲಿ ಫಾಗ್ ಲ್ಯಾಂಪ್ ಹೊಂದಿದ್ದು, ಸೆಂಟ್ರಲ್ ಏರ್ ಡ್ಯಾಮ್ ಜೊತೆ ಸಿಲ್ವರ್ ಎಲಿಮೆಂಟ್ ಜೋಡಿಸಲಾಗಿದೆ.

ಹೊಸ ಕಾರಿನಲ್ಲಿ ಸೈಡ್ ಪ್ರೊಫೈಲ್ ಮತ್ತು ರಿಯರ್ ಪ್ರೊಫೈಲ್ ಕೂಡಾ ಅಚ್ಚುಕಟ್ಟಾದ ಸ್ಪೋರ್ಟಿ ವಿನ್ಯಾಸ ಹೊಂದಿದ್ದು, 16-ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವೀಲ್ಹ್‌ಗಳು, ಬ್ಲ್ಯಾಕ್ ಕ್ಲಾಡಿಂಗ್‌ನಿಂದ ಆವೃತವಾಗಿರುವ ವೀಲ್ಹ್ ಆರ್ಚ್ ಪಡೆದುಕೊಂಡಿದೆ. ಜೊತೆಗೆ ಹೊಸ ಕಾರಿನಲ್ಲಿ ಸಿಲ್ವರ್ ಪ್ರೇರಿತ ರೂಫ್ ರೈಲ್ಸ್ ಮತ್ತುಕ್ರೋಮ್ ಹ್ಯಾಂಡಲ್ ಡೋರ್ ಅಳವಡಿಕೆ ಮಾಡಲಾಗಿದೆ.

ರಿಯರ್ ಪ್ರೋಫೈಲ್‌ನಲ್ಲಿ ಹಾರ್ಟ್‌ಬಿಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ಸ್ ಪಡೆದುಕೊಂಡಿದ್ದು, ಇವು ತೆಳುವಾದ ರಿಫ್ಲೆಕ್ಟರ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದಿವೆ. ಇನ್ನು ತಳಭಾಗಕ್ಕೆ ಹೊಂದಿಕೊಂಡಿರುವ ಗ್ಲೊಸ್ ಬ್ಲ್ಯಾಕ್ ಮಾದರಿಯ ಬಂಪರ್ ಜೊತೆಗೆ ಸಿಲ್ವರ್ ಆಕ್ಸೆಂಟ್ ಮತ್ತು ಫ್ಲಕ್ಸ್ ಡಿಫ್ಯೂಸರ್ ಅನ್ನು ಸಹ ಒಳಗೊಂಡಿದೆ.
  
ಹೊರಭಾಗದಲ್ಲಿನ ಆಕರ್ಷಣೆಯೆಂತೆ ಕಾರಿನ ಒಳಭಾಗದ ವಿನ್ಯಾಸಗಳು ಕೂಡಾ ಆಕರ್ಷಕ ಮತ್ತು ಪ್ರೀಮಿಯಂ ಸೌಲಭ್ಯ ಹೊಂದಿದ್ದು, ಸಾಫ್ಟ್ ಟಚ್ ಮಟಿರಿಯಲ್, ಲೆದರ್ ಆಸನಗಳು ಮತ್ತು ಪ್ಲಾಸ್ಟಿಕ್ ಭಾಗಗಳನ್ನು ಒಳಗೊಂಡಿದೆ. ಹೊಂದಾಣಿಕೆ ಮಾಡಿಕೊಳ್ಳಬಹುದಾದ ಆಸನಗಳು, ಗೇರ್ ಲೀವರ್, ಸ್ಟ್ರೀರಿಂಗ್ ವೀಲ್ಹ್, ಸೈಡ್ ಡೋರ್ ಪ್ಯಾನೆಲ್, 10.25-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯಗಳು ಕಾರಿನ ಒಳನೋಟಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

ಕಿಯಾ ಸೊನೆಟ್ ಎಂಜಿನ್ ಮತ್ತು ಸಾಮರ್ಥ್ಯ

ಕಿಯಾ ಸೊನೆಟ್ ಕಾರು ಒಟ್ಟು ಮೂರು ಎಂಜಿನ್ ಆಯ್ಕೆ ಹೊಂದಿದ್ದು, ಎರಡು ಪೆಟ್ರೋಲ್ ಮಾದರಿಗಳು ಮತ್ತು ಒಂದು ಡೀಸೆಲ್ ಎಂಜಿನ್ ಮಾದರಿ ಹೊಂದಿದೆ. 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಮಾದರಿಯು 5-ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ ಮತ್ತು 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, 1.0-ಲೀಟರ್ ತ್ರಿ ಸಿಲಿಂಡರ್ ಟರ್ಬೋ ಎಂಜಿನ್ ಮಾದರಿಯು 6-ಸ್ಪೀಡ್ ಇಂಟಲಿಜೆಂಟ್ ಮ್ಯಾನುವಲ್(ಐಎಂಟಿ) ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ ಆಯ್ಕೆಯೊಂದಿಗೆ 120-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.

1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಎಂಡ್‌ ಮಾದರಿಯಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಮ್ಯಾನುವಲ್ ಆವೃತ್ತಿಯು 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ, ಆಟೋಮ್ಯಾಟಿಕ್ ಆವೃತ್ತಿಯು 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕಿಯಾ ಸೊನೆಟ್ ಇಂಧನ ದಕ್ಷತೆ

ಅತ್ಯುತ್ಯುಮ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯಲ್ಲೂ ಸೊನೆಟ್ ಕಾರು ಮಾದರಿಯು ಗ್ರಾಹಕರನ್ನು ಸೆಳೆಯಲಿದೆ. ಕಿಯಾ ಮೋಟಾರ್ಸ್ ಮಾಹಿತಿ ಪ್ರಕಾರ 1.2-ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ 18.4 ಕಿ.ಮೀ ಮತ್ತು ಟರ್ಬೋ ಪೆಟ್ರೋಲ್ ಮಾದರಿಯು ಐಎಂಟಿ ಮತ್ತು ಡಿಟಿಸಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಪ್ರತಿ ಲೀಟರ್‌ಗೆ 18.2 ಕಿ.ಮೀ, ಡೀಸೆಲ್ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 24.1 ಕಿ.ಮೀ ಮತ್ತು ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.  

ಕಿಯಾ ಸೊನೆಟ್ ಮುಖ್ಯ ವೈಶಿಷ್ಟ್ಯತೆಗಳು

ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್‌ಗಳನ್ನು ಹೊಂದಿರುವ ಕಿಯಾ ಸೊನೆಟ್ ಕಾರಿನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳಿದ್ದು, ಕಿಯಾ ಬ್ರಾಂಡ್‌ನ ಯುವಿಒ ಕಾರ್ ಕನೆಕ್ಟ್ ತಂತ್ರಜ್ಞಾನವು ಸಹ ಸೊನೆಟ್ ಕಾರಿನಲ್ಲಿದೆ. ಇದರೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್ ಲೈಟ್ಸ್, 16-ಇಂಚಿನ ಅಲಾಯ್ ವೀಲ್ಹ್‌ಗಳು, 10.25-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲೆಕ್ಟ್ರಾನಿಕ್ ಸನ್‌ರೂಫ್, ವೆಂಟಿಲೆಟೆಡ್ ಸೀಟುಗಳು, ವೈರ್‌ಲೆಸ್ ಚಾರ್ಜರ್, ರಿಯರ್ ಎಸಿ ವೆಂಟ್ಸ್, 57 ಫೀಚರ್ಸ್‌ಗಳನ್ನು ಒಂದೇ ಸೂರಿನಡಿ ನಿಯಂತ್ರಣ ಮಾಡಬಹುದಾದ ಯುವಿಒ ಕಾರ್ ಕನೆಕ್ಟ್ ಟೆಕ್ನಾಲಜಿ, ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೊಲ್ಸ್, ಕೀ ಲೆಸ್ ಇಗ್ನಿಷನ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

ಸುರಕ್ಷಾ ಸೌಲಭ್ಯಗಳು: 6-ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಮ್ಯಾನೆಜ್‌ಮೆಂಟ್(ವಿಎಸ್ಎಂ), ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ರೇಕ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಇಂಪ್ಯಾಕ್ಟ್ ಸೆನ್ಸಾರ್ ಆಟೋ ಡೋರ್ ಅನ್‌ಲಾಕ್, ಸ್ಪೀಡ್-ಸೆನ್ಸಿಂಗ್ ಆಟೋ ಡೋರ್ ಲಾಕ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೌಲಭ್ಯಗಳಿವೆ.

ಕಿಯಾ ಸೊನೆಟ್ ತೀರ್ಪು

ಕಿಯಾ ಸೊನೆಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುವ ಮೂಲಕ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ವಿನ್ಯಾಸ, ಆಕರ್ಷಕ ವೈಶಿಷ್ಟ್ಯತೆ, ಸುಧಾರಿತ ತಂತ್ರಜ್ಞಾನ ಪ್ರೇರಿತ ಮತ್ತು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಸ್ಪರ್ಧಾತ್ಮಕ ಬೆಲೆಯೊಂದಿಗೆ ಖರೀದಿಗೆ ಅತ್ಯುತ್ತಮ ಮಾದರಿಯಾಗಿದೆ.

ಕಿಯಾ ಸೊನೆಟ್ ಕಿಯಾ ಸೊನೆಟ್ ಬಣ್ಣಗಳು


Aurora Black Pearl
Pewter Olive
Imperial Blue
Gravity Grey
Sparkling Silver
Intense Red
Glacier white Pearl

ಕಿಯಾ ಕಿಯಾ ಸೊನೆಟ್ ಫೋಟೋಗಳು

ಕಿಯಾ ಸೊನೆಟ್ Q & A

ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಕಾರಿನ ಪ್ರಮುಖ ಪ್ರತಿಸ್ಪರ್ಧಿ ಕಾರುಗಳು ಯಾವವು?

ಕಿಯಾ ಸೊನೆಟ್ ಕಾರಿಗೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳು ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

Hide Answerkeyboard_arrow_down
ಕಿಯಾ ಸೊನೆಟ್ ಕಾರಿನಲ್ಲಿ ಲಭ್ಯವಿರುವ ರೂಪಾಂತರಗಳು ಯಾವವು?

ಕಿಯಾ ಸೊನೆಟ್ ಆರು ರೂಪಾಂತರಗಳನ್ನು ಹೊಂದಿದ್ದು, ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಮತ್ತು ಜಿಟಿಎಕ್ಸ್ ಪ್ಲಸ್‌ ಖರೀದಿ ಮಾಡಬಹುದಾಗಿದೆ.

Hide Answerkeyboard_arrow_down
ಕಿಯಾ ಸೊನೆಟ್ ಕಾರಿನಲ್ಲಿ ಎಷ್ಟು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ?

ಕಿಯಾ ಸೊನೆಟ್ ಕಾರು 8 ಸಿಂಗಲ್ ಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Hide Answerkeyboard_arrow_down
ಕಿಯಾ ಸೊನೆಟ್ ಕಾರಿನಲ್ಲಿ ಆಯ್ಕೆ ಮಾಡಲು ಉತ್ತಮವಾದ ಎಂಜಿನ್ ಮತ್ತು ರೂಪಾಂತರ ಯಾವುದು?

ಡೀಸೆಲ್ ಸ್ವಯಂಚಾಲಿತ ಪವರ್‌ಟ್ರೈನ್ ಹೊಂದಿರುವ ಸೊನೆಟ್ ಜಿಟಿಎಕ್ಸ್ ಪ್ಲಸ್ ಮತ್ತು ಐಎಂಟಿ ಗೇರ್‌ಬಾಕ್ಸ್ ಹೊಂದಿರುವ ಟರ್ಬೊ-ಪೆಟ್ರೋಲ್ ಮಾದರಿಯು ಹೆಚ್ಚಿನ ಬೇಡಿಕೆಯೊಂದಿಗೆ ಅತ್ಯುತ್ತಮ ಆಯ್ಕೆಯಾಗಿದೆ.

Hide Answerkeyboard_arrow_down
ಕಿಯಾ ಸೊನೆಟ್ ಕಾರಿನಲ್ಲಿ ಬೂಟ್ ಸ್ಪೆಸ್ ಸಾಮರ್ಥ್ಯ ಎಷ್ಟು?

ಕಿಯಾ ಸೊನೆಟ್ ಕಾರಿನಲ್ಲಿ 392-ಲೀಟರ್‌ನಷ್ಟು ಬೂಟ್ ಸ್ಪೆಸ್ ಸಾಮರ್ಥ್ಯ ಹೊಂದಿದೆ.

Hide Answerkeyboard_arrow_down
ಕಿಯಾ ಸೊನೆಟ್ ಖರೀದಿಗಾಗಿ ಬುಕ್ಕಿಂಗ್ ಮೊತ್ತ ಎಷ್ಟು?

ಕಿಯಾ ಸೊನೆಟ್ ಕಾರು ಮಾದರಿಯನ್ನು ಆನ್‌ಲೈನ್ ಮೂಲಕ ಅಥವಾ ದೇಶಾದ್ಯಂತ ಹರಡಿಕೊಂಡಿರುವ ಕಂಪನಿಯ ಯಾವುದೇ ಅಧಿಕೃತ ಮಾರಾಟಗಾರರ ಬಳಿ ರೂ. 25 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಸಲ್ಲಿಸಬಹುದು.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X