ಎಂಜಿ ಹೆಕ್ಟರ್ ಪ್ಲಸ್

ಎಂಜಿ ಹೆಕ್ಟರ್ ಪ್ಲಸ್
Style: ಎಸ್‌ಯುವಿ
13.63 - 19.81 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಎಂಜಿ ಹೆಕ್ಟರ್ ಪ್ಲಸ್ ಪ್ರಸ್ತುತ 17 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 6 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಎಂಜಿ ಹೆಕ್ಟರ್ ಪ್ಲಸ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಹೆಕ್ಟರ್ ಪ್ಲಸ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಎಂಜಿ ಹೆಕ್ಟರ್ ಪ್ಲಸ್ ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
13,63,072
ಎಸ್‌ಯುವಿ | Gearbox
17,50,149
ಎಸ್‌ಯುವಿ | Gearbox
17,50,149
ಎಸ್‌ಯುವಿ | Gearbox
19,18,182
ಎಸ್‌ಯುವಿ | Gearbox
19,18,182
ಎಸ್‌ಯುವಿ | Gearbox
19,37,662

ಎಂಜಿ ಹೆಕ್ಟರ್ ಪ್ಲಸ್ ಡೀಸೆಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
15,04,094
ಎಸ್‌ಯುವಿ | Gearbox
16,14,115
ಎಸ್‌ಯುವಿ | Gearbox
16,38,120
ಎಸ್‌ಯುವಿ | Gearbox
18,00,151
ಎಸ್‌ಯುವಿ | Gearbox
18,10,153
ಎಸ್‌ಯುವಿ | Gearbox
18,81,167
ಎಸ್‌ಯುವಿ | Gearbox
19,61,183
ಎಸ್‌ಯುವಿ | Gearbox
19,81,183

ಎಂಜಿ ಹೆಕ್ಟರ್ ಪ್ಲಸ್ ಹೈಬ್ರಿಡ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
15,13,102
ಎಸ್‌ಯುವಿ | Gearbox
18,13,161
ಎಸ್‌ಯುವಿ | Gearbox
18,33,161

ಎಂಜಿ ಹೆಕ್ಟರ್ ಪ್ಲಸ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 0
ಡೀಸೆಲ್ 16.6
ಹೈಬ್ರಿಡ್ 0

ಎಂಜಿ ಹೆಕ್ಟರ್ ಪ್ಲಸ್ ವಿಮರ್ಶೆ

ಎಂಜಿ ಹೆಕ್ಟರ್ ಪ್ಲಸ್ Exterior And Interior Design

ಎಂಜಿ ಹೆಕ್ಟರ್ ಪ್ಲಸ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಎಂಜಿ ಹೆಕ್ಟರ್ ಪ್ಲಸ್ ಮಾದರಿಯು ಸ್ಟ್ಯಾಂಡರ್ಡ್ ಹೆಕ್ಟರ್ ಕಾರಿನ ಮುಂದುವರಿದ ಭಾಗವಾಗಿದ್ದು, ಹೆಕ್ಟರ್ ಪ್ಲಸ್ ಕಾರು ಆರು ಅಥವಾ ಏಳು ಆಸನ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದೆ. ಹೆಕ್ಟರ್ ಪ್ಲಸ್ ಕಾರು ಐದು ಆಸನದ ಸಾಮಾನ್ಯ ಹೆಕ್ಟರ್ ಮಾದರಿಯಲ್ಲೇ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಕೆಲವು ವಿಭಿನ್ನ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಎಂಜಿ ಹೆಕ್ಟರ್ ಪ್ಲಸ್ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಡಿಆರ್‌ಎಲ್ಎಸ್, ಶಾರ್ಕ್ ಫಿನ್ ಆಂಟೆನಾ, ಸಿಲ್ವರ್ ರೂಫ್ ರೈಲ್ಸ್, ನವೀಕೃತ ಎಲ್‌ಇಡಿ ಟೈಲ್ ಲೈಟ್ಸ್ , ಹೊಸ ಮಾದರಿಯ ಬಂಪರ್ ಮತ್ತು ಹೊಸ ವಿನ್ಯಾಸದ ಸ್ಕೀಡ್ ಪ್ಲೇಟ್ ನೀಡಲಾಗಿದೆ.

ಎಂಜಿ ಮೋಟಾರ್ ಕಂಪನಿಯು ಹೊಸ ಎಸ್‌ಯುವಿಯ ಸುತ್ತಲೂ ಅತಿಯಾದ ಕ್ರೋಮ್‌ಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿದ್ದು, ಕಾರಿನ ಹೊರ ವಿನ್ಯಾಸಕ್ಕೆ ಪ್ರಬುದ್ಧ ನೋಟವನ್ನು ನೀಡುತ್ತದೆ. ಹಾಗೆಯೇ ಮುಂಭಾಗದಲ್ಲಿ ಗ್ರಿಲ್ ಅನ್ನು ಒಳಗೊಂಡಿದ್ದು, ಆಲ್ ಬ್ಲ್ಯಾಕ್ ವಿನ್ಯಾಸ ಹೊಂದಿದೆ.

ದೂರದಿಂದ ನೋಡಿದಲ್ಲಿ ಹೆಕ್ಟರ್ ಪ್ಲಸ್ ಮತ್ತು ಹೆಕ್ಟರ್ ಕಾರುಗಳು ಒಂದೇ ಮಾದರಿಯಂತೆ ಹೊರನೋಟ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಯಲ್ಲೇ 17-ಇಂಚಿನ ಅಲಾಯ್ ವೀಲ್ಹ್‌ನೊಂದಿಗೆ ವಿನ್ಯಾಸದಲ್ಲೂ ಸಮಾಂತರವಾಗಿವೆ.

ಅದಾಗ್ಯೂ ಹೆಕ್ಟರ್ ಪ್ಲಸ್ ಮತ್ತು ಹೆಕ್ಟರ್ ನಡುವಿನ ವ್ಯತ್ಯಾಸ ಗುರುತಿಸಲು ಹೆಕ್ಟರ್ ಪ್ಲಸ್ ಮಾದರಿಯಲ್ಲಿ ವಿಶೇಷವಾಗಿ ಸ್ಟಾರಿ ಸ್ಕೈ ಬ್ಲೂ ಶೇಡ್ ಎಂಬ ಬಣ್ಣದ ಆಯ್ಕೆ ಒಳಗೊಂಡಿದೆ. ಹೆಕ್ಟರ್ ಪ್ಲಸ್ ಮಾದರಿಯಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಹೆಕ್ಟರ್ ಕಾರಿಗಿಂತಲೂ ಹೆಚ್ಚುವರಿ 65 ಎಂಎಂ ಉದ್ದವನ್ನು ಸಹ ಒಳಗೊಂಡಿದ್ದು, ಇದು ಮೂರನೇ ಸಾಲಿನ ಆಸನಗಳಿಗೆ ಅನುಕೂಲವಾಗಿದೆ.

ಎಂಜಿ ಹೆಕ್ಟರ್ ಪ್ಲಸ್ ಕಾರಿನ ಒಳಭಾಗದ ವಿನ್ಯಾಸವು ಸಹ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್-ಟಚ್ ಮೆಟಿರಿಯಲ್ ಮತ್ತು ಲೆದರ್-ವ್ಯಾರ್ಪ್ ಹೊಂದಿರುವ ಆಸನ ನೀಡಲಾಗಿದೆ. ಹೊಸ ಕಾರಿನಲ್ಲಿ ಆಸನಗಳು ಹೊಸ ಸೆಪಿಯಾ ಬ್ರೌನ್ ಬಣ್ಣ ಒಳಗೊಂಡಿದ್ದು, ಕ್ಯಾಬಿನ್ ಹಿಂಭಾಗದಲ್ಲಿ ಪ್ರತ್ಯೇಕವಾಗಿ ಕ್ಯಾಪ್ಟನ್ ಆಸನಗಳನ್ನು ಪಡೆದುಕೊಂಡಿದೆ. ಜೊತೆಗೆ ಮೂರನೇ ಸಾಲಿನಲ್ಲಿರುವ ಬೆಂಚ್ ಆಸನಗಳು 50:50 ವಿಭಜನೆ ಹೊಂದಿದ್ದು, ಅಗತ್ಯವಿದ್ದಾಗ ಮೂರನೇ ಸಾಲನ್ನು ಮಡಿಕೆ ಮಾಡಿಕೊಳ್ಳುವ ಮೂಲಕ ಲಗೇಜ್ ಸ್ಥಳ ಹೆಚ್ಚಿಸಿಕೊಳ್ಳಬಹುದಾಗಿದೆ.

ಎಂಜಿ ಹೆಕ್ಟರ್ ಪ್ಲಸ್ ಎಂಜಿನ್ ಮತ್ತು ಸಾಮರ್ಥ್ಯ

ಎಂಜಿ ಹೆಕ್ಟರ್ ಪ್ಲಸ್ Engine And Performance

ಹೆಕ್ಟರ್ ಪ್ಲಸ್ ಕಾರು ಮಾದರಿಯಲ್ಲಿ ಎಂಜಿ ಮೋಟಾರ್ ಎರಡು ಎಂಜಿನ್ ಆಯ್ಕೆ ಒದಗಿಸಿದೆ. 1.5-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 140 ಬಿಎಚ್‌ಪಿ ಮತ್ತು 250 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸಲಿದ್ದು, ಈ ಎಂಜಿನ್‌ನಲ್ಲಿ 48ವಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಿಸಲಾಗಿದೆ.

ಎರಡನೇ ಎಂಜಿನ್ ಮಾದರಿಯಾದ 2.0-ಲೀಟರ್ ಡೀಸೆಲ್ ಎಂಜಿನ್ 172 ಬಿಎಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಎರಡೂ ಎಂಜಿನ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯಿದ್ದು, ಪೆಟ್ರೋಲ್ ಮಾದರಿಯಲ್ಲಿ ಮಾತ್ರ 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಎಂಜಿ ಹೆಕ್ಟರ್ ಪ್ಲಸ್ ಇಂಧನ ದಕ್ಷತೆ

ಎಂಜಿ ಹೆಕ್ಟರ್ ಪ್ಲಸ್ Fuel Efficiency

ಎಂಜಿ ಹೆಕ್ಟರ್ ಪ್ಲಸ್ ಕಾರಿನಲ್ಲಿ 60 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಜೋಡಿಸಲಾಗಿದ್ದು, ಹೆಕ್ಟರ್ ಪ್ಲಸ್‌ ಕಾರಿನ ಇಂಧನ ದಕ್ಷತೆಯ ಅಂಕಿ ಅಂಶಗಳು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ವಿವಿಧ ಮಾದರಿಗಳಿಗೆ ಅನುಗುಣವಾಗಿ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 13 ಕಿ.ಮೀ ನಿಂದ ಡೀಸೆಲ್ ಮಾದರಿಗಳು ಪ್ರತಿ ಲೀಟರ್‌ಗೆ ಗರಿಷ್ಠ 17 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಡೀಸೆಲ್ ಮಾದರಿಯ ಮೂಲಕ ಪೂರ್ತಿ ಟ್ಯಾಂಕ್ ಭರ್ತಿಯೊಂದಿಗೆ ಸರಿಸುಮಾರು 900 ಕಿ.ಮೀ ತನಕ ಪ್ರಯಾಣಿಸಬಹುದಾಗಿದೆ. 

ಎಂಜಿ ಹೆಕ್ಟರ್ ಪ್ಲಸ್ ಮುಖ್ಯ ವೈಶಿಷ್ಟ್ಯತೆಗಳು

ಎಂಜಿ ಹೆಕ್ಟರ್ ಪ್ಲಸ್ Important Features

ಎಂಜಿ ಹೆಕ್ಟರ್ ಪ್ಲಸ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಸೌಲಭ್ಯ ಹೊಂದಿದ್ದು, ನಾಲ್ಕು ವೆರಿಯೆಂಟ್‌ಗಳಲ್ಲೂ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಅಳವಡಿಸಲಾಗಿದೆ. ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್ ಲೈಟ್ಸ್, ಪನೊರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್, ಇಂಟ್ರಾಗ್ರೆಟೆಡ್ ಟರ್ನ್ ಸಿಗ್ನಲ್, ಫಾಗ್ ಲ್ಯಾಂಪ್ಸ್, ಕೀಲೆಸ್ ಎಂಟ್ರಿ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ದೊಡ್ಡದಾದ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್‌ಪ್ಲೇ, ಅಂಡ್ರಾಯಿಡ್ ಆಟೋ ಮತ್ತು ಐ-ಸ್ಮಾರ್ಟ್ ಕನೆಕ್ಟೆಡ್ ಟೆಕ್ನಾಲಜಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಹೆಕ್ಟರ್ ಪ್ಲಸ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಸೀಟ್‌ಬೆಲ್ಟ್ ಪ್ರಿಟೆನ್ಷನರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಒಳಗೊಂಡು ಅನೇಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಎಂಜಿ ಹೆಕ್ಟರ್ ಪ್ಲಸ್ ತೀರ್ಪು

ಎಂಜಿ ಹೆಕ್ಟರ್ ಪ್ಲಸ್ Verdict

ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಯ ಹೋಲಿಕೆಯನ್ನೇ ಪಡೆದುಕೊಂಡಿರುವ ಹೆಕ್ಟರ್ ಪ್ಲಸ್ ಕಾರು 6 ಆಸನದೊಂದಿಗೆ ತುಸು ಭಿನ್ನವಾದ ವೈಶಿಷ್ಟ್ಯತೆಗಳೊಂದಿಗೆ ಗಮನಾರ್ಹ ಒಳವಿನ್ಯಾಸ, ಕನೆಕ್ಟೆಡ್ ಟೆಕ್ನಾಲಜಿ, ಪ್ರತ್ಯೇಕವಾಗಿರುವ ಪ್ರೀಮಿಯಂ ಕ್ಯಾಪ್ಟನ್ ಆಸನಗಳು ಮತ್ತು ಅನುಕೂಲಕರವಾದ ಫೀಚರ್ಸ್‌ಗಳು ಕಾರಿನ ಆಯ್ಕೆ ಹೆಚ್ಚಿಸುತ್ತದೆ. ಹೊಸ ಆವೃತ್ತಿಯು ಐದು ಆಸನಗಳ ಆವೃತ್ತಿಗಿಂತಲೂ ಹೆಚ್ಚು ಭಿನ್ನವಾಗಿಲ್ಲವಾದರೂ ಮೂರನೇ ಸಾಲಿನ ಆಸನಗಳೊಂದಿಗೆ ಗಮನಸೆಳೆಯುತ್ತದೆ.

ಎಂಜಿ ಹೆಕ್ಟರ್ ಪ್ಲಸ್ ಎಂಜಿ ಹೆಕ್ಟರ್ ಪ್ಲಸ್ ಬಣ್ಣಗಳು


Starry Black
Starry Sky Blue
Burgundy Red
Aurora Silver
Glaze Red
Candy White

ಎಂಜಿ ಎಂಜಿ ಹೆಕ್ಟರ್ ಪ್ಲಸ್ ಫೋಟೋಗಳು

ಎಂಜಿ ಹೆಕ್ಟರ್ ಪ್ಲಸ್ Q & A

ಎಂಜಿ ಹೆಕ್ಟರ್ ಪ್ಲಸ್‌ನಲ್ಲಿ ಲಭ್ಯವಿರುವ ರೂಪಾಂತರಗಳು ಯಾವುವು?

ಎಂಜಿ ಹೆಕ್ಟರ್ ಪ್ಲಸ್ ಕಾರಿನಲ್ಲಿ ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎಂಬ ನಾಲ್ಕು ರೂಪಾಂತರಗಳನ್ನು ಹೊಂದಿದೆ.

Hide Answerkeyboard_arrow_down
ಎಂಜಿ ಹೆಕ್ಟರ್ ಪ್ಲಸ್‌ನಲ್ಲಿರುವ ಬಣ್ಣ ಆಯ್ಕೆಗಳು ಯಾವುವು?

ಎಂಜಿ ಹೆಕ್ಟರ್ ಪ್ಲಸ್ ಕಾರಿನಲ್ಲಿ ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಸ್ಟಾರಿ ಬ್ಲ್ಯಾಕ್, ಅರೋರಾ ಸಿಲ್ವರ್, ಬರ್ಗಂಡಿ ರೆಡ್ ಮತ್ತು ಸ್ಟಾರಿ ಸ್ಕೈ ಬ್ಲೂ ಸೇರಿ ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

Hide Answerkeyboard_arrow_down
ಎಂಜಿ ಹೆಕ್ಟರ್ ಪ್ಲಸ್‌ ಕಾರಿನಲ್ಲಿ ಪ್ರಮುಖವಾದ ವೈಶಿಷ್ಟ್ಯತೆ ಯಾವುದು?

ಹೆಕ್ಟರ್ ಪ್ಲಸ್ ಕಾರನಲ್ಲಿ ಎರಡನೇ ಸಾಲಿನಲ್ಲಿರುವ ಪ್ರತ್ಯೇಕ ಕ್ಯಾಪ್ಟನ್ ಆಸನಗಳು ಪ್ರಮುಖ ಆಕರ್ಷಣೆಯಾಗಿದೆ.

Hide Answerkeyboard_arrow_down
ಎಂಜಿ ಹೆಕ್ಟರ್ ಪ್ಲಸ್‌ ಕಾರಿನ ಪ್ರತಿಸ್ಪರ್ಧಿಗಳು ಯಾವುವು?

ಎಂಜಿ ಹೆಕ್ಟರ್ ಪ್ಲಸ್ ಕಾರು ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್ ಮತ್ತು ಮುಂಬರುವ ಟಾಟಾ ಗ್ರಾವಿಟಾಸ್ ಕಾರುಗಳ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.

Hide Answerkeyboard_arrow_down
ಎಂಜಿ ಹೆಕ್ಟರ್ ಪ್ಲಸ್ ಕಾರಿನಲ್ಲಿರುವ ಆಸನಗಳ ಸಂಖ್ಯೆ ಎಷ್ಟು?

ಎಂಜಿ ಹೆಕ್ಟರ್ ಪ್ಲಸ್ ಕಾರಿನಲ್ಲಿ ಚಾಲಕ ಸೇರಿ 6 ಜನ ಕುಳಿತುಕೊಳ್ಳಬಹುದಾದ ಸಾಮರ್ಥ್ಯ ಹೊಂದಿದೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X