ಮಾರುತಿ ಸುಜುಕಿ ಡಿಜೈರ್

ಮಾರುತಿ ಸುಜುಕಿ ಡಿಜೈರ್
Style: ಸೆಡಾನ್
6.56 - 9.39 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಮಾರುತಿ ಸುಜುಕಿ ಡಿಜೈರ್ ಪ್ರಸ್ತುತ 9 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 7 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಮಾರುತಿ ಸುಜುಕಿ ಡಿಜೈರ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಡಿಜೈರ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಸೆಡಾನ್ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಮಾರುತಿ ಸುಜುಕಿ ಡಿಜೈರ್ ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಸೆಡಾನ್ | Gearbox
6,56,441
ಸೆಡಾನ್ | Gearbox
7,49,191
ಸೆಡಾನ್ | Gearbox
7,99,226
ಸೆಡಾನ್ | Gearbox
8,17,192
ಸೆಡಾನ್ | Gearbox
8,67,227
ಸೆಡಾನ್ | Gearbox
8,88,692
ಸೆಡಾನ್ | Gearbox
9,38,726

ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಸೆಡಾನ್ | Gearbox
8,44,196
ಸೆಡಾನ್ | Gearbox
9,12,192

ಮಾರುತಿ ಸುಜುಕಿ ಡಿಜೈರ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 22.61
ಸಿಎನ್‌ಜಿ 31.12

ಮಾರುತಿ ಸುಜುಕಿ ಡಿಜೈರ್ ವಿಮರ್ಶೆ

ಮಾರುತಿ ಸುಜುಕಿ ಡಿಜೈರ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಮಾರುತಿ ಸುಜುಕಿ ಡಿಜೈರ್ ಕಾರು ಮಾದರಿಯು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯೆಂತೆ ಮುಂಭಾಗದಲ್ಲಿ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಣೆಯೊಂದಿಗೆ ಉತ್ತಮ ಕಂಪ್ಯಾಕ್ಟ್ ಸೆಡಾನ್ ಮಾದರಿಯಾಗಿ ಮರುವಿನ್ಯಾಸಗೊಂಡಿದೆ. ಹೊಸ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ಆಕರ್ಷಕ ಹೆಕ್ಸಾಗೊನಗಲ್ ಗ್ರಿಲ್ ಮತ್ತು ಮುಂಭಾಗದ ಪ್ರೊಫೈಲ್‌ನಲ್ಲಿ ಕ್ರೊಮ್ ಸೇರ್ಪಡೆ ಮಾಡಲಾಗಿದ್ದು, ಮರುವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್, ಬಂಪರ್, ಬ್ಲ್ಯಾಕ್ ಔಟ್ ಫಾಗ್ ಲ್ಯಾಂಪ್ ಸೌಲಭ್ಯವು ಕಾರಿನ ಹೊರನೋಟಕ್ಕೆ ಮತ್ತಷ್ಟು ಮೆರಗು ನೀಡಿವೆ.

ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿ ಅಯಾಯ್ ಚಕ್ರಗಳು ಮತ್ತು ರಿಯಲ್ ವ್ಯೂ ಮಿರರ್ ಜೊತೆಗೆ ಇಂಟ್ರಾಗ್ರೆಟೆಡ್ ಟರ್ನ್ ಇಂಡಿಕೇಟರ್ ಸೌಲಭ್ಯವನ್ನು ಜೋಡಿಸಲಾಗಿದೆ. ಹಾಗೆಯೇ ಹಿಂಭಾಗದ ತಾಂತ್ರಿಕ ಅಂಶಗಳಲ್ಲಿ ಹೊಸದಾದ ಟೈಲ್ ಲ್ಯಾಂಪ್ ಕ್ಲಸ್ಟರ್, ಬೂಟ್ ಸ್ಪೆಸ್ ಮತ್ತು ಟೈಲ್ ಲ್ಯಾಂಪ್ಸ್ ಸಂಪರ್ಕಿಸುವ ಕ್ರೋಮ್ ಸ್ಟ್ರೀಪ್ ಸೌಲಭ್ಯವು ಆಕರ್ಷಕವಾಗಿದೆ. ಒಟ್ಟಾರೆಯಾಗಿ ಹೊಸ ಕಾರಿನ ವಿನ್ಯಾಸವು ಉತ್ತಮವಾಗಿ ಮರುವಿನ್ಯಾಸಗೊಂಡಿದ್ದು, ಸಬ್ ಮೀಟರ್ ವಿನ್ಯಾಸಕ್ಕಾಗಿ ಇನ್ನಷ್ಟ ಬದಲಾವಣೆಯಾಗುವ ಸಾಧ್ಯತೆಗಳಿವೆ.

ಹೊಸ ಡಿಜೈರ್ ಕಾರಿನ ಒಳಾಂಗಣ ವಿನ್ಯಾಸವು ಸಹ ಆಕರ್ಷಕವಾಗಿದ್ದು, ಕಪ್ಪು ಮತ್ತು ಬ್ರಿಜ್ ಮಿಶ್ರಣಗಳ ಜೊತೆಗೆ ಮರದ ಫಲಕಗಳನ್ನು ಒಳಗೊಂಡಿದೆ. ಇದು ಇತ್ತೀಚಿನ ಸ್ವಿಫ್ಟ್ ಹೊಸ ಪೀಳಿಗೆಯನ್ನು ಮಾದರಿಯನ್ನು ಆಧರಿಸಿದ್ದರೂ ಡಿಜೈರ್‌ನ ಡ್ಯಾಶ್‌ಬೋರ್ಡ್ ಹ್ಯಾಚ್‌ಬ್ಯಾಕ್‌ಗಿಂತಲೂ ಭಿನ್ನವಾಗಿದೆ ಎನ್ನಬಹುದು. ಇನ್ನು ಟ್ರೆಪಿಜಿಯಂ ವಿನ್ಯಾಸದ ಎಸಿ ವೆಂಟ್ಸ್, ಇನ್ಫೋಟೈನ್‌ಮೆಂಟ್ ಸಿಸ್ಟಂಗಿಂತಲೂ ಮೇಲಿರುವ ಟಚ್‌ಸ್ಕ್ರೀನ್ ಸೌಲಭ್ಯ, ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್ ಮತ್ತು ಮರದ ಫಲಕಗಳು ಕಾರಿನ ಸೊಬಗು ಹೆಚ್ಚಿಸುತ್ತವೆ. ಒಟ್ಟಾರೆಯಾಗಿ ಒಳಾಂಗಣ ವಿನ್ಯಾಸವು ಕಣ್ಣಿಗೆ ಕಂಡಷ್ಟು ಆಹ್ಲಾದಕರವಾಗಿದ್ದು, ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶವನ್ನು ಒದಗಿಸುತ್ತದೆ.

ಮಾರುತಿ ಸುಜುಕಿ ಡಿಜೈರ್ ಎಂಜಿನ್ ಮತ್ತು ಸಾಮರ್ಥ್ಯ

ಮಾರುತಿ ಸುಜುಕಿ ಡಿಜೈರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು ನಾಲ್ಕು ಸಿಲಿಂಡರ್ ಹೊಂದಿರುವ 1.3-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 1.2-ಲೀಟರ್ ಪೆಟ್ರೋಲ್ ಮಾದರಿಯು 6000ಆರ್‌ಪಿಎನಲ್ಲಿ 82ಬಿಎಚ್‌ಪಿ ಮತ್ತು 4200ಆರ್‌ಪಿಎಂನಲ್ಲಿ 113ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಡೀಸೆಲ್ ಮಾದರಿಯು 4200ಆರ್‌ಪಿಎಂನಲ್ಲಿ 74ಬಿಎಚ್‌ಪಿ ಮತ್ತು 2000ಆರ್‌ಪಿಎಂನಲ್ಲಿ 190ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಎರಡು ಎಂಜಿನ್‌ಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಎಎಂಟಿ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿವೆ.

ಮಾರುತಿ ಸುಜುಕಿ ಡಿಜೈರ್ ಇಂಧನ ದಕ್ಷತೆ

ಡಿಜೈರ್ ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್‌ಗೆ 22 ಕಿ.ಮೀ ಮತ್ತು ಡೀಸೆಲ್ ರೂಪಾಂತರವು ಪ್ರತಿ ಲೀಟರ್ 28.4 ಕಿ.ಮೀ ಮೈಲೇಜ್ ಹೊಂದಿವೆ. ಡಿಜೈರ್ ಡೀಸೆಲ್ ರೂಪಾಂತರವು ಕಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲೇ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ನಗರ ಮತ್ತು ಹೆದ್ದಾರಿಯಲ್ಲಿ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನವನ್ನು ತೋರುತ್ತದೆ. ಇದರಲ್ಲಿ ಆಟೋಮ್ಯಾಟಿಕ ರೂಪಾಂತರವು ಮ್ಯಾನುವಲ್ ರೂಪಾಂತರಗಿಂತ ಇಂಧನ ದಕ್ಷತೆಯಲ್ಲಿ ತುಸು ಹಿಂದಿದೆ ಎನ್ನಬಹುದು.

ಮಾರುತಿ ಸುಜುಕಿ ಡಿಜೈರ್ ಮುಖ್ಯ ವೈಶಿಷ್ಟ್ಯತೆಗಳು

ಮಾರುತಿ ಡಿಜೈರ್ ಮಾದರಿಯು ತನ್ನ ಪ್ರತಿಸ್ಪರ್ಧಿಗಳಿಗೆ ಉತ್ತಮ ಸ್ಪರ್ಧೆ ನೀಡಲು ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಡಿಜೈರ್ ಮಾದರಿಯಲ್ಲಿ ಏಳು ಇಂಚಿನ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನೊಂದಿಗೆ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಮಿರರ್ ಲಿಂಕ್ ಸೌಲಭ್ಯವನ್ನು ಜೋಡಿಸಲಾಗಿದೆ. ಹೊಸ ಕಾಂಪ್ಯಾಕ್ಟ್ ಸೆಡಾನ್‌ನಲ್ಲಿ ಲೆದರ್ ವ್ಯಾರ್ಪ್ಡ್ ಸ್ಪೀರಿಂಗ್ ವೀಲ್ಹ್, ಹಿಂಬದಿಯಲ್ಲೂ ಎಸಿ ವೆಂಟ್ಸ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಅಡ್ಜೆಸ್ಟೆಬಲ್ ರಿಯಲ್ ವ್ಯೂ ಮಿರರ್, 10-ಸ್ಪೋಕ್ ಹೊಂದಿರುವ 15-ಇಂಚಿನ ಅಲಾಯ್ ವೀಲ್ಹ್ ನೀಡಲಾಗಿದೆ.

ಮಾರುತಿ ಸುಜುಕಿ ಡಿಜೈರ್ ತೀರ್ಪು

ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಕಂಪ್ಯಾಕ್ಟ್ ಸೆಡಾನ್‌ನಲ್ಲಿ ಮಾರುತಿ ಡಿಜೈರ್ ಕಾರು ಮಾದರಿಯು ಅಗ್ರಸ್ಥಾನದಲ್ಲಿದೆ. 2013ರ ತನಕ ಸ್ವಿಫ್ಟ್ ಡಿಜೈರ್ ಆಗಿದ್ದ ಸೆಡಾನ್ ಮಾದರಿಯು ಮುಂದಿನ ಎರಡು ತಲೆಮಾರುಗಳಲ್ಲಿ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಮಾದರಿಯಾಗಿ ಮರುಅಭಿವೃದ್ದಿಗೊಂಡಿತು. ಚಾಲಕ ಸೇರಿ ಐದು ಜನ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದಾಗಿದ್ದು, ಬಿಗಿಯಾದ ಪಾರ್ಕಿಂಗ್ ಸ್ಥಳದಲ್ಲೂ ಅರಾಮಾದಾಯಕ ನಿಲುಗಡೆ ಪೂರಕವಾಗುವ ಮೂಲಕ ಸಣ್ಣ ಕುಟುಂಬಗಳಿಗೆ ಉತ್ತಮ ಕಾರು ಮಾದರಿಯಾಗಿದೆ.

ಮಾರುತಿ ಸುಜುಕಿ ಡಿಜೈರ್ ಮಾರುತಿ ಸುಜುಕಿ ಡಿಜೈರ್ ಬಣ್ಣಗಳು


Oxford Blue
Bluish Black
Phoenix Red
Magma Grey
Premium Silver
Sherwood Brown
Arctic White

ಮಾರುತಿ ಸುಜುಕಿ ಮಾರುತಿ ಸುಜುಕಿ ಡಿಜೈರ್ ಫೋಟೋಗಳು

ಮಾರುತಿ ಸುಜುಕಿ ಡಿಜೈರ್ Q & A

ಮಾರುತಿ ಸುಜುಕಿ ಡಿಜೈರ್‌ ಕಾರು ಮಾದರಿಯ ಮುಖ್ಯ ಪ್ರತಿಸ್ಪರ್ಧಿಗಳು ಯಾವವು?

ಮಾರುತಿ ಸುಜುಕಿ ಡಿಜೈರ್ ಕಾರಿಗೆ ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾ ಕಾರುಗಳು ಪ್ರಮುಖ ಪ್ರತಿಸ್ಪರ್ಧಿಯಾಗಿವೆ.

Hide Answerkeyboard_arrow_down
ಮಾರುತಿ ಸುಜುಕಿ ಡಿಜೈರ್‌ನಲ್ಲಿನ ರೂಪಾಂತರಗಳು ಯಾವವು?

ಮಾರುತಿ ಸುಜುಕಿ ಡಿಜೈರ್ ಕಾರು ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಜೆಡ್‌ಎಕ್ಸ್‌ಐ ಮತ್ತು ಜೆಡ್‌ಎಕ್ಸ್‌ಐ ಪ್ಲಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಖರೀದಿ ಮಾಡಬಹುದಾಗಿದೆ.

Hide Answerkeyboard_arrow_down
ಮಾರುತಿ ಸುಜುಕಿ ಡಿಜೈರ್‌ ಕಾರಿನಲ್ಲಿರುವ ಬಣ್ಣ ಆಯ್ಕೆಗಳು ಯಾವವು?

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಆರು ಬಣ್ಣಗಳ ಆಯ್ಕೆಗಳನ್ನು ನೀಡಲಾಗಿದ್ದು, ಮ್ಯಾಗ್ಮಾ ಗ್ರೇ, ಆಕ್ಸ್‌ಫರ್ಡ್ ಬ್ಲೂ, ಶೆರ್ವುಡ್ ಬ್ರೌನ್, ಆರ್ಕ್ಟಿಕ್ ಬ್ರೌನ್, ಪ್ರೀಮಿಯಂ ಸಿಲ್ವರ್, ಫೀನಿಕ್ಸ್ ರೆಡ್ ಆಯ್ಕೆ ಹೊಂದಿದೆ.

Hide Answerkeyboard_arrow_down
ಯಾವುದು ಖರೀದಿಗೆ ಉತ್ತಮ? ಮಾರುತಿ ಸುಜುಕಿ ಡಿಜೈರ್ ಅಥವಾ ಹೋಂಡಾ ಅಮೇಜ್?

2020ರ ಮಾರುತಿ ಸುಜುಕಿ ಡಿಜೈರ್ ಕಾರು ಖಂಡಿತವಾಗಿಯೂ ಈ ವಿಭಾಗದಲ್ಲಿ ಅತ್ಯುತ್ತಮ ಪ್ಯಾಕೇಜ್ ಹೊಂದಿರುವ ಕಾರು ಮಾದರಿಯಾಗಿದೆ.

Hide Answerkeyboard_arrow_down
ಮಾರುತಿ ಸುಜುಕಿ ಡಿಜೈರ್‌ ಕಾರಿನಲ್ಲಿ ಬೂಟ್ ಸ್ಪೆಸ್ ಸಾಮರ್ಥ್ಯ ಎಷ್ಟು?

ಮಾರುತಿ ಸುಜುಕಿ ಡಿಜೈರ್ ಕಾರು 378-ಲೀಟರ್ ನಷ್ಟು ಸ್ಥಳಾವಕಾಶದ ಲಗೇಜ್ ಸಾಮರ್ಥ್ಯ ಹೊಂದಿದೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X