ಹ್ಯುಂಡೈ I20

ಹ್ಯುಂಡೈ I20
Style: ಹ್ಯಾಚ್‌ಬ್ಯಾಕ್
6.91 - 11.40 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ಹ್ಯುಂಡೈ i20 ಪ್ರಸ್ತುತ 24 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 18 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಹ್ಯುಂಡೈ i20 ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, i20 ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಹ್ಯಾಚ್‌ಬ್ಯಾಕ್ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ಹ್ಯುಂಡೈ i20 ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಹ್ಯಾಚ್‌ಬ್ಯಾಕ್ | Gearbox
6,91,098
ಹ್ಯಾಚ್‌ಬ್ಯಾಕ್ | Gearbox
7,75,069
ಹ್ಯಾಚ್‌ಬ್ಯಾಕ್ | Gearbox
7,90,074
ಹ್ಯಾಚ್‌ಬ್ಯಾಕ್ | Gearbox
8,77,050
ಹ್ಯಾಚ್‌ಬ್ಯಾಕ್ | Gearbox
8,81,792
ಹ್ಯಾಚ್‌ಬ್ಯಾಕ್ | Gearbox
8,86,069
ಹ್ಯಾಚ್‌ಬ್ಯಾಕ್ | Gearbox
8,92,324
ಹ್ಯಾಚ್‌ಬ್ಯಾಕ್ | Gearbox
8,96,792
ಹ್ಯಾಚ್‌ಬ್ಯಾಕ್ | Gearbox
9,01,069
ಹ್ಯಾಚ್‌ಬ್ಯಾಕ್ | Gearbox
9,41,026
ಹ್ಯಾಚ್‌ಬ್ಯಾಕ್ | Gearbox
9,56,026
ಹ್ಯಾಚ್‌ಬ್ಯಾಕ್ | Gearbox
9,88,045
ಹ್ಯಾಚ್‌ಬ್ಯಾಕ್ | Gearbox
9,91,793
ಹ್ಯಾಚ್‌ಬ್ಯಾಕ್ | Gearbox
10,03,045
ಹ್ಯಾಚ್‌ಬ್ಯಾಕ್ | Gearbox
10,06,794
ಹ್ಯಾಚ್‌ಬ್ಯಾಕ್ | Gearbox
10,74,127
ಹ್ಯಾಚ್‌ಬ್ಯಾಕ್ | Gearbox
10,89,127
ಹ್ಯಾಚ್‌ಬ್ಯಾಕ್ | Gearbox
11,25,127
ಹ್ಯಾಚ್‌ಬ್ಯಾಕ್ | Gearbox
11,40,128

ಹ್ಯುಂಡೈ i20 ಡೀಸೆಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಹ್ಯಾಚ್‌ಬ್ಯಾಕ್ | Gearbox
8,21,792
ಹ್ಯಾಚ್‌ಬ್ಯಾಕ್ | Gearbox
9,01,792
ಹ್ಯಾಚ್‌ಬ್ಯಾಕ್ | Gearbox
9,16,793
ಹ್ಯಾಚ್‌ಬ್ಯಾಕ್ | Gearbox
10,61,794
ಹ್ಯಾಚ್‌ಬ್ಯಾಕ್ | Gearbox
10,76,794

ಹ್ಯುಂಡೈ I20 ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 20.25
ಡೀಸೆಲ್ 25.2

ಹ್ಯುಂಡೈ I20 ವಿಮರ್ಶೆ

ಹ್ಯುಂಡೈ I20 Exterior And Interior Design

ಹ್ಯುಂಡೈ I20 ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಹ್ಯುಂಡೈ ಕಂಪನಿಯು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಹ್ಯುಂಡೈ ಐ20 ಕಾರು ಮಾದರಿಯು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ನವೀಕೃತ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವಾರು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಐ20 ಮಾದರಿಯು ಹೊಸ ವಿನ್ಯಾಸ ತತ್ವದಡಿ ಸ್ಪೋರ್ಟಿ ಲುಕ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಇಳಿಜಾರಿನಂತಿರುವ ಬ್ಯಾನೆಟ್, ಹೊಸ ವಿನ್ಯಾಸದ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್ ಜೊತೆ ಪಿಯಾನೊ ಬ್ಲ್ಯಾಕ್ ಜಾಲರಿ ಜೋಡಣೆ ಹೊಂದಿದೆ. ಹಾಗೆಯೇ ಗ್ರಿಲ್ ಎರಡು ಬದಿಯಲ್ಲೂ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್, ಟರ್ನ್ ಇಂಡಿಕೇಟರ್ ಮತ್ತು ಕಾರ್ನರಿಂಗ್ ಲ್ಯಾಂಪ್ ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ ಫ್ರಂಟ್ ಬಂಪರ್ ಕೂಡಾ ಹೊಸ ವಿನ್ಯಾಸ ಪಡೆದುಕೊಂಡಿದ್ದು, ಎರಡು ಬದಿಯಲ್ಲೂ ಫಾಗ್ ಲ್ಯಾಂಪ್ಸ್, ಮಧ್ಯದಲ್ಲಿ ಏರ್ ಇನ್‌ಟೆಕ್ ಮತ್ತು ಕೆಳಭಾಗದಲ್ಲಿ ಪಿಯಾನೋ-ಬ್ಲ್ಯಾಕ್ ಫಿನಿಶ್ ಹೊಂದಿರುವ ಫ್ರಂಟ್ ಸ್ಕಿರ್ಟಿಂಗ್ ಹೊಂದಿದೆ.

ಐ20 ಹೊಸ ಕಾರು ಮಾದರಿಯ ಸೈಡ್ ಪ್ರೊಫೈಲ್ ಕೂಡಾ ಆಕರ್ಷಕವಾಗಿದ್ದು, 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್‌ಗಳು, ವಿಂಡೋ ಲೈನ್ ಕೆಳಭಾಗದಲ್ಲಿ ಡ್ಯುಯಲ್ ಟೋನ್ ಪೇಟಿಂಗ್ ಹೊಂದಿರುವ ರನ್ನಿಂಗ್ ಕ್ರೋಮ್ ಸ್ಟ್ರೀಪ್(ಟಾಪ್ ಎಂಡ್ ಮಾದರಿ) ಹೊಂದಿದೆ. ಜೊತೆಗೆ ಹೊಸ ಹ್ಯಾಚ್‌ಬ್ಯಾಕ್‌ ಕಾರಿನ ಉದ್ದಕ್ಕೂ ಒಂದು ವಿಶಿಷ್ಟವಾದ ಕ್ರೀಸ್ ಕೂಡಾ ಇದ್ದು, ಇದು ಐ20 ಕಾರಿನ ಸ್ಪೋರ್ಟಿ ಗುಣಲಕ್ಷಣವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೊಸ ಕಾರಿನ ಹಿಂಭಾಗದ ಪ್ರೊಫೈಲ್‌ನಲ್ಲಿ ಜೆಡ್-ಶೇಫ್‌ನಲ್ಲಿರುವ ಎಲ್ಇಡಿ ಟೈಲ್ ಲೈಟ್ಸ್ ಕೂಡಾ ಹೊಸ ಕಾರಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದು, ಸೆಂಟರ್ ರಿಪ್ಲೆಕ್ಟರ್ ಮತ್ತು ಕ್ರೊಮ್ ಸ್ಟ್ರೀಪ್ ಜೊತೆಗೆ ಕೂಡಿಕೊಂಡಿದೆ. ಬೂಟ್ ಡೋರ್ ಎರಡು ಬದಿಯಲ್ಲೂ ಮಾಡೆಲ್ ಮತ್ತು ವೆರಿಯೆಂಟ್ ಬ್ಯಾಡ್ಜ್ ನೀಡಲಾಗಿದ್ದು, ರಿಯರ್ ಬಂಪರ್ ಮೇಲೆ ರಿಪ್ಲೆಕ್ಟರ್, ಮಧ್ಯಂತರದಲ್ಲಿರುವ ಫ್ಲಕ್ಸ್ ಡಿಫ್ಯೂಸರ್ ಸೌಲಭ್ಯಗಳು ಕಾರಿನ ಸ್ಪೋರ್ಟಿ ಲುಕ್‌ಗೆ ಪೂರಕವಾಗಿವೆ.

ಹ್ಯುಂಡೈ ಕಂಪನಿಯು ಹೊಸ ಐ20 ಕಾರಿನಲ್ಲಿ ಹೊರಭಾಗದಂತೆ ಒಳವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದ್ದು, ಡ್ಯಾಶ್‌ಬೋರ್ಡ್ ಸೌಲಭ್ಯಗಳು ಸಂಪೂರ್ಣವಾಗಿ ಹೊಸ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ. ಹೊಸ ಹ್ಯಾಚ್‌ಬ್ಯಾಕ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆರಾಮದಾಯಕ ಪ್ರಯಾಣಕ್ಕಾಗಿ ಅತ್ಯುತ್ತಮ ಆಸನ ಸೌಲಭ್ಯವನ್ನು ಹೊಂದಿದೆ.

ಹ್ಯುಂಡೈ I20 ಎಂಜಿನ್ ಮತ್ತು ಸಾಮರ್ಥ್ಯ

ಹ್ಯುಂಡೈ I20 Engine And Performance

ಹ್ಯುಂಡೈ ಹೊಸ ಐ20 ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಮೊದಲನೆಯದಾಗಿ 1.2-ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ಮಾದರಿಯು ಐದು ಸ್ಪೀಡ್ ಮ್ಯಾನುವಲ್ ಮತ್ತು ಐವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 83-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಎರಡನೇ ಎಂಜಿನ್ ಮಾದರಿಯಾದ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆವೃತ್ತಿಯು ಆರು ಸ್ಪೀಡ್ ಐಎಂಟಿ ಮತ್ತು ಏಳು ಸ್ಪೀಡಿನ ಡಿಸಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇನ್ನು ಮೂರನೇ ಎಂಜಿನ್ ಮಾದರಿಯಾದ 1.5-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಯು ಆರು ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಹ್ಯುಂಡೈ I20 ಇಂಧನ ದಕ್ಷತೆ

ಹ್ಯುಂಡೈ I20 Fuel Efficiency

ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಹ್ಯುಂಡೈ ಐ20 ಕಾರು ಮಾದರಿಯು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ. 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 20.25 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. 1.2-ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ಮಾದರಿಯು ಪ್ರತಿ ಲೀಟರ್‌ಗೆ 20.35 ಕಿ.ಮೀ ಮೈಲೇಜ್ ಹೊಂದಿದ್ದರೆ 1.5-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಯು ಗರಿಷ್ಠ ಮಟ್ಟದ ಇಂಧನ ದಕ್ಷತೆಯೊಂದಿಗೆ ಪ್ರತಿ ಲೀಟರ್‌ಗೆ 25.2 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಐ20 ಪ್ರತಿ ಮಾದರಿಯಲ್ಲೂ 37-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಜೋಡಣೆ ಮಾಡಲಾಗಿದ್ದು, ವೆರಿಯೆಂಟ್ ಅನುಗುಣವಾಗಿ ಇಂಧನ ದಕ್ಷತೆ ಹೊಂದಿವೆ.

ಹ್ಯುಂಡೈ I20 ಮುಖ್ಯ ವೈಶಿಷ್ಟ್ಯತೆಗಳು

ಹ್ಯುಂಡೈ I20 Important Features

ಹೊಚ್ಚ ಹೊಸ ಹ್ಯುಂಡೈ ಐ20 ಕಾರು ಮಾದರಿಯು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್ಸ್, 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಎಲೆಕ್ಟ್ರಿಕ್ ಸನ್‌ರೂಫ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ವ್ಯೂ ಮಿರರ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆ್ಯಪಲ್ ಕಾರ್‌ಪ್ಲೇ, ಅಂಡ್ರಾಯಿಡ್ ಆಟೋ, ಬ್ಲ್ಯೂ ಲಿಂಕ್ ಕನೆಕ್ಟಿವಿಟಿ, ವೆರ್‌‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್ಸ್, ಬೊಷ್ ಸರೌಂಡ್ ಸೌಂಡ್ ಸಿಸ್ಟಂ ಸೇರಿ ಹಲವು ಫೀಚರ್ಸ್ ಹೊಂದಿದೆ.

ಹ್ಯುಂಡೈ I20 ತೀರ್ಪು

ಹ್ಯುಂಡೈ I20 Verdict

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹೊಸ ಐ20 ಕಾರು ಮಾದರಿಯು ಆಕರ್ಷಕ  ಹೊರ ಮತ್ತು ಒಳ ವಿನ್ಯಾಸಗಳೊಂದಿಗೆ ತಾಂತ್ರಿಕ ಸೌಲಭ್ಯಗಳ ಜೋಡಣೆಯಲ್ಲೂ ಗಮನಸೆಳೆಯುತ್ತದೆ. ಹೊಸ ಕಾರು ಸ್ಪೋರ್ಟಿ ಮತ್ತು ಸ್ಟೈಲಿಶ್ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆಗಳು ಮತ್ತು ಅತ್ಯುತ್ತಮ ಡ್ರೈವ್ ಮತ್ತು ನಿರ್ವಹಣಾ ಗುಣಲಕ್ಷಣಗಳೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಬೆಲೆ ಕೂಡಾ ಆಕರ್ಷಕವಾಗಿದೆ.

ಹ್ಯುಂಡೈ I20 ಹ್ಯುಂಡೈ i20 ಬಣ್ಣಗಳು


Starry Night
Titan Grey
Metallic Copper
Typhoon Silver
Fiery Red
Polar White
Starry Night
Titan Grey
Metallic Copper
Typhoon Silver
Fiery Red
Polar White
Starry Night
Metallic Copper
Titan Grey
Typhoon Silver
Fiery Red
Polar White

ಹ್ಯುಂಡೈ ಹ್ಯುಂಡೈ i20 ಫೋಟೋಗಳು

ಹ್ಯುಂಡೈ I20 Q & A

ಹೊಸ ಹ್ಯುಂಡೈ ಐ20 ಮಾದರಯಲ್ಲಿರುವ ವಿವಿಧ ರೂಪಾಂತರಗಳು ಯಾವುವು?

ಹ್ಯುಂಡೈ ಐ20 ಕಾರಿನಲ್ಲಿ ನಾಲ್ಕು ರೂಪಾಂತರಗಳನ್ನು ಪಡೆದುಕೊಂಡಿದ್ದು, ಮ್ಯಾಗ್ಮಾ, ಸ್ಪೋರ್ಟ್ಜ್, ಆಸ್ಟಾ ಮತ್ತು ಅಸ್ಟಾ (ಒ) ಒಳಗೊಂಡಿದೆ.

Hide Answerkeyboard_arrow_down
ಹ್ಯುಂಡೈ ಐ20 ಕಾರಿನಲ್ಲಿರುವ ಬಣ್ಣ ಆಯ್ಕೆಗಳು ಯಾವುವು?

ಹೊಸ ಹ್ಯುಂಡೈ ಐ20 ಕಾರಿನಲ್ಲಿ ಎಂಟು ಬಣ್ಣ ಆಯ್ಕೆ ನೀಡಲಾಗಿದೆ. ಸಿಂಗಲ್ ಟೋನ್‌ನಲ್ಲಿ ಟೈಫೂನ್ ಸಿಲ್ವರ್, ಟೈಟಾನ್ ಗ್ರೇ, ಮೆಟಾಲಿಕ್ ಕಾಪರ್, ಸ್ಟ್ಯಾರಿ ನೈಟ್, ಫ್ಲೆರಿ ರೆಡ್, ಪೋಲಾರ್ ವೈಟ್ ಮತ್ತು ಡ್ಯುಯಲ್ ಟೋನ್‌ನಲ್ಲಿ ರೆಡ್/ಬ್ಲ್ಯಾಕ್ ಮತ್ತು ವೈಟ್/ಬ್ಲ್ಯಾಕ್ ಬಣ್ಣಗಳ ಆಯ್ಕೆ ಲಭ್ಯವಿದೆ.

Hide Answerkeyboard_arrow_down
ಹೊಸ ಹ್ಯುಂಡೈ ಐ20 ಕಾರಿನ ಪ್ರಮುಖ ಪ್ರತಿಸ್ಪರ್ಧಿಗಳು ಯಾವುವು?

ಹ್ಯುಂಡೈ ಐ20 ಕಾರಿಗೆ ಮಾರುತಿ ಬಲೆನೊ, ಟೊಯೊಟಾ ಗ್ಲ್ಯಾಂಝಾ, ಫೋಕ್ಸ್‌ವ್ಯಾಗನ್ ಪೊಲೊ, ಹೋಂಡಾ ಜಾಝ್ ಮತ್ತು ಟಾಟಾ ಆಲ್‌ಟ್ರೊಜ್ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

Hide Answerkeyboard_arrow_down
ಹೊಸ ಹ್ಯುಂಡೈ ಐ20 ಕಾರು ಮಾದರಿಯನ್ನು ಹಿಂದಿನ ತಲೆಮಾರಿನ ಮಾದರಿಗಳಿಗೆ ಹೋಲಿಕೆ ಮಾಡಿದರೆ ಹೊಸ ಕಾರಿನಲ್ಲಿ ಬದಲಾವಣೆ ಆಗಿದೆಯಾ?

ಹೌದು, ಹೊಸ ಹ್ಯುಂಡೈ ಐ20 ಕಾರನ್ನು ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಹಲವಾರು ಬದಲಾಣೆಗಳೊಂದಿಗೆ ಅಭಿವೃದ್ದಿಗೊಂಡಿದೆ.

Hide Answerkeyboard_arrow_down
ಹಾಗಾದ್ರೆ ಖರೀದಿಗೆ ಯಾವುದು ಉತ್ತಮ? ಹೊಸ ಹ್ಯುಂಡೈ ಐ20 ಅಥವಾ ಟಾಟಾ ಆಲ್‌ಟ್ರೊಜ್?

ಟಾಟಾ ಆಲ್‌ಟ್ರೊಜ್ ಕಾರಿಗೆ ಹೋಲಿಸಿದರೆ ಹೊಸ ಹ್ಯುಂಡೈ ಐ20 ಖಂಡಿತವಾಗಿಯೂ ಉತ್ತಮ ಆಯ್ಕೆಯಾಗಿದ್ದರೂ ಬೆಲೆ ವಿಚಾರವಾಗಿ ಆಲ್‌ಟ್ರೊಜ್ ಹೆಚ್ಚು ಕೈಗೆಟುಕುವಂತಿದೆ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X