ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್
Style: ಎಸ್‌ಯುವಿ
6.00 - 11.11 ಲಕ್ಷ
ಜಿಎಸ್‌ಟಿ ಎಕ್ಸ್‌ಶೋರೂಂ ಬೆಲೆ

ನಿಸ್ಸಾನ್ ಮ್ಯಾಗ್ನೈಟ್ ಪ್ರಸ್ತುತ 29 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 5 ಬಣ್ಣಗಳಲ್ಲಿ ಲಭ್ಯವಿರುತ್ತದೆ. ನಿಸ್ಸಾನ್ ಮ್ಯಾಗ್ನೈಟ್ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಮ್ಯಾಗ್ನೈಟ್ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.

ನಿಸ್ಸಾನ್ ಮ್ಯಾಗ್ನೈಟ್ ಪೆಟ್ರೋಲ್ ಮಾದರಿಗಳು

ವೆರಿಯೆಂಟ್‌ಗಳು ಎಕ್ಸ್‌ಶೋರೂಂ ಬೆಲೆಗಳು
ಎಸ್‌ಯುವಿ | Gearbox
5,99,900
ಎಸ್‌ಯುವಿ | Gearbox
6,59,900
ಎಸ್‌ಯುವಿ | Gearbox
7,04,000
ಎಸ್‌ಯುವಿ | Gearbox
7,39,000
ಎಸ್‌ಯುವಿ | Gearbox
7,50,000
ಎಸ್‌ಯುವಿ | Gearbox
7,82,000
ಎಸ್‌ಯುವಿ | Gearbox
7,98,000
ಎಸ್‌ಯುವಿ | Gearbox
8,07,000
ಎಸ್‌ಯುವಿ | Gearbox
8,28,000
ಎಸ್‌ಯುವಿ | Gearbox
8,28,000
ಎಸ್‌ಯುವಿ | Gearbox
8,60,000
ಎಸ್‌ಯುವಿ | Gearbox
8,74,000
ಎಸ್‌ಯುವಿ | Gearbox
8,76,000
ಎಸ್‌ಯುವಿ | Gearbox
8,96,500
ಎಸ್‌ಯುವಿ | Gearbox
9,19,000
ಎಸ್‌ಯುವಿ | Gearbox
9,35,000
ಎಸ್‌ಯುವಿ | Gearbox
9,44,000
ಎಸ್‌ಯುವಿ | Gearbox
9,65,000
ಎಸ್‌ಯುವಿ | Gearbox
9,79,899
ಎಸ್‌ಯುವಿ | Gearbox
9,95,899
ಎಸ್‌ಯುವಿ | Gearbox
9,99,900
ಎಸ್‌ಯುವಿ | Gearbox
10,15,900
ಎಸ್‌ಯುವಿ | Gearbox
10,20,000
ಎಸ್‌ಯುವಿ | Gearbox
10,36,000
ಎಸ್‌ಯುವಿ | Gearbox
10,45,000
ಎಸ್‌ಯುವಿ | Gearbox
10,66,000
ಎಸ್‌ಯುವಿ | Gearbox
10,91,000
ಎಸ್‌ಯುವಿ | Gearbox
11,07,000
ಎಸ್‌ಯುವಿ | Gearbox
11,11,000

ನಿಸ್ಸಾನ್ ಮ್ಯಾಗ್ನೈಟ್ ಮೈಲೇಜ್

ಗೇರ್‌ಬಾಕ್ಸ್ ಇಂಧನ ಮಾದರಿ ಮೈಲೇಜ್
ಪೆಟ್ರೋಲ್ 17.4

ನಿಸ್ಸಾನ್ ಮ್ಯಾಗ್ನೈಟ್ ವಿಮರ್ಶೆ

ನಿಸ್ಸಾನ್ ಮ್ಯಾಗ್ನೈಟ್ Exterior And Interior Design

ನಿಸ್ಸಾನ್ ಮ್ಯಾಗ್ನೈಟ್ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸ

ಮ್ಯಾಗ್ನೈಟ್ ಆವೃತ್ತಿಯು ನಿಸ್ಸಾನ್ ಇಂಡಿಯಾ ನಿರ್ಮಾಣದ ಹೊಚ್ಚ ಹೊಸ ಕಾರು ಆವೃತ್ತಿಯಾಗಿದ್ದು, ಹೊಸ ನೀರಿಕ್ಷೆಗಳೊಂದಿಗೆ ಮ್ಯಾಗ್ನೈಟ್ ಕಾರು ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಕಾರು ಮಾದರಿಯನ್ನು ಆಕರ್ಷಕ ಕಂಪ್ಯಾಕ್ಟ್ ಎಸ್‌ಯುವಿ ವಿನ್ಯಾಸದೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಅತ್ಯುತ್ತಮ ಫೀಚರ್ಸ್‌ಗಳ ಜೊತೆಗೆ ಬಲಿಷ್ಠ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯ ಮುಂಭಾಗದಲ್ಲಿ ದೊಡ್ಡದಾದ ಪಿಯಾನೊ ಬ್ಲ್ಯಾಕ್ ಬಣ್ಣದ ಫ್ರಂಟ್ ಗ್ರಿಲ್ ನೀಡಲಾಗಿದ್ದು, ಗ್ರಿಲ್ ಸೌಲಭ್ಯವನ್ನು ಕ್ರೋಮ್ ಅಂಶಗಳಿಂದ ಜೋಡಣೆ ಮಾಡಲಾಗಿದೆ. ಹಾಗೆಯೇ ಎರಡೂ ಬದಿಯಲ್ಲಿ ಸ್ಲಿಕ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ನೀಡಲಾಗಿದ್ದು, ಬಂಪರ್‌ನ ಕೆಳಗಿನ ಭಾಗವು ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್ಎಸ್‌ಗಳೊಂದಿಗೆ ಫಾಗ್ ಲ್ಯಾಂಪ್ ಮತ್ತು ಸ್ಕಫ್ ಪ್ಲೇಟ್ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಸೈಡ್ ಪ್ರೊಫೈಲ್ ಕೂಡಾ ಆಕರ್ಷಕವಾಗಿದ್ದು, ಮಸ್ಕ್ಯುಲರ್ ಮತ್ತು ಸ್ಪೋರ್ಟಿ ವಿನ್ಯಾಸ ಹೊಂದಿದೆ. ಹೊಸ ಕಾರಿನಲ್ಲಿ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ವೀಲ್ಹ್ ಆರ್ಚ್ ಮತ್ತು ಬಾಟಮ್ ವಿನ್ಯಾಸಕ್ಕೆ ಕಪ್ಪು ಬಣ್ಣದ ಪಟ್ಟಿಯನ್ನು ನೀಡಲಾಗಿದೆ. ಇದು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಹೊರನೋಟಕ್ಕೆ ಮತ್ತಷ್ಟು ಬಲಿಷ್ಠತೆ ನೀಡಲಿದ್ದು, ಹೊಸ ಕಾರಿನ ಶೊಲ್ಡರ್ ಲೈನ್ಸ್ ಮತ್ತು ಸಿಲ್ವರ್ ರೂಫ್ ರೈಲ್ಸ್ ಕೂಡಾ ಆಕರ್ಷಕವಾಗಿವೆ.

ಮ್ಯಾಗ್ನೈಟ್ ಕಾರಿನ ಹಿಂಬದಿಯ ನೋಟವು ಕೂಡಾ ಹಲವು ವಿಶೇಷತೆಗಳಿಂದ ಕೂಡಿದ್ದು, ವ್ಯಾರ್ಪ್‌ನಿಂದ ಸುತ್ತುವರಿದ ಟೈಲ್ ಲ್ಯಾಂಪ್ಸ್, ಬೂಟ್ ಲಿಡ್ ಮಧ್ಯದಲ್ಲಿ ‘MAGNITE’ ಬ್ಯಾಡ್ಜಿಂಗ್ ನೀಡಲಾಗಿದೆ. ಜೊತೆಗೆ ರಿಪ್ಲೆಕ್ಟರ್ ಹೊಂದಿರುವ ರಿಯರ್ ಬಂಪರ್, ರೂಫ್ ಮೌಂಟೆಡ್ ಸ್ಪಾಯ್ಲರ್ ಸೌಲಭ್ಯಗಳು ಸ್ಪೋರ್ಟಿ ಲುಕ್ ನೀಡಲು ಸಹಕಾರಿಯಾಗಿವೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಹೊರಭಾಗದಲ್ಲಿ ಆಕರ್ಷಕ ವಿನ್ಯಾಸದಂತೆ ಒಳಭಾಗದ ವಿನ್ಯಾಸವು ಸಹ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ದೊಡ್ಡದಾದ ಡ್ಯಾಶ್‌ಬೋರ್ಡ್‌ನೊಂದಿಗೆ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸಾಫ್ಟ್ ಟಚ್ ಮಟಿರಿಯಲ್‌ನೊಂದಿಗೆ ಅಭಿವೃದ್ದಿಗೊಂಡಿರುವ ಲೆದರ್ ಹೋದಿಕೆಯ ಸ್ಟೀರಿಂಗ್ ವೀಲ್ಹ್, ಗೇರ್ ನಾಬ್ ಮತ್ತು ಆರಾಮದಾಯಕ ಆಸನ ಸೌಲಭ್ಯ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ ಎಂಜಿನ್ ಮತ್ತು ಸಾಮರ್ಥ್ಯ

ನಿಸ್ಸಾನ್ ಮ್ಯಾಗ್ನೈಟ್ Engine And Performance

ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತದೆ. ಮೊದಲನೆಯದು 1.0-ಲೀಟರ್ ಮೂರು ಸಿಲಿಂಡರ್ ಸೌಲಭ್ಯದ ನ್ಯಾಚುರಲಿ-ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 71 ಬಿಎಚ್‌ಪಿ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಎರಡನೇ ಎಂಜಿನ್ ಮಾದರಿಯು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮಾದರಿಯಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ 99 ಬಿಎಚ್‌ಪಿ ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ಇಂಧನ ದಕ್ಷತೆ

ನಿಸ್ಸಾನ್ ಮ್ಯಾಗ್ನೈಟ್ Fuel Efficiency

ಮ್ಯಾಗ್ನೈಟ್ ಕಾರು ಮಾದರಿಯು 40 ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯದೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣೀಕರಿಸಿದಂತೆ ಮ್ಯಾಗ್ನೈಟ್ ಕಾರು ಮಾದರಿಯು 1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಮೂಲಕ ಪ್ರತಿ ಲೀಟರ್‌ಗೆ ಗರಿಷ್ಠ 18.75 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 20 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 17.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ ಮುಖ್ಯ ವೈಶಿಷ್ಟ್ಯತೆಗಳು

ನಿಸ್ಸಾನ್ ಮ್ಯಾಗ್ನೈಟ್ Important Features

ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಡಿಆರ್‌ಎಲ್‌ಗಳು, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಂಗಳು, ಆಂಬಿಯೆಂಟ್ ಲೈಟಿಂಗ್ಸ್, ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸರ್ಪೋಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿವೆ.

ನಿಸ್ಸಾನ್ ಮ್ಯಾಗ್ನೈಟ್ ತೀರ್ಪು

ನಿಸ್ಸಾನ್ ಮ್ಯಾಗ್ನೈಟ್ Verdict

ಸ್ಮರ್ಧಾತ್ಮಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಆಕರ್ಷಕ ವಿನ್ಯಾಸ, ಹಲವಾರು ಪ್ರೀಮಿಯಂ ಫೀಚರ್ಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ನಿಸ್ಸಾನ್ ಮ್ಯಾಗ್ನೈಟ್ ಬಣ್ಣಗಳು


Onyx Black
Sandstone Brown
Blade Silver
Flare Garnet Red
Storm White

ನಿಸ್ಸಾನ್ ನಿಸ್ಸಾನ್ ಮ್ಯಾಗ್ನೈಟ್ ಫೋಟೋಗಳು

ನಿಸ್ಸಾನ್ ಮ್ಯಾಗ್ನೈಟ್ Q & A

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಪ್ರತಿಸ್ಪರ್ಧಿ ಮಾದರಿಗಳು ಯಾವುವು?

ನಿಸ್ಸಾನ್ ಮ್ಯಾಗ್ನೈಟ್ ನೇರವಾಗಿ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಸೇರಿದಂತೆ ಪ್ರಮುಖ ಕಾರು ಮಾದರಿಗೆ ಪ್ರತಿಸ್ಪರ್ಧಿಯಾಗಿದೆ.

Hide Answerkeyboard_arrow_down
ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿರುವ ರೂಪಾಂತರಗಳು ಯಾವುವು?

ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಎಕ್ಸ್‌ಇ, ಎಕ್ಸ್‌ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ನಾಲ್ಕು ರೂಪಾಂತರಗಳಿವೆ.

Hide Answerkeyboard_arrow_down
ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಗಮನಸೆಳೆಯುವ ವೈಶಿಷ್ಟ್ಯತೆ ಯಾವುದು?

ನಿಸ್ಸಾನ್ ಮ್ಯಾಗ್ನೈಟ್‌ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಒಳಗೊಂಡಿದೆ.

Hide Answerkeyboard_arrow_down
ಪ್ರತಿಸ್ಪರ್ಧಿಗಳಿಗೆ ಹೋಲಿಕೆ ಮಾಡಿದ್ದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಬೆಲೆ ಉತ್ತಮವೇ?

ಖಂಡಿತವಾಗಿಯೂ ನಿಸ್ಸಾನ್ ಮ್ಯಾಗ್ನೈಟ್ ಕಾರು ತನ್ನ ಎಲ್ಲಾ ಪ್ರತಿಸ್ಪರ್ಧಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆಯಲಿದೆ.

Hide Answerkeyboard_arrow_down
ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಸನ್‌ರೂಫ್ ನೀಡಲಾಗಿದೆಯೇ?

ಇಲ್ಲ, ನಿಸ್ಸಾನ್ ಮ್ಯಾಗ್ನೈಟ್ ಟಾಪ್-ಎಂಡ್ ರೂಪಾಂತರದಲ್ಲೂ ಸಹ ಸನ್‌ರೂಫ್ ಸೌಲಭ್ಯವನ್ನು ನೀಡಲಾಗಿಲ್ಲ.

Hide Answerkeyboard_arrow_down
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X