ಟ್ರಕ್ ಮಾರಾಟ, ಚೀನಾ ಹಿಂದಿಕ್ಕಿದ ಭಾರತ

Commercial vehicle sale : India overtakes China
ಆಟೊಮೊಬೈಲ್ ಕ್ಷೇತ್ರದಲ್ಲಿ ವೇಗವೇನೆಂಬುದನ್ನು ಅರಿತಿರುವ ಚೀನಾ ಜಗತ್ತಿನ ದೊಡ್ಡಣ್ಣ ಅಮೆರಿಕವನ್ನು ಹಿಂದಿಕ್ಕಿ ಮುಂದಡಿಯಿಟ್ಟಿದೆ. ರಫ್ತಿನಲ್ಲು ಕೂಡ ಜರ್ಮನಿಯನ್ನು ಹಿಂದೆ ಹಾಕಿ ಚೀನಾ ಅಧಿಪತ್ಯವನ್ನು ಸ್ಥಾಪಿಸಿದೆ. ಆರ್ಥಿಕವಾಗಿ ಉಳಿದೆಲ್ಲ ರಾಷ್ಟ್ರಗಳಿಗಿಂತ ಬಿಕ್ಕಟ್ಟಿನಿಂದ ವೇಗವಾಗಿ ಹೊರಬಂದಿರುವ ಚೀನಾ, ಜಪಾನ್ ಗಿಂತ ಒಂದಡಿ ಮುಂದಿಡಲು ಕಾತರದಿಂದಿದೆ.

ಆದರೆ, ವಾಣಿಜ್ಯ ವಾಹನ ಮಾರಾಟ ಕ್ಷೇತ್ರದಲ್ಲಿ ಆರ್ಥಿಕವಾಗಿ ಸದೃಢವಾಗುತ್ತಿರುವ ಭಾರತ ಚೀನಾವನ್ನು ಹಿಂದೆ ಹಾಕಿ ಮುಂದೆ ಸಾಗಿದೆ. ಪ್ರಸಕ್ತ ವರ್ಷದಲ್ಲಿ ಚೀನಾ ಶೇ.60ರಷ್ಟು ವಾಣಿಜ್ಯ ವಾಹನಗಳ ಮಾರಾಟ ಮಾಡಿದ್ದರೆ, ಭಾರತ ಶೇ.77ರಷ್ಟು ಮಾರಾಟ ಮಾಡಿದೆ. ಟ್ರಕ್ ಮಾರಾಟದಲ್ಲಿ ಭಾರತ ಉಳಿದೆಲ್ಲ ದೇಶಗಳಿಗಿಂತ ಸಾಕಷ್ಟು ಮುಂದಿದೆ.

ಹೊಸ ವಿನ್ಯಾಸದ ನ್ಯಾವಿಸ್ಟರ್ ಟ್ರಕ್ಕನ್ನು ಮಹೀಂದ್ರ ಮತ್ತು ಮಹೀಂದ್ರ ಇತ್ತೀಚೆಗೆ ಬಿಡುಗಡೆ ಮಾಡಿದೆ. ವಿದೇಶಿ ಕಂಪನಿಗಳಾದ ಡೈಮ್ಲರ್, ವೊಲ್ವೋ, ಮ್ಯಾನ್, ಹಿನೋ ಮೋಟರ್ಸ್ ಮತ್ತು ಕಮಜ್ ವೆಕ್ಟ್ರಾ ಕಂಪನಿಗಳು ಹೊಸ ಮಾದರಿಯ ಟ್ರಕ್ಕುಗಳನ್ನು ಭಾರತದ ಮಾರುಕಟ್ಟೆಗೆ ಬಿಡಲು ಸಿದ್ಧವಾಗಿವೆ. ಒಟ್ಟಿನಲ್ಲಿ, ಅತ್ಯಂತ ಸುಸಜ್ಜಿತ, ಹೆಚ್ಚು ಬಾಳಿಕೆ ಬರುವ ಮತ್ತು ಸುಲಭವಾಗಿ ನಿರ್ವಹಿಸಬಹುದಂತಹ ಟ್ರಕ್ಕುಗಳ ಮಾರಾಟಕ್ಕೆ ಭಾರತೀಯ ಮತ್ತು ವಿದೇಶಿ ಕಂಪನಿಗಳ ನಡುವೆ ಭಾರೀ ಪೈಪೋಟಿ ಶುರುವಾಗಿದೆ.

ಟ್ರಕ್ ನಿರ್ಮಿಸುತ್ತಿರುವ ಜಗತ್ತಿನ ಅತಿ ದೊಡ್ಡ ಕಂಪನಿ ಡೈಮ್ಲರ್ ಭಾರತಕ್ಕೆ ಅಡಿಯಿಟ್ಟಿದ್ದು 2011ರಲ್ಲಿ ಸಂಪೂರ್ಣವಾಗಿ ನಿರ್ಮಾಣವಾಗಿರುವ ಟ್ರಕ್ಕುಗಳನ್ನು ಬಿಡುಗಡೆ ಮಾಡಲಿದೆ. ಟ್ರಕ್ ಕೊಳ್ಳಲು ಗ್ರಾಹಕರಿಗೆ ಹಣಕಾಸು ನೆರವು ಕೂಡ ಅತಿ ಸುಲಭದಲ್ಲಿ ದೊರೆಯುತ್ತಿರುವುದರಿಂದ ಮಾರಾಟದ ಪ್ರಮಾಣ ಏರಮುಖಿಯಾಗಿದೆ. ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಮೂಲಸೌಕರ್ಯದ ಭರವಸೆ ದೊರೆತಿರುವುದರಿಂದ ಚೀನಾವನ್ನು ಭಾರತ ಹಿಂದಿಕ್ಕುವುದರಲ್ಲಿ ಸಂದೇಹವಿಲ್ಲ.

Most Read Articles

Kannada
Story first published: Tuesday, July 20, 2010, 17:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X