Just In
Don't Miss!
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Sports
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ನೀಡಿದ ಪ್ರದರ್ಶನ ಅಸಾಮಾನ್ಯ: ಮೈಕಲ್ ವಾನ್
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತಕ್ಕೆ ಬಂತು ಅಮಿತಾಬ್, ವಿಜಯ್ ಮಲ್ಯರ ನೆಚ್ಚಿನ ಮಸೆರೆಟಿ
ದೇಶದ ಲಕ್ಷುರಿ ಕಾರು ಮಾರುಕಟ್ಟೆಗೆ ಮತ್ತೊಬ್ಬ ಕೆಟ್ಟ ಹುಡುಗನ ಆಗಮನವಾಗಿದೆ. ಇಟಲಿಯ ಸ್ಪೋರ್ಟ್ಸ್ ಕಾರ್ ತಯಾರಿಕಾ ಕಂಪನಿ ಮಸೆರೆಟಿ ಆವೃತ್ತಿಯೊಂದನ್ನು ಭಾರತಕ್ಕೆ ಪರಿಚಯಿಸಲಾಗಿದ್ದು, ಅದರ ದರ ಸುಮಾರು 1.20 ಕೋಟಿ ರೂ.ನಿಂದ 1.43 ಕೋಟಿ ರೂ.ಗಳ ಆಸುಪಾಸಿನಲ್ಲಿದೆ.
ಮಸೆರಿಟಿ ಬ್ರಾಂಡ್ ಕಾರುಗಳೆಂದರೆ ದೇಶದ ಉದ್ಯಮಿಗಳಿಗೆ, ಚಿತ್ರನಟರಿಗೆ ಅಚ್ಚುಮೆಚ್ಚು. ಈಗಾಗಲೇ ಭಾರತದ ಕೆಲವು ಖ್ಯಾತನಾಮರು ಮಸೆರೆಟಿ ಕ್ಯಾಲಿಬಾರ್ ಕಾರ್ ಮಾಲೀಕರಾಗಿದ್ದಾರೆ. ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಬಳಿ ಮಸೆರೆಟಿ ಕಾರಿದೆ. ಉಳಿದಂತೆ ವಿಜಯ್ ಮಲ್ಯ, ಅಜಯ್ ದೇವ್ ಗನ್, ಅನಿಲ್ ಅಂಬಾನಿ ಸಹ ಮಸೆರೆಟಿ ಕಾರ್ ಹೊಂದಿದ್ದಾರೆ.
ಭಾರತದಲ್ಲಿ ಕಳೆದ ವರ್ಷ ಸುಮಾರು 15 ಸಾವಿರ ಐಷಾರಾಮಿ ಕಾರುಗಳು ಮಾರಾಟಗೊಂಡಿದ್ದು, ಶೇಕಡಾ 70ರಷ್ಟು ಏರಿಕೆ ದಾಖಲಿಸಿದೆ. "ದೇಶದಲ್ಲಿ ಎಲ್ಲ ಪ್ರೀಮಿಯಂ ಮಸೆರೆಟಿ ಬ್ರಾಂಡ್ ಕಾರುಗಳನ್ನು ಪರಿಚಯಿಸಲಾಗುವುದು" ಎಂದು ಕಂಪನಿಯ ಏಷ್ಯಾ ಫೆಸಿಫಿಕ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಕಾರುಗಳನ್ನು ಇಲ್ಲಿನ ಶ್ರೇಯಸ್ ಗ್ರೂಪ್ ಮೂಲಕ ಕಂಪನಿಯು ಮಾರಾಟ ಮಾಡಲಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಶ್ರೇಯಸ್ ಗ್ರೂಪ್ ಮಸೆರಿಟಿ ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ.
ನೂತನ ಕಾರು ಪ್ರಸಕ್ತ ವರ್ಷದ ಜುಲೈ-ಅಗಸ್ಟ್ ವೇಳೆಗೆ ಗ್ರಾಹಕರ ಕೈಸೇರುವ ನಿರೀಕ್ಷೆಯಿದೆ. ಕಂಪನಿಯು ಮುಂಬೈನಲ್ಲಿ ಮೊದಲ ಶೋರೂಂ ತೆರೆಯಲಿದೆ. ಎರಡನೇ ಶೋರೂಂನ್ನು ಮುಂದಿನ ವರ್ಷ ನವದೆಹಲಿಯಲ್ಲಿ ಆರಂಭಿಸಲು ಕಂಪನಿ ನಿರ್ಧರಿಸಿದೆ. ವೇಗದ ಆವೇಗಕ್ಕೆ, ದುಬಾರಿ ಸವಾರಿಗೆ, ಐಷಾರಾಮಿ ಪ್ರಯಾಣಕ್ಕೆ ಬುಗಾಟಿ, ಫೆರಾರಿ, ಲಂಬೋರ್ಗಿನಿ ಮತ್ತು ಫೋರ್ಷ್ ಕಾರ್ ಗಳು ಅನ್ವರ್ಥನಾಮಗಳು. ಇವುಗಳಿಗೆ ಪೈಪೋಟಿ ನೀಡಲು ಇಟಲಿಯಿಂದ ಮಸೆರೆಟಿ ಸ್ಪೋರ್ಟ್ಸ್ ಕಾರ್ ಬಂದಿದೆ.
ಮಸೆರೆಟಿ ಎಂಬುದು ಫಿಯೆಟ್ ನ ಪೇರೆಂಟ್ ಕಂಪನಿಯಾಗಿದೆ. ಮಸೆರೆಟಿ ಕಾರುಗಳನ್ನು ಕಂಪನಿಯು ಸುಮಾರು 75ಕ್ಕೂ ಹೆಚ್ಚು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಈ ಕಾರ್ ಗಳು ಮೂರು ಮಾದರಿಗಳಲ್ಲಿ ದೊರಕುತ್ತಿದೆ. ಸುಮಾರು 5 ಕೋಟಿ ರೂಪಾಯಿಯ ಎರಡು ಸೀಟ್ ನ ಗ್ರ್ಯಾನ್ ಕ್ಯಾಬ್ರಿಯೊ, ಸುಮಾರು 3 ಕೋಟಿ ರೂ. ದರದ ಕ್ಯೂಟ್ರೊಪೋರ್ಟೆ ಸೆಡಾನ್ ಮತ್ತು ಗ್ರಾನ್ ಟೂರಿಸ್ಮೊ ಕೂಪ್ ಎಂಬ ಟಾಪ್ ಎಂಡ್ ಸ್ಪೋರ್ಟ್ ಆವೃತ್ತಿ (4.75 ಕೋಟಿ ರೂ.) ಗಳನ್ನು ಕಂಪನಿ ಹೊರತರುತ್ತಿದೆ.