ಪ್ರತಿಭಟನೆಯಿಂದ ಮಾರುತಿ ಸುಜುಕಿಗೆ 2 ಸಾವಿರ ಕೋಟಿ ರು. ನಷ್ಟ

Posted By:
Maruti Workers Strike loss estimated at Rs 700 crore
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಮಾನೆಸರ್ ಘಟಕದಲ್ಲಿ ನಡೆಯುತ್ತಿದ್ದ ನೌಕರರ 14 ದಿನಗಳ ಮುಷ್ಕರ ಕೊನೆಗೊಂಡಿದೆ. ಇದರಿಂದಾಗಿ ಕಂಪನಿಗೆ ಸುಮಾರು 700 ಕೋಟಿ ರು. ಆದಾಯ ಖೋತಾವಾಗಿದೆ ಎಂದು ಅಂದಾಜಿಸಲಾಗಿದೆ. ಮಾರುತಿ ಪವರ್ ಟ್ರೈನ್, ಸುಜುಕಿ, ಮಾರುತಿ ಸುಜುಕಿ ಎಲ್ಲಾ ಕಂಪನಿಗಳಿಗೆ ಒಟ್ಟಾರೆ 2 ಸಾವಿರ ಕೋಟಿ ರು. ನಷ್ಟವಾಗಿದೆಯಂತೆ.

ಕಂಪನಿ ಮತ್ತು ನೌಕರರ ನಡುವೆ ಉತ್ತಮ ನಡತೆ ಒಪ್ಪಂದ ನಡೆದಿತ್ತು. ಈ ಕುರಿತು ಹೆಚ್ಚಿನ ನೌಕರರು ವಿರೋಧ ವ್ಯಕ್ತಪಡಿಸಿದ್ದರು. ಮಾರುತಿ ಆಡಳಿತ, ಹರ್ಯಾಣ ಸರಕಾರ ಮತ್ತು ಮಾರುತಿ ನೌಕರರ ನಡುವೆ ನಡೆಯುತ್ತಿದ್ದ ಈ ಜಗಳ ಕೊನೆಗೂ ಅಂತ್ಯಗೊಂಡಿದೆ.

ಕಂಪನಿಯ ಅಗ್ರಿಮೆಂಟಿಗೆ ವಿರುದ್ಧವಾಗಿ ವರ್ತಿಸಿದಕ್ಕೆ ಕೆಲಸದಿಂದ ತೆಗೆದುಹಾಕಿದ್ದ ಸುಮಾರು 64 ಕೆಲಸಗಾರರನ್ನು ಮಾರುತಿ ಮತ್ತೆ ವಾಪಸ್ ತೆಗೆದುಕೊಂಡಿದೆ. ಉಳಿದ 1,200 ಸಾಮಾನ್ಯ ಕೆಲಸಗಾರರನ್ನು ವಾಪಸ್ ಕರೆಸಿಕೊಂಡಿದೆ. ಆದರೆ ಉಳಿದ 34 ಸಿಬ್ಬಂದಿಗಳು ಅಮಾನತ್ತಾಗಿಯೇ ಉಳಿದಿದ್ದಾರೆ.

ಒಟ್ಟಾರೆ ನೌಕರರೊಂದಿಗಿನ ಸೆಣಸಾಟದಿಂದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಗೆ ಸುಮಾರು 700 ಕೋಟಿ ರು.ವರೆಗೆ ನಷ್ಟವಾಗಿದೆ. ಈ ಸಮಯದಲ್ಲಿ ಕಂಪನಿಯ ಉತ್ಪಾದನೆ ಗಮನಾರ್ಹವಾಗಿ ಇಳಿಕೆ ಕಂಡಿತ್ತು.

ಈ ವರ್ಷದ ಜೂನ್ ತಿಂಗಳಲ್ಲಿ ನೌಕರರ ಮುಷ್ಕರದಿಂದ ಮಾನೆಸರ್ ಘಟಕದಲ್ಲಿ 13 ದಿನ ಉತ್ಪಾದನೆ ಸ್ಥಗಿತವಾಗಿತ್ತು. ಮತ್ತೆ ಆಕ್ಟೋಬರ್ ಒಂದರಿಂದ ನೌಕರರು ಪ್ರತಿಭಟನೆ ಮತ್ತೆ ಆರಂಭಿಸಿದ್ದರು.

ನೌಕರರ ಪ್ರತಿಭಟನೆಯಿಂದ ಸರಕಾರಕ್ಕೂ ನಷ್ಟವಾಗಿದೆ. ಯಾಕೆಂದರೆ ಪ್ರತಿಕಾರಿಗೆ 68 ಸಾವಿರ ರು. ಅಬಕಾರಿ ಸುಂಕ ವಿಧಿಸಲಾಗಿತ್ತು. ಇದರಿಂದ ಹರ್ಯಾಣ ಸರಕಾರಕ್ಕೆ 349 ಕೋಟಿ ರು. ನಷ್ಟವಾಗಿದೆ

English summary
Maruti Suzuki India ltd Manesar plant workers strike loss estimated at Rs 700 crore some report said.
Story first published: Saturday, October 22, 2011, 10:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark