ಫೆರಾರಿ ದುಬಾರಿ ಫ್ಯಾಮಿಲಿ ಕಾರು ಎಫ್ಎಫ್ ರಸ್ತೆಗೆ

Posted By:
To Follow DriveSpark On Facebook, Click The Like Button
Ferrari FF Four seater hatchback Car launched India
ಐಷಾರಾಮಿ, ವೇಗದ ಕಾರು ತಯಾರಿಕಾ ಕಂಪನಿ ಫೆರಾರಿ ಕಾರ್ಖಾನೆಯಿಂದ ಹೊಸದೊಂದು ಕಾರು ದೇಶದ ರಸ್ತೆಗಿಳಿದೆ. ಹೆಸರು ಫೆರಾರಿ ಎಫ್ಎಫ್. ಇದರ ದರ ಭಾರತದಲ್ಲಿ ಸುಮಾರು 3.42 ಕೋಟಿ ರುಪಾಯಿ ಎಂದು ಕಂಪನಿ ಪ್ರಕಟಿಸಿದೆ.

ಇಟಲಿಯ ಕಾರು ಕಂಪನಿ ಫೆರಾರಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಹಿಂಭಾಗ ಹ್ಯಾಚ್ ಆಗಿರುವ ನಾಲ್ಕು ಸೀಟಿನ ಫ್ಯಾಮಿಲಿ ಕಾರನ್ನು ಅನಾವರಣ ಮಾಡಿದೆ. ಸ್ಥಳಾವಕಾಶ, ಶಕ್ತಿ ಮತ್ತು ಸಾಮರ್ಥ್ಯದ ಮಿಲನದಿಂದ ನೂತನ ಫೆರಾರಿ ಎಫ್ಎಫ್ ಕಾರು ದೂರ ಪ್ರಯಾಣಕ್ಕೆ ಅತ್ಯಂತ ಸೂಕ್ತವಾದ ಕಾರಾಗಿದೆ.

ಇದರಲ್ಲಿ ಕಂಪನಿಯ ಇತರ ಕಾರುಗಳಿಗೆ ಹೋಲಿಸಿದರೆ ಎರಡು ಹೆಚ್ಚುವರಿ ಸೀಟುಗಳಿವೆ. ಹಿಂಭಾಗದ ಹ್ಯಾಚ್ ಡೋರಿನಿಂದಾಗಿ ಲಗೇಜ್ ಸ್ಥಳಾವಕಾಶ ಹೆಚ್ಚಾಗಿದೆ. ಇದರ ಇಂಟಿರಿಯರ್ ಕೂಡ ಅತ್ಯಧಿಕ ಗುಣಮಟ್ಟದ ಚರ್ಮದ ಹೊದಿಕೆ ಮತ್ತು ಕಾರ್ಬನ್ ಫೈಬರಿನಿಂದ ಇಷ್ಟವಾಗುತ್ತದೆ.

ಎಫ್ಎಫ್ ಕಾರು 6.2 ಲೀಟರಿನ ವಿ12 ಎಂಜಿನ್ ಹೊಂದಿದೆ. ಇದು 660 ಅಶ್ವಶಕ್ತಿ ಮತ್ತು 682 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು ಕಂಪನಿಯ ಮೊದಲ ನಾಲ್ಕು ಚಕ್ರ ಚಾಲನೆ(ಫೋರ್ ವೀಲ್ ಡ್ರೈವ್)ಯ ಕಾರಾಗಿದೆ.

ನೂತನ ಫೆರಾರಿ ಎಫ್ಎಫ್ ಕಾರಿನಲ್ಲಿ ಗಂಟೆಗೆ ಗರಿಷ್ಠ 335 ಕಿ.ಮೀ. ವೇಗದಲ್ಲಿ ಹೋಗಬಹುದಾಗಿದೆ. ಕೇವಲ 3.7 ಸೆಕೆಂಡಿನಲ್ಲಿ ಪ್ರತಿಗಂಟೆಗೆ 100 ಕಿ.ಮಿ. ವೇಗ ಪಡೆದುಕೊಳ್ಳಬಹುದಾಗಿದೆ

English summary
Ferrari has launched the FF four seater hatchback in India at Rs.3.42 crores at its recently opened showroom in Delhi. The FF is the Italian carmaker's first car to get four comfortable and spacious seats along with a rear hatch.
Story first published: Wednesday, November 2, 2011, 10:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark