ಷೆವರ್ಲೆ ಕಾರು ಬ್ರಾಂಡಿಗೆ ಶತಕ ಸಂಭ್ರಮ

* ಲೂಯಿಸ್ ಷೆವರ್ಲೆ ಎಂಬಾತ ಷೆವರ್ಲೆ ಬ್ರಾಂಡ್ ಸಂಸ್ಥಾಪಕ. ಬಿಲ್ಲಿ ಡ್ಯೂರಂಟ್ ಜನರಲ್ ಮೋಟರ್ಸ್ ಸಂಸ್ಥಾಪಕ. ಇದು ಜನರಲ್ ಮೋಟರ್ಸ್ ಕಂಪನಿಯ ಬೃಹತ್ ಬ್ರಾಂಡ್. ಷೆವರ್ಲೆ ಬ್ರಾಂಡಿನಲ್ಲಿ ರಸ್ತೆಗಿಳಿದ ಮೊದಲ ಕಾರೆಂದರೆ ಸೀರಿಸ್ ಸಿ ಕ್ಲಾಸಿಕ್ ಸಿಕ್ಸ್.
* ನಂಬರ್ ಒನ್ ಸ್ಥಾನದಲ್ಲಿದ್ದ ಫೋರ್ಡ್ ಕಂಪನಿಯ ಮಾರುಕಟ್ಟೆಗೆ ಸವಾಲು ನೀಡಿದ ಮೊದಲ ಬ್ರಾಂಡ್ ಷೆವರ್ಲೆ.
* ಷೆವರ್ಲೆ ಮುದ್ದು ಹೆಸರು ಚೆವಿ. ಜಾಗತಿಕವಾಗಿ ಷೆವರ್ಲೆ ಕಾರು ಪ್ರೇಮಿಗಳೆಲ್ಲ ಈ ಬ್ರಾಂಡ್ ಕಾರುಗಳನ್ನು ಚೆವಿ ಎಂದೇ ಕರೆಯುತ್ತಾರೆ.
* 1918ರಲ್ಲಿ ಜನರಲ್ ಮೋಟರ್ಸ್ ಜೊತೆ ಷೆವರ್ಲೆ ವಿಲೀನವಾಗಿದೆ. ನಂತರ ಇದು ಜನರಲ್ ಮೋಟರ್ಸ್ ಕಂಪನಿಯ ಬೃಹತ್ ಬ್ರಾಂಡ್ ಆಗಿ ಬೆಳೆಯಿತು.
* 1950ರ ನಂತರ ಕಂಪನಿಯ ಸ್ಪೋರ್ಟ್ಸ್ ಕಾರು Corvettes ಆಗಮಿಸಿದ ನಂತರ ಷೆವರ್ಲೆ ಬ್ರಾಂಡ್ ಇಮೇಜ್ ಹೆಚ್ಚಾಗಿದೆ. ಈಗಲೂ ಈ ಸ್ಪೋರ್ಟ್ಸ್ ಕಾರೆಂದರೆ ಹೆಚ್ಚಿನ ಜನರಿಗಿಷ್ಟವಂತೆ.
* ಭಾರತದಲ್ಲಿ ಷೆವರ್ಲೆ ಬ್ರಾಂಡಿನ ಕಾರುಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಇಲ್ಲಿ ಸ್ಪಾರ್ಕ್, ಬೀಟ್, ಅವಿಯೊ, ಯುವಿಎ, ಟವೆರಾ, ಕ್ರೂಝ್ ಮತ್ತು ಕ್ಯಾಪ್ಟಿವಾ ಕಾರುಗಳು ಮಾರಾಟವಾಗುತ್ತಿವೆ.


Click it and Unblock the Notifications








