ಕಡಿಮೆ ಇಂಧನ ಅಧಿಕ ಮೈಲೇಜ್- ಟೊಯೊಟಾ ಅಕ್ವಾ

Posted By:
To Follow DriveSpark On Facebook, Click The Like Button
Toyota Launches Fuel Efficients Hybrid Car
ಕಾಲದಿಂದ-ಕಾಲಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆ ಕಾರುಗಳನ್ನು ಕೊಳ್ಳಬೇಕೆ ಬೇಡ್ವೆ? ಎಂಬ ಗೊಂದಲವನ್ನು ಕಾರು ಗ್ರಾಹಕರಲ್ಲಿ ಉಂಟು ಮಾಡುತ್ತಿದೆ.

ಈ ಗೊಂದಲ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಕಾರು ಕಂಪನಿಗಳು ಕಡಿಮೆ ಡೀಸೆಲ್ ನಲ್ಲಿ ಅಧಿಕ ಮೈಲೇಜ್ ಕೊಡುವ ಕಾರುಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಫಲ ಇದೀಗ ಬರುತ್ತಿರುವ ಕಡಿಮೆ ಡೀಸಲ್ ನಿಂದ ಅಧಿಕ ಮೈಲೇಜ್ ಎಂಬ ಘೋಷಣೆಯನ್ನು ಹೊಂದಿರುವಂತಹ ಕಾರುಗಳು.

ಇದೀಗ ಟೊಯೊಟಾ ಕಾರು ಕಂಪನಿ ಪ್ರಪಂಚದಲ್ಲಿಯೆ ಅತಿ ಕಡಿಮೆ ಪೆಟ್ರೋಲ್ ನಿಂದ ಅಧಿಕ ಮೈಲೇಜ್ ಹೊಂದಿರುವ ಹೈಬ್ರಿಡ್ ಕಾರನ್ನು ಮಾರುಕಟ್ಟೆಗೆ ತಂದಿದೆ. ಇದರಿಂದ ವಿದ್ಯುತ್ ಚಾಲಿತ ಕಾರುಗಳಿಗೆ ತೀವ್ರವಾದ ಸ್ಪರ್ಧೆ ಎದುರಾಗಲಿದೆ. ಈ ಕಾರನ್ನು ಜಪಾನಿನಲ್ಲಿ 'ಅಕ್ವಾ' ಎಂದೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ಪ್ರಯಾಸ್ ಸಿ' ಎಂದು ಕರೆಯಲಾಗುವುದು.

'ಪ್ರಯಾಸ್ ಸಿ' ಕಾರನ್ನು ಈ ಸೋಮವಾರವಷ್ಟೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ  35.4 ಕಿಲೋ ಮೀಟರ್ ಹೋಗ ಬಹುದಾಗಿದೆ. ಇದರಿಂದಾಗಿ ಈ ಹಿಂದೆ ಇದದ ಒಂದು ಲೀಟರ್  ಪೆಟ್ರೋಲ್ ಗೆ  32 ಕಿ.ಮಿ ಕ್ರಮಿಸುವ ಪ್ರಯಸ್ ನ ದಾಖಲೆಯನ್ನು ಪ್ರಯಾಸ್ ಸಿಮುರಿದಿದೆ. ಈ ಪ್ರಯಾಸ್ ಸಿ ನಲ್ಲಿ 1.5 ಪೆಟ್ರೋಲ್ ಎಂಜಿನ್ ಬಳಸಲಾಗುವುದು.

ಟೊಯೊಟೊ ತಿಂಗಳಿಗೆ 12,000 ಯೂನಿಟ್ ನಷ್ಟು ಮಾರಾಟವನ್ನು ಜಪಾನಿನಲ್ಲಿ ಮಾರಾಟ ಮಾಡಲು ತೀರ್ಮಾನಿಸಿದ್ದು ಪ್ರತಿ ಕಾರಿನ ಪ್ರಾರಂಭ ದರ 21,600 ಡಾಲರ್ (11,4000 ರು)ಆಗಿದೆ.

ಜಪಾನ್ ನ ಕಾರು ತಯಾರಿಸವ ಕಂಪನಿಗಳು ಹೈಬ್ರಿಡ್ ಕಾರುಗಳ ತಯಾರಿಕೆಯಲ್ಲಿ ಸಿದ್ಧ ಹಸ್ತವಾಗಿದ್ದು, 2015ರಷ್ಟಿಗೆ ಅಧಿಕ ಸಾಮರ್ಥ್ಯದ ಇನ್ನೂ 10 ಹೊಸ ಹೈಬ್ರಿಡ್ ಕಾರುಗಳನ್ನು ತರುವ ಯೋಜನೆಯನ್ನು ಹಾಕಿಕೊಂಡಿದೆ.

ಈ ಟೊಯೊಟಾ 2012ರಲ್ಲಿ 20% ಮಾರಾಟವನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದು 2011ರಲ್ಲಿ ಪ್ರವಾಹದಿಂದ ಆದ ನಾಶ-ನಷ್ಟಗಳಿಂದ ಈ ಕಂಪನಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. 

English summary
Toyota Motor Company launched the world's most fuel-efficient hybrid car. This hybrid will give tight competition to the pure electric car. The nature of the this car will explore the toyota market.
Story first published: Tuesday, December 27, 2011, 15:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark