ಬಾಡಿಗಾರ್ಡ್ ಸಲ್ಮಾನ್ ಖಾನ್ ಗೆ ದುಬಾರಿ ಉಡುಗೊರೆ
ಇತ್ತೀಚೆಗೆ ಬಾಡಿಗಾರ್ಡ್ ಸಿನಿಮಾ(ಕನ್ನಡದಲ್ಲ) ಗಲ್ಲಾಪೆಟ್ಟಿಗೆ ದೋಚುವಲ್ಲಿ ಯಶಸ್ವಿಯಾಗಿತ್ತು. ಸಲ್ಮಾನ್ ಖಾನ್ ನಟನೆಯ ಈ ಚಿತ್ರದಲ್ಲಿ ಆಡಿ ಕಾರು ಕೂಡ ಜನಪ್ರಿಯಗೊಂಡಿತ್ತು. ನಾಯಕಿಗೆ ಬಾಡಿಗಾರ್ಡ್ ಆಗಿ ಸಲ್ಮಾನ್ ಈ ಕಾರಲ್ಲೇ ಪ್ರಯಾಣಿಸುತ್ತಿದ್ದರು. ಇದು ಆಡಿ ಕಂಪನಿಗೆ ಪುಕ್ಕಟೆ ಪ್ರಚಾರ ನೀಡಿತ್ತು.
ಈ ಸಿನಿಮಾದಲ್ಲಿ ಆಡಿ ಕಂಪನಿಯ ಅತ್ಯಧಿಕ ಮಾರಾಟದ ಸ್ಪೂರ್ಟ್ ಕಾರು ಕ್ಯೂ7 ಬಳಸಲಾಗಿತ್ತು. ಚಿತ್ರದ ಹಲವು ಸೀನ್ ಗಳಲ್ಲಿ ಆಡಿ ಕ್ಯೂ7 ಕಾರು ಮತ್ತು ಆಡಿ ಲೊಗೊ ಬಳಕೆಯಾಗಿತ್ತು. ಇದು ಸಾಕಷ್ಟು ಜನಪ್ರಿಯ ಸಿನಿಮಾವಾದ ಕಾರಣ ಆಡಿಗೂ ಸಾಕಷ್ಟು ಪ್ರಚಾರ ನೀಡಿತ್ತು. ಜಾಹೀರಾತಿಗೆ ಸಾಕಷ್ಟು ಹಣ ವಿನಿಯೋಗ ಮಾಡುವುದು ಕೂಡ ತಪ್ಪಿತ್ತು.
ಇದೀಗ ಆಡಿ ಇಂಡಿಯಾ ಕಂಪನಿಯು ಸಲ್ಮಾನ್ ಖಾನ್ ಗೆ ಆಡಿ ಕ್ಯೂ7 ಕಾರೊಂದನ್ನು ಉಡುಗೊರೆಯಾಗಿ ನೀಡಿದೆ.
ಆಡಿ ಕ್ಯೂ7 ಆರಾಮದಾಯಕ ಸವಾರಿಗೆ ಸೂಕ್ತವಾಗಿರುವ ಕಾರು. ಇದರ ಕಂಫರ್ಟ್, ಸ್ಥಳಾವಕಾಶ ಮತ್ತು ಸ್ಪೂರ್ಟಿ ಫೀಚರುಗಳು ಹೆಚ್ಚು ಜನರಿಗೆ ಇಷ್ಟವಾಗಿದೆ. ಇದು ದೇಶದಲ್ಲಿ ಅತ್ಯಧಿಕ ಮಾರಾಟದ ಎಸ್ ಯುವಿ ಕೂಡ ಹೌದು. ಇದು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ದೊರಕುತ್ತಿದೆ. ಆಡಿ ಕ್ಯೂ7 ಪೆಟ್ರೋಲ್ ಮತ್ತು ಡೀಸೆಲ್ ಕಾರು ದರ ಕ್ರಮವಾಗಿ 55 ಲಕ್ಷ ರು. ಮತ್ತು 75 ಲಕ್ಷ ರು. ಆಗಿದೆ.
ಇತ್ತೀಚೆಗೆ ಆಡಿ ಕಂಪನಿಯ ಕ್ಯೂ7 ಕಾರನ್ನು ಜಾನ್ ಅಬ್ರಾಹಂ ಖರೀದಿಸಿದ್ದರು. ಇದಕ್ಕೂ ಮುನ್ನ ಗುಲ್ ಪನಂಗ್ ಕೂಡ ಆಡಿ ಕ್ಯೂ5 ಖರೀದಿಸಿದ್ದರು. ಸೆಲೆಬ್ರಿಟಿ ಕಾರು ಲೋಕ ನೋಡಲು ಇಲ್ಲಿಗೆ ಕ್ಲಿಕ್ ಮಾಡಿರಿ.


Click it and Unblock the Notifications









