ಬಜೆಟ್ ಪರಿಣಾಮ: ಟೊಯೊಟಾ ಕಾರುಗಳು ದುಬಾರಿ

Posted By:
ದೇಶದ ಹೆಚ್ಚಿನ ಕಾರು ಕಂಪನಿಗಳ ಹಾದಿಯನ್ನೇ ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಅನುಸರಿಸಿದೆ. ಕಂಪನಿಯು ತನ್ನ ಕಾರುಗಳ ದರವನ್ನು ಏರಿಕೆ ಮಾಡಿದೆ. ಮಾರ್ಚ್ 16ರಂದು ಕೇಂದ್ರ ಸರಕಾರವು ಅಬಕಾರಿ ಸುಂಕ ಮತ್ತು ಆಮದು ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ ಜಪಾನಿನ ಕಾರು ತಯಾರಿಕಾ ಕಂಪನಿಯು ಕಾರು ದರಗಳನ್ನು ಶೇಕಡ 2ರಿಂದ ಶೇಕಡ 4ರಷ್ಟು ಏರಿಕೆ ಮಾಡಿದೆ.

"ಅಬಕಾರಿ ಮತ್ತು ಆಮದು ಸುಂಕ ಹೆಚ್ಚಾದ ಹಿನ್ನಲೆಯಲ್ಲಿ ಕಂಪನಿಯ ಕಾರು ನಿರ್ಮಾಣ ವೆಚ್ಚ ಹೆಚ್ಚಾಗಿದೆ. ಈ ವೆಚ್ಚ ಹೆಚ್ಚಳವನ್ನು ಗ್ರಾಹಕರ ಮೇಲೆ ವರ್ಗಾಯಿಸುವುದಲ್ಲದೇ ಬೇರೆ ಆಯ್ಕೆಗಳು ನಮ್ಮ ಮುಂದಿಲ್ಲ" ಎಂದು ಟೊಯೊಟಾ ಕಿರ್ಲೊಸ್ಕರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಕಂಪನಿಯು ಟೊಯೊಟಾ ಎಟಿಯೋಸ್ ಪೆಟ್ರೋಲ್ ಆವೃತ್ತಿ ದರವನ್ನು ಸುಮಾರು 11,500 ರು.ನಷ್ಟು ಹೆಚ್ಚಿಸಿದೆ. ಎಟಿಯೋಸ್ ಡೀಸೆಲ್ ಆವೃತ್ತಿ ದರ 13,600 ರುಪಾಯಿ ಏರಿಕೆ ಮಾಡಿದೆ. ಎಟಿಯೋಸ್ ಲಿವಾ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿ ದರವನ್ನು ಕ್ರಮವಾಗಿ 9,500 ರು. ಮತ್ತು 11,500 ರು.ನಷ್ಟು ಏರಿಕೆ ಮಾಡಲಾಗಿದೆ.

ಟೊಯೊಟಾ ಕಂಪನಿಯ ಜನಪ್ರಿಯ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಫಾರ್ಚ್ಯುನರ್ ದರ ಸುಮಾರು 80 ಸಾವಿರ ರುಪಾಯಿ ಏರಿಕೆ ಕಂಡಿದೆ. ಕೊರೊಲಾ ಆಲ್ಟಿಸ್ ಸೆಡಾನ್ ಪೆಟ್ರೋಲ್ ಆವೃತ್ತಿ ದರ 39 ಸಾವಿರ ರುಪಾಯಿ ಹೆಚ್ಚಾಗಿದೆ. ಡೀಸೆಲ್ ಆಲ್ಟಿಸ್ ದರ 26,500 ರುಪಾಯಿಯಷ್ಟು ಏರಿಕೆ ಕಂಡಿದೆ. ಇನ್ನೋವಾ ದರ 32,500 ರು.ವರೆಗೆ ಏರಿಕೆ ಕಂಡಿದೆ.

ಇದರೊಂದಿಗೆ ಆಮದುಮಾಡಿಕೊಳ್ಳುವ ಸಿಬಿಯು ಆವೃತ್ತಿಗಳಾದ ಕ್ಯಾಮ್ರಿ, ಪ್ರಾಡೊ, ಲ್ಯಾಂಡ್ ಕ್ರೂಷರ್ ಮತ್ತು ಪ್ರಿಯೂಸ್ ದರ ಕೂಡ ಏರಿಕೆ ಕಂಡಿದೆ. ಈ ಆವೃತ್ತಿಗಳ ದರ ಹೆಚ್ಚಳ ಮಾಹಿತಿಯನ್ನು ಕಂಪನಿಯು ಶೀಘ್ರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ಮಾರುತಿ ಕಾರುಗಳು ಎಷ್ಟು ದುಬಾರಿಯಾಗಿವೆ?

English summary
Toyota Also Rises Car Prices Post Budget. The price hike will effectively increase the price of the Etios' petrol variant by Rs.11,500. The diesel variant of the Etios will see its price increase by Rs.13,600. The Etios Liva's price will be increased by Rs9,500 and Rs.11,500 for the petrol and diesel variants respectively.
Story first published: Monday, March 19, 2012, 9:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark