ದಾರಿ ಬಿಡಿ ಸಾರ್, ಷೆವರ್ಲೆ ಟ್ರಯಲ್ ಬ್ಲೇಝರ್ ಬರುತ್ತಿದೆ!!

Posted By:
To Follow DriveSpark On Facebook, Click The Like Button
2012 Chevrolet Trialblazer
ಷೆವರ್ಲೆ ಬ್ರಾಂಡಿನ ನೂತನ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ದೇಶದ ರಸ್ತೆಗೆ ಆಗಮಿಸಲು ರೆಡಿಯಾಗಿದೆ. ಟೊಯೊಟಾ ಫಾರ್ಚ್ಯುನರ್ ಮತ್ತು ಫೋರ್ಡ್ ಇಂಡೊವರ್ ಕಾರುಗಳಿಗೆ ಪೈಪೋಟಿ ನೀಡುವ ಷೆವರ್ಲೆ ಟ್ರಯಲ್ ಬ್ಲೇಝರ್ ಕಾರನ್ನು ಕಂಪನಿಯು ದೇಶದ ಎಸ್ ಯುವಿ ಸೆಗ್ಮೆಂಟಿಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.

ಷೆವರ್ಲೆ Trailblazer ಎಸ್ ಯುವಿ 2.8 ಲೀಟರಿನ(180 ಹಾರ್ಸ್ ಪವರ್) ಅಥವಾ 2.5 ಲೀಟರಿನ(150 ಹಾರ್ಸ್ ಪವರ್) ಡೀಸೆಲ್ ಎಂಜಿನ್ ಹೊಂದಿದೆ. ಇದು ಬೃಹತಾದ 2.8 ಕಾಮನ್ ರೈಲ್ ಎಂಜಿನ್ ಹೊಂದಿದ್ದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಟ್ರಯಲ್ ಬ್ರೇಝರ್ ಆಕರ್ಷಕ ಸೌಂದರ್ಯದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್. ಇದು ಫೋರ್ಡ್ ಇಂಡೊವರ್ ಮತ್ತು ಟೊಯೊಟಾ ಫಾರ್ಚ್ಯುನರ್ ಗಳಿಗಿಂತ ಹೆಚ್ಚು ಸ್ಥಳಾವಕಾಶ ಹೊಂದಿದೆ. ನೂತನ ಕಾರು 7 ಸೀಟು ಹೊಂದಿದೆ.

ನೂತನ ಸ್ಪೋರ್ಟ್ ಯುಟಿಲಿಟಿ ಕಾರನ್ನು ಕಂಪನಿಯು ಸಿಕೆಡಿ ಯುನಿಟ್ ಮೂಲಕ ಆಮದು ಮಾಡಿಕೊಳ್ಳಲಿದೆ. ಇದರ ದರ ಸುಮಾರು 17 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಹೆಚ್ಚಿನ ಮಾಹಿತಿಗಾಗಿ ಕೆಲವು ದಿನ ಕಾಯುವುದು ಅನಿವಾರ್ಯ.

English summary
2012 Chevrolet Trialblazer Sport Utility Vehicle will launch India Soon. Some report said new SUV will compete with Toyota Fortuner and Ford Endeavour.
Story first published: Saturday, January 28, 2012, 16:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark