ನೀಲಿ ಸುಂದರಿ: ರೆನೊ ಆಲ್ಫಿನ್ ಹೊಸ ಸ್ಪೋರ್ಟ್ಸ್ ಕಾರು

Posted By:
To Follow DriveSpark On Facebook, Click The Like Button
ಆಲ್ಪಿನ್ ಅಂದ್ರೆ ಹೆಚ್ಚಿನವರಿಗೆ ಗೊತ್ತಿರಬಹುದು. ಕಾರು ಮ್ಯೂಸಿಕ್ ಸಿಸ್ಟಮ್, ಕಾರ್ ಎಂಟರ್ ಟೈನ್ ಮೆಂಟ್ ತಯಾರಿಕೆಯಲ್ಲಿ ಆಲ್ಪಿನ್ ಭಾರೀ ಹೆಸರು ಮಾಡಿದೆ. ಆದರೆ ಇದೇ ಕಂಪನಿಯೀಗ ಸ್ಪೋರ್ಟ್ಟ್ಸ್ ಕಾರೊಂದನ್ನು ಪರಿಚಯಿಸಲು ಯೋಜಿಸಿದೆ.

ಪ್ರಾಯಶಃ ಮುಂದಿನ ವರ್ಷ ಆಗಮಿಸಲಿರುವ ಆಲ್ಪಿನ್ ಸ್ಪೋರ್ಟ್ಸ್ ಕಾರಿನ ನೀಲಿ ಬಣ್ಣದ ಚಿತ್ರಗಳು ಇಂಟರ್ ನೆಟ್ ನಲ್ಲಿ ಓಡಾಡುತ್ತಿವೆ. ಈ ಕಾರನ್ನು ವಿನ್ಯಾಸ ಮಾಡಿದ್ದು ರೆನೊ ಡೀಲರ್ ಜೀನ್ ರೆಡಿಲಿ ಎಂಬಾತ. ಸಾಮಾನ್ಯ ರೆನೊ ಕಾರು ಬಿಡಿಭಾಗಗಳನ್ನು ಬಳಕೆ ಮಾಡಿ ಆತ ಈ ಹಗುರ ಸ್ಪೋರ್ಟ್ಸ್ ಕಾರು ನಿರ್ಮಿಸಿದ್ದಾನೆ.

1970ರಲ್ಲಿ ಮಾರುಕಟ್ಟೆಯಲ್ಲಿದ್ದ ಆಲ್ಪಿನ್ ಎ110 ಎಂಬ ಕಾರು ವಿಶ್ವ ರಾಲಿಯಲ್ಲಿ ಮೂರು ಚಾಂಪಿಯನ್ ಷಿಪ್ ಪಡೆದಿತ್ತು. ನಂತರ ರೆನೊ ಕಂಪನಿಯು ಇದನ್ನು ಸ್ಪೋರ್ಟ್ಸ್ ವಾಹನ ವಿಭಾಗವಾಗಿ ಬಿಟ್ಟಿತು. ಈಗ ಮತ್ತೊಂದು ಸ್ಪೋರ್ಟ್ಸ್ ಕಾರು ಪರಿಚಯಿಸುವ ಇಂಗಿತದಲ್ಲಿದೆ.

ನೂತನ ಆಲ್ಪಿನ್ ಕಾರಿಗೆ ಹಳೆಯ ನೀಲಿ ಬಣ್ಣವನ್ನೇ ನೀಡಲಾಗಿದೆ. ಇದಕ್ಕೆ ನಾಲ್ಕುನೂರು ಅಶ್ವಶಕ್ತಿಯ 3.5 ಲೀಟರಿನ ವಿ6 ಎಂಜಿನ್ ಬಳಕೆ ಮಾಡಲಾಗಿದೆ. ಈ ಕಾರಿನ ಉತ್ಪಾದನೆ ಮುಂದಿನ ವರ್ಷ ಆರಂಭವಾಗುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ.

ಸ್ಪೋರ್ಟ್ಸ್ ಕಾರು ಪ್ರಿಯರು ನೀಲಿ ಸುಂದರಿ ಆಲ್ಫಿನ್ ನಿರೀಕ್ಷೆಯಲ್ಲಿರಬಹುದು.

English summary
French manufacturer of racing and sports cars Alpine new concept sportscar will start production next year. Alpine sports car painted blue, like rally car.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark