ಆಡಿ ಕ್ಯೂ3 ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು

ಜರ್ಮನಿಯ ವಿಲಾಸಿ ಕಾರುತಯಾರಿಕಾ ಕಂಪನಿ ಆಡಿ ಕಳೆದ ವಾರ ದೇಶದ ರಸ್ತೆಗೆ ಪರಿಚಯಿಸಿದ "ಆಡಿ ಕ್ಯೂ3" ಕಾರಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಿದ ನೂತನ ಕ್ಯೂ3 ಕಾರು ರಸ್ತೆಗಿಳಿದ ಐದೇ ದಿನಗಳಲ್ಲಿ ಸುಮಾರು 400 ಜನರು ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ಸುಮಾರು 30 ಲಕ್ಷ ರುಪಾಯಿಯ ದುಬಾರಿ ಕಾರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಬೇಡಿಕೆ ಬಂದಿರುವುದು ಅಚ್ಚರಿಯ ವಿಷಯ. ಯಾಕೆಂದರೆ ಮಹೀಂದ್ರ ಅಥವಾ ಮಾರುತಿ ಸುಜುಕಿ ಕಾರುಗಳಂತೆ ಇವು ಸಾವಿರ ಲೆಕ್ಕದಲ್ಲಿ ಮಾರಾಟವಾಗುವ ಸೆಗ್ಮೆಂಟಿನಲ್ಲಿಲ್ಲ. ಕಂಪನಿಯು ದೇಶದಲ್ಲಿ ಕೇವಲ 19 ಶೋರೂಂ ಹೊಂದಿದ್ದರೂ ಇಷ್ಟೊಂದು ಬುಕ್ಕಿಂಗ್ ಆಗಿರೋದು ವಿಶೇಷ.

ವಿಶೇಷವೆಂದರೆ ಕಂಪನಿಯು ಸದ್ಯಕ್ಕೆ ಕೇವಲ 500 ಯುನಿಟ್ ಕ್ಯೂ3 ವಿತರಣೆ ಮಾಡಿದೆ. ಕೇವಲ 500 ಕಾರೇ ಇದೆ, ತ್ವರೆ ಮಾಡಿ ಎಂದು ಪ್ರಕಟಿಸಿರುವುದೂ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿರಬಹುದು. ಕಂಪನಿಯು ಔರಂಗಾಬಾದ್ ಘಟಕದಲ್ಲಿ ಕ್ಯೂ3 ಜೋಡಿಸುತ್ತಿದೆ.

ನೂತನ ಕ್ಯೂ3 ಬೇಸ್ ಆವೃತ್ತಿ ದರ ಸುಮಾರು 26 ಲಕ್ಷ ರುಪಾಯಿ ಇದೆ. ಈ ಕಾರು ಆಲ್ ವೀಲ್ ಡ್ರೈವ್ ಸಿಸ್ಟಮ್ ಹೊಂದಿದೆ. ಇದು ಬಿಎಂಡಬ್ಲ್ಯು ಕಂಪನಿಯ ಎಕ್ಸ್1ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಸದ್ಯಕ್ಕೆ ಆಡಿ ಕ್ಯೂ3 ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ.

ವಿಶೇಷವೆಂದರೆ ಆಡಿ ಕಂಪನಿಯ ಬೃಹತ್ ಕಾರುಗಳಿಗಿಂತ ನೂತನ ಕ್ಯೂ3 ಕ್ರಾಸೊವರ್ ಹೆಚ್ಚು ವಿಶೇಷ ಲುಕ್ಕಿನಿಂದ ಕಂಗೊಳಿಸುತ್ತದೆ. ಆಡಿ ಕ್ಯೂ3 ಕಾರು ಅತ್ಯಧಿಕ ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ. ಕ್ಯೂ3 ಇಂಟಿರಿಯರ್ ಐಷಾರಾಮಿ ಫೀಚರುಗಳಿಂದ ಶ್ರೀಮಂತವಾಗಿದೆ. (ಸಂಪೂರ್ಣ ವಿಮರ್ಶೆ ಓದಿ)

Most Read Articles

Kannada
English summary
Targeting the young buyers in the country, German luxury carmaker Audi had launched the Q3 crossover last week. Doing justice the company, the Q3 has recorded 400 bookings in just five days.
Story first published: Thursday, June 28, 2012, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X