ಬಜೆಟ್: ತಕ್ಷಣದಿಂದ ಮಾರುತಿ ಕಾರು ದರ ಹೆಚ್ಚಳ

Posted By:
2012-13 ಸಾಲಿನ ಕೇಂದ್ರ ಆಯವ್ಯಯ ಪಟ್ಟಿಯನ್ನು ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ್ದಾರೆ. ಇದರಲ್ಲಿ ಪ್ರಯಾಣಿಕ ಕಾರುಗಳ ಅಬಕಾರಿ ಸುಂಕ ಶೇಕಡ 2ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತಕ್ಷಣದಿಂದಲೇ ಕಾರು ದರ ಹೆಚ್ಚಿಸುವುದಾಗಿ ತಿಳಿಸಿದೆ.

ಹೆಚ್ಚಿದ ತೆರಿಗೆ ಹೊರೆಯನ್ನು ಗ್ರಾಹಕರತ್ತ ವರ್ಗಯಿಸುವುದಾಗಿ ಮಾರುತಿ ಹೇಳಿದೆ. "ತಕ್ಷಣದಿಂದಲೇ ಅನ್ವಯವಾಗುವಂತೆ ಅಬಕಾರಿ ಸುಂಕ ಹೆಚ್ಚಳವನ್ನು ಗ್ರಾಹಕರತ್ತ ವರ್ಗಾಯಿಸಲಿದ್ದೇವೆ" ಎಂದು ಮಾರುತಿ ಸುಜುಕಿ ಚೇರ್ಮನ್ ಆರ್ ಸಿ ಭಾರ್ಗವ ಹೇಳಿದ್ದಾರೆ.

ಪ್ರಸಕ್ತ ಬಜೆಟಿನಲ್ಲಿ ಹಣಕಾಸು ಸಚಿವರು ಡೀಸೆಲ್ ಕಾರುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಿಲ್ಲ. ಹೀಗಾಗಿ ಡೀಸೆಲ್ ಕಾರುಗಳ ಭಾರಿ ದರ ಹೆಚ್ಚಳದಿಂದ ಪಾರಾಗಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Maruti Suzuki Car prices to increase on excise duty hike. Company will pass on the customers on an immediate basis.
Story first published: Friday, March 16, 2012, 16:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark