ಹಬ್ಬದ ಡಿಸ್ಕೌಂಟ್: ಯಾವ ಕಾರಿಗೆ ಎಷ್ಟೇಷ್ಟು?

Posted By:
To Follow DriveSpark On Facebook, Click The Like Button
ಹಬ್ಬದ ಸೀಸನಿನಲ್ಲಿ ಕಾರು ಖರೀದಿ ಭರಾಟೆ ಜೋರಾಗಿರುತ್ತದೆ. ಈಗಾಗಲೇ ಕೆಲವು ಕಾರು ಕಂಪನಿಗಳು ಹಬ್ಬದ ಡಿಸ್ಕೌಂಟ್ ಪ್ರಕಟಿಸತೊಡಗಿವೆ. ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ ಮತ್ತು ಟಾಟಾ ಮೋಟರ್ಸ್ ಕಂಪನಿಗಳು ಆಕರ್ಷಕ ದರ ವಿನಾಯಿತಿ ನೀಡಿವೆ. ಯಾವೆಲ್ಲ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್ ಇದೆ ಎಂಬ ಮಾಹಿತಿ ಇಲ್ಲಿದೆ.

ಮಾರುತಿ ಹಬ್ಬದ ಆಫರ್

ಈ ಹಬ್ಬದ ವೇಳೆಯಲ್ಲಿ ಹೊಸ ಮಾರುತಿ ಕಾರೊಂದನ್ನು ಮನೆಗೆ ತೆಗೆದುಕೊಂಡು ಹೋಗುವ ಯೋಜನೆಯಲ್ಲಿರುವಿರಾ? ಹಾಗಾದರೆ ಮಾರುತಿ ಸುಜುಕಿ ಕಂಪನಿಯ ಬೊಂಬಾಟ್ ಆಫರುಗಳು ನಿಮ್ಮನ್ನು ಸ್ವಾಗತಿಸಲಿವೆ.

ಆಲ್ಟೊ, ವ್ಯಾಗನಾರ್, ಎಸ್ಟಾರ್ ಮತ್ತು ಎಸ್ಟಿಲೊ ಪೆಟ್ರೋಲ್ ಆವೃತ್ತಿಗಳಿಗೆ ಸುಮಾರು 30-35 ಸಾವಿರ ರು.ನಷ್ಟು ಡಿಸ್ಕೌಂಟ್ ನೀಡಿದೆ. ಜೊತೆಗೆ 25 ಸಾವಿರ ರು.ವರೆಗೆ ವಿನಿಮಯ ಬೋನಸ್ ಆಫರ್ ಕೂಡ ನೀಡುತ್ತಿದೆ.

ಹ್ಯುಂಡೈ ದರ ವಿನಾಯಿತಿ

ಹಬ್ಬದ ಸಮಯದಲ್ಲಿ ಹ್ಯುಂಡೈ ಕಾರುಗಳನ್ನು ಖರೀದಿಸಲು ಬಯಸಿದ್ದರೆ, ಆಕರ್ಷಕ ದರ ವಿನಾಯಿತಿ ಪಡೆಯಬಹುದು. ಐ10 ಕಾರಿಗೆ ಕಂಪನಿಯು 44 ಸಾವಿರ ರು.ನಷ್ಟು ಡಿಸ್ಕೌಂಟ್ ಪ್ರಕಟಿಸಿದೆ. ಜೊತೆಗೆ ಗಿಫ್ಟ್ ಚೆಕ್ ಮತ್ತು ಲೋಯಾಲ್ಟಿ ಬೋನಸ್/ಎಕ್ಸ್ ಚೇಂಜ್ ಆಫರ್ ಕೂಡ ನೀಡಿದೆ.

ಹ್ಯುಂಡೈ ಇಯಾನ್ ಕಾರಿಗೆ ಕಂಪನಿಯು 24,250 ರು.ನಷ್ಟು ದರ ವಿನಾಯಿತಿ ಮಾಡಿದೆ. ಉಚಿತ ವಿಮೆ, ವಿನಿಮಯ ಬೋನಸ್ ಕೂಡ ಇದರಲ್ಲಿ ಸೇರಿದೆ. ಸ್ಯಾಂಟ್ರೊ ಕಾರು ಖರೀದಿಗೆ ಉಚಿತ ವಿಮೆ ಸೇರಿದಂತೆ ಸುಮಾರು 40 ಸಾವಿರ ರು.ನಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ.

ಹೋಂಡಾ ಡಿಸ್ಕೌಂಟ್

ಹೋಂಡಾ ಕಾರುಗಳಿಗೆ ಕಂಪನಿಯು 15 ಸಾವಿರ ರುಪಾಯಿಯಿಂದ 40 ಸಾವಿರ ರು.ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ ಉಚಿತ ವಿಮೆ ಇತ್ಯಾದಿ ಆಫರುಗಳೂ ಇವೆ. ಹೋಂಡಾ ಸಿಟಿ ಕಾರಿಗೆ 35 ಸಾವಿರ ರು.ನಷ್ಟು ಡಿಸ್ಕೌಂಟ್ ನೀಡಿದೆ.

ಹಬ್ಬದ ಸಮಯದಲ್ಲಿ ಕಾರು ಖರೀದಿಸಲು ಯೋಚಿಸಿದ್ದೀರಾ? ಹಾಗಾದರೆ ನಿಮ್ಮ ಹತ್ತಿರದ ಡೀಲರುಗಳ ಬಳಿ ಹೋಗಿ ಎಷ್ಟು ಡಿಸ್ಕೌಂಟ್ ಇದೆ ಎಂದು ಕೇಳಿಬಿಡಿ. ಈ ಹಬ್ಬದ ಸಮಯದಲ್ಲಿ ಒಳ್ಳೆಯ ಡೀಲ್ ಮಾಡಿಬಿಡಿ. ಶುಭವಾಗಲಿ.

ಇನ್ನಷ್ಟು ಕಾರುಗಳಿಗೆ ಡಿಸ್ಕೌಂಟ್(ಇದೀಗ ಬಂದ ಮಾಹಿತಿ)

* ಹ್ಯುಂಡೈ ಐ10- 45 ಸಾವಿರ ರು.ವರೆಗೆ

* ನಿಸ್ಸಾನ್ ಮೈಕ್ರಾ: 48 ಸಾವಿರ ರು.ವರೆಗೆ

* ಫೋರ್ಡ್ ಫಿಗೊ: 28 ಸಾವಿರ ರು.ವರೆಗೆ

* ಹ್ಯುಂಡೈ ಸಾಂತಾ ಫೆ: 60 ಸಾವಿರ ರು.ವರೆಗೆ

* ಟಾಟಾ ಸಫಾರಿ: 83 ಸಾವಿರ ರು.ವರೆಗೆ

* ಸ್ಕೋಡಾ ಯೆಟಿ: 75 ಸಾವಿರ ರು.ವರೆಗೆ

* ಮಾರುತಿ ಎಸ್ಎಕ್ಸ್4: 30 ಸಾವಿರ ರು.ವರೆಗೆ

* ಹ್ಯುಂಡೈ ಸೊನಾಟಾ: 60 ಸಾವಿರ ರು.ವರೆಗೆ

* ಹೋಂಡಾ ಸಿಟಿ: 35 ಸಾವಿರ ರು.ವರೆಗೆ

* ಹ್ಯುಂಡೈ ವೆರ್ನಾ: 25 ಸಾವಿರ ರು.ವರೆಗೆ

* ಮಾರುತಿ ಡಿಜೈರ್: 20 ಸಾವಿರ ರು.ವರೆಗೆ

* ನಿಸ್ಸಾನ್ ಸನ್ನಿ: 56 ಸಾವಿರ ರು.ವರೆಗೆ

English summary
Car makers as well as new car buyers wait for the festive season. It is during this season, carmakers witness a boom in their car sales as well as new car buyers are treated to big discounts. Kannada Drivespark takes a look of what's in store for this festive season.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark