ಬೆರಗುಗೊಳಿಸುವ ಮೂರು ಹೊಸ ಕಾರುಗಳು
ಬೀಜಿಂಗ್ ವಾಹನ ಪ್ರದರ್ಶನ ಶುರುವಾಗಿದೆ. ಅಲ್ಲಿ ಅನಾವರಣಗೊಂಡ ಹತ್ತು ಹಲವು ಕಾರುಗಳು ವಾಹನಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂದು ಅನಾವರಣಗೊಂಡ ಕೆಲವು ಕಾರುಗಳ ಮಾಹಿತಿ ಇಲ್ಲಿದೆ.
ಫಿಯೆಟ್ ವಿಯಾಜಿಯೊ: ಫಿಯೆಟ್ ಕಂಪನಿಯ ಈ ಕಾರು ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇದು 1.4 ಲೀಟರ್ ಟಿ ಜೆಟ್ ಟರ್ಬೊ ಚಾರ್ಜಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಐದು ಸ್ಪೀಡ್ ಮ್ಯಾನುಯಲ್ ಗೇರ್ ಮತ್ತು 6 ಸ್ಪೀಡ್ ಡ್ಯೂಯಲ್ ಕ್ಲಚ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ದೊರಕುತ್ತದೆ. ಇದರಲ್ಲಿ 8.4 ಇಂಚಿನ ಟಚ್ ಸ್ಕ್ರೀನ್ ಎಂಟರ್ಟೈನ್ ಮೆಂಟ್ ಸಿಸ್ಟಮ್, ಸ್ಯಾಟಲೈಟ್ ನ್ಯಾವಿಗೇಷನ್ ಮತ್ತು ಯೂನಿಕ್ಯೂ ಇನ್ಸ್ಟ್ರುಮೆಂಟ್ ವಿನ್ಯಾಸ ಹೊಂದಿದೆ.
ರೋಲ್ಸ್ ರಾಯ್ಸ್ ಪಂಟೊಮ್ ಸೀರಿಸ್ 2: ರೋಲ್ಸ್ ರಾಯ್ಸ್ ಪಂಟೊಮ್ ನ ನೂತನ ಆವೃತ್ತಿಯನ್ನು ಬೀಜಿಂಗ್ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ. ಇದು 2003ರಲ್ಲಿ ಪಂಟೊಮ್ ರಸ್ತೆಗಿಳಿದ ನಂತರದ ಪ್ರಪ್ರಥಮ ಅಪ್ ಗ್ರೇಡ್ ಆವೃತ್ತಿಯಾಗಿದೆ. ನೂತನ ಕಾರಿನ ಎಂಜಿನ್ ಮತ್ತು ತಂತ್ರಜ್ಞಾನವನ್ನು ಪರಿಷ್ಕತಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಲಂಬೊರ್ಗಿನಿ ಉರಸ್ ಸೂಪರ್ ಎಸ್‌ಯುವಿ: ಲಂಬೊರ್ಗಿನಿ ಕಂಪನಿಯು ಉರಸ್ ಹೆಸರಿನ ಸೂಪರ್ ಸ್ಪೋರ್ಟ್ ಯುಟಿಲಿಟಿ ಕಾರನ್ನು ಅನಾವರಣಗೊಂಡಿದೆ. ಇದು 5 ಡೋರಿನ ನಾಲ್ಕು ಸೀಟಿನ ಶಕ್ತಿಶಾಲಿ ಕಾರಾಗಿದೆ. ಅವೆಂಟಡೊರ್ ಮತ್ತು ಗಲಾರ್ಡೊ ನಂತರ ಲಂಬೊರ್ಗಿನಿ ಕಂಪನಿಯು ಹೊರತರುತ್ತಿರುವ ಮೂರನೇ ಕಾರು ಇದಾಗಿದೆ.


Click it and Unblock the Notifications









