ಷೆವರ್ಲೆ ಸ್ಪಾರ್ಕ್ ಹೊಸ ಆವೃತ್ತಿ ಬರಲಿದೆ, ರೆಡಿಯಾಗಿ!

ಷೆವರ್ಲೆ ಬ್ರಾಂಡಿನ ಜನಪ್ರಿಯ ಎಂಟ್ರಿ ಲೆವೆಲ್ ಸ್ಪಾರ್ಕ್ ಸಣ್ಣಕಾರಿನ ಫೇಸ್‌ಲಿಫ್ಟೆಡ್ ಆವೃತ್ತಿಯೊಂದು ಆಗಮಿಸಲಿದೆಯಂತೆ. ಷೆವರ್ಲೆ ಸ್ಪಾರ್ಕ್ ವಿನ್ಯಾಸ ಕೊಂಚ ಹಳತು. ಇದರ ವಿನ್ಯಾಸ ಕೊಂಚ ಬದಲಾಯಿಸುವುದು ಕಂಪನಿಯ ಪಾಲಿಗೆ ಅನಿವಾರ್ಯ.

ಸ್ಪಾರ್ಕ್ ವಿನ್ಯಾಸವು ಪ್ರತಿಸ್ಪರ್ಧಿ ಕಾರುಗಳಾದ ಹ್ಯುಂಡೈ ಇಯಾನ್ ಮತ್ತು ಮಾರುತಿ ಆಲ್ಟೊಗೆ ಪೈಪೋಟಿ ನೀಡುವಂತಾಗಲು ಕಂಪನಿಯು ಹೊಸ ಆವೃತ್ತಿಯನ್ನು ಪರಿಚಯಿಸಲು ಯೋಜಿಸಿದೆ. ಈಗಾಗಲೇ ಷೆವರ್ಲ್ ಸ್ಪಾರ್ಕ್ ಪರಿಷ್ಕೃತ ಆವೃತ್ತಿಯನ್ನು ಕಂಪನಿಯು ವಿವಿಧ ರಸ್ತೆಗಳಲ್ಲಿ ಟೆಸ್ಟ್ ಮಾಡುತ್ತಿದೆ.

ದೇಶದ ಸಣ್ಣಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಲ್ಟೊ(ವಿಮರ್ಶೆ ಓದಿ) ಅಗ್ರಸ್ಥಾನ ಪಡೆದಿದೆ. ಎರಡನೇ ಸ್ಥಾನವನ್ನು ಹ್ಯುಂಡೈ ಇಯಾನ್ ಪಡೆದಿದೆ. ಇದೀಗ ಇವೆರಡು ಸಣ್ಣಕಾರುಗಳ ಮಾರುಕಟ್ಟೆ ಪಾಲಿಗೆ ಕನ್ನ ಹಾಕಲು ಸ್ಪಾರ್ಕ್ ಕಾರಿನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಕಂಪನಿಯು ಪರಿಚಯಿಸಲಿದಯಂತೆ.

ಆದರೆ ನೂತನ ಸ್ಪಾರ್ಕ್ ಕಾರಿನ ಕುರಿತು ಕಂಪನಿಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಕಂಪನಿಯು ಡೀಸೆಲ್ ಎಂಜಿನ್ ಕಾರನ್ನು ಪರಿಚಯಿಸುವ ಇಂಗಿತವನ್ನು ಹಿಂದೊಮ್ಮೆ ಪ್ರಕಟಿಸಿತ್ತು. ಈಗ ದೇಶದಲ್ಲಿ ಷೆವರ್ಲೆ ಸ್ಪಾರ್ಕ್ ಆರಂಭಿಕ ದರ ಸುಮಾರು 3.29 ಲಕ್ಷ ರುಪಾಯಿ ಇದೆ.

Most Read Articles

Kannada
English summary
Chevrolet Readying Facelifted Spark Small Car. The facelifted spark was recently found testing on the city roads. With the launch of the new Spark, General Motors expect to grab a good amount of market share in the small car market where Maruti Sizuki Alto is the king with the Hyundai Eon following it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X