ಸಂಚಾರ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ಪ್ರಥಮ

Posted By:
To Follow DriveSpark On Facebook, Click The Like Button
ಬೆಂಗಳೂರು, ಆ 3: ದೆಹಲಿ ಮತ್ತು ಮಂಬೈ ಮಹಾನಗರಗಳಿಗೆ ಹೋಲಿಸಿದರೆ ಸಂಚಾರ ನೀತಿನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಉದ್ಯಾನನಗರಿಯಲ್ಲಿ ಪ್ರತಿದಿನ ಸುಮಾರು 16 ಸಾವಿರ ಜನರು ಟ್ರಾಫಿಕ್ ರೂಲ್ಸ್ ಉಲ್ಲಂಘಿಸುತ್ತಿದ್ದಾರೆ.

ದೆಹಲಿಯಲ್ಲಿ ಪ್ರತಿದಿನಕ್ಕೆ ಹತ್ತು ಸಾವಿರ ಜನರು ಸಂಚಾರಿ ನೀತಿನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಮುಂಬೈನಲ್ಲಿ ದಿನಕ್ಕೆ ನಾಲ್ಕು ಸಾವಿರದ ಐನೂರು ಜನರು ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಾರೆ. ಇಲ್ಲಿರುವ ಟ್ರಾಫಿಕ್ ಕ್ಯಾಮರಾ ಮುಂತಾದ ಸುಧಾರಿತ ತಂತ್ರಜ್ಞಾನಗಳು ನಿಯಮ ಉಲ್ಲಂಘಿಸಿದ ಹೆಚ್ಚು ವಾಹನ ಚಾಲಕರನ್ನು ಸಿಕ್ಕಿಬೀಳಿಸುತ್ತಿದೆ.

ಸುಮಾರು 8 ಸಾವಿರದಷ್ಟು ಜನರು ಟ್ರಾಫಿಕ್ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬೀಳುತ್ತಾರೆ. ಉಳಿದ 8 ಸಾವಿರದಷ್ಟು ಜನರನ್ನು ರಹಸ್ಯ ಕ್ಯಾಮರಾಗಳು ಪತ್ತೆ ಹೆಚ್ಚುತ್ತಿವೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಸುಮಾರು 175 ರಸ್ತೆಗಳಲ್ಲಿ ಕ್ಯಾಮರಾ ಫಿಕ್ಸ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಸುಮಾರು 38 ಲಕ್ಷ ವಾಹನಗಳು ಸಂಚಾರಿಸುತ್ತವೆ. ದೆಹಲಿಯಲ್ಲೂ ಈ ಪ್ರಮಾಣ 35 ಲಕ್ಷ ಇದೆ. ಆದರೆ ಸಂಚಾರ ನೀತಿ ನಿಯಮ ಉಲ್ಲಂಘನೆಯಲ್ಲಿ ಮಾತ್ರ ಕರ್ನಾಟಕವು ದೆಹಲಿಗಿಂತ ಒಂದೂವರೆ ಪಟ್ಟು ಮುಂದಿದೆ.

"ನಮ್ಮಲ್ಲೂ ಹೆಚ್ಚು ಸಂಚಾರಿ ನೀತಿನಿಯಮ ಉಲ್ಲಂಘನೆಯಾಗುತ್ತದೆ. ಆದರೆ ಬೆಂಗಳೂರಿನಲ್ಲಿರುವಷ್ಟು ಟ್ರಾಫಿಕ್ ಕ್ಯಾಮರಾಗಳು ನಮ್ಮಲ್ಲಿ ಇಲ್ಲದೆ ಇರುವುದರಿಂದ ಸಿಕ್ಕಿಬೀಳುವರ ಸಂಖ್ಯೆ ಕಡಿಮೆಯಿದೆ" ಎಂದು ಮುಂಬೈ ಹೆಚ್ಚುವರಿ ಆಯುಕ್ತ ಬ್ರಿಜೇಶ್ ಸಿಂಗ್ ಹೇಳಿಕೆಯನ್ನು ಟಿಒಐ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಸುಮಾರು 28.8 ಲಕ್ಷ ದ್ವಿಚಕ್ರವಾಹನಗಳು ಸಂಚಾರಿಸುತ್ತಿವೆ. ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ ಸುಮಾರು 4.45 ಲಕ್ಷ ಹೆಲ್ಮೆಟ್ ಧರಿಸದ ದ್ವಿಚಕ್ರವಾಹನ ಸವಾರರು ಸಿಕ್ಕಿಬಿದ್ದಿದ್ದರು. ಚಾಲನೆ ಮಾಡುತ್ತ ಮೊಬೈಲ್ ಫೋನ್ ಬಳಸುವ ಸುಮಾರು 1.45 ಜನರ ಮೇಲೆ ಕೇಸ್ ಹಾಕಲಾಗಿತ್ತು. ಸುಮಾರು 6.19 ಲಕ್ಷ ವಾಹನ ಮಾಲೀಕರು ತಮ್ಮ ವಾಹನಗಳನ್ನು ನೋ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕ್ ಮಾಡಿ ಸಿಕ್ಕಿಬಿದ್ದಿದ್ದರು.

"ಸಂಚಾರಿ ನೀತಿನಿಯಮ ಉಲ್ಲಂಘಿಸಿ ಮೊದಲೆರಡು ಬಾರಿ ಸಿಕ್ಕಿಬಿದ್ದವರಿಗೆ ದಂಡ ವಿಧಿಸುತ್ತೇವೆ. ಮೂರನೇ ಬಾರಿ ಸಿಕ್ಕಿಬಿದ್ದವರ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕುತ್ತೇವೆ. ಈಗಾಗಲೇ ಸುಮಾರು 2,500 ಚಾಲನಾ ಪರವಾನಿಗೆಗಳನ್ನು ಮುಟ್ಟುಗೋಲು ಹಾಕಲಾಗಿದೆ" ಎಂದು ಬೆಂಗಳೂರಿನ ಹೆಚ್ಚುವರಿ ಟ್ರಾಫಿಕ್ ಆಯುಕ್ತ ಎಂಎ ಸಲೀಂ ಹೇಳಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್

English summary
Bangalore Traffic Police have reported that the city record more traffic violations in a day than any other city in India. Bangalore has about 16,000 traffic violations, followed by Delhi which has 10,000 and Mumbai with about 4,000.
Story first published: Friday, August 3, 2012, 15:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark