ಹೋಂಡಾ ಕಾರಿಗೆ ತ್ರಿಬಲ್ ಲಾಭ, ಜಿಎಂಗೆ ನಷ್ಟ

Posted By:
ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಕಂಪನಿಯು ಏಪ್ರಿಲ್ ತಿಂಗಳ ಮಾರಾಟದಲ್ಲಿ ಗಮನಾರ್ಹ ಪ್ರಗತಿ ದಾಖಲಿಸಿದೆ. ಕಂಪನಿಯು ಕಳೆದ ಕೆಲವು ತಿಂಗಳಿನಿಂದ ಮಾರಾಟದಲ್ಲಿ ಇಳಿಕೆ ಕಾಣುತ್ತಿತ್ತು. ಕಳೆದ ತಿಂಗಳು ಕಂಪನಿಯ ವಾಹನ ಮಾರಾಟ 7,075 ಯುನಿಟ್ ತಲುಪಿದ್ದು, 2011ರ ಏಪ್ರಿಲ್ ತಿಂಗಳ 2,012 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಮೂರು ಪಟ್ಟು ಲಾಭ ಹೆಚ್ಚಿಸಿಕೊಂಡಿದೆ.

ನೂತನ ಬ್ರಿಯೊ ಮತ್ತು ಜಾಝ್ ಕಾರುಗಳು ಹೋಂಡಾ ಮಾರಾಟ ಹೆಚ್ಚಿಸಲು ನೆರವಾಗಿವೆ. ಇವೆರಡು ಹ್ಯಾಚ್‌ಬ್ಯಾಕ್ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್ ಆಗಿವೆ. ಇದರಿಂದಾಗಿ ಕಳೆದ ಹಲವು ವರ್ಷಗಳ ನಂತರ ಪ್ರಪ್ರಥಮ ಬಾರಿಗೆ ಕಂಪನಿಯು ಪೂರ್ಣ ಪ್ರಮಾಣದ ಉತ್ಪಾದನೆಗೆ ತೊಡಗಿತ್ತು.

ಅಮೆರಿಕದ ಕಾರು ಕಂಪನಿ ಜನರಲ್ ಮೋಟರ್ಸ್ ದೇಶದ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಕಂಪನಿಯು ಕಳೆದ ತಿಂಗಳು ಕೇವಲ 8 ಸಾವಿರ ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಏಪ್ರಿಲ್ ತಿಂಗಳ 10 ಸಾವಿರ ಕಾರು ಮಾರಾಟಕ್ಕೆ ಹೋಲಿಸಿದರೆ ಶೇಕಡ 20ರಷ್ಟು ಇಳಿಕೆ ದಾಖಲಿಸಿದೆ. ಕಳೆದ ತಿಂಗಳು ಕೂಡ ಬೀಟ್ ಮತ್ತು ತವೆರಾ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿವೆ.

2012ರ ಏಪ್ರಿಲ್ ತಿಂಗಳಲ್ಲಿ ಕಂಪನಿಯು 4,586 ಯುನಿಟ್ ಬೀಟ್ ಕಾರುಗಳನ್ನು ಮಾರಾಟ ಮಾಡಿತ್ತು. "ದುಬಾರಿ ಇಂಧನ ದರ ಮತ್ತು ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಮಾರಾಟ ಇಳಿಕೆಗೆ ಪ್ರಮುಖ ಕಾರಣ" ಎಂದು ಜಿಎಂ ಉಪಾಧ್ಯಕ್ಷರಾದ ಪಿ ಬಾಲೆಂದ್ರನ್ ಹೇಳಿದ್ದಾರೆ.

English summary
Honda Siel Cars has posted an impressive April sales figures after seeing steep falls in sales for most of this year. Honda's April sales for 2012 stands at an impressive 7,075 units from previous April's sales of 2,012 units. General Motors, the American carmaker has suffered a 20% decrease in April sales.
Story first published: Thursday, May 3, 2012, 15:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark