ಸಣ್ಣ ಸೆಡಾನ್ ಕಾರ್ ಪರಿಚಯಿಸುವತ್ತ ಹೋಂಡಾ ಚಿತ್ತ

ಹೋಂಡಾ ಕಂಪನಿಯ ನೂತನ ಕಾರು ನಾಲ್ಕುಮೀಟರಿಗಿಂತ ಕಡಿಮೆ ಉದ್ದವಿರುವುದಾಗಿ ವರದಿಗಳು ಹೇಳಿವೆ. ಇದರಿಂದ ಈ ಕಾರಿಗೆ ಅಬಕಾರಿ ಸುಂಕ ಶೇಕಡ 10ಕ್ಕಿಂತ ಕಡಿಮೆ ಇರಲಿದೆ. ನಾಲ್ಕು ಮೀಟರಿಗಿಂತ ಉದ್ದವಿರುವ ಕಾರುಗಳಿಗೆ ಶೇಕಡ 22ರಷ್ಟು ಸುಂಕ ವಿಧಿಸಲಾಗುತ್ತದೆ.
ನೂತನ ಕಾಂಪ್ಯಾಕ್ಟ್ ಸೆಡಾನ್ ಆವೃತ್ತಿಯು ಬ್ರಿಯೊ, ಜಾಝ್ ಕಾರುಗಳಲ್ಲಿರುವ 1.2 ಲೀಟರ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಥೈಲಾಂಡ್ ನೆರೆ ಹಾವಳಿ ಕಾರಣದಿಂದ
ಕಂಪನಿಯು ದೇಶದಲ್ಲಿ ಈಗ ತಾತ್ಕಾಲಿಕವಾಗಿ ಪ್ರಮುಖ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಕಂಪನಿಯು 2011ರ ಡಿಸೆಂಬರ್ ತಿಂಗಳಲ್ಲಿ ಕೇವಲ 1,072 ಕಾರು ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ವರ್ಷದ ಇದೇ ತಿಂಗಳಲ್ಲಿ ಕಂಪನಿಯ ಕಾರು ಮಾರಾಟ 5,135 ಯುನಿಟ್ ಗಿಂತ ಹೆಚ್ಚಿತ್ತು.


Click it and Unblock the Notifications








