ಡೀಸೆಲ್ ಕಾರು ಕನಸಿಗೆ ಹ್ಯುಂಡೈ ತಣ್ಣೀರು

Posted By:
ದೇಶದಲ್ಲಿ ಡೀಸೆಲ್ ಎಂಜಿನ್ ಘಟಕ ನಿರ್ಮಿಸುವ ಯೋಜನೆಯನ್ನು ಮತ್ತೆ ಹ್ಯುಂಡೈ ಮೋಟರ್ಸ್ ಮುಂದೂಡಿದೆ. ಚೆನ್ನೈನಲ್ಲಿ ಡೀಸೆಲ್ ಎಂಜಿನ್ ಘಟಕ ನಿರ್ಮಿಸುವುದಾಗಿ ದಕ್ಷಿಣ ಕೊರಿಯಾದ ಹ್ಯುಂಡೈ ಕಂಪನಿಯು ಈ ಹಿಂದೆ ಪ್ರಕಟಿಸಿತ್ತು. ಆದರೆ ದೇಶದಲ್ಲಿ ಕಾರು ಮಾರಾಟ ಕಡಿಮೆಯಾಗಿರುವುದರಿಂದ ಡೀಸೆಲ್ ಘಟಕ ಯೋಜನೆ ಮುಂದೂಡಲು ಕಂಪನಿ ನಿರ್ಧರಿಸಿದೆ.

ದೇಶದಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಕಂಪನಿಯು ಡೀಸೆಲ್ ಎಂಜಿನ್ ಘಟಕ ಸ್ಥಾಪಿಸಲು ನಿರ್ಧರಿಸಿತ್ತು. ಇದಕ್ಕಾಗಿ ಸುಮಾರು 400 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿಯೂ ಕಂಪನಿ ಹೇಳಿತು. ದೇಶದಲ್ಲಿ ಡೀಸೆಲ್ ದರದ ಕುರಿತು ಸರಕಾರ ಸ್ಪಷ್ಟತೆ ಪ್ರದರ್ಶಿಸದೆ ಇರುವುದು ಕೂಡ ಹ್ಯುಂಡೈ ಯೋಜನೆಯಿಂದ ಹಿಂದೆ ಸರಿಯುವಂತೆ ಮಾಡಿದೆ.

ಡೀಸೆಲ್ ದರದ ಕುರಿತು ಸರಕಾರದ ನೀತಿಯ ಕುರಿತು ಇನ್ನಷ್ಟು ದಿನ ಪರಿಶೀಲಿಸುತ್ತೇವೆ ಎಂದು ಹ್ಯುಂಡೈ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಬೊ ಶಿನ್ ಶಿಯೊ ಹೇಳಿದ್ದಾರೆ. ಕಂಪನಿಯು ಈಗ ಐ10 ಮತ್ತು ವೆರ್ನಾ ಕಾರುಗಳಿಗೆ ಡೀಸೆಲ್ ಎಂಜಿನ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಕಂಪನಿಯು ಡೀಸೆಲ್ ಘಟಕ ನಿರ್ಮಿಸುವುದರಿಂದ ಹ್ಯುಂಡೈ ಐ10 ಡೀಸೆಲ್ ಆವೃತ್ತಿ ಆಗಮಿಸುವ ಕುರಿತು ವದಂತಿಗಳಿದ್ದವು. ಆದರೆ ಘಟಕ ನಿರ್ಮಾಣ ಯೋಜನೆಯನ್ನು ಮುಂದೂಡಿರುವುದರಿಂದ ಡೀಸೆಲ್ ಐ10 ಕನಸಿಗೆ ತಣ್ಣೀರು ಸುರಿದಂತೆ ಹಾಗಿದೆ.

ದೇಶದಲ್ಲಿ ಹ್ಯುಂಡೈ ಸಣ್ಣಕಾರುಗಳು ಡೀಸೆಲ್ ಆಯ್ಕೆಯಲ್ಲಿ ದೊರಕದೆ ಇರುವುದರಿಂದ ಕಂಪನಿಯ ಮಾರಾಟ ಗಮನಾರ್ಹವಾಗಿ ಇಳಿಕೆಕ ಕಾಣುತ್ತಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿಯು ಡೀಸೆಲ್ ಐ10 ಮಾರಾಟ ಮಾಡುತ್ತಿದೆ.

English summary
Hyundai Motors has again decided not to go ahead with its plans to build a diesel engine plant in India. The South Korean carmaker had previously announced its decision to build a diesel engine plant near Chennai. However reduced sales in India lead to Hyundai postponing building the plant.
Story first published: Friday, July 13, 2012, 14:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark