ಅಶೋಕ್ ಲೇಲ್ಯಾಂಡ್ ಏರಿದ ಮಹೇಂದ್ರ ಸಿಂಗ್ ಧೋನಿ

Posted By:
ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿಯನ್ನು ಕಂಪನಿಯ ಬ್ರಾಂಡ್ ಅಂಬಾಸಡರ್ ಆಗಿ ನೇಮಕಮಾಡಿಕೊಂಡಿರುವುದಾಗಿ ಅಶೋಕ್ ಲೇಲ್ಯಾಂಡ್ ಪ್ರಕಟಣೆಯಲ್ಲಿ ತಿಳಿಸಿದೆ. ಕಂಪನಿಯು ಕಳೆದ ಆರು ದಶಕದ ವಹಿವಾಟಿನಲ್ಲಿ ಪ್ರಪ್ರಥಮ ಬಾರಿಗೆ ಸೆಲೆಬ್ರೆಟಿಯೊಬ್ಬರನ್ನು ರಾಯಭಾರಿಯಾಗಿ ಮಾಡಿಕೊಂಡಿರುವುದು ವಿಶೇಷ.

ವಾಣಿಜ್ಯ ವಾಹನ ವಹಿವಾಟಿನಲ್ಲಿ ಹೆಚ್ಚು ಮಾರುಕಟ್ಟೆ ಪಾಲು ಪಡೆಯುವ ಕಾರ್ಯತಂತ್ರದ ಭಾಗವಾಗಿ ಧೋನಿ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ತಿಳಿಸಿದೆ. ಅಶೋಕ್ ಲೇಲ್ಯಾಂಡ್ ದೇಶದ ಎರಡನೇ ಬೃಹತ್ ವಾಣಿಜ್ಯ ವಾಹನ ಕಂಪನಿಯಾಗಿದೆ. ಪ್ರಥಮ ಸ್ಥಾನ ಟಾಟಾ ಮೋಟರ್ಸ್ ಪಡೆದಿದೆ.

2010-11ರಲ್ಲಿ ಅಶೋಕ್ ಲೇಲ್ಯಾಂಡ್ 11,118 ಕೋಟಿ ರುಪಾಯಿ ವಹಿವಾಟು ನಡೆಸಿ ದೇಶದ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಶೇಕಡ 22ರಷ್ಟು ಪಾಲನ್ನು ತನ್ನದಾಗಿಸಿಕೊಂಡಿತ್ತು. ಕಂಪನಿಯು ಕಳೆದ ವರ್ಷ ಶೇಕಡ 25ರಷ್ಟು ಪಾಲು ಪಡೆಯಲು ಯೋಜಿಸಿತ್ತು. ಆದರೆ ಕಂಪನಿಯ ಷೇರು ಕೊಂಚ ಕುಸಿದಿತ್ತು.

ಎಲ್ಲಾ ವರ್ಗದ ಗ್ರಾಹಕರಿಗೂ ಸೂಕ್ತವಾಗುವ ಮಲ್ಟೀ ಮೀಡಿಯಾ ಜಾಹೀರಾತುಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಶೋಕ್ ಲೇಲ್ಯಾಂಡ್ ಪ್ರಕಟಣೆ ತಿಳಿಸಿದೆ. ಬ್ರಾಂಡ್ ಅಶೋಕ್ ಲ್ಯಾಂಡ್ ಘನತೆಗೆ ಧೋನಿಯೇ ಸೂಕ್ತ ವ್ಯಕ್ತಿ ಎಂದು ಕಂಪನಿ ಭಾವಿಸಿದೆ ಎಂದು ಕಂಪನಿಯ ಎಂಡಿ ವಿನೋದ್ ಕೆ ದಸಾರಿ ಹೇಳಿದ್ದಾರೆ.

English summary
Cricketer Mahendra Singh Dhoni joined Brand Ambassador of Ashok Leyland. After Six Decade Ashok Leyland hired a Celebrity Brand Ambassador.
Story first published: Monday, May 14, 2012, 11:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark