ಪರಿಸರ ಸ್ನೇಹಿ ಮಹೀಂದ್ರ ಎಲೆಕ್ಟ್ರಿಕ್ ಇ2ಒ ಬಿಡುಗಡೆಗೆ ಸಿದ್ಧ

Written By:
ಪ್ರಸಕ್ತ ಸಾಲಿನಲ್ಲೇ ಎಲೆಕ್ಟ್ರಿಕ್ ಕಾರನ್ನು ಮಹೀಂದ್ರ ಆಂಡ್ ಮಹೀಂದ್ರ ಪರಿಚಯಿಸಲಿದೆ. ಮಹೀಂದ್ರ ರೇವಾ ಎನ್‌ಎಕ್ಸ್‌ಆರ್ ಇದೀಗ ಇ2ಒ (e-two-oh) ಎಂದು ಹೆಸರಿಸಲ್ಪಡಲಿದ್ದು, ನೀರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

29 ಕೆಡಬ್ಲ್ಯು (39.4 ಬಿಎಚ್‌ಪಿ) ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುವ ಇ2ಒ ಎಲೆಕ್ಟ್ರಿಕ್ ಕಾರು 48 ವಾಟ್ ಕಾಂಪಾಕ್ಟ್ ಲಿಥಿಯಮ್ ಇಯಾನ್ ಬ್ಯಾಟರಿಗಳನ್ನು ಬಳಕೆ ಮಾಡಲಿದೆ. ಮುಂದಿನ ನವೆಂಬರ್ ತಿಂಗಳಲ್ಲಿ ಎಲೆಕ್ಟ್ರಿಕ್ ಕಾರು ಲಾಂಚ್ ಆಗುವ ನಿರೀಕ್ಷೆಯಿದೆ.

ನೂತನ ಇ2ಒ ಎಲೆಕ್ಟ್ರಿಕ್ ಕಾರಿನ ದರವು 5.5 ಲಕ್ಷ ರು.ಗಳಿಂದ 6 ಲಕ್ಷ ರು.ಗಳ ವರೆಗೆ ಇರುವ ಸಾಧ್ಯತೆಯಿದ್ದು, ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಲ್ಲಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹಸಿರು ಘಟಕ ಉದ್ಘಾಟಿಸಿದ್ದ ಮಹೀಂದ್ರ, ಪರಿಸರ ಸ್ನೇಹಿ ಕಾರನ್ನು ಪರಿಚಯಿಸಲು ಗುರಿಯಿರಿಸಿಕೊಂಡಿದೆ. ಹಣಕಾಸು ದೃಷ್ಟಿಯಲ್ಲೂ ಎಲೆಕ್ಟ್ರಿಕ್ ಕಾರು ಯೋಜನೆ ಮೇಲೆ ಹೂಡಿಕೆ ಮಾಡುವುದು ಉತ್ತಮ. ಅಲ್ಲದೆ ಎಲೆಕ್ಟ್ರಿಕ್ ಕಾರು ನೀರ್ಮಾಣ ಕೂಡಾ ಸುಲಭ ಎಂದು ಆಟೋಮೊಟಿವ್ ಡಿವಿಷನ್ ಅಧ್ಯಕ್ಷ ಪವನ್ ಗೋನ್ಖಾ ಅಭಿಪ್ರಾಯಪಟ್ಟಿದ್ದಾರೆ. ಈ ವರೆಗೆ 2500 ಕೋಟಿ ರೂಪಾಯಿಗಳನ್ನು ಎಲೆಕ್ಟ್ರಿಕ್ ಕಾರು ಘಟಕಕ್ಕಾಗಿ ವೆಚ್ಚ ಮಾಡಲಾಗಿದೆ. 

English summary
Mahindra & Mahindra is in the final stages of developing its new electric car, likely to be called the E2O(e-two-oh). Expected to go on sale by November
Story first published: Friday, October 26, 2012, 10:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark