ಮಹೀಂದ್ರ ಕಂಪನಿಯ ಹೊಸ ಮೆಕ್ಸಿಮೊ ಬರುತ್ತಂತೆ!

ದೇಶದ ಪ್ರಮುಖ ಯುಟಿಲಿಟಿ ವಾಹನ ತಯಾರಿಕಾ ಕಂಪನಿ ಮಹೀಂದ್ರ ತನ್ನ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದೆ. ಕಂಪನಿಯು ಮೆಕ್ಸಿಮೊ ಸಣ್ಣ ಟ್ರಕ್ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಎಂಪಿವಿ ಹೊರತರಲು ಯೋಜಿಸಿದೆ.

ನೂತನ ಮಲ್ಟಿಪರ್ಪೊಸ್ ವೆಹಿಕಲನ್ನು ಕಂಪನಿಯು ಈಗಾಗಲೇ ಮಹೀಂದ್ರ ರಿಸರ್ಚ್ ವ್ಯಾಲಿ ಕೇಂದ್ರದ ಉದ್ಘಾಟನೆಯಂದು ಪರೀಕ್ಷಿಸಿದೆ. ಹೀಗಾಗಿ ಈ ಎಂಪಿವಿ ಶೀಘ್ರದಲ್ಲಿ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

ಮಹೀಂದ್ರ ಕಂಪನಿಯು ಈಗ ಕ್ಷೈಲೊ ಮಾರಾಟ ಮಾಡುತ್ತಿದೆ. ಕಂಪನಿಯು ಮುಂದಿನ ದೀಪಾವಳಿ ಸಮಯದಲ್ಲಿ ಸಣ್ಣ ಕ್ಷೈಲೊ ಪರಿಚಯಿಸುವ ನಿರೀಕ್ಷೆಯಿದೆ. ಮೆಕ್ಸಿಮೊ ಆಧರಿತ ನೂತನ ಎಂಪಿವಿ ದರ ಕ್ಷೈಲೊಗಿಂತ ಕಡಿಮೆ ಇರುವ ನಿರೀಕ್ಷೆಯಿದೆ.

ಕಂಪನಿಯು ಬೊಲೆರೊ, ಸ್ಕಾರ್ಪಿಯೊ ಮತ್ತು ಎಕ್ಸ್‌ಯುವಿ 500 ಮುಂತಾದ ಸ್ಪೋರ್ಟ್ ಕಾರುಗಳೊಂದಿಗೆ ಎಂಪಿವಿ ಮಾರುಕಟ್ಟೆಯತ್ತಲೂ ಹೆಚ್ಚಿನ ಅಸ್ಥೆ ವಹಿಸುತ್ತಿದೆ. ಇದರಲ್ಲಿ ಬೊಲೆರೊ ಎಂಟ್ರಿ ಲೆವೆಲ್ ಎಂಪಿವಿ. ನಂತರದ ಸ್ಥಾನಗಳನ್ನು ಸ್ಕಾರ್ಪಿಯೊ ಮತ್ತು ಎಕ್ಸ್‌ಯುವಿ 500 ಪಡೆದಿವೆ. ಆದರೆ ಎಂಪಿವಿ ಸೆಗ್ಮೆಂಟಿನಲ್ಲಿ ಕಂಪನಿಯು ಕ್ಷೈಲೊ ಆವೃತ್ತಿಯನ್ನು ಮಾತ್ರ ಪರಿಚಯಿಸಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
Mahindra, India's leading utility vehicle manufacturer is now planning to expand its product line-up by developing a new MPV based on the Maxximo small trucks platform. The new MPV is being tested in Mahindra's recently inaugurated Mahindra Research Valley (MRV).
Story first published: Saturday, April 14, 2012, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X