ಡೀಸೆಲ್ ಕಾರುಗಳತ್ತ ಮಾರುತಿ, ಹ್ಯುಂಡೈ ಚಕಿತಚಿತ್ತ

Posted By:
To Follow DriveSpark On Facebook, Click The Like Button
ಪೆಟ್ರೋಲ್ ದರ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಕಾರು ಕಂಪನಿಗಳು ಡೀಸೆಲ್ ಕಾರು ಉತ್ಪಾದನೆಯನ್ನು ತೀವ್ರಗೊಳಿಸಿವೆ. ಮಾರುತಿ ಸುಜುಕಿ ಮತ್ತು ಹ್ಯುಂಡೈ ಫ್ಯಾಕ್ಟರಿಗಳಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಜೊತೆಗೆ ಕಾರು ಕಂಪನಿಗಳು ಶೀಘ್ರದಲ್ಲಿ ಹೊಸ ಡೀಸೆಲ್ ಮಾಡೆಲ್ ಕಾರುಗಳನ್ನು ಪರಿಚಯಿಸಲು ಯೋಜಿಸಿವೆ.

ಹೆಚ್ಚಿನ ಕಾರು ಕಂಪನಿಗಳು ಡೀಸೆಲ್ ಕಾರು ಉತ್ಪಾದನೆಯನ್ನು ಹೆಚ್ಚಿಸುತ್ತಿವೆ. ಜೊತೆಗೆ ಪೆಟ್ರೋಲ್ ಕಾರು ಖರೀದಿಗೆ ಸಾಕಷ್ಟು ವಿನಾಯಿತಿ ನೀಡುತ್ತಿವೆ. ವಿಶೇಷವೆಂದರೆ ಈಗಾಗಲೇ ಸುಮಾರು 2 ಲಕ್ಷ ಗ್ರಾಹಕರು ಡೀಸೆಲ್ ಕಾರುಗಳಿಗೆ ಬುಕ್ಕಿಂಗ್ ಮಾಡಿ ಕಾಯುತ್ತಿದ್ದಾರೆ.

ಈಗಾಗಲೇ ಡೀಸೆಲ್ ಕಾರು ಪೂರೈಕೆಗೆ ಕಾರು ಕಂಪನಿಗಳು 4ರಿಂದ 6 ತಿಂಗಳು ವೇಟಿಂಗ್ ಪಿರೆಯಿಡ್ ನೀಡುತ್ತಿವೆ. ಬೇಡಿಕೆ ಹೆಚ್ಚಿದಂತೆ ವೇಟಿಂಗ್ ಪಿರೆಯಿಡ್ ಅವಧಿ ಹೆಚ್ಚಾಗಬಹುದು. ಆಸಕ್ತಿದಾಯಕ ವಿಷಯವೆಂದರೆ ಕೆಲವು ಕಾರು ಕಂಪನಿಗಳು ವೇಟಿಂಗ್ ಪಿರೆಯಿಡ್ ಇಲ್ಲದೇ ಪೆಟ್ರೋಲ್ ಕಾರು ಡೆಲಿವರಿ ಮಾಡುತ್ತಿವೆ.

ಮಾರುತಿ ಸುಜುಕಿ ಕಂಪನಿಯ ಘಟಕಗಳು ವಾರ್ಷಿಕ 2.5 ಲಕ್ಷ ಡೀಸೆಲ್ ಎಂಜಿನ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಉಳಿದಂತೆ ಫಿಯೆಟ್ ಕಂಪನಿಯಿಂದ ಡೀಸೆಲ್ ಎಂಜಿನ್ ಆಮದು ಮಾಡಿಕೊಳ್ಳುತ್ತಿದೆ.

"ಡೀಸೆಲ್ ಕಾರುಗಳಿಗೆ ಬೇಡಿಕೆಯು ಅವ್ಯಾಹತವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ನಾವು ಆಂತರಿಕ ಡೀಸೆಲ್ ಎಂಜಿನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ. ಜೊತೆಗೆ ಇಟಲಿಯ ಕಾರು ಕಂಪನಿ ಫಿಯೆಟ್‌ನಿಂದಲೂ ಡೀಸೆಲ್ ಎಂಜಿನ್ ಪಡೆದುಕೊಳ್ಳುತ್ತಿದ್ದೇವೆ" ಎಂದು ಮಾರುತಿ ಸುಜುಕಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮಯಾಂಕ್ ಪಾರೇಕ್ ಹೇಳುತ್ತಾರೆ.

"ಪ್ರಸಕ್ತ ಪರಿಸ್ಥಿತಿಯು ಪೂರ್ತಿಯಾಗಿ ಡೀಸೆಲ್ ಕಾರು ಪರವಾಗಿದೆ. ಕಂಪನಿಯು ದಕ್ಷಿಣ ಕೊರಿಯಾದಿಂದ ಡೀಸೆಲ್ ಎಂಜಿನ್ ಆಮದು ಮಾಡಿಕೊಲ್ಳುತ್ತಿದೆ. ಜೊತೆಗೆ ಡೀಸೆಲ್ ಎಂಜಿನ್ ಉತ್ಪಾದನಾ ಸಾಮರ್ಥ್ಯ ಘಟಕ ನಿರ್ಮಾಣ ಕೊನೆಯ ಹಂತದಲ್ಲಿದೆ. ಈ ಘಟಕವು 2013ರ ಅಂತ್ಯಕ್ಕೆ ಉತ್ಪಾದನೆಗೆ ಸಿದ್ದವಾಗಲಿದೆ" ಎಂದು ಹ್ಯುಂಡೈ ಮೋಟರ್ ಇಂಡಿಯಾ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳಿದ್ದಾರೆ.

ಇದೇ ಸಮಯದಲ್ಲಿ ಮಾರುತಿ ಸುಜುಕಿ, ಟಾಟಾ ಮೋಟರ್ಸ್ ಮತ್ತು ಹ್ಯುಂಡೈ ಮೋಟರ್ ಸೇರಿದಂತೆ ಕಾರು ಕಂಪನಿಗಳು ಪೆಟ್ರೋಲ್ ಕಾರುಗಳಿಗೆ ಸುಮಾರು 50 ಸಾವಿರ ರು.ಗೂ ಹೆಚ್ಚು ವಿನಾಯಿತಿ ಪ್ರಕಟಿಸುತ್ತಿವೆ. ಮಾರುತಿ ಆಲ್ಟೊ ಕಾರಿಗೆ ಈಗ ಸುಮಾರು 30 ಸಾವಿರ ರುಪಾಯಿ ಡಿಸ್ಕೌಂಟ್ ಇದೆ.

English summary
Following the latest steep petrol price hike, leading carmakers like Maruti Suzuki and Hyundai Motors are pushing their plans for diesel cars. With the demand for diesel cars at an all time high, carmakers are also looking to rolling out more diesel models.
Story first published: Saturday, May 26, 2012, 10:35 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark