ಮಾರುತಿಯಿಂದ ಸೈಲೆಂಟಾಗಿ ಸ್ವಿಫ್ಟ್ ಬ್ರೇಕ್ ರಿಪೇರಿ

Posted By:
To Follow DriveSpark On Facebook, Click The Like Button
ಸ್ವಿಫ್ಟ್ ಕಾರಿನ ಬ್ರೇಕಿನಲ್ಲಿ ಸಮಸ್ಯೆಯಿದೆಯೆಂದು ಈ ತಿಂಗಳ ಆರಂಭದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಮಾಲಿಕರು ದೂರು ಸಲ್ಲಿಸಿದ್ದರು. ಆದರೆ ಈ ದೂರಿನ ಕುರಿತು ಮಾರುತಿ ಸುಜುಕಿ ಅಸಡ್ಡೆ ವ್ಯಕ್ತಪಡಿಸಿತ್ತು.

ಸಮರ್ಪಕ ವಿಧಾನದಲ್ಲಿ ಡ್ರೈವಿಂಗ್ ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು ಮತ್ತು ಅರ್ಧ ಕ್ಲಚ್ ಹಿಡಿದು ಡ್ರೈವಿಂಗ್ ಮಾಡುವುದು ತಪ್ಪು ಎಂದು ಕಂಪನಿ ಹೇಳಿತ್ತು. ಕಂಪನಿಯ ಈ ಮಾರುತ್ತರ ಗ್ರಾಹಕರಿಗೆ ಇಷ್ಟವಾಗಿರಲಿಲ್ಲ.

ಇದೀಗ ಕಂಪನಿಯು ಕರ್ನಾಟಕ ಮತ್ತು ಕೇರಳದ ಕೆಲವು ಗ್ರಾಹಕರ ಸ್ವಿಫ್ಟ್ ಕಾರಿನ ಬ್ರೇಕನ್ನು ರಿಪೇರಿ ಮಾಡಿಕೊಡುತ್ತಿದೆ ಎಂದು ವರದಿಗಳು ಹೇಳಿವೆ. ಆದರೆ ಈ ಕುರಿತು ಕಂಪನಿ ಅಧಿಕೃತವಾಗಿ ಪ್ರಕಟಿಸಿಲ್ಲ. ಪ್ರಾಬ್ಲಂ ಇದೆ ಅಂದವರ ಕಾರುಗಳನ್ನು ಮಾತ್ರ ರಿಪೇರಿ ಮಾಡಿಕೊಡುತ್ತಿದೆ.

ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರು ಸ್ವಿಫ್ಟ್ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ವರದಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಈ ಹಿಂದೆ ಪ್ರಕಟಿಸಿತ್ತು. ನಿಧಾನವಾಗಿ ಕಾರು ಚಲಾಯಿಸುವಾಗ ಸ್ವಿಫ್ಟ್ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ದೂರುಗಳು ಕೇಳಿಬಂದಿದ್ದವು.

ಇದಕ್ಕೆ ಈಗ ಮಾರುತಿ ಸುಜುಕಿ ಸಮಜಾಯಿಸಿ ನೀಡಿತ್ತು. ಸಮರ್ಪಕ ವಿಧಾನದಲ್ಲಿ ಡ್ರೈವಿಂಗ್ ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು ಮತ್ತು ಅರ್ಧ ಕ್ಲಚ್ ಹಿಡಿದು ಡ್ರೈವಿಂಗ್ ಮಾಡುವುದು ತಪ್ಪು ಎಂದು ಗ್ರಾಹಕರಿಗೆ ಕಂಪನಿಯು ಉಲ್ಟಾ ಹೊಡೆದಿತ್ತು.

ಇದೀಗ ಕಂಪನಿಯು ಸೈಲೆಂಟಾಗಿ ರಿಪೇರಿ ಮಾಡಿಕೊಡುತ್ತಿದೆ. ಹೆಚ್ಚು ಪಬ್ಲಿಸಿಟಿ ಮಾಡಿದ್ರೆ ಕಂಪನಿಯ ಬ್ರಾಂಡ್ ಇಮೇಜಿಗೆ ಹಾನಿಯಾಗಬಹುದೆಂಬ ಭೀತಿ ಇದಕ್ಕೆ ಕಾರಣ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಾರಿನಲ್ಲಿ ಅತಿಸಣ್ಣ ಸಮಸ್ಯೆಯಿದ್ದರೂ ಎಲ್ಲಾ ಮಾಡೆಲುಗಳನ್ನು ರಿಕಾಲ್ ಮಾಡಲಾಗುತ್ತದೆ.

ಭಾರತದ ಕಾರು ಕಂಪನಿಗಳಿಗೆ ಅಂತಹ ಬುದ್ದಿ ಬರುವುದು ಯಾವಾಗ?

English summary
Several owners of the Maruti Suzuki Swift had reported a braking issue in their cars earlier this year. The leading Indian carmaker which had initially chosen to ignore their complaints is now reportedly rectifying the problem without recalling the Swift.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark